Saturday, 23 August 2008

Thank you shivaprasadtr.wordpress.com



ಧನ್ಯವಾದಗಳು

ಶಿವಪ್ರಸಾದ್


ದೂರದ ದೆಹಲಿಯಲ್ಲಿರುವ ಟಿ.ವಿ.೯ ಸುದ್ದಿಮಾಧ್ಯಮದ ಮಿತ್ರ ದಾವಣಗೆರೆಯ ಟಿ.ಆರ್. ಶಿವಪ್ರಸಾದ್ ತಮ್ಮ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಬಿಡುವುಮಾಡಿಕೊಂಡು ನನ್ನ ಬಗ್ಗೆ ಆತ್ಮೀಯವಾಗಿ ನಾಲ್ಕು ಮಾತುಗಳನ್ನು ಬರೆದು ಪ್ರೋತ್ಸಾಹಿಸಿದ್ದಾರೆ. ಬಹುಶಃ ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವೆಲ್ಲರೂ ಏನಾದರೂ ಸಾಧಿಸುವ ಹುಮ್ಮಸ್ಸು ತುಂಬುವ ನುಡಿಗಳು ಬಾಯಾರಿದ ಭೂಮಿಗೆ ತನಿ ಎರೆದಂತೆ ಅನ್ನಿಸುತ್ತೆ.

ವಿಜಯ ಕರ್ನಾಟಕ ಪತ್ರಿಕಾ ಬಳಗದ ಮಿತ್ರರೆಲ್ಲರೂ ಒಂದಲ್ಲಾ ಒಂದು ಕಾರಣಕ್ಕಾಗಿ ಪರಸ್ಪರ ನೆರವಾಗುವ ಒಂದು ತಂಡವಾಗಿ ಈಗಲೂ ಕಾರ್ಯಪ್ರವೃತ್ತರಾಗಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಆಸಕ್ತರು ಶಿವಪ್ರಸಾದ್ ಅವರ ಬ್ಲಾಗ್ ನೋಡಬಹುದು. ಲಿಂಕ್ ಮೇಲಿದೆ.
ಬೇದ್ರೆ ಮಂಜುನಾಥ

Monday, 18 August 2008

Tuesday, 12 August 2008

Long Live Ram Naresh - Congrats A R Manikanth


Long Live

Ram Naresh


Congrats A R Manikanth


He is the living example of indomitable spirit! Please do read this story and tell the others that we can achieve wonders! Handicaps have made India proud through their acts of courage. Let Ram Naresh inspire our youngsters. This story has appeared in Vijaya Karnataka Daily on 11-08-2008, Monday, the HISTORICAL DAY when India bagged its FIRST GOLD in the OLYMPICS at BEIJING. Abhinav Bhindra won the GOLD in 10 mtr Air Rifle Shooting Event.

Friday, 1 August 2008

KALPANE - POEM BY BEDRE MANJUNATH - MAYURA MONTHLY 2008 AUGUST


KALPANE - POEM

BEDRE MANJUNATH

MAYURA MONTHLY

2008 AUGUST

ಬದುಕಿನ ಪಾಠ ನಡೆದಿದೆ

ಪ್ರಕೃತಿಯ ಮಡಿಲಲ್ಲಿ
ಭೂದೇವಿ ಗುಡಿಯಲ್ಲಿ
ಮಣ್ಣ ಕಣ ಕಣದಲ್ಲಿ.

ಅಕ್ಷರ ತಿದ್ದುವ ಕೈಗಳು
ನೇಗಿಲ ಹಿಡಿದಿವೆ ಇಲ್ಲಿ
ಜೋಡೆತ್ತಿನ ಜೊತೆಯಲ್ಲಿ
ಉತ್ತು ಬಿತ್ತುವ ಕಾಯಕದಲ್ಲಿ.

ಬೆಳೆವ ಸಿರಿ ಮೊಳಕೆಯಲ್ಲಿ
ಭವ್ಯ ಭವಿಷ್ಯದ ಬಯಕೆಯಲ್ಲಿ
ಸವಿಗನಸುಗಳ ಸಾಕ್ಷಾತ್ಕಾರದಲ್ಲಿ
ಮಣ್ಣ ಮಕ್ಕಳು ತೊಡಗಿಹರಿಲ್ಲಿ.

ಅನ್ನದಾತ ಚಿಣ್ಣರೇ, ಕೇಳಿರಿ ಇಲ್ಲಿ
ಮಣ್ಣ ಕಾಯಕದ ಜೊತೆ ಜೊತೆಯಲ್ಲಿ
ಓದು ಬರಹ ಕಲಿಯಿರಿ ಶಾಲೆಗಳಲ್ಲಿ
ಶ್ರಮಿಸಿರಿ ಸಾಕ್ಷರ ನಾಡನು ಕಟ್ಟುವಲ್ಲಿ.

ದೇಶದ ಭವ್ಯ ಭವಿಷ್ಯವೇ ನೀವು
ಮೇಟಿ ವಿದ್ಯೆ ಕಲಿಯದಿರೆ ಸಾವು
ಬಿತ್ತಿರಿ ಸುಖ ಸಮೃದ್ಧಿಯ ಕನಸುಗಳನೀಗ
ಪಡೆಯಿರಿ ಶಾಂತಿ ನೆಮ್ಮದಿಯ ಫಸಲು ಬೇಗ.

(ಮಯೂರ ಮಾಸಿಕದ ಕಲ್ಪನೆ ಕವನ - ಜೂನ್ 2008) 

ಕಲ್ಪನೆ : ಬೇದ್ರೆ ಮಂಜುನಾಥ

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...