Tuesday, 12 March 2013

UPSC Mains 2013 Pattern Changed - Article in Udayavani Josh 12 March 2013

UPSC Mains 2013 Pattern Changed - Article in Udayavani Josh 12 March 2013


  • ಆರಿಸಿಕೊಳ್ಳಲು ವಿಷಯಗಳೇ ಇಲ್ಲ!

  • ಕ್ವೆಶ್ಚನ್‌ ಪೇಪರ್‌ ಪ್ಯಾಟರ್ನ್ ಬದಲಾಗಿದೆ

    • Udayavani | Mar 11, 2013
      ಕ್ವೆಶ್ಚನ್‌ ಪೇಪರ್‌ ಪ್ಯಾಟರ್ನ್ ಬದಲಾಗಿದೆ 

      ಕೇವಲ ಒಂದು ತಿಂಗಳ ಅವಧಿಯಲ್ಲಿ ಸಿದ್ಧರಾಗಿ ಪಾಸಾಗುತ್ತಿದ್ದ ಪಾಲಿ ಭಾಷಾ ಸಾಹಿತ್ಯದ ಅಭ್ಯರ್ಥಿಗಳಿಗೆ ಇನ್ನುಮುಂದೆ ನಿರಾಸೆಯೇ, ಏಕೆಂದರೆ ಪಾಲಿ ಸಾಹಿತ್ಯ ವಿಷಯವನ್ನೇ ತೆಗೆದು ಹಾಕಲಾಗಿದೆ! ಇಂಗ್ಲಿಷ್‌ ಹೊರತುಪಡಿಸಿ ವಿದೇಶಿ ಭಾಷಾ ಸಾಹಿತ್ಯ ಆಯ್ದುಕೊಳ್ಳುತ್ತಿದ್ದವರಿಗೂ ಇದೀಗ ಅವಕಾಶ ಇಲ್ಲ. ಆ ವಿಷಯಗಳೇ ಅಲ್ಲಿ ಇಲ್ಲ! 

      ಬಹುನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಇದೀಗ 2013ನೇ ಸಾಲಿನಿಂದ ಬದಲಾಗಿದೆ. ಐಚ್ಛಿಕ ವಿಷಯಗಳ ಆಯ್ಕೆಯಲ್ಲಿ, ಅದರಲ್ಲೂ ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯಲ್ಲಿ ಕಟ್ಟುನಿಟ್ಟಿನ ಬದಲಾವಣೆ ತರಲಾಗಿದೆ. ಪದವಿ ಹಂತದಲ್ಲಿ ಓದಿರುವ ಭಾಷಾ ಸಾಹಿತ್ಯ ವಿಷಯವನ್ನು ಇಲ್ಲಿಯೂ ಆಯ್ದುಕೊಳ್ಳುವ ಸ್ವಾತಂತ್ರÂವಿದೆ. ಪ್ರಾದೇಶಿಕ ಭಾಷಾ ಸಾಹಿತ್ಯ ಪತ್ರಿಕೆಗಳನ್ನು ಆಯ್ದುಕೊಂಡು ಹೆಚ್ಚಿನ ಅಂಕಗಳಿಸಿಕೊಳ್ಳುತ್ತಿದ್ದ ಇತರೆ ಪದವಿ ಅಭ್ಯರ್ಥಿಗಳಿಗೆ ಈಗ ಅವಕಾಶ ಇಲ್ಲ! ಕೇವಲ ಒಂದು ತಿಂಗಳ ಅವಧಿಯಲ್ಲಿ ಸಿದ್ಧರಾಗಿ ಪಾಸಾಗುತ್ತಿದ್ದ ಪಾಲಿ ಭಾಷಾ ಸಾಹಿತ್ಯದ ಅಭ್ಯರ್ಥಿಗಳಿಗೆ ಇನ್ನುಮುಂದೆ ನಿರಾಸೆಯೇ, ಏಕೆಂದರೆ ಪಾಲಿ ಸಾಹಿತ್ಯ ವಿಷಯವನ್ನೇ ತೆಗೆದುಹಾಕಲಾಗಿದೆ! ಇಂಗ್ಲಿಷ್‌ ಹೊರತು ಪಡಿಸಿ ವಿದೇಶಿ ಭಾಷಾ ಸಾಹಿತ್ಯ ಆಯ್ದುಕೊಳ್ಳುತ್ತಿದ್ದವರಿಗೂ ಇದೀಗ ಅವಕಾಶ ಇಲ್ಲ. ಆ ವಿಷಯಗಳೇ ಅಲ್ಲಿ ಇಲ್ಲ! ಸಂದರ್ಶನಕ್ಕೆ 1:3ರ ಪ್ರಮಾಣದ ಬದಲು ಇನ್ನುಮುಂದೆ 1:2 ಪ್ರಮಾಣದಲ್ಲಿ ಕರೆಪತ್ರ ಕಳಿಸಲಾಗುತ್ತದೆ. 

      ಅರ್ಹತಾ ಸುತ್ತಿನ ಪತ್ರಿಕೆ ಮಾಯವಾಗಿದೆ! 
      ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪ¨ªಾಗಿದ್ದು, ಅರ್ಹತೆ ಪಡೆಯಲು ಒಂದೊಂದರಲ್ಲೂ ಕನಿಷ್ಠ ಶೇ.30ರಷ್ಟು ಮತ್ತು ಸರಾಸರಿ ಶೇ.35ರಷ್ಟು ಅಂಕಗಳನ್ನು ಗಳಿಸಿಕೊಳ್ಳಬೇಕು ಹಾಗೂ ಈ ಅಂಕಗಳನ್ನು ಅಭ್ಯರ್ಥಿಯ ಆಯ್ಕೆಯ ಅರ್ಹತೆ ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ. ಈ ಎರಡೂ ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದೇ ಇರುವ ಅಭ್ಯರ್ಥಿಗಳು ಐಚ್ಛಿಕ ವಿಷಯಗಳಲ್ಲಿ ಎಷ್ಟೇ ಹೆಚ್ಚು ಅಂಕ ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳು ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ ಎಂಬ ನಿರ್ಬಂಧ ಈ ಬಾರಿ ಇಲ್ಲ. ಇದಕ್ಕೆ ಕಾರಣ ಕಳೆದ ಕೆಲವು ವರ್ಷಗಳಲ್ಲಿ ಈ ಅರ್ಹತಾ ಪರೀಕ್ಷೆಯ ಪತ್ರಿಕೆಗಳಲ್ಲಿ 100ಕ್ಕೆ 6ರಷ್ಟು ಅಭ್ಯರ್ಥಿಗಳು ಅನುತ್ತೀರ್ಣರಾಗುತ್ತಿದ್ದುದು. 
      ಹತ್ತನೇ ತರಗತಿಯ ಮಟ್ಟದ ಪ್ರಶ್ನೆಗಳಿಂದ ಕೂಡಿರುತ್ತಿದ್ದ ಇಂಗ್ಲಿಷ್‌ ಮತ್ತು ಭಾರತೀಯ ಭಾಷೆಯ ಪತ್ರಿಕೆಗಳನ್ನು ಬಿಡಿಸಲು ಅನೇಕ ಅಭ್ಯರ್ಥಿಗಳು ಹರಸಾಹಸಪಡುತ್ತಿದ್ದರಂತೆ! 2011ರ ಮುಖ್ಯ ಪರೀಕ್ಷೆ ತೆಗೆದುಕೊಂಡಿದ್ದ 11,200 ಜನರಲ್ಲಿ 705 ಅಭ್ಯರ್ಥಿಗಳು ಇಂಗ್ಲಿಷ್‌ ಭಾಷೆಯಲ್ಲಿ ಮತ್ತು 272ಜನ ಹಿಂದಿಯಲ್ಲಿ ನಪಾಸಾಗಿ¨ªಾರೆ. 2010ರಲ್ಲಿ 1264 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದರಂತೆ. ಇಂತಹ ಮುಜುಗರವನ್ನು ತಪ್ಪಿಸಲಿಕ್ಕೆಂದು ಲೋಕಸೇವಾ ಆಯೋಗವು ಈ ಅರ್ಹತಾ ಪತ್ರಿಕೆಗಳನ್ನು ಇದೀಗ ತೆಗೆದುಹಾಕಿದೆ. ಆದರೆ ಇಂಗ್ಲಿಷ್‌ ಪತ್ರಿಕೆ ಮಾತ್ರ ಕಡ್ಡಾಯ ಪತ್ರಿಕೆಯ ಭಾಗವಾಗಿ ಸೇರ್ಪಡೆಗೊಂಡಿದೆ. 

      ಐಎಎಸ್‌ ಮುಖ್ಯ ಪರೀಕ್ಷೆಯ ಬದಲಾದ ಮಾದರಿ 
      ಪತ್ರಿಕೆ 1: ಭಾಗ- 1- ಸಾಮಾನ್ಯ ಪ್ರಬಂಧ - 200 ಅಂಕಗಳು 
      ಭಾಗ- 2- ಇಂಗ್ಲಿಷ್‌ ಪತ್ರಿಕೆ (ಕಾಂಪ್ರಹೆನÒನ್‌ ಮತ್ತು ಪ್ರಸಿ) - 100 ಅಂಕಗಳು 
      ಪತ್ರಿಕೆ 2 : ಸಾಮಾನ್ಯ ಅಧ್ಯಯನ - 1 - 250 ಅಂಕಗಳು 
      (ಭಾರತೀಯ ಪರಂಪರೆ ಮತ್ತು ಸಂಸ್ಕತಿ, ವಿಶ್ವದ ಇತಿಹಾಸ ಮತ್ತು ಭೂಗೋಳ, ಸಮಾಜ) 
      ಪತ್ರಿಕೆ 3 : ಸಾಮಾನ್ಯ ಅಧ್ಯಯನ - 2 - 250 ಅಂಕಗಳು 
      (ಭಾರತದಲ್ಲಿ ಆಡಳಿತ, ಸಂವಿಧಾನ, ರಾಜಕೀಯ ವ್ಯವಸ್ಥೆ, ಸಾಮಾಜಿಕ ನ್ಯಾಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು) 
      ಪತ್ರಿಕೆ 4 : ಸಾಮಾನ್ಯ ಅಧ್ಯಯನ - 3 - 250 ಅಂಕಗಳು 
      (ತಂತ್ರಜ್ಞಾನ, ಆರ್ಥಿಕ ಬೆಳವಣಿಗೆ, ಜೀವವೈವಿಧ್ಯ, ಪರಿಸರ, ಭದ್ರತೆ ಮತ್ತು ವಿಕೋಪಗಳ ನಿರ್ವಹಣೆ) 
      ಪತ್ರಿಕೆ 5 : ಸಾಮಾನ್ಯ ಅಧ್ಯಯನ - 4 - 250 ಅಂಕಗಳು 
      (ನೈತಿಕಪ್ರಜ್ಞೆ - ಎಥಿಕ್ಸ್‌, ವಿಶ್ವಾಸಾರ್ಹತೆ ಮತ್ತು ಆಪ್ಟಿಟ್ಯೂಡ್‌) 
      ಪತ್ರಿಕೆ 6 : ಐಚ್ಛಿಕ ವಿಷಯ - ಪತ್ರಿಕೆ 1 - 250 ಅಂಕಗಳು 
      ಪತ್ರಿಕೆ 7 : ಐಚ್ಛಿಕ ವಿಷಯ - ಪತ್ರಿಕೆ 2 - 250 ಅಂಕಗಳು 
      ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) : - 275 ಅಂಕಗಳು 
      ಒಟ್ಟು ಅಂಕಗಳು : - 2075 ಅಂಕಗಳು 
      (ಪ್ರತಿಯೊಂದು ಪತ್ರಿಕೆಗೂ 3 ಗಂಟೆಗಳ ಸಮಯ ನಿಗದಿಯಾಗಿದ್ದು, ಅಂಧ ವಿದ್ಯಾರ್ಥಿಗಳಿಗೆ 3 ಗಂಟೆಗೂ ಹೆಚ್ಚು ಸಮಯ ನೀಡುವ ನೀಡುವ ಅವಕಾಶವಿದೆ.) 

      ಐಚ್ಛಿಕ ವಿಷಯಗಳು 
      ಐಚ್ಛಿಕ ವಿಷಯಗಳು ಅಭ್ಯರ್ಥಿಯ ವಿಷಯದ ಪರಿಜ್ಞಾನ, ಅಧ್ಯಯನದ ಆಳ, ದೃಷ್ಟಿಕೋನ ಮತ್ತು ನಿಲುವುಗಳನ್ನು ಆಧರಿಸಿ ಅವರವರ ಭಾವಕ್ಕೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತರಿಸಿ ಯಶಸ್ಸುಗಳಿಸುವಂತೆ ರೂಪಿತವಾಗಿರುತ್ತವೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಪ್ರಕಟವಾಗುವ ಪ್ರಶ್ನೆಪತ್ರಿಕೆಗೆ ಸಂವಿಧಾನ ಅಂಗೀಕರಿಸಿದ ಯಾವುದೇ ಭಾಷೆಯಲ್ಲಿ ಅಭ್ಯರ್ಥಿಗಳು ಉತ್ತರಿಸಲು ಅವಕಾಶವಿದೆ. ಆದರೆ ಆ ಭಾಷೆಯಲ್ಲಿ ಬರೆಯುವವರ ಸಂಖ್ಯೆ 25ಕ್ಕೂ ಕಡಿಮೆ ಇರಬಾರದು ಮತ್ತು ಅರ್ಜಿಯಲ್ಲಿ ಸ್ಪಷ್ಟವಾಗಿ ಅಭ್ಯರ್ಥಿಗಳು ತಮ್ಮ ಆಯ್ಕೆಯನ್ನು ನಮೂದಿಸಿರಬೇಕು ಹಾಗೂ ಅದೇ ಭಾಷೆಯಲ್ಲಿಯೇ ಬರೆಯತಕ್ಕದ್ದು. 
      ಮುಖ್ಯ ಪರೀಕ್ಷೆಗೆ ನಿಗದಿಗೊಳಿಸಿರುವ 25 ಐಚ್ಛಿಕ ವಿಷಯಗಳು(ಗ್ರೂಪ್‌-1) ಹಾಗೂ 23 ಭಾಷಾ ಸಾಹಿತ್ಯ ವಿಷಯಗಳು(ಗ್ರೂಪ್‌-2) ಅಂದರೆ ಒಟ್ಟು 48 ಐಚ್ಛಿಕ ವಿಷಯಗಳಲ್ಲಿ ಕೇವಲ ಒಂದನ್ನು ಮಾತ್ರ ಆಯ್ದುಕೊಳ್ಳಬೇಕು. ಹೀಗೆ ಆಯ್ದುಕೊಂಡ ವಿಷಯಕ್ಕೆ ಎರಡು ಪತ್ರಿಕೆಗಳು ಇರುತ್ತವೆ. ಐಚ್ಛಿಕ ವಿಷಯಗಳ ಪಟ್ಟಿ ಹೀಗಿದೆ: 
      25 ಐಚ್ಛಿಕ ವಿಷಯಗಳು (ಗ್ರೂಪ್‌-1): ಕೃಷಿ , ಪಶುಸಂಗೋಪನೆ ಮತ್ತು ಪಶುವಿಜ್ಞಾನ, ಮಾನವಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಸಿವಿಲ್‌ ಇಂಜಿನಿಯರಿಂಗ್‌, ವಾಣಿಜ್ಯಶಾಸ್ತ್ರ (ಕಾಮರ್ಸ್‌), ಅರ್ಥಶಾಸ್ತ್ರ, ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌, ಭೂಗೋಳ, ಭೂಗರ್ಭಶಾಸ್ತ್ರ, ಭಾರತೀಯ ಇತಿಹಾಸ, ಕಾನೂನು, ನಿರ್ವಹಣೆ(ಮ್ಯಾನೇಜ್‌ಮೆಂಟ್‌), ಗಣಿತಶಾಸ್ತ್ರ, ಮೆಕ್ಯಾನಿಕಲ್‌ ಇಂಜಿನಿಯರಿಂಗ್‌, ವೈದ್ಯ ವಿಜ್ಞಾನ, ತತ್ವಶಾಸ್ತ್ರ(ಫಿಲಾಸಫಿ), ಭೌತಶಾಸ್ತ್ರ, ಮನಃಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಸ್ಟಾÂಟಿಸ್ಟಿಕ್ಸ್‌, ಪ್ರಾಣಿಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಇವುಗಳಲ್ಲಿ ಯಾವುದಾದರೂ ಒಂದು ಇಲ್ಲವೇ ಎರಡನ್ನು ಅಥವಾ ಇಲ್ಲಿ ನೀಡಿರುವ 23 ಭಾಷೆಗಳ ಸಾಹಿತ್ಯ ವಿಷಯಗಳಲ್ಲಿ ಒಂದನ್ನು ಮಾತ್ರ ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಬಹುದು. ಹೀಗೆ ಭಾಷಾ ಸಾಹಿತ್ಯ ಪತ್ರಿಕೆ ಆಯ್ದುಕೊಳ್ಳುವಾಗ ಪದವಿ ಮಟ್ಟದಲ್ಲಿ ಅವರು ಅದೇ ಭಾಷಾ ಸಾಹಿತ್ಯವನ್ನು ಅಧ್ಯಯನ ಮಾಡಿರಬೇಕು. 
      23 ಭಾಷಾ ಸಾಹಿತ್ಯ ವಿಷಯಗಳು(ಗ್ರೂಪ್‌-2): ಕನ್ನಡ, ಅಸ್ಸಾಮಿ, ಕಾಶ್ಮೀರಿ, ಪಂಜಾಬಿ, ಬಂಗಾಳಿ, ಕೊಂಕಣಿ, ಮರಾಠಿ, ಸಂಸ್ಕೃತ, ಮಲಯಾಳಂ, ಸಿಂಧಿ, ಮಣಿಪುರಿ, ತಮಿಳು, ತೆಲುಗು, ಗುಜರಾತಿ, ಒಡಿಯಾ, ಉರ್ದು, ಹಿಂದಿ, ಮೈಥಿಲಿ, ಸಂಥಾಲಿ, ನೇಪಾಳಿ, ಬೋಡೋ, ಡೋಗ್ರಿ, ಇಂಗ್ಲಿಷ್‌(ಸಂವಿಧಾನ ಅಂಗೀಕರಿಸಿರುವ 22 ರಾಷ್ಟ್ರ ಭಾಷೆಗಳು ಮತ್ತು ಇಂಗ್ಲಿಷ್‌. ಈ ಹಿಂದೆ ಪಾಲಿ, ಅರೇಬಿಕ್‌, ಪರ್ಶಿಯನ್‌, ಫ್ರೆಂಚ್‌, ರಷ್ಯನ್‌, ಚೀನಿ, ಜರ್ಮನ್‌ ಭಾಷೆಗಳು ಸೇರಿದಂತೆ ಒಟ್ಟು 26 ಭಾಷಾ ಸಾಹಿತ್ಯ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಯಾರು ಬೇಕಾದರೂ ಆಯ್ದುಕೊಳ್ಳಬಹುದಿತ್ತು. ಇನ್ನು ಮುಂದೆ ಪದವಿ ಹಂತದಲ್ಲಿ ಓದಿರುವ ಭಾಷಾ ಸಾಹಿತ್ಯ ವಿಷಯವನ್ನು ಮಾತ್ರ ತೆಗೆದುಕೊಳ್ಳಬೇಕೆಂಬ ನಿರ್ಬಂಧವಿದೆ.) 

      ವ್ಯಕ್ತಿತ್ವ ಪರೀಕ್ಷೆ 
      ಆಯೋಗವು ನಿಯಮಾನುಸಾರ ನಡೆಸುವ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ಮೀಸಲಾತಿ ಅನ್ವಯ ಪ್ರಕಟಿಸಲಾದ ಖಾಲಿ ಹು¨ªೆಗಳ ಸಂಖ್ಯೆಗೆ ಅನುಗುಣವಾಗಿ 1:2 ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ/ ಸಂದರ್ಶನಕ್ಕೆ ಪರಿಗಣಿಸಲಾಗುವುದು. (ಈ ಹಿಂದೆ ಇದು 1:3 ಪ್ರಮಾಣದಲ್ಲಿತ್ತು.) 
      ಸಂದರ್ಶನಗಳಲ್ಲಿ ಆಯಾ ಸಂದರ್ಭ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅಭ್ಯರ್ಥಿಗಳ ತರ್ಕಬದ್ಧ ಆಲೋಚನೆ, ವಿಷಯದ ಪರಿಜ್ಞಾನ, ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಇತ್ಯಾದಿಗಳನ್ನು ಅಳೆಯಲು ಸೂಕ್ತವಾಗುವ ಪ್ರಶ್ನೆಗಳನ್ನು ಕೇಳುವುದು ರೂಢಿ. ಕೇವಲ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ ರೂಪದ ಪ್ರಶ್ನೆಗಳನ್ನು ಕೇಳದೆ ಅಭ್ಯರ್ಥಿಗಳ ಇಷ್ಟ, ಆಸಕ್ತಿ ಮತ್ತು ನಿರ್ಣಯ ಕೈಗೊಳ್ಳುವಿಕೆಯನ್ನು ಒರೆಗೆ ಹಚ್ಚಲಾಗುತ್ತದೆ. ಪ್ರಶ್ನೆಗಳನ್ನು ಕೇಳುವಾಗ ಈ ಕೆಳಕಂಡ ಆಂಶಗಳನ್ನು ಸಾಮಾನ್ಯವಾಗಿ ಗಮನದಲ್ಲಿ ಇರಿಸಿಕೊಳ್ಳಲಾಗಿರುತ್ತದೆ: 
      - ವೈಯಕ್ತಿಕ/ ಕೌಟುಂಬಿಕ ಹಿನ್ನಲೆ 
      - ದೈಹಿಕ ಸಾಮರ್ಥ್ಯ/ ಆರೋಗ್ಯ, ಬಲ, ದೇಹದಾಡ್ಯì, ಅಂಗಸೌಷ್ಟವ, ನಡವಳಿಕೆ 
      - ಸಾಧನೆ- ಶೈಕ್ಷಣಿಕ- ಔದ್ಯೋಗಿಕ- ಸಾಂಸ್ಕೃತಿಕ- ಸಾಹಿತ್ಯಕ ಇತ್ಯಾದಿ 
      - ಸಾಮಾನ್ಯ ಜ್ಞಾನ- ಸಮಸ್ಯಾ ನಿರ್ವಹಣಾ ಕೌಶಲ- ಬೌದ್ಧಿಕ ಸಾಮರ್ಥ್ಯ 
      - ಮನೋಭಾವ(ಆ್ಯಟಿಟ್ಯೂಡ್‌) ಸಾಮರ್ಥ್ಯ, ಯೋಗ್ಯತೆ(ಆ್ಯಪ್ಟಿಟ್ಯೂಡ್‌) 
      - ಆಸಕ್ತಿಗಳು- ಹವ್ಯಾಸಗಳು- ಸಾಮಾಜಿಕ ಸಂಪರ್ಕ- ಸ್ವಭಾವ- ಮನೋವೃತ್ತಿ- ವ್ಯಕ್ತಿತ್ವ 
      - ವಿಶ್ವಾಸಾರ್ಹತೆ- ಜವಾಬ್ದಾರಿಯ ನಡವಳಿಕೆ- ಸ್ವಯಂ ಸ್ಫೂರ್ತಿ- ಸ್ವಸಾಮರ್ಥ್ಯ 
      - ಜೀವನದಲ್ಲಿ ಹೆಮ್ಮೆ ಪಡುವ ಸಂಗತಿ- ಇಷ್ಟಪಡುವ ವ್ಯಕ್ತಿ- ಕ್ರೀಡೆ- ಕ್ಷೇತ್ರ 
      - ಪ್ರಚಲಿತ ವಿದ್ಯಮಾನ 
      - ದೇಶದ ಮೂಲಭೂತ ಔದ್ಯೋಗಿಕ ಸಂಸ್ಥೆಗಳ ಕುರಿತು- ಸರ್ಕಾರದ ನೀತಿಗಳು ಮತ್ತು ಔದ್ಯೋಗಿಕ ರಂಗದ ಮೇಲೆ ಅವುಗಳ ಪರಿಣಾಮ- ವೃತ್ತಿಪರ ತರಬೇತಿ- ಸಾಮರ್ಥ್ಯ ಮತ್ತು ಬಲಹೀನತೆ 
      - ಭಾರತ- ಇಂದು- ನಿನ್ನೆ- ನಾಳೆ- ನೆರೆಹೊರೆ ದೇಶಗಳೊಡನೆ ಇರುವ ಸಂಬಂಧ ಇತ್ಯಾದಿ. 
      (ಹೆಚ್ಚಿನ ಮಾಹಿತಿಗಾಗಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಸಂದರ್ಶನ- ವ್ಯಕ್ತಿತ್ವದ ಸಮಗ್ರ ದರ್ಶನ- 4ನೇ ಮುದ್ರಣ- ರೂ.45 ಕೃತಿಯನ್ನು ಗಮನಿಸಬಹುದು.)


      • ಐಎಎಸ್‌/ ಐಎಫ್ಎಸ್‌ ಪ್ರಿಲಿಮಿನರಿ ಪರೀಕ್ಷೆ ಅರ್ಜಿ ಆಹ್ವಾನ

      • ಆಯೋಗವು 2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್‌ 5ರಂದು ಅರ್ಜಿ ಆಹ್ವಾನಿಸಿದೆ.

        • Udayavani | Mar 11, 2013
          ಆಯೋಗವು 2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್‌ 5ರಂದು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಮಾತ್ರವೇ ಅರ್ಜಿಸಬೇಕು. ಭಾರತದ ಗೆಝೆಟ್‌ನಲ್ಲಿ ಈ ಕುರಿತ ಪ್ರಕಟಣೆ ಹೊರಬಿದ್ದಿದೆ. ಪರೀಕ್ಷೆಗಳು ಬರುವ ಮೇ 26ರಂದು ನಡೆಯಲಿವೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ. ಅಂಧ ಅಭ್ಯರ್ಥಿಗಳು ಚೆನ್ನೈ, ದೆಹಲಿ, ಹೈದರಾಬಾದ್‌, ಕೋಲ್ಕತಾ, ಲಕ್ನೋ, ಡಿಸ್‌ಪುರ್‌ ಮತ್ತು ಮುಂಬೈ ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬೇಕು. 
          ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ ಪರೀಕ್ಷೆ ತೆಗೆದುಕೊಳ್ಳುವವರು ಈ ಬಾರಿ ಸಿವಿಲ್‌ ಸರ್ವೀಸಸ್‌ ಪ್ರಿಲಿಮಿನರಿ ಪರೀಕ್ಷೆಗೆ ಕರೆದಿರುವ ಅರ್ಜಿಯನ್ನೇ ಸಲ್ಲಿಸಬೇಕು. ಅಭ್ಯರ್ಥಿಗಳು ಸಿವಿಲ್‌ ಸರ್ವೀಸಸ್‌(ಸುಮಾರು 1000+ ಹು¨ªೆಗಳು) ಮತ್ತು ಐಎಫ್ಎಸ್‌ (ಸುಮಾರು 85 ಹು¨ªೆಗಳು) ಇವುಗಳಲ್ಲಿ ಯಾವುದಾದರೂ ಒಂದನ್ನು ಅಥವಾ ಎರಡನ್ನೂ ಆಯ್ಕೆಮಾಡಿಕೊಳ್ಳಲು ಅವಕಾಶವಿರುತ್ತದೆ. ಎರಡನ್ನೂ ಆಯ್ಕೆಮಾಡಿಕೊಳ್ಳುವ ಅರ್ಹ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಿವಿಲ್‌ ಸರ್ವೀಸಸ್‌ ಮತ್ತು ಫಾರೆಸ್ಟ್‌ ಸರ್ವೀಸಸ್‌ ಮುಖ್ಯ ಪರೀಕ್ಷೆಗಳನ್ನು ಪ್ರತ್ಯೇಕ ದಿನಾಂಕಗಳಂದು ನಡೆಸಲಾಗುತ್ತದೆ. 
          ಪೂರ್ವಭಾವಿ ಪರೀಕ್ಷೆಯ ಅರ್ಜಿ ಆಹ್ವಾನ: 05.03.2013 
          ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04.04.2013 
          ಪೂರ್ವಭಾವಿ ಪರೀಕ್ಷೆಯ ದಿನಾಂಕ: 26.05.2013 
          ಸಿವಿಲ್‌ ಸರ್ವೀಸಸ್‌ ಮುಖ್ಯಪರೀಕ್ಷೆ ಆರಂಭ: ನವೆಂಬರ್‌ 2013 
          ಐಎಫ್ಎಸ್‌ ಮುಖ್ಯ ಪರೀಕ್ಷೆ ಆರಂಭ: 21.09.2013 
          ಪ್ರಿಲಿಮಿನರಿ ಪರೀಕ್ಷೆಯ ಪಠ್ಯಕ್ರಮ 
          ಪತ್ರಿಕೆ 1: ಸಾಮಾನ್ಯ ಜ್ಞಾನ- 200 ಅಂಕಗಳು- ಅವಧಿ ಎರಡು ಗಂಟೆ 
          - ಪ್ರಸ್ತುತ ವಿದ್ಯಮಾನ- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಸಂಗತಿಗಳನ್ನು ಒಳಗೊಂಡಂತೆ 
          - ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರÂ ಸಂಗ್ರಾಮ 
          - ಭಾರತ ಮತ್ತು ಪ್ರಪಂಚದ ಭೂಗೋಳ- ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ 
          - ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ - ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್‌ ರಾಜ್‌, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ 
          - ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ 
          - ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ, ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ(ಈ ವಿಷಯಗಳಲ್ಲಿ ತುಂಬಾ ಆಳವಾದ ತಜ್ಞತೆಯ ಅಗತ್ಯವೇನಿಲ್ಲ.) 
          - ಸಾಮಾನ್ಯ ವಿಜ್ಞಾನ 

          ಪತ್ರಿಕೆ 2: ಸಿವಿಲ್‌ ಸರ್ವೀಸ್‌ ಆ್ಯಪ್ಟಿಟ್ಯೂಡ್‌- 200 ಅಂಕಗಳು- ಅವಧಿ ಎರಡು ಗಂಟೆ 
          - ಕಾಂಪ್ರಹೆನÒನ್‌(ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು) 
          - ಸಂವಹನ ಕೌಶಲಗಳು ಮತ್ತು ಇಂಟರ್‌ಪರÕನಲ್‌ ಸ್ಕಿಲ್ಸ್‌ (ವೈಯಕ್ತಿಕ ಕೌಶಲಗಳು) 
          - ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ 
          - ತೀರ್ಮಾನ ಕೈಗೊಳ್ಳುವಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ 
          - ಸಾಮಾನ್ಯ ಬೌದ್ಧಿಕ ಸಾಮರ್ಥ್ಯ 
          - ಸಂಖ್ಯಾ ಮೂಲಾಂಶಗಳು(ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ(ಚಾರ್ಟ್‌, ಗ್ರಾಫ್, ಟೇಬಲ್‌, ದತ್ತಾಂಶ ಇತ್ಯಾದಿ- ಹತ್ತನೇ ತರಗತಿಯ ಮಟ್ಟದ ಕಠಿಣತೆ) 
          - ಇಂಗ್ಲಿಷ್‌ ಭಾಷೆಯಲ್ಲಿರುವ ನೀಡಲಾಗಿರುವ ಮಾಹಿತಿ ಪ್ಯಾರಾಗ್ರಾಫ‌ನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ 
          - ಇಂಗ್ಲಿಷ್‌ ಕಾಂಪ್ರಹನÒನ್‌

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...