Wednesday, 14 October 2015

Olympiad for Teachers 2015 - Article in Vijayavani Masth Section 14 Oct 2015

ಶಿಕ್ಷಕರಿಗಾಗಿ ಒಲಿ೦ಪಿಯಾಡ್ - Bedre Manjunath
ಭಾರತದ ಏಳು ನಗರಗಳಲ್ಲಿ ಡಿಸೆ೦ಬರ್ 5ರ೦ದು ಇದೇ ಮೊದಲಬಾರಿಗೆ ಶಿಕ್ಷಕರಿಗಾಗಿ ಒಲಿ೦ಪಿಯಾಡ್ (CENTA Teaching Professionala olympiad - TPO 2015) ನಡೆಯಲಿದೆ. ಬೆ೦ಗಳೂರು, ಅಹಮದಾಬಾದ್, ಚೆನ್ನೆ„, ದೆಹಲಿ, ಹ್ಯೆದರಾಬಾದ್, ಕೋಲ್ಕತ ಮತ್ತು ಮು೦ಬ್ಯೆ ನಗರಗಳ ಆಯ್ದ ಶಾಲೆಗಳಲ್ಲಿ ಇದು ನಡೆಯಲಿದೆ. ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಸ್ಪಧೆ೯ಯಲ್ಲಿ ಪ್ರಶಿಕ್ಷಣಾಥಿ೯ಗಳು, ಹೊಸದಾಗಿ ಸೇವೆಗೆ ಸೇರಿದವರು, ನುರಿತ, ಹಿರಿಯ ಶಿಕ್ಷಕರು ಭಾಗವಹಿಸಬಹುದು. ಪ್ರಾಥಮಿಕ (ಎಲ್ಲ ವಿಷಯಗಳು), ಮಾಧ್ಯಮಿಕ (ಇ೦ಗ್ಲಿಷ್, ಗಣಿತ, ವಿಜ್ಞಾನ) ಮತ್ತು ಪ್ರೌಢಶಾಲೆ (ಇ೦ಗ್ಲಿಷ್, ಗಣಿತ, ಭೌತಶಾಸOಉ, ರಸಾಯನಶಾಸOಉ, ಜೀವಶಾಸOಉ) ಈ ಮೂರು ವಿಭಾಗಳಲ್ಲಿ ಬೋಧನಾ ವೈಶಿಷ್ಟé ಪ್ರದಶ೯ನ ಸ್ಪಧೆ೯ ನಡೆಯಲಿದೆ. ಮೊದಲ ರ್ಯಾ೦ಕ್ ಗಳಿಸಿದವರಿಗೆ 1 ಲಕ್ಷ ರೂಪಾಯಿ, ಎರಡು ಮತ್ತು ಮೂರನೇ ರ್ಯಾ೦ಕ್ ಗಳಿಸಿದವರಿಗೆ 50 ಸಾವಿರ ರೂ., ನಾಲ್ಕರಿ೦ದ ಹತ್ತನೇ ರ್ಯಾ೦ಕ್‍ನವರಿಗೆ 10 ಸಾವಿರ, 11ರಿ೦ದ 30ನೇ ರ್ಯಾ೦ಕ್‍ವರೆಗೆ 5 ಸಾವಿರ ನಗದು ನೀಡಲಾಗುವುದು.
   ಮೊದಲ ಎರಡು ಸ್ಥಾನ ಗಳಿಸಿದವರಿಗೆ ದುಬ್ಯೆನಲ್ಲಿ ನಡೆಯಲಿರುವ ಅ೦ತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಮೊದಲ 50 ಸ್ಥಾನ ವಿಜೇತರಿಗೆ ವಿಶೇಷ ಪುರಸ್ಕಾರ, ವಿದ್ಯುನ್ಮಾನ ಬೋಧನಾ ಉಪಕರಣಗಳು, ವೃತ್ತಪತ್ರಿಕೆಯ ಉಚಿತ ಸದಸ್ಯತ್ವ, ಮತ್ತಿತರ ವಿಶೇಷ ಬಹುಮಾನಗಳು ಸಿಗಲಿವೆ.
ಹೊಸ ಸ೦ಚಲನದ ಉದ್ದೇಶ
 ಸೆ೦ಟರ್ ಫಾ ರ್ ಟೀಚರ್ ಅಕ್ರೆಡಿಷನ್ (CENTA) ಸ೦ಸ್ಥೆಯು ವಿವಿಧ ಕಾಪೋ೯ರೇಟ್ ಸ೦ಸ್ಥೆಗಳ ಸಹಯೋಗದೊ೦ದಿಗೆ ಏಪ೯ಡಿಸಿರುವ ಒಲಿ೦ಪಿಯಾಡ್, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸ೦ಚಲನ ಮೂಡಿಸುವ ಉದ್ದೇಶ ಹೊ೦ದಿದೆ. ಕ್ಷೇತ್ರವನ್ನು ಅಗಾಧವಾಗಿ ಪ್ರೀತಿಸುವ ಶಿಕ್ಷಕರನ್ನಷ್ಟೇ ಅಲ್ಲದೆ ಆಸಕ್ತ ಯುವ ಶಿಕ್ಷಕರನ್ನೂ ಹುರಿದು೦ಬಿಸುವ ಸಲುವಾಗಿ ಸ್ಪಧೆ೯ ಏಪ೯ಡಿಸಲಾಗಿದ್ದು, ಬಹುಮಾನಗಳ ಜತೆ ವಿಶೇಷ ಗುಣಮಟ್ಟದ ಮಾನಕ ಪ್ರಮಾಣಪತ್ರ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ಸ೦ಸ್ಥೆಯ ವೆ ಬ್‍ಸೈಟ್‍ನಲ್ಲಿ ಸುದೀಘ೯ ವಿವರಗಳನ್ನು ನೀಡಲಾಗಿದ್ದು, ಸೆ೦ಟಾದ ಗುಣಮಟ್ಟ ಸೂಚ್ಯ೦ಕ ಪತ್ರವೂ ಇಲ್ಲಿದೆ.
ಯಾವ್ಯಾವುದಕ್ಕೆ ಎಷ್ಟು ಅ೦ಕ?
 ಎರಡು ಗ೦ಟೆ ಅವ˜ಯ, ಬಹು ಆಯ್ಕೆ ಮಾದರಿಯ ಆಯ್ದ ವಿಷಯವಾರು ಪತ್ರಿಕೆಯಲ್ಲಿ ಒಟ್ಟು ಮೂರು ವಿಭಾಗಗಳನ್ನು ಮಾಡಲಾಗಿದೆ. ಬೋಧನಾ ವಿಷಯಕ್ಕೆ ಸ೦ಬ೦˜ಸಿದ ಜ್ಞಾನ ಪರೀಕ್ಷೆಗೆ 16 ಪ್ರಶ್ನೆಗಳಿದ್ದು, 25ಅ೦ಕಗಳನ್ನು ನಿಗದಿಮಾಡಲಾಗಿದೆ. ಸ೦ವಹನ ಹಾಗೂ ತಾಕಿ೯ಕ ಕೌಶಲಕ್ಕೆ 25ಅ೦ಕಗಳ 16 ಪ್ರಶ್ನೆಗಳಿರುತ್ತವೆ. ತರಗತಿಯನ್ನು ಆಸಕ್ತದಾಯಕವಾಗಿ, ಉಲ್ಲಸಿತವಾಗಿ ಇಟ್ಟುಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಶಿಕ್ಷಣಕ್ಕೆ 32 ಪ್ರಶ್ನೆಗಳು ಮೀಸಲಾಗಿದ್ದು, 50 ಅ೦ಕಗಳಿರುತ್ತವೆ. ಒಟ್ಟು 64 ಪ್ರಶ್ನೆಗಳು, 100 ಅ೦ಕಗಳಿರುತ್ತವೆ. ಭಾಗವಹಿಸುವವರು ಅಜಿ೯ಯಲ್ಲಿ ವೈಯಕ್ತಿಕ ವಿವರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿವರ, ಸ್ಪಧೆ೯ಗಾಗಿ ಆಯ್ಕೆ ಮಾಡಿಕೊಳ್ಳುವ ನಗರ ಮತ್ತು ವಿಷಯಗಳನ್ನು ಸ್ಪಷ್ಟವಾಗಿ ನಮೂದಿಸಿ ಆನ್‍ಲ್ಯೆನ್ ಮೂಲಕ ಸಲ್ಲಿಸಬೇಕು. ಅಕ್ಟೋಬರ್ 25 ಅಜಿ೯ ಸಲ್ಲಿಕೆಗೆ ಕೊನೇ ದಿನ.
  ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಯುಜಿಸಿಯ ನ್ಯಾಕ್ ಮಾನದ೦ಡದ೦ತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಗುಣಮಟ್ಟ ಹೆಚ್ಚಿಸಲು ಸೆ೦ಟಾದ ಪ್ರತ್ಯೇಕ ಮಾನದ೦ಡ ಸಿದ್ಧಗೊ೦ಡಿದೆ. ಅದರ ಅನ್ವಯ ಶಾಲೆಯಲ್ಲಿ ಮೂಲ ಸೌಕಯ೯ಗಳ ಜತೆ ಉತ್ತಮ ಮಟ್ಟದ ಶಿಕ್ಷಣವನ್ನು ಕೊಡಲು ಪ್ರಯತ್ನಿಸುವ, ಕಲಿಕೆಯಲ್ಲಿ ವಿನೂತನ ಕ್ರಮವನ್ನು ಅಳವಡಿಸುವ ಶಿಕ್ಷಕರನ್ನು ಪ್ರೊೀತ್ಸಾಹಿಸಲು ಈ ಒಲಿ೦ಪಿಯಾಡ್ ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳಿಗೆ ಈ ವೆ ಬ್‍ಸೈಟ್‍ಗಳನ್ನು ಭೇಟಿ ಮಾಡಿ · WWW.tpo-india.org

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...