Applied English Corner - Episode 125 - Janara Guru 18 April 2024
Showing posts with label Easy English. Show all posts
Showing posts with label Easy English. Show all posts
Thursday, 18 April 2024
Monday, 13 July 2015
Tuesday, 27 May 2014
Monday, 18 November 2013
Easy English through Mobile Phones and Apps - Article in Prajavani Daily - Shikshana Supplement - 18 Nov 2013
ಇಂಗ್ಲಿಷ್ ಕಲಿಕೆ ಬೆರಳ ತುದಿಯಲ್ಲಿ!
ಇಂಗ್ಲಿಷ್
ಭಾಷೆ ಮಾತನಾಡಲು ಮತ್ತು ಬರೆಯುವುದನ್ನು ಕಲಿಯಲು ಖಾಸಗಿ ತರಗತಿಗಳಿಗೇ ಸೇರಬೇಕೆಂದೇನೂ
ಇಲ್ಲ. ಮನಸ್ಸು ಮಾಡಿದರೆ, ನಾವು ದಿನನಿತ್ಯ ಬಳಸುವ ಮೊಬೈಲ್, ಟಿ.ವಿ., ಇಂಟರ್‌ನೆಟ್‌ಗಳ
ಮೂಲಕವೇ ಸ್ವಂತ ‘ಲ್ಯಾಂಗ್ವೇಜ್ ಲ್ಯಾಬ್’ ರಚಿಸಿಕೊಂಡು ಭಾಷೆಯನ್ನು
ಸಿದ್ಧಿಸಿಕೊಳ್ಳಬಹುದು.
ಸಾವಿರಾರು
ರೂಪಾಯಿ ಶುಲ್ಕ ಕೊಟ್ಟು ‘ಸ್ಪೋಕನ್ ಇಂಗ್ಲಿಷ್’ ತರಗತಿಗಳಿಗೆ ಸೇರಿ, ಇಂಗ್ಲಿಷ್
ಕಾನ್‌ವರ್ಸೇಷನ್, ಸ್ಪೋಕನ್ ಇಂಗ್ಲಿಷ್, ಇಂಗ್ಲಿಷ್ ಸ್ಪೀಕಿಂಗ್,
ಕಾನ್‌ವರ್ಸೇಷನಲ್ ಇಂಗ್ಲಿಷ್, ಸಾಫ್ಟ್‌ಸ್ಕಿಲ್ ಟ್ರೈನಿಂಗ್ ಎಂದೆಲ್ಲ ಉಠಾಬೈಸ್
ತೆಗೆಯುತ್ತಿರುವ ಕನ್ನಡದ ಇಂಗ್ಲಿಷ್ ಪ್ರೇಮಿಗಳಿಗೆ, ತಮ್ಮ ಬೆರಳ ತುದಿಯಲ್ಲೇ ಇಂಗ್ಲಿಷ್
ಕಲಿಕೆಯ ಸಾಧನಗಳಿವೆ ಎಂಬುದು ಅರಿವಿಗೇ ಬರುತ್ತಿಲ್ಲ!
ತಮ್ಮ
ಕಿಸೆಯಲ್ಲೇ ಇರುವ ಮೊಬೈಲ್ ಫೋನ್, ಮನೆಯಲ್ಲಿರುವ ರೇಡಿಯೊ, ಟಿ.ವಿ., ಡಿ.ವಿ.ಡಿ.,
ಎಂಪಿತ್ರೀ ಪ್ಲೇಯರ್, ಕಂಪ್ಯೂಟರ್, ಇಂಟರ್ನೆಟ್ಗಳನ್ನೇ ಬಳಸಿ ಸ್ವಂತ ‘ಲ್ಯಾಂಗ್ವೇಜ್
ಲ್ಯಾಬ್’ ಮಾಡಿಕೊಂಡು, ಇಂಗ್ಲಿಷ್ ಕಲಿಯಲು ಅವರು ಯಾಕೆ ಮನಸ್ಸು ಮಾಡುತ್ತಿಲ್ಲವೋ ಆ
ದೇವರೇ ಬಲ್ಲ.
ಹಲೊ ‘ಟಾಕಿಂಗ್ ಟಾಮ್’!
‘ಗುಡ್ ಈವ್ನಿಂಗ್ ಸರ್, ಏನ್ ಸರ್ ನೀವೂ ಮಕ್ಕಳ ತರಾ ಮೊಬೈಲ್‌ನಲ್ಲಿ ‘ಟಾಕಿಂಗ್ ಟಾಮ್’ ಜೊತೆ ಆಟ ಆಡ್ತಾ ಇದ್ದೀರಾ? ಒಂದ್ ಸಲ ನಮ್ ಕೈಗೆ ಅದನ್ನ ಕೊಡಿ, ಆ ಟಾಕಿಂಗ್ ಟಾಮ್ ಗತಿ ಏನಾಗುತ್ತೆ ಅಂತ ನೋಡ್ತೀರಂತೆ’ ಎಂದು ಸಮರ್ಥ ಹೇಳಿದ.
‘ಗುಡ್ ಈವ್ನಿಂಗ್ ಸರ್, ಏನ್ ಸರ್ ನೀವೂ ಮಕ್ಕಳ ತರಾ ಮೊಬೈಲ್‌ನಲ್ಲಿ ‘ಟಾಕಿಂಗ್ ಟಾಮ್’ ಜೊತೆ ಆಟ ಆಡ್ತಾ ಇದ್ದೀರಾ? ಒಂದ್ ಸಲ ನಮ್ ಕೈಗೆ ಅದನ್ನ ಕೊಡಿ, ಆ ಟಾಕಿಂಗ್ ಟಾಮ್ ಗತಿ ಏನಾಗುತ್ತೆ ಅಂತ ನೋಡ್ತೀರಂತೆ’ ಎಂದು ಸಮರ್ಥ ಹೇಳಿದ.
‘ಕೊಡಿ
ಸರ್ ಪ್ಲೀಸ್! ನಾವೂ ಸ್ವಲ್ಪ ಹೊತ್ತು ಅದರ ಜೊತೆ ಆಡಿ ಕೊಡ್ತೀವಿ’ ಅಂತ ಅವನ ಸ್ನೇಹಿತರ
ಗುಂಪು ಒಕ್ಕೊರಲಿನಿಂದ ಕೂಗಿತು. ‘ಓ.ಕೆ., ಓ.ಕೆ. ತಗೊಳ್ಳಿ ಕೊಡ್ತೇನೆ. ಅದರ ಜೊತೆ
ಅದೇನೇನ್ ಮಾಡ್ತೀರೋ ಅದನ್ನ ನನಗೂ ತೋರಿಸಬೇಕು ಆಯ್ತಾ’ ಎಂದು ಹೇಳಿ ಪ್ರೊ. ಛಾಯಾಪತಿ
ಅವರು ಸಮರ್ಥನ ಕೈಗೆ ತಮ್ಮ ಹೊಸ ಆಂಡ್ರಾಯ್ಡ ಫೋನ್ ಕೊಟ್ಟರು.
‘ಎಲ್ಲಿ,
ಯಾರಾದ್ರೂ ಇದಕ್ಕೆ ಸ್ವಲ್ಪ ತಮಾಷೆಯಾಗಿ ಬೈಯಿರಿ ನೋಡೋಣ’ ಎಂದು ಹೇಳಿ ಪ್ರಜ್ವಲ್
ಮೊಬೈಲ್‌ನಲ್ಲಿದ್ದ ‘ಟಾಕಿಂಗ್ ಟಾಮ್’ನ್ನು ಆ್ಯಕ್ಟಿವೇಟ್ ಮಾಡಿದ. ‘ಯೂ ಈಡಿಯಟ್’ ಅಂತ
ಶೋಭಿತ್ ಬೈಯ್ದ. ‘ಟಾಕಿಂಗ್ ಟಾಮ್’ ಸಹ ಕೂಡಲೇ ‘ಯೂ ಈಡಿಯಟ್’ ಎಂದು ತಿರುಗಿಸಿ
ಬೈಯ್ದುಬಿಟ್ಟಿತು. ಸ್ನೇಹಿತರೆಲ್ಲ ಘೊಳ್ ಎಂದು ನಗತೊಡಗಿದರು. ‘ಹಲೊ, ಹೌ ಆರ್ ಯೂ’
ಎಂದು ಧ್ರುತಿ ಭಟ್ ಕೇಳಿದಳು. ‘ಟಾಕಿಂಗ್ ಟಾಮ್’ ಅವಳಿಗೂ ತಿರುಗಿ ಹಾಗೇ ಕೇಳಿತು.
‘ಹಾಯ್, ಹ್ಯಾಡ್ ಯುವರ್ ಮೀಲ್ಸ’ ಸಹನಾ ಪ್ರಶ್ನಿಸಿದಳು. ‘ಟಾಕಿಂಗ್ ಟಾಮ್’ ಸಹ
ಅವಳಿಗೂ ಮರಳಿ ಅದೇ ಪ್ರಶ್ನೆ ಕೇಳಿತು.
ಹೀಗೆ
‘ಟಾಕಿಂಗ್ ಟಾಮ್’ ಜೊತೆಗಿನ ಮಕ್ಕಳ ಆಟ ಮುಂದುವರಿಯುತ್ತಲೇ ಇತ್ತು ಛಾಯಾಪತಿಯವರ ಅಧ್ಯಯನ
ಕೋಣೆ- ಕಂ- ಮೊಬೈಲ್ ಲ್ಯಾಂಗ್ವೇಜ್ ಲ್ಯಾಬ್ನಲ್ಲಿ. ಮಕ್ಕಳಂತೆಯೇ ಹೀಗೆ ಕಲಿಯುವುದು
ಎಷ್ಟು ಸುಲಭ, ಸರಳ, ಪರಿಣಾಮಕಾರಿ ಅಲ್ಲವೇ?
ಆ್ಯಪ್ಸ್ ಬಳಸಿ ಸುಲಭವಾಗಿ ಕಲಿಸಿ
ಇತ್ತೀಚೆಗೆ ಗೂಗಲ್ ಪ್ಲೇ ಸ್ಟೋರ್, ಸ್ಯಾಮ್ಸಂಗ್, ನೋಕಿಯಾ, ಮೈಕ್ರ್ೊಮ್ಯಾಕ್ಸ್, ಆ್ಯಪಲ್ ಇತ್ಯಾದಿ ಜಾಲತಾಣಗಳಲ್ಲಿ ಲಕ್ಷಾಂತರ ಆ್ಯಪ್ಸ್‌ಗಳು (ಅಪ್ಲಿಕೇಶನ್‌ಗಳು) ಲಭ್ಯವಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉಪಯೋಗಕ್ಕಾಗಿ ಉಚಿತ ಡಿಕ್ಷ್‌ನರಿಗಳು, ಸ್ಪೋಕನ್ ಇಂಗ್ಲಿಷ್ ಮಾದರಿಗಳು, ಭಾರತೀಯ ಭಾಷೆಗಳ ಪದಕೋಶಗಳು, ವಿಶ್ವಕೋಶ, ಯೂ- ಟ್ಯೂಬ್, ವರ್ಚುಯಲ್ ಲ್ಯಾಬ್, ಗ್ಲೋಬ್, ಟ್ರಾನ್ಸ್‌ಲೇಶನ್ ಸೌಲಭ್ಯ, ಆಡಿಯೊ-– ವಿಡಿಯೊ ಚಿತ್ರಣ, ವೆಬ್ ಬ್ರೌಸಿಂಗ್‌ನಂತಹ ಸೌಲಭ್ಯಗಳು ಕಲಿಕೆಯನ್ನು ಆಸಕ್ತಿದಾಯಕ ಆಗಿಸಿವೆ.

ಇವುಗಳನ್ನು
ಮೊಬೈಲ್ ಇಲ್ಲವೇ ಐಪ್ಯಾಡ್/ ನೋಟ್ಪ್ಯಾಡ್ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ನಮ್ಮ
ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಮುದ್ರಿತ ಪುಸ್ತಕಗಳು ಮತ್ತು ಪದಕೋಶಗಳಿಗಿಂತ
ಇ-– ಬುಕ್ ಹಾಗೂ ಇ-– ಡಿಕ್ಷ್‌ನರಿಗಳು ಜನಪ್ರಿಯವಾಗುತ್ತಿದ್ದು, ಥಟ್ ಎಂದು ಬಳಸಲು
ಅನುಕೂಲಕರವಾಗಿವೆ. ಹೆಚ್ಚಿನ ವಿವರಗಳಿಗೆ ಗಮನಿಸಿ:
https://play.google.com/store/apps/category/ EDUCATION
www.nokia.com/in-en/apps/
http://apps.samsung.com/mercury/topApps
ಬರೆದು ನೋಡಿ
https://play.google.com/store/apps/category/ EDUCATION
www.nokia.com/in-en/apps/
http://apps.samsung.com/mercury/topApps
ಬರೆದು ನೋಡಿ
‘ಸರ್, ಸರ್, ಲೆಟರ್ ರೈಟಿಂಗ್ ಹೇಳ್ಕೊಡಿ ಸರ್ ಪ್ಲೀಸ್. ಈ ತಿಂಗಳ ಟೆಸ್ಟ್‌ನಲ್ಲಿ ಲೆಟರ್ ರೈಟಿಂಗ್ ಕೊಡ್ತಾರಂತೆ’ ಎಂದು ಕೇಳಿದ ರಕ್ಷಿತ್.
‘ಅಲ್ಲಯ್ಯ,
ನಿಮ್ ಟೀಚರ್ ಯಾವ ಜಮಾನಾದಲ್ಲಿದ್ದಾರೆ ಇನ್ನೂ. ಲೆಟರ್ ರೈಟಿಂಗ್ ಬರೀ ಪರೀಕ್ಷೆಗೆ
ಮಾತ್ರ ಕೇಳೋ ಪ್ರಶ್ನೆ ಥರಾ ಮಾಡಿಬಿಟ್ಟಿದ್ದಾರೆ ಇವ್ರೆಲ್ಲ. ಇದು ಇ–- ಮೇಲ್,
ಎಸ್.ಎಂ.ಎಸ್., ಟ್ವಿಟರ್ ಬಳಕೆಯಾಗ್ತಿರೋ ಕಾಲ. ಇದರಲ್ಲಿ ಅವರದ್ದೇನೂ ತಪ್ಪಿಲ್ಲ
ಬಿಡು, ಸಿಲೆಬಸ್‌ನಲ್ಲಿ ಇದೆ ಅಂತ ಹೇಳಿಕೊಡ್ತಾರೆ’ ಎಂದು ಪ್ರೀತಿಯಿಂದಲೇ ಟೀಕಿಸಿದರು
ಛಾಯಾಪತಿ.
ಪತ್ರ
ಲೇಖನ, ಪ್ರಬಂಧ, ನಿಬಂಧಗಳೆಲ್ಲ ದೀರ್ಘ ಅಭ್ಯಾಸಗಳೆಂದು ಪರಿಗಣಿತವಾಗಿ, ಎಸ್.ಎಂ.ಎಸ್.,
ಚಾಟಿಂಗ್, ಇ-– ಮೇಲ್ ಭರಾಟೆ ಆರಂಭ ಆಗಿರುವುದರಿಂದ ಮೊಬೈಲ್, ಇಂಟರ್‌ನೆಟ್,
ಫೇಸ್‌ಬುಕ್ ಮತ್ತು ಬ್ಲಾಗ್‌ಗಳ ಮೂಲಕ ತೋಚಿದ್ದನ್ನು ಗೀಚಿ (ಟೈಪ್ ಮಾಡಿ) ಕಲಿಯುವ ಅವಕಾಶ
ಇದೆ.
ಬಹುತೇಕ
ಮಕ್ಕಳು ಈಗ ಹೇಗೋ ಮಾಡಿ ಇ-– ಮೇಲ್ ಐ.ಡಿ. ಬಳಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ತಮ್ಮ
ಅಕೌಂಟ್ ತೆರೆದು ಸ್ನೇಹಿತರೊಂದಿಗೆ ಸಂಭಾಷಣೆ, ಮಾಹಿತಿ ವಿನಿಮಯ
ಮಾಡಿಕೊಳ್ಳುತ್ತಿದ್ದಾರೆ. ಬ್ಲಾಗ್ ಓಪನ್ ಮಾಡಿ ತಮಗೆ ಇಷ್ಟವಾದ ಮಾಹಿತಿ, ಫೋಟೊಗಳನ್ನು
ಪ್ರಕಟಿಸುತ್ತಿದ್ದಾರೆ. ಜಗತ್ತಿನ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನೂ
ನಿಲ್ಲಿಸುತ್ತಿದ್ದಾರೆ. ಇದಕ್ಕಿಂತ ಸುಲಭವಾದ, ಪ್ರಾಕ್ಟಿಕಲ್ ಆಗಿ ಕಲಿಯುವ ವಿಧಾನ ಬೇರೆ
ಯಾವುದಿದೆ ಹೇಳಿ?
ಕಾಲಕ್ಕೆ
ತಕ್ಕಂತೆ ಹಿರಿಯರಾದ ನಾವೂ ಬದಲಾಗಲೇ ಬೇಕು. ಕಂಪ್ಯೂಟರ್ ಗೊತ್ತಿಲ್ಲ, ಬ್ರೌಸಿಂಗ್
ಬರೋಲ್ಲ, ಸೌಲಭ್ಯ ಇಲ್ಲ ಎಂದು ಕೊರಗುತ್ತಾ ಕೂರದೆ ಹೊಸ ಸವಾಲನ್ನು ಎದುರಿಸಲು
ಸಿದ್ಧರಾಗಲೇಬೇಕು.
ಕೌಶಲ ಕಲಿಸುವ ಸಾಧನ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು. ಕನ್ನಡ, ಸಂಸ್ಕೃತ, ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಮೊಬೈಲ್
ಸಂಭಾಷಣೆಯಲ್ಲಿ, ಟಿ.ವಿ./ ರೇಡಿಯೊ/ ಇಂಟರ್‌ನೆಟ್ ಕಾರ್ಯಕ್ರಮಗಳಲ್ಲಿ ಆಲಿಸುವ ಮತ್ತು
ಮಾತನಾಡುವ ಕೌಶಲವನ್ನು ಕಲಿಯುವ ಅವಕಾಶ ಇದೆ. ಓದಲಿಕ್ಕೆ ಕಂಪ್ಯೂಟರ್ ಮತ್ತು
ಪತ್ರಿಕೆಗಳಿವೆ. ಬರೆಯಲಿಕ್ಕೆ ಎಸ್.ಎಂ.ಎಸ್., ಇ- ಮೇಲ್, ಚಾಟಿಂಗ್ಗಳಿವೆ! ಇತ್ತೀಚಿನ
ಆಂಡ್ರಾಯ್ಡ ಮೊಬೈಲ್‌ಗಳಲ್ಲಿ ನೂರಾರು ಆ್ಯಪ್‌ಗಳಿದ್ದು ಡಿಕ್ಷನರಿ, ಚಾಟಿಂಗ್,
ಗ್ರಾಮರ್, ಇ– ಬುಕ್, ಪ್ಲೇ– ಬುಕ್‌ಗಳ ಮೂಲಕ ಇಂಗ್ಲಿಷ್ ಕಲಿಸುವ ಮಾಹಿತಿ ಭಂಡಾರವೇ
ಅಡಗಿದೆ.
ಓದಿ, ಓದಿಸಿ, ಕಲಿಯಿರಿ
ಓದುವುದನ್ನು ಅಥವಾ ಮಾತನಾಡುವುದನ್ನು ಧ್ವನಿ ಮುದ್ರಿಸಿಕೊಳ್ಳಲು ಮೊಬೈಲ್ ಮತ್ತು ಕಂಪ್ಯೂಟರ್ಗಳಲ್ಲಿ ಸೌಲಭ್ಯಗಳಿವೆ. ಒಂದೇ ಒಂದು ನಿಮಿಷ ನೀವು ಓದುವುದನ್ನು ಧ್ವನಿ ಮುದ್ರಿಸಿಕೊಳ್ಳಿ. ಓದುವ ವಿಷಯ ನಿಮ್ಮ ತರಗತಿಗೆ ಸಂಬಂಧಿಸಿದ ಪಾಠ, ಇಲ್ಲವೇ ಯಾವುದೇ ದಿನಪತ್ರಿಕೆಯ ಆಯ್ದ ಭಾಗವಾದರೂ ಆಗಿರಬಹುದು. ಇಂಗ್ಲಿಷ್ ಸಂಭಾಷಣಾ ಪ್ರಾಯೋಗಿಕ ಪಾಠಗಳೂ ಈ ಸಂದರ್ಭದಲ್ಲಿ ಉಪಯುಕ್ತವೇ.

ನಿಧಾನ
ಗತಿಯ ಓದುಗರಾದರೆ ಸುಮಾರು 60-– 100 ಪದಗಳನ್ನು ಮಾತ್ರ ಓದಿರುತ್ತೀರಿ. ಮಧ್ಯಮ
ಗತಿಯವರಾದರೆ 100-– 140 ಪದಗಳು. ವೇಗವಾಗಿ ಓದುವವರಾದರೆ 140-– 200 ಪದಗಳು. ಇದು
ನಿಮ್ಮ ಓದಿನ ಗತಿ! ಇದನ್ನು ಟಿ.ವಿ. ಅಥವಾ ರೇಡಿಯೊ ನ್ಯೂಸ್ ರೀಡರ್‌ಗಳ ಓದಿನ
ವೇಗದೊಂದಿಗೆ ಹೋಲಿಸಿ ನೋಡಿಕೊಂಡರೆ ತಿಳಿಯುತ್ತದೆ. ವಿದೇಶಿ ವಾರ್ತಾ ವಾಚಕರು 240-– 300
ಪದಗಳ ವೇಗದಲ್ಲಿ ಓದುವುದರಿಂದ ನಮಗೆ ಅವರ ಇಂಗ್ಲಿಷ್‌ನ್ನು ಅಷ್ಟು ಬೇಗ ಅನುಸರಿಸಲು
ಸ್ವಲ್ಪ ಕಷ್ಟವಾಗುತ್ತದೆ.
ಇಂಟರ್‌ನೆಟ್‌ನಲ್ಲಿ
ಸಾವಿರಾರು ಮಾದರಿ ಪಾಠಗಳು ಲಭ್ಯವಿವೆ. ನೀವು ಧ್ವನಿ ಮುದ್ರಿಸಿಕೊಂಡಿರುವುದನ್ನು
ಮತ್ತೆ ಮತ್ತೆ ಕೇಳಿದಾಗ ಎಲ್ಲಿ ತಪ್ಪಿದ್ದೀರಿ, ಯಾವ ಪದವನ್ನು ಸರಿಯಾಗಿ
ಉಚ್ಚರಿಸಬೇಕಿತ್ತು, ಎಲ್ಲೆಲ್ಲಿ ಒತ್ತು ನೀಡಬೇಕಿತ್ತು, ಧ್ವನಿಯ ಏರಿಳಿತ
ಹೇಗಿರಬೇಕಿತ್ತು ಎಂಬುದು ತಿಳಿಯುತ್ತದೆ. ಮಕ್ಕಳಿಗೆ ಅವರ ತರಗತಿಯ ಪಾಠಗಳನ್ನು ಓದಿ,
ಧ್ವನಿ ಮುದ್ರಿಸಿಕೊಂಡು, ಮತ್ತೆ ಮತ್ತೆ ಕೇಳಲು ಹೇಳುವುದರಿಂದ ಓದುವ, ಮಾತನಾಡುವ,
ಆಲಿಸುವ ಕೌಶಲ ಕರಗತವಾಗುತ್ತದೆ.
(ಇಂಗ್ಲಿಷ್
ಕಲಿಕೆಗೆ ಪೂರಕವಾಗಿ One Minute English, Applied English Course -– A
Handbook of Spoken and Written English, Play and Learn English through
Language Games, Blog Blog Blog ಪುಸ್ತಕಗಳನ್ನು ಗಮನಿಸಬಹುದು. ಫೋನ್:
080-22203580 / 30578020).
Easy English through Mobile Phones and Apps - Article in Prajavani Daily - Shikshana Supplement - 18 Nov 2013
Saturday, 7 September 2013
Easy English - Ready, Steady, Go - A Few Experiments in English Language Teaching and Learning by Bedre Manjunath
Easy English - Ready, Steady, Go - A Few Experiments in English Language Teaching and Learning by Bedre Manjunath,
Published by Navakarnataka Publications, Bangalore. 080-22203580 Price: Rs.65-00
Monday, 10 June 2013
English from 1st Standard Ready Steady Go - Article in Prajavani Shikshana 10 June 2013
English from 1st Standard Ready Steady Go - Article in Prajavani Shikshana 10 June 2013
http://www.prajavani.net/article/%E0%B2%87%E0%B2%82%E0%B2%97%E0%B3%8D%E0%B2%B2%E0%B2%BF%E0%B2%B7%E0%B3%8D-%E0%B2%95%E0%B2%B2%E0%B2%BF%E0%B2%95%E0%B3%86-%E0%B2%B0%E0%B3%86%E0%B2%A1%E0%B2%BF-%E0%B2%B8%E0%B3%8D%E0%B2%9F%E0%B2%A1%E0%B2%BF-%E0%B2%97%E0%B3%8B
ಇಂಗ್ಲಿಷ್ ಕಲಿಕೆ: ರೆಡಿ ಸ್ಟಡಿ ಗೋ...!
- Mon, 06/10/2013 - 01:00
ಒಂದನೇ
ತರಗತಿಯಿಂದಲೇ ಮಕ್ಕಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಿಕೊಡುವ ವ್ಯವಸ್ಥೆಯಾಗಬೇಕು
ಎಂಬುದು ರಾಜ್ಯದ ನೂತನ ಮುಖ್ಯಮಂತ್ರಿ ಅವರ ಆಶಯ. ಇಂಗ್ಲಿಷ್ ಹೇಳಿಕೊಡಲು ಪ್ರಾಥಮಿಕ
ಶಿಕ್ಷಕರಿಗೆ ದೂರಸಂಪರ್ಕದ ಮೂಲಕ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಡಯಟ್‌ಗಳ
ಮೂಲಕ ನೇರ ಸಂವಾದ ತರಗತಿಗಳಲ್ಲಿ ಭಾಷಾ ಬೋಧನಾ ತರಬೇತಿ ನೀಡಿ, ಹೊಸ ಸವಾಲನ್ನು ಎದುರಿಸಲು
ಶಿಕ್ಷಣ ಇಲಾಖೆ ಅವರನ್ನು ಸಿದ್ಧಗೊಳಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಈ
ಪ್ರಕ್ರಿಯೆ ನಡೆಯುತ್ತಲೇ ಇದೆ. ಪರಿಣಾಮಕಾರಿ ಕಲಿಕೆಯತ್ತ ಹೆಜ್ಜೆ ಇಟ್ಟಾಗಿದೆ.
ಮೌಖಿಕ
ಪದ್ಧತಿ ಬಳಸಿ ಕಥೆಗಳು, ಶಿಶುಗೀತೆಗಳು, ಭಾಷಾ ಆಟಗಳು, ಸಂಭಾಷಣಾ ಪಾಠ ಮತ್ತು
ಪ್ರಾತ್ಯಕ್ಷಿಕೆಗಳ ಮೂಲಕ ಇಂಗ್ಲಿಷ್ ಕಲಿಸಿಕೊಡಲು ಚಿತ್ರಮಯ ಪಠ್ಯಪುಸ್ತಕ ಆಟಟ
ಕೊಡಲಾಗಿದೆ. ಇವೆಲ್ಲವೂ ಪ್ರಥಮ ಭಾಷೆ ಇಂಗ್ಲಿಷ್ ಕಲಿಸುವವರಿಗೆ ನೆರವಾಗುವಂತಿದ್ದು,
ನಾವು ಕಲಿಸುತ್ತಿರುವುದು ದ್ವಿತೀಯ ಭಾಷೆ ಇಂಗ್ಲಿಷ್ ಎಂಬುದನ್ನೇ ಮರೆತಂತಿದೆ! ಇಂಗ್ಲಿಷ್
ಭಾಷೆಯೂ ನಮ್ಮ ಮಾತೃಭಾಷೆಯಷ್ಟೇ ಸುಲಭವಾದ, ಸರಳವಾದ ಮತ್ತು ಬೇಗನೇ ಹಿಡಿತಕ್ಕೆ ಸಿಗುವ
ಭಾಷೆ ಎಂದುಕೊಂಡಾಗ ಅದು ಅಂಗೈ ನೆಲ್ಲಿಯಾಗುತ್ತದೆ.
ಅಮೆರಿಕದಲ್ಲಿ
ಪ್ರಕಟವಾದ ಸಂಶೋಧನಾ ವರದಿಯು, ಯಾವ ಮಗು ತನ್ನ ಮಾತೃಭಾಷೆಯ ಮೂಲಕ ಇಂಗ್ಲಿಷ್
ಕಲಿಯುತ್ತದೋ ಅದು ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಗಳಿಸಿಕೊಳ್ಳಲು
ಸಫಲವಾಗುತ್ತದೆ ಎಂದು ತಿಳಿಸಿದೆ. ಹೊರದೇಶಗಳಿಂದ ಹೋಗಿ ನೆಲೆಸಿರುವ ಅಲ್ಲಿನ ತಂದೆ
ತಾಯಂದಿರು ಮತ್ತು ಗುರುಗಳು ಆ ಮಗುವಿನ ಮಾತೃಭಾಷೆಯ (ಹಿಂದಿ, ಗುಜರಾತಿ, ತಮಿಳು ಇಲ್ಲವೇ
ಆಫ್ರಿಕನ್, ಸ್ಪ್ಯಾನಿಷ್, ಫ್ರೆಂಚ್ ಇತ್ಯಾದಿ) ಮೂಲಕವೇ ಇಂಗ್ಲಿಷ್ ಭಾಷೆಯನ್ನು ಕಲಿಸುವ
ಹೊಸ ಪದ್ಧತಿ ಅಳವಡಿಸಿ ಕೊಂಡಿದ್ದಾರಂತೆ. ಹೀಗಿರುವಾಗ, ಕನ್ನಡದ ಮೂಲಕ ಇಂಗ್ಲಿಷ್ ಕಲಿಯಲು
ಮತ್ತು ಕಲಿಸಲು ನಮ್ಮಲ್ಲಿ ಹಲವರು ಯಾಕೆ ಮುಜುಗರ ಪಟ್ಟುಕೊಳ್ಳುವರೋ ತಿಳಿಯದು!
ಗರ್ಭಾವಸ್ಥೆಯಿಂದಲೇ ಇಂಗ್ಲಿಷ್!
ಮಗುವೊಂದು ಧರೆಗಿಳಿಯುವ ಮುನ್ನವೇ ಇಂಗ್ಲಿಷ್ ಅದರ ಕಿವಿಯ ಮೇಲೆ ಬಿದ್ದಿರುತ್ತದಂತೆ. ಪ್ರೆಗ್ನೆನ್ಸಿ ಟೆಸ್ಟ್, ಪಾಸಿಟಿವ್, ಕನ್‌ಸೀವ್ಡ್ ಎಂಬಲ್ಲಿಂದ ಆರಂಭ ಆಗುವ ಪದಗಳು ಮುಂದೆ ಮೆಡಿಕಲ್ ಚೆಕ್‌ಅಪ್, ಸ್ಕ್ಯಾನಿಂಗ್, ಟಿ.ಟಿ. ಇಂಜೆಕ್ಷನ್, ಐರನ್ ಟ್ಯಾಬ್‌ಲೆಟ್ಸ್, ಟಾನಿಕ್, ಹೆಲ್ತಿ ಫುಡ್, ಪೀರಿಯಾಡಿಕಲ್ ಚೆಕ್‌ಅಪ್ ಇತ್ಯಾದಿ ರೂಪದಲ್ಲಿ ಭ್ರೂಣಕ್ಕೆ ಕೇಳಿಸುತ್ತಾ ಹೋಗುತ್ತವೆ!

| ಅಜ್ಜಿ ಇಂಗ್ಲಿಷ್!
ನಮ್ಮ ಹಳ್ಳಿಯಲ್ಲಿರುವ ಅಜ್ಜಿಗೆ ಕೂಡ ಇಂಗ್ಲಿಷ್ ಎಂದರೆ ಪಂಚಪ್ರಾಣ. `ಬಸ್ ಬಂತಾ ನೋಡ್ಲಾ ಮಗಾ. ಲೇಟ್ ಆಯ್ತದೆ ಇಸ್ಕೂಲ್‌ಗೆ. ಬಸ್ ಮಿಸ್ ಮಾಡ್ಕೋಬ್ಯಾಡಪ್ಪಾ.
ಬೈಕ್
ಮ್ಯೋಗೆ ನಿನ್ನ ಕರ‌್ಕೊಂಡ್ ಹೋಗಾಕೆ ನಿಮ್ಮಪ್ಪ ಸಿಟ್ ಮಾಡ್ಕತಾನೆ. ಲೇಟಾಗಿ ಓದ್ರೆ
ಫೈನ್ ಬೇರೆ ಆಕ್ತಾರಂತೆ, ಹೌದಾ? ಹೋಂವರ್ಕ್ ಎಲ್ಲ ಮಾಡಿದ್ಯಾ ಕಂದಾ. ಗುಡ್ ಗುಡ್. ಫಸ್ಟ್
ಬರ‌್ಬೇಕು ಇಸ್ಕೂಲ್‌ಗೆ.
ಗೋ, ಗೋ..., ಅಂತ ಮೊಮ್ಮಗ ಕಲಿಸಿದ ಹರಕುಮುರುಕು ಇಂಗ್ಲಿಷ್‌ನಲ್ಲಿ ಹೇಳುತ್ತೆ ಗೊತ್ತಾ?
ಅಗತ್ಯ ಮತ್ತು ಅವಶ್ಯಕತೆಗೆ ತಕ್ಕಂತೆ ಇಂಗ್ಲಿಷ್ ಬೆಳೆಯುತ್ತಲೇ ಇದೆ. ವ್ಯವಹಾರಕ್ಕೆ ಬ್ಯುಸಿನೆಸ್ ಇಂಗ್ಲಿಷ್, ಎಂಜಿನಿಯರ್‌ಗಳಿಗೆ ಟೆಕ್ನಿಕಲ್ ಇಂಗ್ಲಿಷ್, ಟೀಚರ್‌ಗಳಿಗೆ ಇಂಗ್ಲಿಷ್ ಲ್ಯಾಂಗ್ವೇಜ್ ಟೀಚಿಂಗ್ (ಇ.ಎಲ್.ಟಿ.), ವೈದ್ಯರಿಗೆ ಮೆಡಿಕಲ್ ಇಂಗ್ಲಿಷ್, ಸ್ವಾಮೀಜಿಗಳಿಗೆ ಸ್ಪಿರಿಚುಯಲ್ ಇಂಗ್ಲಿಷ್... ಹೀಗೆ ಹೊಸ ಬಗೆಯ ಇಂಗ್ಲಿಷ್ ಬಳಕೆಗೆ ಬಂದಿದೆ.
ಗಮನಿಸಿ
ಇಂಗ್ಲಿಷ್ ಕಲಿಯಲು ಮಾಹಿತಿಗಾಗಿ ಕೆಳಗಿನ ಕೆಲವು ವೆಬ್ ವಿಳಾಸಗಳನ್ನು ನೋಡಬಹುದು: |
ಮಗು
ಹುಟ್ಟುವ ಸಂದರ್ಭದಲ್ಲಿ ಆಪರೇಷನ್ ಥಿಯೇಟರ್, ಬೇಬಿ, ಕ್ಲೀನಿಂಗ್, ಬ್ರೆಸ್ಟ್ ಫೀಡಿಂಗ್,
ರ‌್ಯಾಪಿಂಗ್, ಇನ್‌ಕ್ಯುಬೇಟರ್, ವೆಯ್ಟ, ಹೈಟ್ ಎಂಬ ಪದಗಳೂ ಅದರ ಕಿವಿಗೆ
ಬಿದ್ದಿರಬಹುದು. ಹೀಗೆ ತೊಟ್ಟಿಲಿನಿಂದ ಆರಂಭವಾಗಿ ಸಮಾಧಿಯವರೆಗೆ (ಫ್ರಂ ಕ್ರೆಡಲ್ ಟು
ಗ್ರೇವ್) ನಮ್ಮಂದಿಗೆ ಇಂಗ್ಲಿಷ್ ಪ್ರಯಾಣ ಮಾಡುತ್ತಲೇ ಇರುತ್ತದೆ.
ಮಕ್ಕಳನ್ನೇ
ತೆಗೆದುಕೊಳ್ಳಿ. ಅವರನ್ನು ಬೇಬಿ ಅಂತಲೇ ಕರೆಯುವುದು ರೂಢಿ. ಅವರು ಶಾಲೆಗೆ
ಸಿದ್ಧರಾಗಬೇಕು ಎಂದರೆ ಯೂನಿಫಾರಂ, ಸಾಕ್ಸ್, ಷೂಸ್, ಟೈ, ಬೆಲ್ಟ್, ಶರ್ಟ್, ಹಾಫ್
ಪ್ಯಾಂಟ್, ಕರ್ಚೀಫ್, ಲಂಚ್ ಬ್ಯಾಗ್, ಸ್ಕೂಲ್ ಬ್ಯಾಗ್, ಜಾಮಿಟ್ರಿ ಬಾಕ್ಸ್, ಲಂಚ್
ಬಾಕ್ಸ್, ಪೆನ್ಸಿಲ್, ರಬ್ಬರ್, ಪೆನ್, ಪೇಪರ್, ಬುಕ್, ನೋಟ್‌ಬುಕ್, ಬೆಂಚ್, ಡೆಸ್ಕ್,
ಬೋರ್ಡ್, ಡಸ್ಟರ್... ಛೇ ಬಿಡಿ ಅದೊಂದು ವಿಸ್ಮಯ ಲೋಕ!
ಭಾಷಾ ಕೌಶಲ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು. ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಅಥವಾ ಇನ್ನಾವುದೇ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಮಾತೃಭಾಷೆಯ ವಿಷಯದಲ್ಲಿ ನಮಗೇ ಗೊತ್ತಿಲ್ಲದಂತೆ ನಮ್ಮ ತೊಟ್ಟಿಲಿನಿಂದಲೇ ಆರಂಭವಾಗಿರುತ್ತದೆ. ಆದರೆ ಮತ್ತೊಂದು ಭಾಷೆಯನ್ನು ಪ್ರಯತ್ನಪೂರ್ವಕವಾಗಿ ಕಲಿಯುವಾಗ ಇವೆಲ್ಲವೂ ಹೊಸದೆನಿಸುತ್ತವೆ. ಬಹುಮಾಧ್ಯಮ ವೈಜ್ಞಾನಿಕ ವಿಧಾನದಿಂದ ಭಾಷಾ ಕಲಿಕೆ ಅತ್ಯಂತ ಸುಲಭ ಹಾಗೂ ಮನೋರಂಜಕ ಆಗಿರುತ್ತದೆ.

ಪದಸಂಪತ್ತು- ದೇಹ ಭಾಷೆ- ಉಚ್ಚಾರ
ನಾವು ಬಳಸುವ ಭಾಷೆಯಲ್ಲಿ ಕೇವಲ ಶೇ 7ರಷ್ಟು ಭಾಗ ಮಾತ್ರ ಪದಗಳಿರುತ್ತವೆ. ಉಳಿದ ಶೇ 55ರಷ್ಟು ಭಾಗ ನಮ್ಮ ದೇಹ ಭಾಷೆ (ಹಾವಭಾವ- ಭಂಗಿ- ಮುಗುಳ್ನಗು- ಕೈ- ಬಾಯಿ- ಮುಖದ ಚಲನೆ- ಉಡುಪು- ಕೂದಲಿನ ಒಪ್ಪ- ಅಚ್ಚುಕಟ್ಟುತನ ಇತ್ಯಾದಿ) ಮತ್ತು ಶೇ 38ರಷ್ಟು ಭಾಗ ಧ್ವನಿಯ ಏರಿಳಿತ, ಮೃದುತ್ವ, ನಯ-ವಿನಯ, ಗಾಂಭೀರ್ಯ, ಉಚ್ಚಾರಣಾ ಶೈಲಿ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ನಮ್ಮ ಸಮಗ್ರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತೆ ಭಾಷೆ ಕೆಲಸ ಮಾಡುತ್ತದೆ. ದೇಹ ಭಾಷೆಯ ಬಗ್ಗೆ ನಾವು ನಿಗಾ ವಹಿಸುವುದು ತೀರಾ ಕಡಿಮೆ. ಹಾಗಾಗಿ ಇಂಗ್ಲಿಷ್ ಕಲಿಯುವ ಮತ್ತು ಕಲಿಸುವ ಸಂದರ್ಭದಲ್ಲಿ ಇದಕ್ಕೂ ಒತ್ತು ನೀಡಬೇಕಾಗಿದೆ.

ದೃಶ್ಯ- ಶ್ರವಣ
ಭಾಷಾ ಕಲಿಕೆಯ ಮೂಲ ಕೌಶಲ ಆಲಿಸುವುದು. ರೇಡಿಯೊ ಮತ್ತು ಟಿ.ವಿ.ಗಳಲ್ಲಿ ಬಿತ್ತರವಾಗುವ ನೂರಾರು ಕಾರ್ಯಕ್ರಮಗಳು ನಮಗೆ ನಿರಂತರ ಆಲಿಸುವ ಮತ್ತು ನೋಡಿ ತಿಳಿಯುವ ಅವಕಾಶ ಕಲ್ಪಿಸಿಕೊಡುತ್ತಲೇ ಇರುತ್ತವೆ. ಕೇಬಲ್ ಟಿ.ವಿ. ಇಲ್ಲವೇ ಡಿ.ಟಿ.ಎಚ್. ಮೂಲಕವೂ ನಮಗೆ ಬೇಕಾದ ಕಾರ್ಯಕ್ರಮಗಳನ್ನು ಆಯ್ದು ಕೇಳುವ, ಕೇಳುತ್ತಲೇ ಅಲ್ಲಿ ಬಳಸಲಾಗುವ ಆಂಗಿಕ ಭಾಷೆ (ಬಾಡಿ ಲ್ಯಾಂಗ್ವೇಜ್) ನೋಡುವ ಅವಕಾಶ ಇದೆ. ಮಾತನಾಡುವುದರ ಜೊತೆಗೆ ನಾವು ಬಳಸುವ ಬಾಡಿ ಲಾಂಗ್ವೇಜ್ ಕೂಡ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ. ಹೀಗಾಗಿ ದೃಶ್ಯ ಮಾಧ್ಯಮ ನಮಗೆ ಈ ವಿಷಯದಲ್ಲಿ ತರಬೇತಿ ನೀಡುವ ಆಪ್ತಮಿತ್ರ. ಇಂಗ್ಲಿಷ್ ಕಲಿಕೆಗಂತೂ ಇದು ಅತ್ಯುತ್ತಮ ಸಂಪನ್ಮೂಲ.

ಟೇಪ್
ರೆಕಾರ್ಡರ್‌ನಲ್ಲಿ ಧ್ವನಿಯನ್ನು ಸೆರೆಹಿಡಿದು, ಮಾದರಿ ಸಂಭಾಷಣೆಯ ತುಣುಕುಗಳನ್ನು
ಧ್ವನಿಮುದ್ರಿಸಿ ಕೇಳಿ ಕಲಿಯಲು, ಮಾದರಿಗಳನ್ನು ಅನುಸರಿಸಿ ಉಚ್ಚಾರ ಮಾಡಿ, ಸತತ
ಅಭ್ಯಾಸದಿಂದ ಯಶಸ್ಸು ಗಳಿಸಲು ಸಾಧ್ಯ. ಬೆಂಗಳೂರು, ಹೈದರಾಬಾದ್, ಮೈಸೂರು,
ಮುಂಬೈಗಳಲ್ಲಿನ ಭಾಷಾ ಪ್ರಯೋಗ ಶಾಲೆಗಳಲ್ಲಿ, ಜೊತೆಗೆ ಬಿ.ಬಿ.ಸಿ.ಯಂತಹ ಖಾಸಗಿ
ಪ್ರಕಾಶಕರಲ್ಲಿ ಭಾಷಾ ಕಲಿಕೆಗಾಗಿಯೇ ಹತ್ತಾರು ಕ್ಯಾಸೆಟ್‌ಗಳು, ಸಿ.ಡಿ.ಗಳು ಸಿಗುತ್ತವೆ.
ನಿತ್ಯ ಬಳಕೆಯ ಮೊಬೈಲ್ ಮತ್ತು ಟ್ಯಾಬ್‌ಲೆಟ್‌ಗಳಲ್ಲಿ ಇರುವ ರೆಕಾರ್ಡಿಂಗ್ ಸೌಲಭ್ಯ,
`ಟಾಕಿಂಗ್ ಟಾಮ್'ನಂತಹ ಅಪ್ಲಿಕೇಶನ್‌ಗಳ ಸಹಾಯದಿಂದ ಮಾತನಾಡಿಸಿ, ಪುನರಾವರ್ತಿಸಿ ಕೇಳುವ
ಸೌಲಭ್ಯ ಬಳಸಿಕೊಳ್ಳಬಹುದು.
ಕಂಪ್ಯೂಟರ್ ಮತ್ತು ಇಂಟರ್‌ನೆಟ್: ಶಿಕ್ಷಣ
ಕ್ಷೇತ್ರದ ಭವಿಷ್ಯ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಎಂಬ ಮಾಯಾಲೋಕದ ಜಾಲದಲ್ಲಿ
ಸಿಲುಕಿದೆ. ಒಮ್ಮೆ ನಾವು ಇದರ ಇ- ಪ್ರಪಂಚದ ಒಳಹೊಕ್ಕರೆ ಕಲಿಕೆಗೆ ಅಸಾಧ್ಯ ಎಂಬ ಮಾತೇ
ಹೊರಡದು. ಮನೆ ಮನೆಯಲ್ಲೂ, ಶಾಲೆ ಶಾಲೆಯಲ್ಲೂ ಬಹುಮಾಧ್ಯಮ ಕಂಪ್ಯೂಟರ್ ಸಾಮ್ರೋಜ್ಯ
ವಿಸ್ತರಿಸುತ್ತಿದೆ. ಅದನ್ನು ನಮ್ಮ ಭಾಷಾ ಕಲಿಕೆಗೆ, ಹಾಗೆಯೇ ಕಷ್ಟ ಎಂದು ಭಾವಿಸಲಾಗುವ
ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ ಕಲಿಕೆಗೆ ಕೂಡ ಬಳಸಿಕೊಳ್ಳಬಹುದು.
ಆಲಿಸುವಿಕೆ
ಮತ್ತು ಮಾತನಾಡುವಿಕೆಗೆ ಸಂಬಂಧಿಸಿದಂತೆ ಹತ್ತಾರು ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು
ಲಭ್ಯವಿದ್ದು ಅವುಗಳ ಸಹಾಯದಿಂದ ಮಾಹಿತಿ, ಶಿಕ್ಷಣ, ಮನರಂಜನೆಯನ್ನು ಕುಳಿತಲ್ಲೇ
ಸೃಷ್ಟಿಸಬಹುದು, ಅನುಭವಿಸಬಹುದು.AUDACITY, WAVELAB, WAVELABLITE, COOLEDIT,
SOUNDFORGE ಮೊದಲಾದ ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು ಲಭ್ಯವಿದ್ದು, ಕೆಲವು
ಉಚಿತವಾಗಿಯೂ ಸಿಗುತ್ತವೆ. ವಿಂಡೋಸ್‌ನ ಇತ್ತೀಚಿನ ಅವತರಣಿಕೆಯ ಜೊತೆಯಲ್ಲಿ
ಧ್ವನಿಮುದ್ರಣದ ಸೌಲಭ್ಯವೂ ಇದೆ. ಇತರ ಭಾಷೆಯ ಪದಗಳ ಉಚ್ಚಾರಕ್ಕೆ ಸಂಬಂಧಿಸಿದಂತೆ ಸಿ.ಡಿ.
ಪದಕೋಶಗಳಲ್ಲೇ ಉಚ್ಚಾರಣೆಯನ್ನೂ ನೀಡಲಾಗಿದೆ. ನಮಗೆ ಸೂಕ್ತ ಕಂಡ ಉಚ್ಚಾರವನ್ನು ಆಯ್ಕೆ
ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ.
ಪಾಠ
ಬೋಧನೆಯ ವಿಧಾನ, ಮಾದರಿ ಪಾಠಗಳು, ಧ್ವನಿಮುದ್ರಿತ ರೂಪದ ಪಾಠಗಳು, ವಿಡಿಯೊ ಪಾಠಗಳು,
ಸಂವಾದದ ಪಾಠಗಳು ಹೀಗೆ ಏನೆಲ್ಲಾ ಇಲ್ಲಿ ಲಭ್ಯ. ಭಾಷೆಯ ಕಲಿಕೆ ವ್ಯಕ್ತಿತ್ವಕ್ಕೆ ಮೆರುಗು
ನೀಡುತ್ತದೆ. ವಿಕಸಿತ ವ್ಯಕ್ತಿತ್ವದ ದ್ಯೋತಕ ಪರಿಶುದ್ಧ ಭಾಷಾ ಬಳಕೆ. ಇಂತಹ ಭಾಷೆಯೆಂಬ
ಆಯುಧವನ್ನು ನಮ್ಮ ಬತ್ತಳಿಕೆಯಲ್ಲಿ ಇರಿಸಿಕೊಳ್ಳೋಣ.
ಇಂಗ್ಲಿಷ್
ಭಾಷೆಯನ್ನು ಕಲಿಸಲು ಇರುವ ಹದಿನೈದಕ್ಕೂ ಹೆಚ್ಚು ವಿಧಾನಗಳಲ್ಲಿ ಆಧುನಿಕ ಬಹುಮಾಧ್ಯಮ
ಬೋಧನೋಪಕರಣಗಳನ್ನು ಬಳಸಿಕೊಂಡು ಇಂಗ್ಲಿಷ್ ಕಲಿಸುವ ಹೊಸ ವಿಧಾನವೇ Multi-Media
Approach - The New Way.
(ವಿವರಗಳಿಗೆ ನೋಡಿ Multimedia
Language Laboratory to learn Spoken and Written English - Published by
Navakarnataka Publications. Rs.20/- Ph. 08022203580).
Wednesday, 24 April 2013
English is Easy - Latest Books by Bedre Manjunath - Published by Navakarnataka Publications, Bangalore
Subscribe to:
Posts (Atom)
Doodle - Google Uncle Jothe Maathu-Kathe - Informative Literature for Children - A Faction
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
QUESTION PAPERS OF GAZETTED PROBATIONERS PRELIMS EXAM 2011 http://kpsc.kar.nic.in/GP%202011%20PRELIMS%20QUESTION%20PAPERS.htm G...
-
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
Technology Information in Kannada - Article in Prajavani - Education Supplement 28.08.2019