Tuesday, 22 January 2013

KPSC Mains 2011 GS Paper 2 - Article in Udayavani Josh 22 Jan 2013


KPSC Mains 2011 GS Paper 2 - Article in Udayavani Josh 22 Jan 2013
Udayavani
  • ಈ ವಾರದ ಹೋಂವರ್ಕು

  • ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವ

    • Udayavani | Jan 21, 2013
      ಕ್ವೆಶ್ಚನ್‌ ಪೇಪರ್‌ ನಮ್ಮಲ್ಲಿ, ಆನ್ಸರ್‌ ಪೇಪರ್‌ ನಿಮ್ಮಲ್ಲಿ 
      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಿತ್ತು. ದಿನಪತ್ರಿಕೆಗಳ ವಿಸ್ತಾರವಾದ ಓದು, ಪ್ರಸ್ತುತ ಘಟನಾವಳಿಗಳ ಅರಿವು, ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆ ಪ್ರಕಟಿಸಿರುವ ಗ್ಲಿಂಪ್ಸಸ್‌ ಆಫ್ ಕರ್ನಾಟಕ, ಕರ್ನಾಟಕ ಕೈಪಿಡಿ, ಎ ಹ್ಯಾಂಡ್‌ ಬುಕ್‌ ಆಫ್ ಕರ್ನಾಟಕ ಮತ್ತು ಅವುಗಳ ಜೊತೆಗೆ ನೀಡಲಾಗಿದ್ದ ಡಿವಿಡಿಯಲ್ಲಿ ಅಡಕಗೊಳಿಸಲಾಗಿದ್ದ ಆರ್ಥಿಕ ಸಮೀಕ್ಷೆ, ಎಕನಾಮಿಕ್‌ ಸರ್ವೇ, ಇಂಡಿಯ- 2010, ಜನಗಣತಿಯ ಅಂಕಿ ಅಂಶಗಳು ಮತ್ತು ಸಾಮಾನ್ಯ ಜ್ಞಾನ ಮಾಹಿತಿಯನ್ನು ಆಧರಿಸಿದ್ದ ಹಲವು ಪ್ರಶ್ನೆಗಳು ಬಂದಿದ್ದು ಸರ್ಕಾರದ ಅಧಿಕೃತ ಮಾಹಿತಿಯನ್ನು ಆಧರಿಸಿದ್ದ ಇಲಾಖೆಯ ಪ್ರಕಟಣೆಗಳನ್ನು, ಯೋಜನಾದಂತಹ ನಿಯತಕಾಲಿಕೆಗಳನ್ನು ಓದಿದವರಿಗೆ ಸುಲಭವೆನಿಸುವಂತಿದ್ದವು. 

      ಸಾಮಾನ್ಯ ಅಧ್ಯಯನ ಪತ್ರಿಕೆ- 2- 300 ಅಂಕಗಳು- 3 ಗಂಟೆ 
      1. ಭಾರತದ ರಾಜಕೀಯ/ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ 
      2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ 
      3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ 

      2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 2- ಅಂಕಗಳು 300 
      ಭಾಗ - ಎ 
      1. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200ರಿಂದ 250 ಪದಗಳಷ್ಟಿರಲಿ: 20 x 1= 20 
      ಎ. ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಣ್ಣಾ ತಂಡದ ನಡುವಿನ ವಿರಸ ಕುರಿತು ವಿಮಶಾìತ್ಮಕವಾಗಿ ಬರೆಯಿರಿ. 
      ಬಿ. ಇ-ಆಡಳಿತ ಎಂದರೇನು? ಕರ್ನಾಟಕ ಸರ್ಕಾರು ಆರಂಭಿಸಿರುವ ಇ-ಆಡಳಿತ ಪರಿಯೋಜನೆಗಳನ್ನು ಪರಿಶೀಲಿಸಿ. 

      2. ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-125 ಪದಗಳಲ್ಲಿ ಉತ್ತರಿಸಿ. 10x3=30 
      ಎ. ಈಗ ಕಂಡುಬರುತ್ತಿರುವ ರಾಜಕೀಯ ದೃಶ್ಯಾವಳಿಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿಕೊಳ್ಳುವ ನಿರೀಕ್ಷೆಯ ಕುರಿತು ವ್ಯಾಖ್ಯಾನಿಸಿ. 
      ಬಿ. ಕರ್ನಾಟಕದ ಹಿಂದುಳಿದ ವರ್ಗಗಳ ಚಳುವಳಿ ಕುರಿತು ಒಂದು ಟಿಪ್ಪಣಿ ಬರೆಯಿರಿ. 
      ಸಿ. ರಾಜ್ಯ ವಿಧಾನಸಭೆಯ ರಚನೆ, ಅಧಿಕಾರಗಳು ಹಾಗೂ ಕೆಲಸಗಳನ್ನು ವಿವರಿಸಿ. 
      ಡಿ. ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಭಾರತದ ಸಂಸತ್ತಿನಲ್ಲಿ ಲಿಂಗಾಧಾರಿತ ಪಾಲು ನೀಡಿಕೆ ಕುರಿತು ಚರ್ಚಿಸಿ. 
      ಇ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ. 

      3. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-55 ಪದಗಳಲ್ಲಿ ಉತ್ತರಿಸಿ: 5x4=20 
      ಎ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಚನೆ ಹಾಗೂ ಕಾರ್ಯವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ. 
      ಬಿ. ಕೇಂದ್ರ- ರಾಜ್ಯಗಳ ಹಣಕಾಸು ಸಂಬಂಧಗಳನ್ನು ವಿವರಿಸಿ. 
      ಸಿ. ಧಾರ್ಮಿಕ ಸ್ವಾತಂತ್ರÂದ ಹಕ್ಕನ್ನು ಕುರಿತಂತೆ ಸಂವಿಧಾನದಲ್ಲಿರುವ ಉಪಬಂಧಗಳನ್ನು ವಿವರಿಸಿ. 
      ಡಿ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸಂವಿಧಾನಿಕ ರಕ್ಷಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. 
      ಇ. ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ. 
      ಎಫ್. 73ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ವಿಕೇಂದ್ರೀಕರಣವನ್ನು ಕುರಿತು ಪರಿಶೀಲಿಸಿ. 

      4. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20 
      ಎ. ನ್ಯಾಯಮೂರ್ತಿ ಸೋಮಶೇಖರ್‌ ಆಯೋಗ 
      ಬಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ 
      ಸಿ. ಟಾಟಾ ಟ್ರಕ್‌ ಪ್ರಕರಣ 
      ಡಿ. ಡಾ.ಡಿ.ಎಮ್‌. ನಂಜುಂಡಪ್ಪ ಸಮಿತಿ 
      ಇ. ಆಡಳಿತದಲ್ಲಿ ಪಾರದರ್ಶಕತೆ 
      ಎಫ್. ನಾಗರಿಕ ಸಮಾಜ 
      ಜಿ. ಡಿ. ದೇವರಾಜ ಅರಸ್‌ 
      ಎಚ್‌. ವ್ಯಕ್ತಿಯ ಪ್ರತ್ಯಕ್ಷ ಹಾಜರಿ ಆದೇಶ(ರಿಟ್‌) 
      ಐ. ವಲಯ ಪರಿಷತ್ತುಗಳು 
      ಜೆ. ಸರೋಜಿನಿ ಮಹಿಷಿ ವರದಿ 

      ಭಾಗ- ಬಿ 
      5. ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200 ರಿಂದ 250 ಪದಗಳಿಗೆ ಮೀರದಂತಿರಬೇಕು: 20x1=20 
      ಎ. ಕರ್ನಾಟಕದಲ್ಲಿನ ಮಾನವ ಅಭಿವೃದ್ಧಿಯ ಪ್ರಾದೇಶಿಕ ಅಸಮತೆಗಳನ್ನು ವಿವರಿಸಿ. 
      ಬಿ. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಧ್ಯೇಯಗಳು ಹಾಗೂ ವ್ಯಾಪ್ತಿಯನ್ನು ವಿವರಿಸಿ. ಆಹಾರ ಭದ್ರತೆಯನ್ನು ಖಚಿತಪಡಿಸುವುದಕ್ಕೆ ಇದು ನೆರವಾಗುವುದೇ? 

      6. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 125 ಪದಗಳಲ್ಲಿ ಉತ್ತರಿಸಿ: 10x3=30 
      ಎ. ಸ್ಪರ್ಧಾಕಾನೂನಿನ ವಿಶಿಷ್ಟ ಲಕ್ಷಣಗಳೇನು? 
      ಬಿ. ಕರ್ನಾಟಕದಲ್ಲಿ ವಿದೇಶಿ ಹಣದ ನೇರ ಹೂಡಿಕೆಯ ಹರಿವಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ನಿರೂಪಿಸಿ. 
      ಸಿ. ಕರ್ನಾಟಕ ರಾಜ್ಯ ಬಜೆಟ್‌ 2012- 13ರ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿ. 
      ಡಿ. ಕರ್ನಾಟಕದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಕುರಿತು ವ್ಯಾಖ್ಯಾನಿಸಿ. 
      ಇ. ಭಾರತದ ಇಂಧನ ಬಿಕ್ಕಟ್ಟಿನ ಸ್ವರೂಪವನ್ನು ವಿವರಿಸಿ. ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ಸೂಚಿಸಿ. 

      7. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ/ ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50-55 ಪದಗಳ ಮಿತಿಯಲ್ಲಿರಬೇಕು: 5x4=20 
      ಎ. ಯುಎಸ್‌ ಡಾಲರ್‌ಗೆ ಪ್ರತಿಯಾಗಿ ರೂಪಾಯಿಯ ಮೌಲ್ಯವು ಕ್ಷೀಣಿಸುವುದಕ್ಕೆ ಕಾರಣಗಳನ್ನು ನಿರೂಪಿಸಿ. 
      ಬಿ. ಕರ್ನಾಟಕದ ಸಾರ್ವಜನಿಕ ವಿತರಣೆಯಲ್ಲಿರುವ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಿ. 
      ಸಿ. ಕರ್ನಾಟಕದ ಸಾರ್ವಜನಿಕ ವಲಯದ ನೋಟವನ್ನು ವಿವರಿಸಿ. 
      ಡಿ. ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೀವು ಯಾವ ಕಾರ್ಯನೀತಿಯ ಕ್ರಮಗಳನ್ನು ಸೂಚಿಸುತ್ತೀರಿ? 
      ಇ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಭಾರತವು ಆರಂಭಿಸಿರುವ ಕ್ರಮಗಳನ್ನು ವಿವರಿಸಿ. 
      ಎಫ್. ಭಾರತದ ಮೇಲೆ ಯೂರೋಪ್‌ ವಲಯದ ಬಿಕ್ಕಟ್ಟಿನ ಪರಿಣಾಮಗಳನ್ನು ವಿವರಿಸಿ. 

      8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20 
      ಎ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳು 
      ಬಿ. ಉನ್ನತ ಶಿಕ್ಷಣದ ಖಾಸಗೀಕರಣ 
      ಸಿ. ಯುವ ಭಾರತ 
      ಡಿ. ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು 
      ಇ. ಕರ್ನಾಟಕದಲ್ಲಿ ವಿದ್ಯುತ್ಛಕ್ತಿ ವಿತರಣೆ 
      ಎಫ್. ಕರ್ನಾಟಕದ ಹೊಸ ಕೈಗಾರಿಕಾ ನೀತಿ 
      ಜಿ. ಕರ್ನಾಟಕದಲ್ಲಿ ಉದ್ಯೋಗ ಕಾರ್ಯಕ್ರಮಗಳು 
      ಎಚ್‌. ಆಡಳಿತದಲ್ಲಿ ಐಇಖ 
      ಐ. ಪೆಟ್ರೋಲಿಯಂ ಸಬ್ಸಿಡಿಗಳು 
      ಜೆ. ಸಾಲದ ದರ ನಿರ್ಧಾರಣಾ ಏಜೆನ್ಸಿಗಳು 

      ಭಾಗ- ಸಿ 
      9. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20 
      ಎ. ಕರ್ನಾಟಕದ ನದಿ ವ್ಯವಸ್ಥೆಗಳನ್ನು ಕುರಿತು ವಿಸ್ತಾರವಾದ ಟಿಪ್ಪಣಿ ಬರೆಯಿರಿ. 
      ಬಿ. ಕರ್ನಾಟಕದ ವಿಶೇಷ ಉÇÉೇಖದೊಂದಿಗೆ ಭಾರತದ ಕರಾವಳಿ ಪ್ರದೇಶದ ಸಂಕ್ಷಿಪ್ತ ವಿವರಣೆ ನೀಡಿ. 

      10. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 100 ರಿಂದ 120 ಪದಗಳಷ್ಟಿರಲಿ: 10x1=10 
      ಎ. ಮಲೆನಾಡು ಪ್ರದೆಶದ ಭೌಗೋಳಿಕ ವೈಶಿಷ್ಟÂಗಳನ್ನು ವಿವರಿಸಿ. 
      ಬಿ. ಭಾರತದ ಸುವರ್ಣ ಚತುಭುìಜ/ ಚತುಷ್ಪತ ಕಾರಿಡಾರ್‌ಗಳ ಬಗ್ಗೆ ಬರೆಯಿರಿ. 

      11. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉತ್ತರ ಸುಮಾರು 50 ಪದಗಳಷ್ಟಿರಲಿ: 5x2= 10 
      ಎ. ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ. 
      ಬಿ. ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ನಿರೂಪಿಸಿ. 
      ಸಿ. ಮಹಾನಗರಗಳ ಬೆಳವಣಿಗೆ ಬಗ್ಗೆ ವಿವರಿಸಿ. 

      ಭಾಗ- ಡಿ 
      12. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20 
      ಎ. ಸಾಂಪ್ರದಾಯಿಕವಲ್ಲದ ಶಕ್ತಿ ಎಂದರೇನು? ಸಾಂಪ್ರದಾಯಿಕವಲ್ಲದ ಕೆಲವು ಮುಖ್ಯವಾದ ಶಕ್ತಿಮೂಲಗಳ ವಿಧಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ ಮತ್ತು ಅವುಗಳಿಂದ ಸಿಗುವ ಲಾಭಗಳನ್ನು ತಿಳಿಸಿ. 
      ಬಿ. ಕರ್ನಾಟಕ ಸರ್ಕಾರ 2011ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ ಹಾಗೂ ವಿದ್ಯುನ್ಮಾನ ಹಾರ್ಡ್‌ವೇರ್‌ ನೀತಿಯನ್ನು ಬಿಡುಗಡೆ ಮಾಡಿತು. ಈ ನೀತಿಗಳನ್ನು ಬಿಡುಗಡೆ ಮಾಡಿದ್ದರ ಹಿಂದಿರುವ ಪ್ರೇರಣೆ ಏನು ಎಂಬ ಬಗ್ಗೆ ಟಿಪ್ಪಣಿ ಬರೆಯಿರಿ ಮತ್ತು ಈ ಎರಡೂ ನೀತಿಗಳ ವಿವಿಧ ಲಕ್ಷಣಗಳನ್ನು ಕುರಿತು ಚರ್ಚಿಸಿ. 

      13. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10x4=40 
      ಎ. ತಾರಾ ಶಕ್ತಿ 
      ಬಿ. ಜೀವಾವರಣದ ಪಾದಮುದ್ರೆ 
      ಸಿ. ಪರಮಾಣು ವಿಕಿರಣಗಳ ಜೈವಿಕ ಪರಿಣಾಮಗಳು 
      ಡಿ. ಕರ್ನಾಟಕ ಹಾಗೂ ಭಾರತದ ತಂತ್ರವಿಜ್ಞಾನದ ಪರಿಚಯವನ್ನು ಹೆಚ್ಚಿಸುವಲ್ಲಿ, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಸ್ಥಾಪಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ(R - ಈ) ಪಾತ್ರ. 
      ಇ. ಸಾಮಾನ್ಯ ಬಳಕೆಯ ಪ್ಲಾರಸೆಂಟ್‌ ದೀಪಗಳು ಹಾಗೂ ಅಡಕ ಫ್ಲಾರಸೆಂಟ್‌ ದೀಪಗಳು. 
      ಎಫ್. ತಳಿವೈಜ್ಞಾನಿಕವಾಗಿ ಮಾರ್ಪಾಟು ಮಾಡಿದ(ಎM) ಬೆಳೆಗಳು ಹಾಗೂ ಆಹಾರ 

      14. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10=20 
      ಎ. ಫ‌ುÉರೋಸಿಸ್‌ 
      ಬಿ. ವಾಯುಮಾಲಿನ್ಯ 
      ಸಿ. ಆಮ್ಲಮಳೆ 
      ಡಿ. ಜೆಲ್‌ಗ‌ಳು 
      ಇ. ಭೂಸವಕಳಿ 
      ಎಫ್. ಡಾಲಿ ಎಂಬ ಕುರಿ 
      ಜಿ. ಕರ್ನಾಟಕದ ಜಿÇÉಾಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ 
      ಎಚ್‌. ಬಯೋಮೆಟ್ರಿಕ್‌ ಸಾಧನಗಳು 
      ಐ. ಹೈನುಗಾರಿಕೆ ಮತ್ತು ಹೈನು ತಂತ್ರಜ್ಞಾನ 
      ಜೆ. ಕೃಷಿ ವಿಜ್ಞಾನ ಕೇಂದ್ರಗಳು 

      ರಾಷ್ಟ್ರೀಯ ಮತದಾರರ ದಿನ- ಜನವರಿ 25 
      2011ರಿಂದ ಪ್ರತಿ ವರ್ಷ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲು 2011ರ ಜನವರಿ 20ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನ ಇದಾಗಿದೆ. ಇದೇ ಜನವರಿಗೆ 18 ವರ್ಷ ದಾಟಿದ ಯುವ ಮತದಾರರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡುವ ವಿಶೇಷ ಕಾರ್ಯಕ್ರಮ ಯೋಜಿತವಾಗಿದ್ದು ಹೆಮ್ಮೆಯ ಮತದಾರರಾಗಿ- ಮತದಾನಕ್ಕೆ ಸಿದ್ಧರಾಗಿ ಎಂಬ ಘೋಷಣೆ ಹೊರಡಿಸಲಾಗಿದೆ. ಚಲಾಯಿಸಿ ನಿಮ್ಮ ಮತ- ಕಾಪಾಡಿ ದೇಶದ ಹಿತ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಧ್ಯೇಯದೊಂದಿಗೆ ಯುವಜನತೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ಜಿÇÉೆಯ ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಮಾಹಿತಿ ಮತ್ತು ನೊಂದಣಿಯ ಅಗತ್ಯ ಕುರಿತು ತಿಳಿಸಿಕೊಡಲಾಗುತ್ತಿದೆ. ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕವೂ ಮತದಾರರ ದಿನದ ಮಹತ್ವ ಕುರಿತ ಕಾರ್ಯಕ್ರಮಗಳು ಪ್ರಸಾರವಾಗಲಿವೆ. 

      ಮತದಾರರ ಪ್ರತಿಜ್ಞಾ ವಿಧಿ 
      ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ 
      ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ. 
      21 ವರ್ಷ ದಾಟಿದವರಿಗೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿ 1989ರ ಮಾರ್ಚ್‌ 28ರಂದು ಸಂವಿಧಾನದ 61 ತಿದ್ದುಪಡಿಯ ಮೂಲಕ 326ನೇ ವಿಧಿಗೆ ಸೇರ್ಪಡೆ ಮಾಡಲಾಗಿತ್ತು.

National Girl Child Day Jan 24 - Article in Vijayavani Lalitha 22 Jan 13


National Girl Child Day Jan 24 - Article in Vijayavani Lalitha 22 Jan 13

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...