Tuesday, 8 January 2013

Swamy Vivekananda and Youth Policy - Article in Udayavani Josh 08 Jan 2013


Swamy Vivekananda and Youth Policy - Article in Udayavani Josh 08 Jan 2013
Udayavani

  • ಹೇಳಿದ್ದು ಸತ್ಯ, ತಿಳಿಯುವುದು ಕಡ್ಡಾಯ

  • ಬೀ ಎ ಹೀರೋ. ಆಲ್ವೇಸ್‌ ಸೇ, ಐ ಹ್ಯಾವ್‌ ನೋ ಫಿಯರ್‌

    • Udayavani | Jan 07, 2013
      ಬೀ ಎ ಹೀರೋ. ಆಲ್ವೇಸ್‌ ಸೇ, ಐ ಹ್ಯಾವ್‌ ನೋ ಫಿಯರ್‌ 
      ಏಳಿ, ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ, ಎದ್ದು ನಿಲ್ಲಿ, ದಿಟ್ಟವಾಗಿರಿ, ದೃಢವಾಗಿರಿ, ಸಮಸ್ತ ಜವಾಬ್ದಾರಿಯನ್ನು ನಿಮ್ಮ ಹೆಗಲಿನ ಮೇಲೆ ಹೊತ್ತುಕೊಳ್ಳಿ, ನಿಮ್ಮ ಹಣೆಬರಹದ ಸೃಷ್ಟಿಕರ್ತರು ನೀವೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ, ಎÇÉಾ ಸಾಮರ್ಥ್ಯ ಮತ್ತು ಸಹಾಯ ನಿಮ್ಮÇÉೇ ಅಡಗಿದೆ. ಆದ್ದರಿಂದ ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿಕೊಳ್ಳಿ. 
      - ಸ್ವಾಮಿ ವಿವೇಕಾನಂದ 



      ಇದೇ ಜನವರಿ 12, ರಾಷ್ಟ್ರೀಯ ಯುವದಿನ. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ. ವಿಶ್ವವಿಜೇತ ವಿವೇಕಾನಂದರ ಧ್ಯೇಯ ಆದರ್ಶಗಳನ್ನು ನೆನೆಯುವ ದಿನ. ಗೆದ್ದೇ ಗೆಲ್ಲುವೆವು ಎಂಬ ಆತ್ಮವಿಶ್ವಾಸ, ಅಪರಿಮಿತ ಇಚ್ಛಾಶಕ್ತಿಯುಳ್ಳ ಯುವಜನರಿಗಾಗಿ ಏಳಿ, ಎದ್ದೇಳಿ, ಗುರಿಮುಟ್ಟುವವರೆಗೂ ನಿಲ್ಲದಿರಿ ಎಂಬ ಕರೆ ಕರೆಕೊಟ್ಟ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ. ವಹಿಸಿಕೊಟ್ಟ ಕೆಲಸವನ್ನು ಮಾಡೇ ತೀರುವ ಛಲ, ಸಾಧಿಸುವ ಹಂಬಲವನ್ನು ಪ್ರಕಟಿಸುವ ಈ ಇಚ್ಛಾಶಕ್ತಿ ಸೂಚ್ಯಂಕವನ್ನು ಗುರುತಿಸಿದ ಮೊದಲಿಗರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು. 
      ಇಂದು ನಮಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡ, ಉಕ್ಕಿನ ನರ, ಎದುರಿಸುವುದಕ್ಕೆ ಅಸದಳವಾದ ವಿಶ್ವರಹಸ್ಯದ ಅಂತರಾಳವನ್ನು ಭೇದಿಸಿ, ಸಮಯ ಬಂದರೆ ಕಡಲಿನ ಆಳಕ್ಕೂ ನುಗ್ಗಿ, ಮೃತ್ಯುವನ್ನು ಎದುರಿಸಿ, ತಮ್ಮ ಇಚ್ಛೆಯನ್ನು ಈಡೇರಿಸಬಲ್ಲಂತಹ ಪ್ರಚಂಡ ಇಚ್ಛಾಶಕ್ತಿ. ಇಂತಹ ಇಚ್ಛಾಶಕ್ತಿ ಹೊಂದಿರುವ ಯುವಜನರಿಗಾಗಿ ನನ್ನ ಜೀವನವನ್ನೇ ತ್ಯಾಗಮಾಡಲು ಸಿದ್ಧ ಎಂದಿದ್ದರು ಈ ವಿಶ್ವವಿಜೇತ, ವಿಶ್ವಮಾನವ ವಿವೇಕಾನಂದರು. 
      ಮನುಷ್ಯನಲ್ಲಿ ಈಗಾಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ವ್ಯಕ್ತಗೊಳಿಸುವುದೇ ಶಿಕ್ಷಣ. ಜ್ಞಾನ ಮಾನವನಲ್ಲಿ ಸಹಜವಾಗಿ ನೆಲೆಸಿದೆ. ಜ್ಞಾನ ಹೊರಗಿನಿಂದ ಬರುವುದಿಲ್ಲ, ಅದೆಲ್ಲವೂ ಈಗಾಗಲೇ ನಮ್ಮೊಳಗಿದೆ ಎನ್ನುತ್ತಿದ್ದರು ಸ್ವಾಮೀಜಿ. 
      1863ರ ಜನವರಿ 12ರಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿ ದೇವಿಯವರ ಪುತ್ರನಾಗಿ ಧರೆಗಿಳಿದ ಸಪ್ತರ್ಷಿಭುವನದ ಈ ಗುರುದೇವನ ಕಂದ ನರೇಂದ್ರನಾಗಿ ಬೆಳೆದು, ವಿವೇಕಾನಂದನಾಗಿ ಜಗದ್ವಿಖ್ಯಾತರಾದದ್ದು ಎಲ್ಲರಿಗೂ ತಿಳಿದವಿಷಯವೇ. ಈ ಧೀರಸನ್ಯಾಸಿಯ ಆದರ್ಶಗಳ ನೆನಪಿಗಾಗಿ ಭಾರತ ಸರ್ಕಾರ ಜನವರಿ 12ನ್ನು ರಾಷ್ಟ್ರೀಯ ಯುವದಿನ ಎಂದು ಘೋಷಿಸಿದೆ. ನೆಹರು ಯುವಕೇಂದ್ರವು ಈ ಸಂದರ್ಭದಲ್ಲಿ ಯುವ ಸಪ್ತಾಹವನ್ನು ಹಮ್ಮಿಕೊಳ್ಳುತ್ತದೆ. ಈ ವರ್ಷ ವಿಶೇಷವಾಗಿ ರಾಜ್ಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿಯ ಪ್ರಯುಕ್ತ ಜನವರಿ 7 ರಿಂದ 12ರವರೆಗೆ ವಿವೇಕ ಸಪ್ತಾಹವನ್ನಾಗಿ ಆಚರಿಸಿ ವಿಶೇಷ ಕಾರ್ಯಕ್ರಮಗಳನ್ನು, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಯಶಸ್ವಿಯಾಗಿ ಅವರ ಸಂದೇಶ ಪ್ರಸಾರ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳಿಂದ ಆದೇಶ ಹೊರಟಿವೆ. 

      ಸ್ವಾಮಿ ವಿವೇಕಾನಂದರ ಧ್ವನಿ! 
      1893ರ ಸೆಪ್ಟೆಂಬರ್‌ 11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ, ಅಮೆರಿಕಾದ ಸೋದರ, ಸೋದರಿಯರೇ.... ಎಂದು ಮಾತಿಗಾರಂಭಿಸಿದ ಸಕಲಧರ್ಮಗಳ ಮಾತೆಯ ಅಪರಿಚಿತ ಸಂತ ವಿವೇಕಾನಂದ ಕ್ಷಣಮಾತ್ರದಲ್ಲಿ ಬಿರುಗಾಳಿ ಸನ್ಯಾಸಿಯಾಗಿ, ಜನರ ಮನಮುಟ್ಟುವಂತೆ ಹಿಂದುಧರ್ಮದ ಸಾರವನ್ನು ಪರಿಚಯಿಸಿದ್ದು ಈಗ ಇತಿಹಾಸ. ಸ್ವಾಮಿ ವಿವೇಕಾನಂದರ ಧ್ವನಿಯನ್ನು ಮೂಲದಲ್ಲಿ ಸೆರೆಹಿಡಿದಿದ್ದೇವೆ ಎಂದು ಹೇಳಿಕೊಂಡ ಕೆಲವರು ಕೆಲವು ವರ್ಷಗಳ ಕೆಳಗೆ ಈ ಅಮೆರಿಕೆಯ ಉಪನ್ಯಾಸದ ತುಣುಕುಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರು. ಆರಂಭದಲ್ಲಿ ಈ ಧ್ವನಿಯ ಮೋಡಿ ಅದ್ಭುತ ಸಂಚಲನೆ ಉಂಟುಮಾಡಿತ್ತು. ಆರಾಧನೆಯ ಉದ್ವೇಗ ಕಡಿಮೆಯಾಗಿ ಚಿಂತನೆ ಹೆಚ್ಚಾದಂತೆÇÉಾ, 1893ರಲ್ಲಿ ಧ್ವನಿಮುದ್ರಣ ಯಂತ್ರಗಳು ಆವಿಷ್ಕಾರವಾಗಿದ್ದವೇ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲಿ ಪ್ರಕಟವಾಗಿರುವ ಮಾಹಿತಿಯ ಅನುಸಾರ ಸ್ವಾಮೀಜಿಯವರ ಭಾಷಣಗಳನ್ನು ಬರೆದುಕೊಳ್ಳಲು ಶೀಘ್ರಲಿಪಿಕಾರರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ಧ್ವನಿಮುದ್ರಣ ಯಂತ್ರ ಆವಿಷ್ಕಾರವಾದದ್ದು ಆನಂತರದಲ್ಲಿ. (ಸ್ವಾಮೀಜಿಯವರ ಒಂದು ಕರಡು ಧ್ವನಿಮುದ್ರಿತ ಸುರುಳಿಯಾಕಾರದ ದಾಖಲೆ ಮೈಸೂರು ಮಹಾರಾಜರ ಬಳಿ ಇತ್ತು ಎಂಬ ಮಾತು ಪ್ರಚಲಿತವಾಗಿತ್ತು. ಅದು ಸದ್ಯಕ್ಕೆ ಲಭ್ಯವಿಲ್ಲ!) 
      ಹಾಗಾದರೆ ಸ್ವಾಮಿ ವಿವೇಕಾನಂದರ ಧ್ವನಿ ಎಂದು ಅಂತರ್ಜಾಲದಲ್ಲಿ ಪ್ರಚಾರದಲ್ಲಿರುವ ವೀಡಿಯೊ ಕ್ಲಿಪ್‌ನಲ್ಲಿರುವ ಧ್ವನಿ ಯಾರದ್ದು? ಮೂಲವನ್ನು ಹುಡುಕುತ್ತಾ ಹೋದಂತೆ ಸ್ವಾಮಿ ವಿವೇಕಾನಂದರ ಶಿಷ್ಯವರ್ಗದವರ ಮತ್ತು ಶ್ರೀ ರಾಮಕೃಷ್ಣ ಮಠದವರ ಪರಿಶ್ರಮದಿಂದ ಸ್ವಾಮೀಜಿಯವರ ಧ್ವನಿಗೆ ಹತ್ತಿರವಿರುವಂತೆ, ಅವರೇ ಮಾತನಾಡಿ¨ªಾರೆಂದು ಅನ್ನಿಸುವಂತೆ, ಒಂದು ಧ್ವನಿಯನ್ನು ಬಳಸಿಕೊಂಡು ಸ್ವಾಮೀಜಿಯವರ ಭಾಷಣಗಳ ಧ್ವನಿಮುದ್ರಿತ ಸುರುಳಿಗಳನ್ನು ಸಿದ್ಧಪಡಿಸಲಾಯಿತು. ಬಂಗಾಲಿ ನಟ ಸುಭೀರ್‌ ಘೋಷ್‌ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಭಾಷಣಗಳು ಜನರನ್ನು ಹುರಿದುಂಬಿಸಿದವು. ಇವುಗಳಿಗೆ ಬೇಡಿಕೆ ಬಂದಂತೆÇÉಾ ಸ್ವಾಮೀಜಿಯವರ ಸಮಗ್ರ ಕೃತಿಗಳಲ್ಲಿರುವ ಕೆಲವು ಅಧ್ಯಾಯಗಳನ್ನು ಯಥಾವತ್ತಾಗಿ ಆಡಿಯೋ ಬುಕ್‌ ರೂಪಕ್ಕೆ ತರಲಾಯಿತು. ಅವುಗಳಿಗೆ ಹಿನ್ನೆಲೆಯಾಗಿ ಸ್ವಾಮೀಜಿಯವರ ಜೀವನ, ಸಾಧನೆಗಳನ್ನು ಬಿಂಬಿಸುವ ಫೋಟೋಗಳನ್ನು, ಚಿತ್ರಪಟಗಳನ್ನು ಬಳಸಿಕೊಳ್ಳಲಾಯಿತು. ಒಟ್ಟಿನಲ್ಲಿ ಸ್ವಾಮೀಜಿಯವರ ಸಂದೇಶವನ್ನು ಮನೆಮನಕ್ಕೆ ಮುಟ್ಟಿಸುವ ಕಾರ್ಯ ನಡೆಯಿತು. ಹೆಚ್‌.ಎಂ.ವಿ. ಸಂಸ್ಥೆಯವರು ಸ್ವಾಮೀಜಿಯವರ ಭಾಷಣಗಳ ಆಡಿಯೊ ಕ್ಯಾಸೆಟ್‌ ಹೊರತಂದಾಗ ಅದರ ರûಾಕವಚದಲ್ಲಿ ಇದು ಸ್ವಾಮೀಜಿಯವರ ಸಂದೇಶವಾದರೂ ಇಲ್ಲಿರುವ ಧ್ವನಿ ಸುಭೀರ್‌ ಘೋಷ್‌ ಅವರದ್ದು ಎಂದು ಮುದ್ರಿತವಾಗಿತ್ತು. ಕ್ಯಾಸೆಟ್‌ನೊಂದಿಗೆ ಭಾಷಣಗಳ ಕಿರು ಹೊತ್ತಗೆಯನ್ನೂ ನೀಡಲಾಗಿತ್ತು. 

      ಕರ್ನಾಟಕ ರಾಜ್ಯ ಯುವನೀತಿ 
      ಕರ್ನಾಟಕ ರಾಜ್ಯ ಯುವನೀತಿಯನ್ನು ಯುವಜನರ ಪ್ರೇರಕ ಶಕ್ತಿ ಹಾಗೂ ಆದರ್ಶವಾಗಿರುವ ಸ್ವಾಮಿ ವಿವೇಕಾನಂದರ ದೂರದರ್ಶಿತ್ವ ಮತ್ತು ಧ್ಯೇಯೋದ್ದೇಶಕ್ಕೆ ಅವರ 150ನೇ ಜಯಂತ್ಯೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ಅರ್ಪಿಸಲಾಗುತ್ತಿದೆ. ರಾಷ್ಟ್ರಕವಿ ಕುವೆಂಪುರವರು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ನಮ್ಮ ನಾಡಿನ ಜನರಿಗೆ ಕರೆ ನೀಡಿ¨ªಾರೆ. ಹಾಗೆಯೇ ನವ್ಯ ಕವಿ ಶ್ರೀ ಗೋಪಾಲಕೃಷ್ಣ ಅಡಿಗರು 'ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ನಮ್ಮೆದೆಯ ಕನಸುಗಳೆ ಕಾಮಧೇನು ಆದಾವು, ಕರೆದಾವು ವಾಂಛಿತವನು; ಕರೆವ ಕೈಗಿಹುದಿದೊ ಕನಸುಗಳ ಹರಕೆ ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ' ಎನ್ನುತ್ತಾ ಹೊಸ ಭರವಸೆಯ ನಾಡೊಂದನ್ನು ಕಟ್ಟುವ ತಮ್ಮ ಆಶಯವನ್ನು ವ್ಯಕ್ತಪಡಿಸಿ¨ªಾರೆ. 
      ದಾರ್ಶನಿಕರ ನುಡಿಗಳಿಂದ ಪ್ರೇರೇಪಣೆಗೊಂಡು ಹೊಸ ಜವಾಬ್ದಾರಿಯುತ ನಾಡನ್ನು ಕಟ್ಟುವಲ್ಲಿ ಯುವ ಜನತೆಯ ಮಹತ್ವದ ಪಾತ್ರವನ್ನು ಗುರುತಿಸುವ ಹಾಗೂ ಅವರು ಸಮಾಜದೊಂದಿಗೆ ಭಾವೈಕ್ಯತೆಯಿಂದ ಬೆರೆಯುವುದಕ್ಕೆ ಬೇಕಾದ ಒತ್ತಾಸೆ ನೀಡುವತ್ತ ಗಮನಹರಿಸುವ ಮುಖ್ಯ ಉದ್ದೇಶ ಈ ಯುವನೀತಿಗಿದೆ. ಅಂದರೆ ಯುವಜನರನ್ನು ತಲುಪಿ, ಅವರು ನಾಡಿನ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ನಂತರ ನಾಡಿನ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುವಂತೆ ಅವರನ್ನು ಸಬಲೀಕರಣಗೊಳಿಸುವುದು ಯುವನೀತಿಯ ಪ್ರಧಾನ ಗುರಿ. 

      ಕರ್ನಾಟಕ ರಾಜ್ಯ ಯುವ ನೀತಿ- 2012 
      ಒಂದು ರಾಜ್ಯದ ಆರ್ಥಿಕ ಬೆಳವಣಿಗೆಯು ಅದು ಹೇಗೆ ತನ್ನ ಬೌದ್ಧಿಕ ಮೂಲಧನವನ್ನು ಪ್ರಸ್ತಾವಿಸುತ್ತದೆ ಎನ್ನುವುದರ ಮೇಲೆಯೇ ಅಧಿಕವಾಗಿ ಅವಲಂಬಿತವಾಗಿದೆ. ಟೀಂ ಲೀಸ್‌ ಇಂಡಿಯ ಲೇಬರ್‌ ರಿಪೋರ್ಟ್‌ 2009ರ ಪ್ರಕಾರ 2025ರೊಳಗೆ ವಿಶ್ವ ಕಾರ್ಮಿಕ ಪಡೆಯಲ್ಲಿ ಶೇ. 25ರಷ್ಟು ಭಾರತೀಯರೇ ಇರುತ್ತಾರೆ. ಯುವಜನರಿಗೆ ತರಬೇತಿ ಒದಗಿಸಲು ಹಾಗೂ ಸಶಕ್ತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳದಹೊರತು ಈ ನಿರ್ದಿಷ್ಟ ವಿಭಾಗದ ಜನತೆಯು ಗರಿಷ್ಠ ಭಾಗದ ಔದ್ಯೋಗಿಕ ಜನರು ಅವಕಾಶವಂಚಿತರಾಗುತ್ತಾರೆ. 
      2011ರ ಜನಗಣತಿಯ ಪ್ರಕಾರ, ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 36.4ರಷ್ಟಿರುವ ಯವಜನರು ಸಮಗ್ರ ಉದ್ಯೋಗಸ್ಥರ ಜನಸಂಖ್ಯೆಯಲ್ಲಿ ಶೇ. 65ರಷ್ಟು ಭಾಗವನ್ನು ಹೊಂದಿ¨ªಾರೆ. ಈ ಪರಿಸ್ಥಿತಿಯಲ್ಲಿ ಬೇಡಿಕೆಗಳನ್ನು ಹಾಗೂ ಅಭಿಲಾಷೆಗಳನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಅವುಗಳನ್ನು ಪೂರೈಸಲು ಅವಕಾಶಗಳನ್ನು ಸೃಷ್ಟಿಸುವುದು ಕೂಡ ರಾಜ್ಯ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳಾಗಿವೆ. ಯುವಜನರೊಡನೆ ಕೆಲಸ ಮಾಡಲು ಮತ್ತು ವ್ಯವಸ್ಥಿತವಾಗಿ ಅವರ ಅಭಿವೃದ್ಧಿಯನ್ನು ಖಚಿತಪಡಿಸಲು ಒಂದು ಯುವನೀತಿಯನ್ನು ನಿರ್ಮಿಸುವುದು ಬಹು ಮುಖ್ಯ. 
      ಕರ್ನಾಟಕ ರಾಜ್ಯ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜ್ಞಾನ ಆಯೋಗ ರೂಪಿಸಿರುವ ಯುವನೀತಿಯು ರಾಜ್ಯದ ಯುವಜನರ ಯುವ ಜಗತ್ತು, ಯುವ ದೃಷ್ಟಿಕೋನ ಮತ್ತು ಯುವ ಧ್ವನಿ ಯ ಅಭಿವ್ಯಕ್ತಿಗೆ ವೇದಿಕೆ ಒದಗಿಸುತ್ತದೆ. ರಾಜ್ಯದಲ್ಲಿ ಬಹು-ವಿಧ ಯುವಜನರಿ¨ªಾರೆ ಎಂಬುದನ್ನು ಯುವನೀತಿಯು ಮನಗಂಡಿದೆ. ಈ ಬಹುವಿಧತೆ ವಿವಿಧ ಆಕಾಂಕ್ಷೆ, ನಿರೀಕ್ಷೆಗಳನ್ನು ಒಳಗೊಂಡಿರುವ ವಿವಿಧ ವಯೋಮಾನದ ಗುಂಪುಗಳು; ವಿವಿಧ ಹಂತಗಳಲ್ಲಿ ತಮ್ಮ ಕೊಡುಗೆಗಳನ್ನು ನೀಡಬಲ್ಲವರು; ವೈವಿಧ್ಯಮಯ ಸಾಮಾಜಿಕ, ಆರ್ಥಿಕ ಸ್ಥಿತಿಗಳಲ್ಲಿರುವವರು; ಬಹುವಿಧದ ಶಕ್ತಿ, ಸಾಮರ್ಥ್ಯ, ಪ್ರತಿಭೆಗಳನ್ನು ಹೊಂದಿರುವವರು; ಪಾಲ್ಗೊಳ್ಳುವಿಕೆಯಲ್ಲಿ ವಿವಿಧ ಅವಕಾಶಗಳನ್ನು ಮತ್ತು ವಿವಿಧ ಬಗೆಯ, ಹಂತದ, ಗುಣಮಟ್ಟದ ಶಿಕ್ಷಣ ಹಾಗೂ ಕಲಿಕೆಯ ಮಾರ್ಗಗಳನ್ನು ಹೊಂದಿದವರು; ಹಲವು ಹಂತಗಳಲ್ಲಿ ಮತ್ತು ಹಲವು ರೀತಿಯಲ್ಲಿ ರಾಜ್ಯದ ಮೇಲೆ ಅವಲಂಬಿತರಾಗಿರುವವರು- ಹೀಗೆ ಯುವ ವೈವಿಧ್ಯವು ಬಹುಮುಖೀ ಅರ್ಥದಲ್ಲಿ ಅಸ್ತಿತ್ವದಲ್ಲಿದೆ ಎಂಬುದು ಯುವನೀತಿಯ ಗಮನದಲ್ಲಿದೆ. ಈ ಯುವ®àತಿಯಲ್ಲಿ 16ರಿಂದ 30 ವಯೋಮಾನದವರನ್ನು ಯುವಜನರೆಂದು ಪರಿಗಣಿಸಲಾಗಿದೆ. ಯುವಜನರನ್ನು ಅವರ ಗುಣ ಲಕ್ಷಣಗಳು ಹಾಗೂ ಅಗತ್ಯತೆಗಳ ದೃಷ್ಟಿಯಿಂದ 16ರಿಂದ 20, 21 ರಿಂದ 25 ಮತ್ತು 26 ರಿಂದ 30 ವರ್ಷಗಳು ಎಂದು ಮೂರು ಉಪ ಗುಂಪುಗಳಾಗಿ ವಿಂಗಡಿಸಲಾಗಿದೆ. ರಾಷ್ಟ್ರೀಯ ಯುವನೀತಿಯ ಕರಡಿನಲ್ಲಿಯೂ ಇದೇ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 

      ಯುವನೀತಿಯ ನವರತ್ನಗಳು 
      ಯುವನೀತಿಯು ಸರ್ಕಾರಕ್ಕೆ ವಿಭಿನ್ನ ನವರತ್ನಗಳ ಅಡಿಯಲ್ಲಿ ಮಾಡಿರುವ ಶಿಫಾರಸ್ಸುಗಳ ಸಾರಾಂಶ ಈ ಕೆಳಕಂಡಂತಿವೆ. ಇವುಗಳನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕಾಲಮಿತಿಯಲ್ಲಿ ಅನುಷ್ಠಾನ ಮಾಡಬೇಕಿದೆ: 
      ರತ್ನ 1: ಭರವಸೆಯ ನಾಳೆಗೆ ಇಂದಿನ ಕಾರ್ಯಸಿದ್ಧತೆ 
      ರತ್ನ 2: ಕುಟುಂಬ ಪ್ರಥಮ ಕುಟುಂಬ ಸದಾ 
      ರತ್ನ 3: ಯುವ ಸಾಮರ್ಥ್ಯ, ಪ್ರತಿಭೆ, ಮೇಧಾಶಕ್ತಿಯ ಅಭಿವೃದ್ಧಿಗಾಗಿ ಶಿಕ್ಷಣ ಹಾಗೂ ತರಬೇತಿ 
      ರತ್ನ 4: ಕಾಯಕಕ್ಕೆ ಪ್ರೋತ್ಸಾಹ, ಉದ್ದಿಮೆಗೆ ಅವಕಾಶ 
      ರತ್ನ 5: ಸಮಗ್ರ ಯುವ ಆರೋಗ್ಯ ಭಾಗ್ಯ. 
      ರತ್ನ 6: ದೈಹಿಕ ಸ್ವಾಸ್ಥ್ಯಕ್ಕೆ ಕ್ರೀಡೆ, ಮಾನಸಿಕ ಆರೋಗ್ಯಕ್ಕೆ ಮನರಂಜನೆ 
      ರತ್ನ 7: ಸಾಮಾಜಿಕ ನ್ಯಾಯದ ಉತ್ತೇಜನ 
      ರತ್ನ 8: ಸರ್ಕಾರ ಹಾಗೂ ಸರ್ಕಾರದಾಚೆ: ಪಾಲ್ಗೊಳ್ಳುವಿಕೆ ಹಾಗೂ ಪ್ರಗತಿಗಾಗಿ ಸಹಭಾಗಿತ್ವ 
      ರತ್ನ 9: ಸಮಗ್ರ, ಸಮತೋಲಿತ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಸಾಂ ಕ ಪ್ರಯತ್ನ 

      ಯುವನೀತಿ ಒಳಗೊಳ್ಳುವ ಮುಖ್ಯ ತತ್ವಗಳು 
      1. ಸಮಗ್ರ ಅಭಿವೃದ್ಧಿ ಮತ್ತು ಬಹುವಲಯ ಸಂಯೋಜನೆ 
      2. ಅಪಾಯಕರ ಪರಿಸ್ಥಿತಿಯಲ್ಲಿರುವ ಯುವಜನರ ರಕ್ಷಣೆ 
      3. ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯ 
      4. ಭಾರತೀಯ ಸಂಸ್ಕೃತಿ, ದೇಶ ಮತ್ತು ನಂಬಿಕೆಗಳ ಬಗ್ಗೆ ಗೌರವ ಹಾಗೂ ಹೆಮ್ಮೆ 
      5. ಕೌಟುಂಬಿಕ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬಲಗೊಳಿಸುವುದು 
      6. ಸಮುದಾಯದ ಸಹಕಾರ 
      7. ತಂತ್ರಜ್ಞಾನ ಹಾಗೂ ಆವಿಷ್ಕಾರಗಳು 
      8. ಯುವ ಪರ ದೃಷ್ಟಿಕೋನ ಮತ್ತು ಯುವಜನರ ಸಹಭಾಗಿತ್ವವನ್ನು ಸಾಧಿಸುವುದು 
      9. ಸಂಶೋಧನಾಧಾರಿತ ಮಾರ್ಗೋಪಾಯ 

      ಏನೆಲ್ಲವ‌ನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ? 
      ರಾಷ್ಟ್ರೀಯ ಯುವನೀತಿ ಪ್ರಕಟಿತ ಕರಡು 2012, ಮಹಾರಾಷ್ಟ್ರ, ಜಾರ್ಖಂಡ್‌, ಕೇರಳ, ಮೇಘಾಲಯ, ಹರಿಯಾಣ, ಪಂಜಾಬ್‌, ಮೇಘಾಲಯ ರಾಜ್ಯಗಳ ಕ್ರೀಡಾ ನೀತಿಗಳನ್ನು ಅವಲೋಕಿಸಿದ್ದೇ ಅಲ್ಲದೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಯುವನೀತಿ 2008-13, ಪಂಜಾಬ್‌(ಪಾಕಿಸ್ತಾನ್‌), ಬಾಂಗ್ಲಾದೇಶ್‌, ಆಸ್ಟ್ರೇಲಿಯಾದ ಯುವ ಕಾರ್ಯಕ್ರಮಗಳು, ಯೂರೋಪಿಯನ್‌ ಕೌನ್ಸಿಲ್‌ ಯುವ ಕ್ರಿಯಾ ಕಾರ್ಯಕ್ರಮ, ಯುರೋಪಿಯನ್‌ ಯೂನಿಯನ್‌ ಯುವನೀತಿ ಕಾರ್ಯ ಸೂಚಿ 2010-18, ಅಂತರಾಷ್ಟ್ರೀಯ ಯುವ ಮಂಡಳಿ, ಯುವ ಕಾರ್ಯಕ್ರಮಗಳು, ನೈರೋಬಿ ಕ್ರಿಯಾ ಯೋಜನೆ (ಕಾಮನ್‌ವೆಲ್ತ್‌ ಯುವ ಕಾರ್ಯಕ್ರಮ), ಅಮೇರಿಕನ್‌ ಯುವನೀತಿ ಫೋರಂ, ಕರ್ನಾಟಕ ವಿಷನ್‌-2020, ಮಿಲೇನಿಯಂ ಡೆವಲಪ್‌ಮೆಂಟ್‌ ಗೋಲ್ಸ್‌, ಜನಗಣತಿ 2001 ಮತ್ತು 2011, 2009ರ ರಾಷ್ಟ್ರೀಯ ಅಪರಾಧಿ ದಾಖಲೆ ಬ್ಯೂರೋ ವರದಿ ಇತ್ಯಾದಿಗಳನ್ನು ಅವಲೋಕಿಸಿ ಈ ಕರ್ನಾಟಕ ರಾಜ್ಯ ಯುವನೀತಿ 2012ನ್ನು ಅಂತಿಮಗೊಳಿಸಲಾಗಿದೆ. 
      2012ರ ಜನವರಿ 12 - ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಮುಖ್ಯಮಂತ್ರಿಗಳಿಂದ ಯುವ ಬಜೆಟ್‌ ಬಗೆಗೆ ಘೋಷಣೆಯ ನಂತರದಲ್ಲಿ ವರ್ಷವಿಡೀ ವಿವಿಧ ಸಂಘಟನೆಗಳು, ಆಯೋಗಗಳು ಮತ್ತು ಯುವ ಮುಂದಾಳುಗಳೊಡನೆ ನಡೆಸಿದ ಸಮಾಲೋಚನಾ ಸಭೆಗಳ ನಂತರ ಜೂನ್‌ 2ರಂದು ಸರ್ಕಾರದಿಂದ ಯುವನೀತಿ ಚಾಲನಾ ಸಮಿತಿ ಹಾಗೂ ಕರಡು ರಚನಾ ಸಮಿತಿ ರಚನೆಯ ಬಗೆಗೆ ಸರ್ಕಾರಿ ಆದೇಶ ಹೊರಬಿದ್ದು, ಜೂನ್‌ 25 ರಂದು ಕರ್ನಾಟಕ ಯುವನೀತಿಯ ವೆಬ್‌ಸೈಟ್‌ ಚಾಲನೆ ದೊರೆತು, ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಂದೀಪ ಶಾಸ್ತ್ರೀ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಕರಡು ರಚನಾ ಸಮಿತಿಯು ಸಿದ್ಧಗೊಳಿಸಿದ ಕರಡು ಯುವನೀತಿಯನ್ನು ಆಗಸ್ಟ್‌ 9ರಂದು ಸರ್ಕಾರಕ್ಕೆ ಸಮರ್ಪಣೆ ಮಾಡಲಾಯಿತು. ಹಲವು ಸಮಾಲೋಚನಾ ಸಭೆಗಳ ನಂತರ ಪರಿಷ್ಕಾರಗೊಳಿಸಲ್ಪಟ್ಟ ಈ ಯುವನೀತಿಯನ್ನು ಚಾಲನಾ ಸಮಿತಿಯು ಅಧ್ಯಕ್ಷರಾದ ಗಿರೀಶ್‌ ಪಟೇಲ್‌ರವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌ರವರಿಗೆ ಮಾನ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾದ ಎಂ.ಪಿ. ಅಪ್ಪಚ್ಚು(ರಂಜನ್‌)ರವರ ಉಪಸ್ಥಿತಿಯಲ್ಲಿ ನವೆಂಬರ್‌ 29, 2012ರಂದು ಸಲ್ಲಿಸಿತು. 


      ಆಗಸ್ಟ್‌ 12: ಅಂತಾರಾಷ್ಟ್ರೀಯ ಯುವದಿನ 
      ವಿಶ್ವಸಂಸ್ಥೆಯ ಕಳಕಳಿಯಿಂದ ಪ್ರತಿವರ್ಷ ಆಗಸ್ಟ್‌ 12ನ್ನು ಅಂತಾರಾಷ್ಟ್ರೀಯ ಯುವದಿನವನ್ನಾಗಿ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳು ಆಚರಿಸುತ್ತಾ ಬಂದಿವೆ. 2000ನೇ ಇಸವಿಯಿಂದ ಆರಂಭವಾಗಿರುವ ಈ ಆಚರಣೆಯ ದಶಮಾನೋತ್ಸವದ ಸಂದರ್ಭದಲ್ಲಿ 2010ನೇ ಇಸವಿಯನ್ನು ಅಂತಾರಾಷ್ಟ್ರೀಯ ಯುವ ವರ್ಷವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆನೀಡಿತ್ತು. ಯುವಜನರಿಂದ, ಯುವಜನರಿಗಾಗಿ, ಯುವಜನರಿಗೋಸ್ಕರವಾಗಿ ನಡೆಸಲಾಗುವ ಕಾರ್ಯಕ್ರಮಗಳತ್ತ ವಿಶ್ವದ ಗಮನಸೆಳೆಯುವುದು, ಯುವಜನರನ್ನು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸುವುದು, ಯುವಜನರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ಹಮ್ಮಿಕೊಳ್ಳುವುದು ಈ ಆಚರಣೆಯ ಉದ್ದೇಶವಾಗಿದೆ. 
      ಹದಿನೈದರಿಂದ ಇಪ್ಪತ್ನಾಲ್ಕು ವರ್ಷದವರನ್ನು ಯುವಜನರು ಎಂದು ವಿಶ್ವಸಂಸ್ಥೆ ಪರಿಗಣಿಸಿದ್ದು ವಿಶ್ವದ ಜನಸಂಖ್ಯೆಯಲ್ಲಿ ಶೇಕಡಾ 18 ಅಂದರೆ 1.2 ಬಿಲಿಯನ್‌ ಯುವಜನರಿದ್ದು ಅವರಲ್ಲಿ ಶೇಕಡಾ 87 ರಷ್ಟು ಮಂದಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ¨ªಾರೆ ಮತ್ತು ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ ಸೌಲತ್ತುಗಳಿಂದ ವಂಚಿತರಾಗಿ¨ªಾರೆ. ಆದರೂ ಸಾಮಾಜಿಕ ಬದಲಾವಣೆಯ, ಧನಾತ್ಮಕ ದೃಷ್ಟಿಕೋನದ, ಉತ್ಸಾಹೀ ಯುವಜನರು ದೇಶದ ಉತ್ಕೃಷ್ಟ ಮಾನವ ಸಂಪನ್ಮೂಲವಾಗಿ¨ªಾರೆ. ಅವರ ಚಿಂತನೆ, ದೂರದೃಷ್ಟಿ, ಶಕ್ತಿ, ಉತ್ಸಾಹಗಳು ದೇಶದ ಅಭಿವೃದ್ಧಿಗೆ ಪೂರಕ ಮತ್ತು ಅತ್ಯಗತ್ಯ ಕೂಡ. 
      ಯುವಜನರ ಅಭಿವೃದ್ಧಿಗೆಂದೇ ಗುರುತಿಸಲಾಗಿರುವ ವಿಶ್ವದ ಕಾರ್ಯಸೂಚಿಯ ಹದಿನೈದು ಆದ್ಯತಾವಲಯಗಳು ಹೀಗಿವೆ: 
      ಶಿಕ್ಷಣ, ಉದ್ಯೋಗ, ಹಸಿವು ಮತ್ತು ಬಡತನ, ಆರೋಗ್ಯ, ಪರಿಸರ, ಔಷಧಗಳ ದುರ್ಬಳಕೆ, ಬಾಲಾಪರಾಧ, ಬಿಡುವಿನ ವೇಳೆಯ ಚಟುವಟಿಕೆಗಳು, ಬಾಲಕಿಯರು ಮತ್ತು ಯುವತಿಯರು, ಭಾಗವಹಿಸುವಿಕೆ, ಜಾಗತೀಕರಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಹೆಚ್‌ಐವಿ/ಏಡ್ಸ್‌, ಯುವಜನರು ಮತ್ತು ಸಂಘರ್ಷ, ಭಾವೈಕ್ಯತೆ. 
      'ಯುವಜನರು ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶಗಳು, ಆರ್ಥಿಕ ಸೌಲಭ್ಯಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವ ಸಂಪೂರ್ಣ ಬದ್ಧತೆಗೆ ಅರ್ಹರು. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಜವಾಬ್ದಾರಿಯುತ ನಿರ್ಣಯ ತೆಗೆದುಕೊಳ್ಳುವ ಅವಕಾಶವನ್ನು ಯುವಜನರಿಗೆ ಕಲ್ಪಿಸಿಕೊಡಬೇಕು' ಎನ್ನುತ್ತಾರೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌-ಕಿ-ಮೂನ್‌ ಅವರು. 
      1985ರ ಮೊದಲ ಅಂತಾರಾಷ್ಟ್ರೀಯ ಯುವವರ್ಷ ಆಚರಣೆಯ ಸಂದರ್ಭದಲ್ಲಿ ವಿಶ್ವದ ಯುವಜನರ ಸ್ಥಿತಿಗತಿಗಳ ಬಗ್ಗೆ ಕಾಳಜಿವಹಿಸಲು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳಲ್ಲಿ ಹತ್ತಾರು ಕಾರ್ಯಕ್ರಮಗಳು ಜರುಗಿದ್ದವು. 1991ರ ಮೇ 27 ರಿಂದ 29ರವರೆಗೆ ವಿಯೆನ್ನಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯವಸ್ಥೆಯ ವಿಶ್ವ ಯುವ ವೇದಿಕೆಯ ಮೊದಲ ಮಹಾ ಅಧಿವೇಶನ ಏರ್ಪಾಟಾಗಿ ವಿಶ್ವಸಂಸ್ಥೆಯ ಯುವಜನ ನಿಧಿ(ಖೀnಜಿಠಿಛಿಛ Nಚಠಿಜಿಟns Yಟuಠಿಜ ಊunಛ)ಯ ಸ್ಥಾಪನೆ ಮತ್ತು ಅಂತಾರಾಷ್ಟ್ರೀಯ ಯುವದಿನ ಆಚರಣೆಯ ಪ್ರಸ್ತಾಪವಾಯಿತು. 1998ರ ಆಗಸ್ಟ್‌ 8ರಿಂದ 12ರವರೆಗೆ ಪೋರ್ಚುಗಲ್‌ನಲ್ಲಿ ನಡೆದ ಸದಸ್ಯ ರಾಷ್ಟ್ರಗಳ ಯುವಜನಸೇವೆ ಮತ್ತು ಯುವಜನಖಾತೆಯ ಸಚಿವರುಗಳ ಮೊದಲ ವಿಶ್ವ ಸಮ್ಮೇಳನದಲ್ಲಿ ಆಗಸ್ಟ್‌ 12ನ್ನು ಅಂತಾರಾಷ್ಟ್ರೀಯ ಯುವದಿನ ಎಂದು ಆಚರಿಸುವ ಶಿಫಾರಸ್ಸು ಹೊರಬಿದ್ದು, 1999ರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಅಂಗೀಕೃತವಾಗಿ, 2000ನೇ ಇಸವಿಯಿಂದ ಅಂತಾರಾಷ್ಟ್ರೀಯ ಯುವದಿನವನ್ನು ಆಚರಿಸಲಾಗುತ್ತಿದೆ. 
      ಇದೇ ಅಧಿವೇಶನದಲ್ಲಿ ಅಂಗೀಕರಿಸಲಾದ ಯುವಜನರಿಗಾಗಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳ ಕಾರ್ಯಸೂಚಿಯ ಮುನ್ನುಡಿಯಲ್ಲಿ ಹೀಗೆ ಹೇಳಲಾಗಿದೆ: ಯುವಜನರು ಮಹತ್ತರ ಸಾಮಾಜಿಕ ಬದಲಾವಣೆಯ ಹರಿಕಾರರೂ, ಫ‌ಲಾನುಭವಿಗಳೂ ಮತ್ತು ಆ ಬದಲಾವಣೆಗಳ ಸಂತ್ರಸ್ತರೂ ಆಗಿರುವವರು ಮತ್ತು ಈಗಾಗಲೇ ಪ್ರಚಲಿತವಿರುವ ಸಾಮಾಜಿಕ ಪದ್ಧತಿಗಳೊಂದಿಗೆ ಹೊಂದುಕೊಂಡು ಹೋಗುವ ಇಲ್ಲವೇ ಅಂತಹ ರೀತಿ ನೀತಿಗಳನ್ನು ಬದಲಾಯಿಸಿ ಹೊಸ ಪದ್ಧತಿಗಳ ಆರಂಭಕ್ಕೆ ಕಾರಣರಾಗುವ ಚೈತನ್ಯ ಹೊಂದಿ ಸಂಕ್ರಮಣ ಸ್ಥಿತಿಯಲ್ಲಿರುವವರೂ ಆಗಿ¨ªಾರೆ. ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದಿದ ಮತ್ತು ಯಾವುದೇ ರೀತಿಯ ಆರ್ಥಿಕ ವ್ಯವಸ್ಥೆ ಹೊಂದಿರುವ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿನ ಯುವಜನರು ತಮ್ಮ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಆಶಯ ಉಳ್ಳವರು. 
      ಶಿಕ್ಷಣ, ಉದ್ಯೋಗ, ಹಸಿವು ಮತ್ತು ಬಡತನ, ಆರೋಗ್ಯ, ಪರಿಸರ, ಔಷಧಗಳ ದುರ್ಬಳಕೆ/ ಮಾದಕ ಪದಾರ್ಥಗಳ ಬಳಕೆ, ಬಾಲಾಪರಾಧ, ವಿಡುವಿನ ವೇಳೆಯ ಚಟುವಟಿಕೆಗಳು, ಬಾಲಕಿಯರು ಮತ್ತು ಯುವತಿಯರು ಹಾಗೂ ಸಾಮಾಜಿಕ ಜೀವನದಲ್ಲಿ ಮತ್ತು ನಿರ್ಣಾಯಕ ಕಾರ್ಯಕ್ರಗಳಲ್ಲಿ ಯುವಜನರ ಸಮಗ್ರ, ಪರಿಣಾಮಕಾರಿ ಭಾಗವಹಿಸುವಿಕೆ, ಜಾಗತೀಕರಣ, ಸಮಾಚಾರ ಮತ್ತು ಸಮೂಹ ಸಂವಹನ ತಂತ್ರಜ್ಞಾನ, ಹೆಚ್‌ಐವಿ/ಏಡ್ಸ್‌, ಯುವಜನರು ಮತ್ತು ಹೊಯ್ದಾಟ, ಬಾಂಧವ್ಯಗಳು ಮತ್ತು ಐಕ್ಯತೆ ಎಂಬ ಹದಿನೈದು ಆದ್ಯತಾ ವಲಯಗಳನ್ನು ಈ ಯುವಜನ ಕಾರ್ಯಸೂಚಿಯಲ್ಲಿ ಗುರುತಿಸಲಾಗಿದ್ದು, ಅವುಗಳನ್ನು ಸಮರ್ಥವಾಗಿ ಆಯೋಜಿಸಲು ಸಲಹೆ, ಶಿಫಾರಸ್ಸುಗಳಿವೆ. 
      ಯುವಜನರನ್ನು ದೇಶದ ಮುಖ್ಯವಾಹಿನಿಯಲ್ಲಿ, ನಿರ್ಣಾಯಕ ಪಾತ್ರಗಳಲ್ಲಿ ತೊಡಗುವಂತೆ ಮಾಡುವ ಕಾರ್ಯ ಆಗಬೇಕಾಗಿದೆ. ಅನಂತ ಅವಕಾಶಗಳನ್ನು ಬಾಚಿಕೊಳ್ಳಲು ಯುವಜನರನ್ನು ಹುರಿದುಂಬಿಸಬೇಕಿದೆ.

      • ಕೃಷಿ ವಿಜ್ಞಾನ ಪ್ರವೇಶ ಪರೀಕ್ಷೆ

        • Udayavani | Jan 07, 2013
          ಇಂಡಿಯನ್‌ ಕೌನ್ಸಿಲ್‌ ಆಫ್ ಆಗ್ರಿಕಲ್ಚರಲ್‌ ರಿಸರ್ಚ್‌(ಐಸಿಎಆರ್‌) ನಡೆಸುವ 2013-14ನೇ ಸಾಲಿನ ಕೃಷಿಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವ್ಯಾಸಂಗಕ್ಕಾಗಿ 18ನೇ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಡಿಸೆಂಬರ್‌ 26ರಿಂದಲೇ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಅಂಚೆಯಲ್ಲಿ ತರಿಸಿಕೊಳ್ಳಲು ಫೆಬ್ರವರಿ 10 ಕೊನೆಯ ದಿನ, ಬೆಂಗಳೂರು, ಧಾರವಾಡ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯಗಳಿಂದ, ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಮತ್ತು ಬೀದರಿನ ಬೀದರ್‌ನ ಕರ್ನಾಟಕ ವೆಟರ್ನರಿ, ಅನಿಮಲ್‌ ಆ್ಯಂಡ್‌ ಫಿಷರೀಸ್‌ ಸೈನ್ಸಸ್‌ ಯೂನಿವರ್ಸಿಟಿಯಿಂದ ಖು¨ªಾಗಿ ಪಡೆಯಲು ಮತ್ತು ಸಲ್ಲಿಸಲು 15 ಫೆಬ್ರವರಿ ಕೊನೆಯ ದಿನ. ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಏಪ್ರಿಲ್‌ 20, 2013ರ ಶನಿವಾರ ಬೆಳಗ್ಗೆ 10 ರಿಂದ 12.30ರವರೆಗೆ ಪದವಿ ತರಗತಿಗಳಿಗೆ, ಏಪ್ರಿಲ್‌ 21ರಂದು ಭಾನುವಾರ ಬೆಳಗ್ಗೆ 10 ರಿಂದ 12.30ರವರೆಗೆ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಮೇ ಮೂರನೇ ವಾರದಲ್ಲಿ ಫ‌ಲಿತಾಂಶ ಪ್ರಕಟವಾಗಲಿದ್ದು ಜೂನ್‌ 14 ರಿಂದ 24ರವರೆಗೆ ಕೌನ್ಸೆಲಿಂಗ್‌ ನಡೆಯಲಿದೆ. ಅರ್ಜಿ ಶುಲ್ಕ ರೂ. 500 + ಅಂಚೆ ವೆಚ್ಚ. 
          ಐಸಿಎಆರ್‌ಗೆ ಸೇರಿದ ವಿಶ್ವವಿದ್ಯಾಲಯಗಳಲ್ಲಿ ಶೇ. 100ರಷ್ಟು, ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ. 15ರಷ್ಟು ಪದವಿ ಹಾಗೂ ಶೇ. 25ರಷ್ಟು ಸ್ನಾತಕೋತ್ತರ ತರಗತಿಗಳ ಸೀಟುಗಳ ಆಯ್ಕೆಗಾಗಿ ನಡೆಯುವ ಲಿಖೀತ ಪರೀಕ್ಷೆ, ಸಂದರ್ಶನ ಮತ್ತು ಕೌನ್ಸೆಲಿಂಗ್‌ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. 2013ರ ಮಾರ್ಚ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳೂ ಕೂಡ ಇದನ್ನು ತೆಗೆದುಕೊಳ್ಳಬಹುದು. 
          ಕೃಷಿ, ತೋಟಗಾರಿಕೆ, ಕೃಷಿ ಇಂಜಿನಿಯರಿಂಗ್‌, ಡೈರಿ ಟೆಕ್ನಾಲಜಿ, ಬಯೋಟೆಕ್ನಾಲಜಿ, ಅರಣ್ಯಶಾಸ್ತ್ರ, ಆಹಾರ ವಿಜ್ಞಾನ, ಮೀನು ಮತ್ತು ನೀರಿನ ಜೀವಿಗಳ ವಿಜ್ಞಾನ, ಗೃಹ ವಿಜ್ಞಾನ, ರೇಷ್ಮೆ ಕೃಷಿ, ಕೃಷಿ ಉತ್ಪನ್ನ ಮಾರಾಟ, ಬ್ಯಾಂಕಿಂಗ್‌ ಮತ್ತು ಸಹಕಾರ, ವಾಣಿಜ್ಯ ಕೃಷಿ ಮತ್ತು ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ಬಿಎಸ್ಸಿ, ಬಿಟೆಕ್‌, ಬಿಇಎಸ್ಸಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಸೀಟುಗಳಿಗಾಗಿ ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ಆಯ್ಕೆ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ 64 ಕೃಷಿ + 8 ಅರಣ್ಯಶಾಸ್ತ್ರ + 8 ರೇಷ್ಮೆ ಕೃಷಿ, ಧಾರವಾಡದಲ್ಲಿ 62 ಕೃಷಿ + 6 ಅರಣ್ಯಶಾಸ್ತ್ರ + 15 ಗೃಹವಿಜ್ಞಾನ, ರಾಯಚೂರಿನಲ್ಲಿ 30 ಮತ್ತು ಬಿಜಾಪುರದ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 68, ಬೀದರ್‌ನ ಕರ್ನಾಟಕ ವೆಟರ್ನರಿ, ಅನಿಮಲ್‌ ಆ್ಯಂಡ್‌ ಫಿಷರೀಸ್‌ ಸೈನ್ಸಸ್‌ ಯೂನಿವರ್ಸಿಟಿಯಲ್ಲಿನ 6 ಫಿಶರೀಸ್‌+ 5 ಡೈರಿ ಟೆಕ್ನಾಲಜಿ ಪದವಿ ವ್ಯಾಸಂಗದ ಸೀಟುಗಳ ಆಯ್ಕೆಗಾಗಿ ಈ ಪರೀಕ್ಷೆ ನಡೆಯುತ್ತಿದೆ. ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗೆ ಪ್ರತ್ಯೇಕ ಸೀಟುಗಳಿವೆ. 

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...