Tuesday, 25 December 2012

KAS Mains Compulsory Kannada Paper - Article in Udayavani Josh 25 Dec 2012


KAS Mains Compulsory Kannada Paper - Article in Udayavani Josh 25 Dec 2012
Udayavani
  • ಕೆಎಎಸ್‌ ಪರೀಕ್ಷೆ ಹೇಗಿತ್ತು ಗೊತ್ತಾ?

  • ಖಂಡಿತಾ ಗಾಬರಿಯಾಗಬೇಡಿ. ಇದೇನು ಪ್ರಳಯದ ರುದ್ರನಾಟ್ಯವಲ್ಲ. ಪಂಜೆ ಮಂಗೇಶರಾಯರ(ಕವಿಶಿಷ್ಯ) ''''ತೆಂಕಣ ಗಾಳಿಯಾಟ'' ಪದ್ಯದ

    • Udayavani | Dec 24, 2012
      ಬರಲಿದೆ, ಅಹಹಾ! ದೂರದಿ ಬರಲಿದೆ 
      ಭುಸುಗುಟ್ಟುವ ಪಾತಾಳದ ಹಾವೋ..... 
      ಬರುವುದು ಭರ ಭರ ಭರದಲಿ ಬರುವುದು 
      ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ 
      ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ 
      ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ 
      ಅಬ್ಬರದಲಿ ಭೋರ್‌ಭೋರನೆ ಗುಮ್ಮಿಸಿ... 
      ಖಂಡಿತಾ ಗಾಬರಿಯಾಗಬೇಡಿ. ಇದೇನು ಪ್ರಳಯದ ರುದ್ರನಾಟ್ಯವಲ್ಲ. ಪಂಜೆ ಮಂಗೇಶರಾಯರ(ಕವಿಶಿಷ್ಯ) 'ತೆಂಕಣ ಗಾಳಿಯಾಟ' ಪದ್ಯದ ಸಾಲುಗಳಿವು. ಅಷ್ಟೆÇÉಾ ರುದ್ರತಾಂಡವವಾಡುತ್ತಾ ಧಾವಿಸುತ್ತಿರುವುದು ಪ್ರತಿವರ್ಷ ಬರುವ ತೆಂಕಣಗಾಳಿ ಅಷ್ಟೇ! 

      ತೆಂಕಣ ಗಾಳಿಯು ಕೊಂಕಣ ಸೀಮೆಗೆ 
      ಬಂತೈ ಬಂತೈ ಬಂತೈ... 
      ಪ್ರಳಯ ಆಗದೇ ಇರುವುದರಿಂದ ಇದೀಗ ನೀವು ಈ ಅಂಕಣವನ್ನು ಓದುತ್ತಿರುವಿರಿ! ಪರಮಪಿತನ, ಸುತನ, ಪವಿತ್ರಾತ್ಮನ ಹೆಸರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವಿರಿ! ವಿಪ್ಲವಗಳೆಲ್ಲವೂ ಠುಸ್ಸೆಂದದ್ದಕ್ಕೆ ಉಸ್ಸೆಂದು ನಿಟ್ಟುಸಿರು ಬಿಟ್ಟಿರುವಿರಿ! 

      ಪ್ರಳಯ ಕುರಿತಂತೆ ಹತ್ತಾರು ಪುಸ್ತಕಗಳೂ ಜನರ ಕೈಯಲ್ಲಿ ಚಲಾವಣೆಯಾಗುತ್ತಿದ್ದರೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ, ಪೊ›.ಎಚ್‌.ಆರ್‌. ರಾಮಕೃಷ್ಣ ರಾವ್‌ ಅವರ ಪ್ರಳಯ-2012, ಡಾ.ಎಸ್‌. ಬಾಲಚಂದ್ರರಾವ್‌ ಅವರ ಮಹಾಪ್ರಳಯ 2012? ಮತ್ತು ಸಪ್ತಗಿರಿ ಪ್ರಕಾಶನ ಪ್ರಕಟಿಸಿರುವ ಶ್ರೀಕಾಂತ್‌ ವಿ. ಬÇÉಾಳ್‌ ಅವರ 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿತವೇ? ಕೃತಿಗಳು ವಸ್ತುನಿಷ್ಠವಾಗಿ ಪ್ರಳಯದ ವಿಶ್ಲೇಷಣೆ ಮಾಡುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು. 

      ಪ್ರಳಯವೆಂಬ ಯಕಃಶ್ಚಿತ್‌ ಸಂಶಯ ಕೀಟವನ್ನು ನಿವಾರಿಸಲು ಅಧ್ಯಯನವೆಂಬ ದಿವೌÂಷಧಿಯೇ ಬೇಕು. ವಿಶ್ವ ರಹಸ್ಯದ ಕೀಲಿಕೈ ಹುಡುಕುತ್ತಿರುವ ಈ ಹೊತ್ತಿನಲ್ಲಿ ಇಲ್ಲದ್ದನ್ನು ಕುರಿತು ಚಿಂತಿಸದೆ, ನಾವೇ ಹುಡುಕಿ, ಸೃಷ್ಟಿ ಕ್ರಿಯೆ ಅರ್ಥಕಂಡುಕೊಳ್ಳಲು ನೆರವಾಗುವ ವೈಜ್ಞಾನಿಕ ಸಾಹಿತ್ಯ, ವಿಶ್ಲೇಷಣೆಗಳನ್ನು ಅಧ್ಯಯನ ಮಾಡೋಣ, ವೈಜ್ಞಾನಿಕ ಚಿಂತನೆಯನ್ನು ಎÇÉೆಡೆ ಹರಡೋಣ. 

      ಕಡ್ಡಾಯ ಕನ್ನಡ ಪತ್ರಿಕೆ- 2012 
      ಕರ್ನಾಟಕ ಲೋಕಸೇವಾ ಆಯೋಗವು ಇದೇ ಡಿಸೆಂಬರ್‌ 15ರಂದು ನಡೆಸಿದ ಕಡ್ಡಾಯ ಕನ್ನಡ ಪತ್ರಿಕೆಯು ಅತ್ಯಂತ ಸುಲಭವಾಗಿದ್ದು, ಸಾಮಾನ್ಯ ಕನ್ನಡ ಓದು, ಬರಹ ತಿಳಿದವರೆಲ್ಲರೂ ಸುಲಭವಾಗಿ ಬಿಡಿಸುವಂತಿತ್ತು. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿ ಆರಂಭದಿಂದಲೂ ಕನ್ನಡವನ್ನು ನಿರ್ಲಕ್ಷಿಸಿದವರಿಗೆ ಮಾತ್ರ ಸ್ವಲ್ಪ$ಕಷ್ಟ ಅನಿಸಿತು. ವ್ಯಾಕರಣ ಅಂಶಗಳಿಗಿಂತ ಪದಸಂಪತ್ತಿನ ಕಡೆಗೇ ಹೆಚ್ಚು ಒತ್ತು ಇತ್ತು. ವಿಷಯ ವಿಶ್ಲೇಷಣೆ ಮತ್ತು ನಿರೂಪಣೆಗೆ ಹೆಚ್ಚಿನ ಒತ್ತು ಇದ್ದು ಅಭ್ಯರ್ಥಿಗಳು ಕೊಟ್ಟಿರುವ ವಸ್ತು, ವಿಷಯವನ್ನು ಹೇಗೆ ಗ್ರಹಿಸಿ¨ªಾರೆ, ಹೇಗೆ ಕ್ಲುಪ್ತವಾಗಿ ನಿರ್ದಿಷ್ಟ ಉತ್ತರಗಳನ್ನು ನೀಡಿ¨ªಾರೆ ಎನ್ನುವುದರ ಮೇಲೆ ಫ‌ಲಿತಾಂಶ ನಿಗದಿಯಾಗುತ್ತದೆ. ಈ ಬಾರಿಯ ಪ್ರಶ್ನೆ ಪತ್ರಿಕೆ ಹೀಗಿತ್ತು: 
      ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ 2012- ಅಂಕಗಳು 150 

      ಭಾಗ- ಎ 
      1. ಈ ಕೆಳಗಿನ ಯಾವುದಾದರೂ ಒಂದರ ಬಗ್ಗೆ ಸುಮಾರು 300 ಶಬ್ದಗಳಲ್ಲಿ ಒಂದು ಪ್ರಬಂಧ ಬರೆಯಿರಿ: 25 
      ಅ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಅಗತ್ಯ 
      ಆ. ಅರಣ್ಯಗಳ ನಾಶ- ದೇಶವಿನಾಶ 
      ಇ. ಗ್ರಾಮಾಂತರ ಪ್ರಾಥಮಿಕ ಶಾಲೆಗಳ ಹೀನಸ್ಥಿತಿ 
      ಈ. ಹಳೆಯ ಸಂಸ್ಕೃತಿಯ ಅಳಿವು-ಉಳಿವು 

      2. ಈ ಕೆಳಗಿನ ಗದ್ಯಭಾಗವನ್ನು ಗಮನವಿಟ್ಟು ಓದಿ ಕೊನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ನಿಮ್ಮ ಮಾತುಗಳಲ್ಲಿ ಉತ್ತರಿಸಿ: 25 
      (ಸಮಾಜಕಾರ್ಯವನ್ನು ಕುರಿತ ಪುಟ್ಟ ಪ್ರಬಂಧವೊಂದನ್ನು ನೀಡಲಾಗಿದ್ದು, ಇದನ್ನು ಕನಿಷ್ಟ ಎರಡು ಬಾರಿ ಓದಿಕೊಂಡು ಅದರ ಕೆಳಗೆ ನೀಡಲಾದ ಐದು ಪ್ರಶ್ನೆಗಳಿಗೆ 
      ಉತ್ತರಿಸಬೇಕಿತ್ತು. ಪ್ರತಿ ಪ್ರಶ್ನೆಗೆ 5 ಅಂಕಗಳು ನಿಗದಿಯಾಗಿದ್ದವು.) 

      3. ಈ ಕೆಳಗಿನ ಗದ್ಯಭಾಗದ ಸಾರವನ್ನು ನಿಮ್ಮ ಸ್ವಂತ ಮಾತುಗಳಲ್ಲಿ 100 ಶಬ್ದಗಳಿಗೆ ಮೀರದಂತೆ ಸಂಗ್ರಹಿಸಿ ಬರೆಯಿರಿ. ಲೇಖನದ ಕೊನೆಯಲ್ಲಿ ನೀವು ಬಳಸಿರುವ ಶಬ್ದಗಳ ಸಂಖ್ಯೆಯನ್ನು ಸೂಚಿಸಿ: 25 

      ವಿಸೂ: ಲೇಖನ ಸಂಗ್ರಹವು ಸೂಚಿಸಿರುವುದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅಂಕಗಳನ್ನು ಕಳೆಯಲಾಗುವುದು. 
      (ಸುಮಾರು 300ಕ್ಕೂ ಹೆಚ್ಚು ಪದಗಳ ಮಿತಿಯ ಒಂದು ಗದ್ಯಭಾಗವನ್ನು ನೀಡಲಾಗಿದ್ದು, ಕನ್ನಡ ಭಾಷೆಯ ಅಭಿಮಾನ ಬೆಳೆಸುವ ಕುರಿತ ಸುದೀರ್ಘ‌ ಚರ್ಚೆ ಅದರಲ್ಲಿತ್ತು. ಇದರ ಮೂರನೇ ಒಂದು ಭಾಗ ಅಂದರೆ ಸುಮಾರು 100 ಪದಗಳ ಅಳತೆಗೆ ಸರಿಹೊಂದುವಂತೆ, ಮೂಲದ ಯಾವುದೇ ಪ್ರಮುಖ ಸಂಗತಿಗಳನ್ನು ಬಿಟ್ಟುಬಿಡದೇ ಕ್ಲುಪ್ತವಾಗಿ ಹಿಡಿದಿಡಬೇಕಿತ್ತು. ತಕ್ಕ ಶೀರ್ಷಿಕೆಯನ್ನೂ ಬರೆಯಬೇಕಿತ್ತು. ಸಂಕ್ಷೇಪಿಕರಣದ ಉತ್ತರ ಬರೆಯಲಿಕ್ಕಾಗಿಯೇ ಪ್ರತ್ಯೇಕವಾದ ನಿರ್ದಿಷ್ಟ ಸಾಲುಗಳ ಹಾಳೆಯನ್ನು ನೀಡಲಾಗಿತ್ತು.) 
      4. ಕೆಳಗಿನ ಗದ್ಯಭಾಗವನ್ನು ಕನ್ನಡಕ್ಕೆ ಭಾಷಾಂತರಿಸಿ: 25 
      (ಸುಮಾರು 90 ಪದಗಳ ಮಿತಿಯ ಸುಲಭವಾದ ನೀತಿ ಶಿಕ್ಷಣವನ್ನು ಕುರಿತ ಪ್ರಬಂಧವೊಂದರಿಂದ ಆಯ್ದ ಇಂಗ್ಲಿಷ್‌ ಪ್ಯಾರಾಗ್ರಾಫ್ ನೀಡಿ ಅದನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಕೇಳಲಾಗಿತ್ತು. ಭಾಷೆ ಮತ್ತು ಭಾವ ತುಂಬಾ ಸರಳವಾಗಿತ್ತು.) 

      ಭಾಗ- ಬಿ 
      5. ಈ ಕೆಳಗಿನವುಗಳಲ್ಲಿ ಒಂದನ್ನು ಕುರಿತು 100 ಪದಗಳಲ್ಲಿ ಪತ್ರಿಕಾ ಸಂಪಾದಕರಿಗೆ ಒಂದು ಪತ್ರ ಬರೆಯಿರಿ: 10 
      ಎ. ಶಬ್ದಮಾಲಿನ್ಯವನ್ನು ತಡೆಗಟ್ಟುವ ಬಗೆ 
      ಬಿ. ಶಾಂತಿ ಕದಡುತ್ತಿರುವ ಮಾದಕ ವಸ್ತುಗಳ ಹಾವಳಿ 
      ಸಿ. ದುರುಪಯೋಗಕ್ಕೆ ಬಳಸಲಾಗುತ್ತಿರುವ ಮೊಬೈಲ್‌ 

      6. ಈ ಕೆಳಗಿನವುಗಳಲ್ಲಿ ಎರಡರ ಅರ್ಥಸ್ವಾರಸ್ಯವನ್ನು ವಿವರಿಸಿ: 10 
      ಎ. ಹಾಸಿಗೆ ಇದ್ದಷ್ಟು ಕಾಲುಚಾಚು 
      ಬಿ. ಹನಿಹನಿ ಕೂಡಿದರೆ ಹಳ್ಳ 
      ಸಿ. ಲಂಚ ಕೊಟ್ಟು ಮಂಚ ಏರು 
      ಡಿ. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು 

      7. ಈ ಕೆಳಗಿನ ನುಡಿಗಟ್ಟುಗಳಲ್ಲಿ ಎರಡರ ಅರ್ಥವನ್ನು ವಿವರಿಸಿ, ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಪ್ರಯೋಗಿಸಿ: 5 
      ಎ. ಮಣ್ಣುಮುಕ್ಕು 
      ಬಿ. ಕಬ್ಬಿಣದ ಕಡಲೆ 
      ಸಿ. ಗಾಳಿಗೋಪುರ 
      ಡಿ. ತೂರಿಬಿಡು 
      ಇ. ನೀರಿನ ಮೇಲಣ ಗುಳ್ಳೆ 

      8. ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ: 5 
      ಎ. ಚಿರಂತನ ದಾಹ- ಯಾರು ಬರೆದ ಕಾವ್ಯ? 
      ಬಿ. ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಿದವರ ಹೆಸರೇನು? 
      ಸಿ. ಪುತಿನ- ಎಂಬ ಕಾವ್ಯನಾಮದ, ಕವಿಯ ಪೂರ್ಣ ಹೆಸರೇನು? 
      ಡಿ. ಬನವಾಸಿಯಲ್ಲಿ ಕೋಗಿಲೆಯಾಗಿ ಹುಟ್ಟಲು ಬಯಸಿದ ಪ್ರಾಚೀನ ಕವಿ ಯಾರು? 
      ಇ. ಕನ್ನಡದ ವರ್ಗೀಯ ವ್ಯಂಜನಗಳ ಸಂಖ್ಯೆ ಎಷ್ಟು? 

      ಭಾಗ - ಸಿ 

      9. ಈ ಕೆಳಗಿನವುಗಳಲ್ಲಿ ಐದಕ್ಕೆ ತತ್ಸಮ ರೂಪಗಳನ್ನು ಕೊಡಿ: 5 
      ಎ. ದನಿ 
      ಬಿ. ಬಿಜ್ಞೆ 
      ಸಿ. ಸಂಜೆ 
      ಡಿ. ದೀವಿಗೆ 
      ಇ. ರತುನ 
      ಎಫ್. ರಿಸಿ 
      ಜಿ. ಸೊನ್ನೆ 
      ಎಚ್‌. ಕಬ್ಬ 
      ಐ. ದಾಡೆ 
      ಜೆ. ಮಿಳು¤ 

      10. ಈ ಕೆಳಗಿನವುಗಳಲ್ಲಿ ಐದಕ್ಕೆ ತದ್ಭವ ರೂಪಗಳನ್ನು ಕೊಡಿ: 5 
      ಎ. ಕೂಷ್ಮಾಂಡ 
      ಬಿ. ಲಕ್ಷಿ¾à 
      ಸಿ. ಸ್ಥಾನ 
      ಡಿ. ಭಕ್ತಿ 
      ಇ. ಮೃಗ 
      ಎಫ್. ಕಾರ್ಯ 
      ಜಿ. ಅಡವಿ 
      ಎಚ್‌. ವಿಷಯ 
      ಐ. ಯಾತ್ರೆ 
      ಜೆ. ತ್ಯಾಗ 

      11. ಈ ಕೆಳಗಿನವುಗಳಲ್ಲಿ ಐದಕ್ಕೆ ವಿರುದ್ಧಾರ್ಥಕ ಶಬ್ದ ತಿಳಿಸಿ: 5 
      ಎ. ಮರ್ಯಾದೆ 
      ಬಿ. ಆದಿ 
      ಸಿ. ಅಧರ್ಮ 
      ಡಿ. ಸದ್ಗುಣ 
      ಇ. ಸ್ವಕೀಯ 
      ಎಫ್. ಆಸ್ತಿಕ 
      ಜಿ. ಕನಿಷ್ಠ 
      ಎಚ್‌. ತಿರಸ್ಕರಿಸು 
      ಐ. ಹಿಂಗಾರು 
      ಜೆ. ಸಂದೇಹ 

      12. ಈ ಕೆಳಗಿನ ವಾಕ್ಯಗಳಲ್ಲಿ ಕಂಡುಬರುವ ಕಾಗುಣಿತಾಕ್ಷರಗಳ ತಪ್ಪು$ಗಳನ್ನು ತಿದ್ದಿ ಬರೆಯಿರಿ: 5 
      ಎ. ಆಕಾಸದಲ್ಲಿ ನಕ್ಷತ್ರಗಳು ಮಿನುಗುತ್ತವೆ. 
      ಬಿ. ಇದು ಅಪರುಪದ ಶೀಲಾಸ್ಮಾರಕ 
      ಸಿ. ಬರಪರಿಹರಹಣಕ್ಕಾಗಿ ಬರೆದ ಅರ್ಜಿಧಾರನ ಪತ್ರವಿದು. 
      ಡಿ. ಇನ್ನಷ್ಟು ಸಂಶೋಧನೆಯಿಂದ ಬೂವೈಗ್ನಾನಿಕ ಮಹಾತಗಳು ಹೊರಬೀಳಬಹುದು. 
      ಇ. ರೈತರು ಬೆಳೆಯ ಲಾಭವನ್ನು ಸಾಮನ್ಯವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. 

      ಇಷ್ಟೊಂದು ಸರಳವಾಗಿದ್ದ ಪತ್ರಿಕೆಯನ್ನು ಬಿಡಿಸಿ ಕೇವಲ ಶೇಕಡಾ 30ರಿಂದ 35ರಷ್ಟು ಅಂಕಗಳನ್ನು ಗಳಿಸಿಕೊಳ್ಳಲು ಬಹುತೇಕ ಇಂಗ್ಲಿಷ್‌ ಮೀಡಿಯಂನಲ್ಲಿ ಕಲಿತ ಮೇಧಾವಿಗಳು ತಿಣುಕಾಡಿ¨ªಾರೆ. ಸಂಕ್ಷೇಪಿಕರಣಕ್ಕೆ ವಿಧಿಸಿರುವ ಪದಗಳ ಮಿತಿ ಮತ್ತು ನಿರ್ಬಂಧವನ್ನು ಅರ್ಥಮಾಡಿಕೊಳ್ಳುವಲ್ಲಿ ಬಹುಜನರು ಸೋತಿ¨ªಾರೆ. ಸಂಕ್ಷೇಪಿಕರಣವನ್ನು ಬರೆಯಲು ನೀಡಲಾಗಿದ್ದ ಪ್ರತ್ಯೇಕ ಹಾಳೆಯನ್ನು ರಫ್ ವರ್ಕ್‌ ಶೀಟ್‌ ಅಂತ ಬಳಸಿದವರು ಕೆಲವರಿದ್ದರೆ ಮತ್ತೆ ಕೆಲವರಿಗೆ ಅದರಲ್ಲಿ ಏನು ಬರೆಯಬೇಕು ಎನ್ನುವುದೇ ತಿಳಿಯದೇ ಖಾಲಿ ಕೊಟ್ಟು ಬಂದವರೂ ಇ¨ªಾರೆ! ನಿಗದಿತ ಗದ್ಯಭಾಗವನ್ನು ಓದಿ, ಅರ್ಥೈಸಿಕೊಂಡು ಉತ್ತರಿಸಲು (ಕಾಂಪ್ರಹೆನÒನ್‌) ಇರುವ ಕಿರು ಪ್ರಬಂಧದಲ್ಲಿನ ವಿಷಯವನ್ನು ವಿಸ್ತರಿಸಿ 25 ಅಂಕಗಳಿಗೆ ಬರೆಯುವುದು ಹೇಗೆಂದು ತಿಳಿದಿಲ್ಲ. ಒಂದು ಪ್ರಶ್ನೆಗೆ ಒಂದು ಸಾಲು ಉತ್ತರಿಸಿದರೆ ಸಾಕಾಗುತ್ತದೆ ಅನ್ನಿಸಿ ತಿರಸ್ಕಾರದಿಂದ ಕಂಡವರು ಕೆಲವರಿದ್ದರೆ ಎಷ್ಟೇ ಬರೆದರೂ ಅಂಕ ಬರುವುದು ಅನುಮಾನ ಅಂದುಕೊಳ್ಳುತ್ತಲೇ ವಿಶ್ಲೇಷಣೆಗೆ ಕೈಹಾಕಿ¨ªಾರೆ. ವ್ಯಾಕರಣಾಂಶಗಳು ಈ ಬಾರಿ ಕಾಣೆಯಾಗಿದ್ದು ವಿಶೇಷ. ಪತ್ರಲೇಖನಕ್ಕೆ ಸಿದ್ಧಮಾದರಿ ಬಳಸಿದರೂ ವಿಷಯ ಮಂಡನೆ ಮತ್ತು ವಿವರಣೆಗೆ ಅಂಕಗಳು ದೊರೆಯುತ್ತವೆ. ಅಂದಹಾಗೆ ಇಲ್ಲಿ ಕೊಟ್ಟಿರುವ ಪ್ರಶ್ನೆ ಪತ್ರಿಕೆಯನ್ನು ಈಗ ನೀವೂ ಬಿಡಿಸಲು ಪ್ರಯತ್ನಿಸಬಹುದಲ್ಲವೇ? ಸ್ಕೋರ್‌ ಎಷ್ಟು? 

      ಮನೋರಮಾ ಯಿಯರ್‌ ಬುಕ್‌- 2013 
      ಇದೀಗ ಮಾರುಕಟ್ಟೆಯಲ್ಲಿರುವ ಮನೋರಮಾ ವಾರ್ಷಿಕ ಕೋಶ- 2013ರಲ್ಲಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರು ಬರೆದ ರಿಯೋ ಸಮ್ಮೇಳನ ಕುರಿತ ವಿಶೇಷ ಲೇಖನ, ಪೊ›. ಜಯಂತ್‌ ನಾಳೀìಕರ್‌ ಬರೆದ ಗಣಿತ- ವಿಜ್ಞಾನಗಳ ರಾಣಿ ಕುರಿತ ಲೇಖನ, ಡಾ. ಸ್ಯಾಮ್ಯುಯೆಲ್‌ ಪಾಲ್‌ ಅವರ ಉತ್ಕೃಷ್ಟತೆ ಗಳಿಸಿಕೊಳ್ಳುವುದು ಕುರಿತ ಲೇಖನ, ಇಂಗ್ಲಿಷ್‌ ಕಲಿಕೆಗೆ ಪೂರಕವಾಗಿರುವ ಅಗ್ರಲೇಖನಗಳ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ಹಲವು ವಿಶಿಷ್ಟ ವಿಷಯಗಳ ಕುರಿತು ವಿಜ್ಞಾನಿಗಳು, ಮ್ಯಾನೇಜ್‌ಮೆಂಟ್‌ ಗುರುಗಳು, ಕೆರೀರ್‌ ಎಕ್ಸ್‌ಪರ್ಟ್‌ಗಳು, ಕೃಷಿ-ಆರ್ಥಿಕ ಪರಿಣತರು, ಕ್ರೀಡಾ ವಿಶ್ಲೇಷಕರು ಮತ್ತು ಪರಿಸರ ತಜ್ಞರು ಬರೆದಿರುವ 25 ಲೇಖನಗಳು, ಟಿಪ್ಪಣಿಗಳು, ಅಡಿಟಿಪ್ಪಣಿಗಳು ಮತ್ತು ಅಂಕಿ-ಅಂಶಗಳಿವೆ. ಭಾರತೀಯ ಸಿನೆಮಾದ 100 ವರ್ಷಗಳ ಕಾಲಯಾನ ಮತ್ತು ವಿಶ್ವವಿಖ್ಯಾತ 50 ಪೇಂಟಿಂಗ್‌ಗಳ ಪರಿಚಯವಿದೆ. 60 ವರ್ಷಗಳನ್ನು ಪೂರೈಸಿರುವ ಭಾರತೀಯ ಸಂಸತ್ತಿನ ಪರಿಚಯ, 2012ರ ಲಂಡನ್‌ ಒಲಿಂಪಿಕ್ಸ್‌ ವಿಶೇಷ ವರದಿ, ಭಾರತದಲ್ಲಿ ಭ್ರಷ್ಟಾಚಾರ, ದೇವಕಣ ಹಿಗ್ಸ್‌ ಬೋಸಾನ್‌, ಪರಿಸರದ ಸವಾಲುಗಳು, ಇಂಜಿನಿಯರಿಂಗ್‌ ಶಿಕ್ಷಣದ ಪುನಾರಚನೆ, ಅಂತಜಾìಲ ಭದ್ರತಾ ವ್ಯವಸ್ಥೆ ಹೀಗೆ ಹತ್ತು ಹಲವು ಹೊಸ ವಿಷಯಗಳಿಂದ ತುಂಬಿ ತುಳುಕುತ್ತಿದೆ. 

      ಪ್ರಚಲಿತ ಘಟನಾವಳಿಗಳಲ್ಲಿ 2012ರಲ್ಲಿ ನಡೆದ ಪ್ರಮುಖ ಘಟನೆಗಳು, ಶಿಫಾರಸ್ಸುಗಳು, ಚುನಾವಣಾ ಸುಧಾರಣೆಗಳು, ಹಗರಣಗಳು, ಭಾರತ ಮತ್ತು ವಿಶ್ವದ ಸ್ಮರಣೀಯ ವಿದ್ಯಮಾನಗಳ ಕಿರುಚಿತ್ರಣವಿದೆ. ಐತಿಹಾಸಿಕ ಸ್ಥಳಗಳು, ಮಹಾವ್ಯಕ್ತಿಗಳ ಕಿರುಪರಿಚಯ, ಸುಪ್ರಸಿದ್ಧ ಪುಸ್ತಕಗಳು, ಪದಕೋಶದ ವಿವರಣಾತ್ಮಕ ಟಿಪ್ಪಣಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಶರವೇಗದ ಬೆಳವಣಿಗೆ, ಉದ್ಯೋಗ ಕ್ಷೇತ್ರದಲ್ಲಿನ ಅವಕಾಶಗಳು ಮೊದಲಾದ ವಿಷಯಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಹಿಡಿದಿಡಲಾಗಿದೆ. ಇದರೊಂದಿಗೆ ಉಚಿತ ಕೊಡುಗೆಯಾಗಿ ನೀಡಲಾಗಿರುವ ಬ್ರಿಟಾನಿಕ ವಿಶ್ವಕೋಶ 2013 ಸಿಡಿಯಲ್ಲಿ 25,000 ಲೇಖನಗಳು, 2,75,000 ಪದಗಳ ಮೆರಿಯಮ್‌ ವೆಬ್‌ಸ್ಟರ್‌ ಪದಕೋಶ, 2500 ವರ್ಣಚಿತ್ರಗಳು, 196 ಭೂಪಟಗಳು, 1,66,000 ಅಂತರ್ಜಾಲ ತಾಣಗಳ ಸಂಪರ್ಕ ಕೊಂಡಿಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ. 

      ಸ್ಥಳೀಯ ಪತ್ರಿಕಾ ವ್ಯಾಪಾರಿಗಳಲ್ಲಿ ಅಥವಾ ಪುಸ್ತಕಾಲಯಗಳಲ್ಲಿ ಸಿಗುತ್ತಿರುವ ಮನೋರಮಾ ವಾರ್ಷಿಕ ಕೋಶ- 2013ಅನ್ನು ಫ್ಲಿಪ್‌ಕಾರ್ಟ್‌ ಅಂತರ್ಜಾಲದ ಮಳಿಗೆಯಿಂದಲೂ ಖರೀದಿಸಬಹುದು. ಮನೆಬಾಗಿಲಿಗೇ ತಲುಪಿಸುವುದರ ಜೊತೆ 30% ಡಿಸ್ಕೌಂಟ್‌ ಸೌಲಭ್ಯವೂ ಇದೆ.

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...