
Thursday, 6 August 2009
Monday, 27 July 2009
Wednesday, 8 July 2009
Combined PG Course in Physics is Suspended by Mysore University - Does anybody have the will power to start it again?
http://thatskannada.oneindia.in/response/2009/0707-mysuru-university-combined-pg-course.html
ಐದು ವರ್ಷಗಳ ಹಿಂದೆ ಮೂಲ ವಿಜ್ಞಾನದ ವಿಷಯಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋತ್ಸಾಹ ಹಾಗೂ ಶಿಷ್ಯವೇತನದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾದ ಭೌತವಿಜ್ಞಾನದ ಕಂಬೈಂಡ್ ಪಿ.ಜಿ. ಕೋರ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಇದೀಗ ಹೊರಬರುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿರುವ ಖ್ಯಾತ ವಿಶ್ವವಿದ್ಯಾಲಯ ಗಳಲ್ಲಿ, ಮ್ಯಾಕ್ಸ್‌ಪ್ಲಾಂಕ್ ಸಂಶೋಧನಾಲಯದಲ್ಲಿ, ಸಂಶೋಧನಾವಕಾಶ ಹಾಗೂ ಉನ್ನತ ಸಂಶೋಧನಾಲಯಗಳಲ್ಲಿ ಉದ್ಯೋಗಾವಕಾಶವನ್ನು ಆ ಮೊದಲ ಬ್ಯಾಚಿನ ಎಲ್ಲ ವಿದ್ಯಾರ್ಥಿಗಳಿಗೂ ಸಿಕ್ಕಿದೆ. ಇದು ಆ ಕೋರ್ಸಿನ ಯಶಸ್ಸಿಗೆ ಸಾಕ್ಷಿ.
ಪ್ರೊ. ಶಶಿಧರ್ ಕುಲಪತಿಗಳಾಗಿದ್ದಾಗ ಆರಂಭಿಸಲಾಗಿದ್ದ ಈ ಕೋರ್ಸ್ ಅವರು ನಿವೃತ್ತರಾಗುತ್ತಿದ್ದಂತೆಯೇ ನಿರ್ಲಕ್ಷ್ಯಗೊಳಗಾಗಿದ್ದು ಇದೀಗ ಶಾಶ್ವತವಾಗಿ ಕಣ್ಮುಚ್ಚಿದೆ. ಈ ವರ್ಷದಿಂದ ಆ ಹೆಮ್ಮೆಯ ಕೋರ್ಸ್ ಇಲ್ಲ. ಆಸಕ್ತ ವಿದ್ಯಾರ್ಥಿಗಳಿಗೆ ಬಾಗಿಲು ಶಾಶ್ವತವಾಗಿ ಮುಚ್ಚಿದೆ. ಈ ಹೆಮ್ಮೆಯ ಕಾರ್ಯ ಎಸಗಿದ ನಮ್ಮ ಉನ್ನತ ಶಿಕ್ಷಣ ಸಚಿವರು, ವಿಶ್ವವಿದ್ಯಾಲಯದ ಕುಲಪತಿಗಳು, ಕೋರ್ಸ್ ಕೋ-ಆರ್ಡಿನೇಟರ್‌ಗಳು ಮತ್ತು ಸಂಬಂಧಪಟ್ಟ ಎಲ್ಲರಿಗೂ ಜೈಹೋ!ಐದು ವರ್ಷಗಳ ಭೌತವಿಜ್ಞಾನದ ಇಂಟಿಗ್ರೇಟೆಡ್ ಎಂ.ಎಸ್‌ಸಿ. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ನಿವೃತ್ತ ಕುಲಪತಿಗಳು, ವಿಜ್ಞಾನದ ಪರಿಣತರು, ವಿಜ್ಞಾನಿಗಳು, ವಿಶೇಷವಾಗಿ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್‌ನ ಪ್ರೊ. ಜಿ. ರಾಜಶೇಖರನ್, ಪ್ರೊ. ಎಚ್.ಎಸ್. ಮಣಿ, ಪ್ರೊ. ಎಂ.ವಿ.ಎನ್. ಮೂರ್ತಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಎಸ್.ವಿ. ಸುಬ್ರಹ್ಮಣ್ಯಂ, ಪ್ರೊ. ಎಚ್.ಎಲ್. ಭಟ್, ಪ್ರೊ. ಹರಿದಾಸ್, ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಪ್ರೊ. ಆರ್. ಶ್ರೀನಿವಾಸನ್ ಈ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು ಎರಡನೇ ವರ್ಷದಿಂದಲೇ ಸಂಶೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ತರಬೇತಿ ಪಡೆದವರಿಗೆ ಮುಂದೆ ಡಿ.ಆರ್.ಡಿ.ಒ.ದಂತಹ ಉನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಉದ್ಯೋಗ ಅವಕಾಶ ಗ್ಯಾರಂಟಿ. ಕೇವಲ 18 ಮಂದಿಗೆ ಮಾತ್ರ ಅವಕಾಶ ಇರುವ ಈ ಕೋರ್ಸ್ ಒಟ್ಟು 10 ಸೆಮಿಸ್ಟರ್‌ಗಳದ್ದಾಗಿದ್ದು ಪ್ರತಿ ಸೆಮಿಸ್ಟರ್‌ನಲ್ಲಿ ಥಿಯರಿ, ಪ್ರಾಕ್ಟಿಕಲ್ ಮತ್ತು ಇಂಟರ್‌ನಲ್ ಅಸೆಸ್‌ಮೆಂಟ್ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
(ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ: www.uni-mysore.ac.in/unity/course/)
ಈ ಕೋರ್ಸ್‌ಗೆ ಸಂಬಂಧಿಸಿದಂತೆ ನಮ್ಮ ಶಾಸಕರು, ಸಂಸದರು ಮತ್ತು ಕೆಲವು ಸಚಿವರನ್ನು ಸಂಪರ್ಕಿಸಿದಾಗ ತೀರಾ ನಿರಾಶಾಜನಕ ಉತ್ತರ ದೊರೆತಿದೆ. ಇಚ್ಛಾಶಕ್ತಿಯೇ ಇಲ್ಲದ ಇಂತಹ ಜನನಾಯಕರಿಂದ ವಿಜ್ಞಾನಕ್ಕೆ ಸಿಕ್ಕುವುದು ಇಷ್ಟೇ. ಅವೈಜ್ಞಾನಿಕ ವಿಷಯಗಳನ್ನು ಗಂಟಾಘೋಷವಾಗಿ ಒದರುತ್ತಿರುವ ಆರ್ಟ್‌ಆಫ್ ಲಿವಿಂಗ್‌ನಂತಹ ಸಂಸ್ಥೆಗಳನ್ನು ಉನ್ನತ ಶಿಕ್ಷಣಕ್ಕೆ ಅಡ್ವೈಸರ್ ಆಗಿ ನೇಮಿಸಿದರೆ ಆಗುವುದು ಇಂಥದ್ದೇ.ಈಗಲೂ ಕಾಲ ಮಿಂಚಿಲ್ಲ ಮೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯವರು ಕೂಡಲೇ ಕಾರ್ಯಪ್ರವೃತ್ತರಾಗಿ ಈ ವಿಶೇಷ ಕೋರ್ಸ್ ಬಗ್ಗೆ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಮತ್ತು ನಿರ್ಲಕ್ಷ್ಯ ಧೋರಣೆ ತಳೆದಿರುವ ಕೋರ್ಸ್ ಕೊ-ಆರ್ಡಿನೇಟರ್ ಮತ್ತು ವಿಭಾಗ ಮುಖ್ಯಸ್ಥರನ್ನು ಕೂಡಲೇ ಬದಲಿಸಿ, ಹೊಸಬರನ್ನು ನೇಮಿಸಿ, ಹೊಸ ಹುರುಪಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು.ಈಗಾಗಲೇ ಮುಚ್ಚಿರುವ ಫೈಲ್ ತೆಗೆಸಿ, ಸಂಶೋಧನೆಗೆ ಅವಕಾಶ ಕಲ್ಪಿಸುವ ಅಪರೂಪದ ಈ ಕೋರ್ಸ್‌ನ್ನು ಮತ್ತೆ ಆರಂಭಿಸಲು ನಮ್ಮ ಶಿಕ್ಷಣ ಸಚಿವರಿಗೆ ಸಾಧ್ಯವೇ? ಅಂತಹ ಇಚ್ಛಾಶಕ್ತಿ ನಮ್ಮ ಮುಖ್ಯಮಂತ್ರಿಗಳಿಗಿದೆಯೇ? ವಿಜ್ಞಾನದ ಹೆಸರಿನಲ್ಲಿ ತೌಡುಕುಟ್ಟುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ವಿಜ್ಞಾನ ಪರಿಷತ್ತು, ವಿವಿಧ ವಿಜ್ಞಾನ ಸಂಘ-ಸಂಸ್ಥೆಗಳು ಏನು ಮಾಡುತ್ತಿವೆ? ನಮ್ಮ ಪತ್ರಿಕಾ ಸಂಪಾದಕರುಗಳು ಏಕೆ ಸುಮ್ಮನಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಯಾವಾಗ? ನೀವೇ ಹೇಳಿ.ವಂದನೆಗಳೊಂದಿಗೆ ತಮ್ಮ ವಿಶ್ವಾಸಿ,
ಬೇದ್ರೆ ಎನ್. ಮಂಜುನಾಥ
Tags: mysore university, letter to the editor, combined pg course, aravind limbavali, ಮೈಸೂರು ವಿಶ್ವವಿದ್ಯಾಲಯ, ಮೂಲವಿಜ್ಞಾನ, ಕಂಬೈನ್ಡ್ ಪಿಜಿ ಕೋರ್ಸ್, ಅರವಿಂದ ಲಿಂಬಾವಳಿ, ಭೌತವಿಜ್ಞಾನ, ಸಂಪಾದಕರಿಗೆ ಪತ್ರ.
ಜುಲೈ 7, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
ಪೂರಕ ಓದಿಗೆ
ಅವಕಾಶದ ಬಾಗಿಲು ಮುಚ್ಚುತ್ತಿರುವ ವಿಶ್ವವಿದ್ಯಾಲಯ
ಇಂದ: ಪವನಜ
ದಿನಾಂಕ: 07 Jul 2009 10:37 pm
ಇದು ನಿಜಕ್ಕೂ ಬೇಸರದ ಸಂಗತಿ. ವಿಜ್ಞಾನದ ಅಧ್ಯನಕ್ಕೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಘಂಟಾಘೋಷವಾಗಿ ಹೇಳುತ್ತಿರುವ ಸಿಎನ್‌ರಾವ್ ಅವರಿಗೆ ಈ ವಿಷಯ ಗೊತ್ತಿಲ್ಲವೇ? ಅವರ ಕಿವಿಗೆ ಈ ವಿಷಯ ಬೀಳುವಂತೆ ಮಾಡಬೇಕು. ಕರ್ನಾಟಕ ಜ್ಞಾನ ಆಯೋಗ, ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಇವರಿಗೂ ಈ ವಿಷು ತಿಳಿಸಬೇಕು. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯವರಿಗೆ ಎಲ್ಲರೂ ಪತ್ರ ಬರೆಯಬೇಕು. ಇನ್ನೂ ಏನಾದರೂ ಮಾಡಬೇಕು ಎಂದು ಯಾರಿಗಾದರೂ ಆಲೋಚನೆ ಬಂದರೆ ತಿಳಿಸಿ. ಆನ್‌ಲೈನ್ ಪಿಟಿಶನ್ ಏನೂ ಪ್ರಯೋಜನ ಆಗಲಾರದು.
ಇಂದ: ವಸಂತ್
ದಿನಾಂಕ: 07 Jul 2009 8:00 pm
ವಿಜ್ಞಾನ ವಿಷಯಗಳಲ್ಲಿ ಇಂತಹ ಅವಕಾಶಗಳೇ ಕಡಿಮೆ ಇರುವಾಗ, ಇರುವ ಒಂದೆರಡು ಅವಕಾಶಗಳನ್ನು ಮುಚ್ಚಿದರೆ, ವಿದ್ಯಾರ್ಥಿಗಳಿಗೆ ಸಾಮನ್ಯ ವಿಜ್ಞಾನದ ಬಗ್ಗೆ ಅಭಿಮಾನ ಮೂಡುವುದಾದರೂ ಹೇಗೆ? ಅನಾವಶ್ಯಕ ವಿಷಯಗಳಿಗೆ ಉತ್ತೇಜನ ನೀಡುವ ಬದಲು ಇಂತಹ ಉಪಯುಕ್ತ ವಿಷಯಗಳನ್ನು ಉಳಿಸಿಕೊಳ್ಳಲು ಮೈಸೂರು ವಿಶ್ವವಿದ್ಯಾಲಯಕ್ಕೆ ಏನು ತೊಂದರೆ?
Sunday, 31 May 2009
Saturday, 30 May 2009
India 2009 - A Reference Annual - Free copy on the web
Friday, 15 May 2009
Career Opportunities after SSLC and PUC
http://issuu.com/BedreManjunath/docs/career_opportunities_after_sslc
Thursday, 7 May 2009
Career Opportunities after SSLC and PUC - Article in Sudha Weekly 14-05-2009









ಇದೀಗ ತಾನೇ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಫಲಿತಾಂಶಗಳು ಹೊರಬಿದ್ದಿವೆ. ಸಹಸ್ರಾರು ವಿದ್ಯಾರ್ಥಿಗಳಿಗೆ - ಪೋಷಕರಿಗೆ ಮುಂದೇನು ಎಂಬುದೇ ಚಿಂತೆಯಾಗಿದೆ. ಪಿ.ಯು.ಸಿ., ಪದವಿ, ಡಿಪ್ಲೊಮ, ಜೆ.ಒ.ಸಿ., ಐ.ಟಿ.ಐ., ಸ್ವಯಂ ಉದ್ಯೋಗ ತರಬೇತಿ ಹೀಗೆ ನಾನಾ ಅವಕಾಶಗಳನ್ನು ಅರಸುತ್ತಾ ಅವರೆಲ್ಲಾ ರಾಜ್ಯದಾದ್ಯಂತ ಇರುವ, ವಿವಿಧ ಶಾಲಾಕಾಲೇಜುಗಳ ಬಗ್ಗೆ, ವೈವಿಧ್ಯಮಯ ಕೋಸರ್್ಗಳ ಬಗ್ಗೆ ಮಾಹಿತಿಗಾಗಿ ಪರದಾಡುವುದು ಸಾಮಾನ್ಯ ಸಂಗತಿ. ಇವರಿಗಾಗಿಯೇ ಸಕರ್ಾರದ ಶಿಕ್ಷಣ ಇಲಾಖೆ, ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಗಳು ವಿವರವಾದ ಮಾಹಿತಿಯನ್ನು ತಮ್ಮ ಅಂತರಜಾಲ ತಾಣಗಳಲ್ಲಿ ಒದಗಿಸಿವೆ. ಶಿಕ್ಷಣ ಮತ್ತು ಉದ್ಯೋಗ ಎಂಬ ಎರಡು ದೋಣಿಗಳಲ್ಲಿ ಒಟ್ಟಿಗೇ ಪ್ರಯಾಣಿಸಲು ಬಯಸುವವರೇ ಹೆಚ್ಚು. ಹಿಂದೆ ಮೆಟ್ರಿಕ್ ಪಾಸಾದರೆ ಸಾಕು, ಯಾವುದೋ ಒಂದು ಕೆಲಸ ಸಿಗುತ್ತಿತ್ತು. ಇಂದಿನ ದಿನಗಳಲ್ಲಿ ಎಷ್ಟೇ ಉನ್ನತ ಪದವಿಗಳಿದ್ದರೂ, ಕೌಶಲಗಳಿದ್ದರೂ ನೌಕರಿ ಸಿಗುವುದು ದುಸ್ತರವಾಗಿದೆ. ಹೀಗಾಗಿ ಉದ್ಯೋಗಕ್ಕೆ ಅರ್ಹತೆ ನೀಡುವ ಪದವಿಯನ್ನು ಆಯ್ದುಕೊಳ್ಳುವುದು, ಕಲಿಯುವಾಗಲೇ ನೌಕರಿಗೆ ಸೇರಲು 'ಕ್ಯಾಂಪಸ್ ಸೆಲೆಕ್ಷನ್' ಎಂಬ ಕಸರತ್ತು ಮಾಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ದುಕೊಳ್ಳುವುದು, ಯಶಸ್ಸುಗಳಿಸುವುದು ಸರ್ವೇ ಸಾಮಾನ್ಯವಾಗಿದೆ.
ಹತ್ತನೇ ತರಗತಿಯವರೆಗೆ ನಿಶ್ಚಿಂತೆಯಿಂದ ಇದ್ದವರೆಲ್ಲಾ ಫಲಿತಾಂಶ ಬರುತ್ತಲೇ ಗಡಬಡಿಸಿ ಎದ್ದು 'ಯಾವ ಕೋಸರ್ಿಗೆ ಸೇರಬೇಕು?' ಎಂದು ಕಂಡ ಕಂಡವರ ಸಲಹೆ ಕೇಳಲು ಆರಂಭಿಸುವವರು ಕೆಲವರಾದರೆ 'ಇಂಥದ್ದೇ ಕೋಸರ್್ ಸೇರಿ, ಇಂತಹ ಪದವಿಗಾಗಿಯೇ ಸಿದ್ಧತೆ ನಡೆಸುತ್ತೇನೆ' ಎಂಬ ಆತ್ಮವಿಶ್ವಾಸ ಉಳ್ಳವರು ಇರುತ್ತಾರೆ. ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ತನ್ನ ಅಂತರಜಾಲ ತಾಣದಲ್ಲಿ ಪದವಿ ಪೂರ್ವ ಶಿಕ್ಷಣದ ಅವಕಾಶಗಳನ್ನು ಪ್ರಕಟಿಸಿದೆ. ಕಲಾ (ಆಟ್ಸರ್್) ವಿಷಯಗಳಲ್ಲಿ 42, ವಾಣಿಜ್ಯ ವಿಷಯಗಳಲ್ಲಿ 8 ಮತ್ತು ವಿಜ್ಞಾನ ವಿಷಯಗಳಲ್ಲಿ 6 ವಿವಿಧ ಕಾಂಬಿನೇಷನ್ಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ದ್ವಿತೀಯ ಪಿ.ಯು.ಸಿ. (10+2) ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ಮತ್ತು ವಿದ್ಯಾಥರ್ಿಗೆ ಇರುವ ಆಸಕ್ತಿ ಇವುಗಳ ಆಧಾರದ ಮೇಲೆ ಮುಂದಿನ ಕೋಸರ್್ಗಳ ಆಯ್ಕೆ ಮಾಡುವುದು ಸಾಮಾನ್ಯ. ಮೊದಲಿನಂತೆ ಈಗ ಕೇವಲ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಎಂಬ ಸೀಮಿತ ಕೋಸರ್್ಗಳಿಗೇ ಮುಗಿಬೀಳುವ ಅಗತ್ಯವಿಲ್ಲ. ಹೊಸದಾಗಿ ಸುಮಾರು 300 ವಿವಿಧ ವಿಷಯಗಳ, ವಿವಿಧ ಅವಧಿಗಳ ಕೋಸರ್್ಗಳು ನಮ್ಮಲ್ಲಿ ಲಭ್ಯ. ದೂರಶಿಕ್ಷಣದ ಮೂಲಕವೂ ಕಲಿಕೆ ನಡೆಯುತ್ತಿದ್ದು ರಾಜ್ಯದ, ಹೊರ ರಾಜ್ಯದ ವಿಶ್ವವಿದ್ಯಾಲಯಗಳ ಜೊತೆ ವಿದೇಶೀ ವಿಶ್ವವಿದ್ಯಾಲಯಗಳಿಂದಲೂ ತರಬೇತಿ ದೊರೆಯುತ್ತಿದೆ. ಇಂದು ಶಿಕ್ಷಣ ಆಯ್ಕೆಯ ವಿಷಯವಾಗಿರುವುದರಿಂದ ಓದುವ ಕಾಲೇಜು, ಅಲ್ಲಿ ಸಿಗುವ ಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳೂ, ಪೋಷಕರೂ ತೀವ್ರ ಕಾಳಜಿ ವಹಿಸುತ್ತಿದ್ದಾರೆ. ಪಿ.ಯು.ಸಿ. ನಂತರ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ದೊರೆಯುತ್ತಿದ್ದು ಅದರಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗಳ ಮೂಲಕ ಪ್ರವೇಶ ಗಿಟ್ಟಿಸಿಕೊಳ್ಳುವ ನೂರಾರು ಕೋರ್ಸ್ ಗಳಿವೆ. ಇಂಜಿನಿಯರಿಂಗ್ ವಿಷಯಗಳು ಪಾತಾಳದಿಂದ ಆಕಾಶದವರೆಗೆ ವ್ಯಾಪಿಸಿದ್ದು ಮೆರೀನ್ ಜಿಯಾಲಜಿಯಿಂದ ಆಸ್ಟ್ರೋಫಿಸಿಕ್ಸ್ ವರೆಗೆ ನೂರಾರು ಕೋರ್ಸ್ ಗಳಿವೆ. ಪ್ರತಿಷ್ಠಿತ ಕಾಲೇಜುಗಳಿಗೆ ಸಿ.ಇ.ಟಿ., ಕಾಮೆಡ್-ಕೆ, ಐಐಟಿ, ಜೆಇಇ, ಎಐಇಇಇ, ಬಿಟ್ಸ್ಯಾಟ್, ನಾಟಾ, ಜೆಸ್ಟ್, ಸಿಪೆಟ್, ಸೀಡ್, ಸಿಫ್ನೆಟ್ ಮೊದಲಾದ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಈ ಪ್ರವೇಶ ಪರೀಕ್ಷೆಯ ಅರ್ಜಿಯೊಂದಿಗೆ ನೀಡಲಾಗುವ ಕೈಪಿಡಿಯಲ್ಲಿ ಆಯಾ ವಿಷಯಗಳ ಆಯ್ಕೆಯ ಮಾನದಂಡಗಳ ಕುರಿತು ಸುದೀರ್ಘ ವಿವರಗಳಿವೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ ಶಾಸ್ತ್ರ ವಿಷಯಗಳೂ ಕೂಡ ಈಗ ತಾಂತ್ರಿಕ ತರಬೇತಿಗೆ ಸೇರಿರುವುದರಿಂದ ಅಲ್ಲಿಯೂ ಪ್ರವೇಶಕ್ಕೆ ನೂಕುನುಗ್ಗಲು.
ದೃಶ್ಯ ಮಾಧ್ಯಮಗಳಲ್ಲಿ ದೊರೆಯುತ್ತಿರುವ ವಿಫುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್, ಫೋಟೋ ಜರ್ನಲಿಸಂ, ವೆಬ್ ಡಿಸೈನಿಂಗ್, ಅನಿಮೇಶನ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗಿದೆ. ಐದು ವರ್ಷಗಳ ಚಿತ್ರಕಲಾ ಡಿಪ್ಲೊಮಾ ಅಥವಾ ಫೈನ್ ಆರ್ಟ್ಸ್ ನಲ್ಲಿ ಪದವಿ ಪಡೆದವರಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಅನಿಮೇಶನ್ ತಂತ್ರಾಂಶಗಳ ಪರಿಚಯ ಇದ್ದರೆ ಜಗತ್ತಿನಲ್ಲಿ ಎಲ್ಲೆಡೆ ಅವರಿಗೆ ಬೇಡಿಕೆ ಇದ್ದದ್ದೇ! ಕನರ್ಾಟಕದಲ್ಲಿನ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಯೋಜಿತ ಕಾಲೇಜುಗಳ ಮೂಲಕ ಕಲಾ ಶಿಕ್ಷಣ ದೊರೆಯುತ್ತಿದ್ದರೂ ಖಾಸಗಿಯಾಗಿಯೂ ಹಲವು ಚಿತ್ರಕಲಾ ಶಾಲೆಗಳು ತರಬೇತಿ ನೀಡುತ್ತಲೇ ಇವೆ. ಹಲವು ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಇತ್ತೀಚೆಗೆ ವಾರಾಂತ್ಯದ ತರಬೇತಿ ತರಗತಿಗಳೂ, ಕ್ರಾಷ್ ಕೋರ್ಸ್ ಗಳು ಏರ್ಪಾಡಾಗುತ್ತಿವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗ, ಕುವೆಂಪು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಲಲಿತಕಲಾ ಕಾಲೇಜುಗಳು, ಕೆನ್ ಸ್ಕೂಲ್ ಆಫ್ ಆಟ್ಸರ್್ನಂತಹ ಖಾಸಗೀ ಸಂಸ್ಥೆಗಳೂ ಹೆಸರುವಾಸಿಯಾಗಿವೆ. ಅತ್ಯಂತ ಬೇಡಿಕೆಯುಳ್ಳ ಎರಡು ಲಲಿತಕಲಾ ವಿದ್ಯಾಲಯಗಳು ಇಲ್ಲಿವೆ.
ಚಿತ್ರಕಲಾ ಪರಿಷತ್ತಿನ ಆಶ್ರಯದಲ್ಲಿ, 1964 ರಲ್ಲಿ ಆರಂಭಗೊಂಡಿದ್ದ ಚಿತ್ರಕಲಾ ವಿದ್ಯಾಲಯ 1983 ರಲ್ಲಿ ಲಲಿತಕಲಾ ಮಹಾವಿದ್ಯಾಲಯವಾಗಿ (ಕಾಲೇಜ್ ಆಫ್ ಫೈನ್ ಆಟ್ಸರ್್) ಉನ್ನತೀಕರಿಸಲ್ಪಟ್ಟು 1990 ರಿಂದ, ಸ್ನಾತಕೋತ್ತರ ಶಿಕ್ಷಣ, ಸ್ನಾತಕೋತ್ತರ ಡಿಪ್ಲೊಮ ತರಗತಿಗಳನ್ನು ನಡೆಸುತ್ತಿದ್ದು 2008 ರಿಂದ ಸಂಶೋಧನಾ ವ್ಯಾಸಂಗಕ್ಕೂ ಅವಕಾಶಮಾಡಿಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದಿರುವ ಈ ಕಾಲೇಜಿಗೆ ನ್ಯಾಕ್ ಸಮಿತಿ ಃ++ ಗ್ರೇಡ್ ನೀಡಿದೆ. ಇಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆಟ್ಸರ್್ ಮತ್ತು ಕಲಾ ಇತಿಹಾಸ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜéುಅಲ್ ಆಟ್ಸರ್್, ಸ್ನಾತಕೋತ್ತರ ಡಿಪ್ಲೊಮ ಕೋಸರ್ುಗಳನ್ನು ನಡೆಸಲಾಗುತ್ತಿದೆ. ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾಥರ್ಿಗಳು ಮುಗಿಬೀಳುತ್ತಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನೋಡಿ:
1906ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್, 'ಮುಂಬೈನ ಜೆ.ಜೆ. ಸ್ಕೂಲ್ ಆಫ್ ಆಟ್ಸರ್್ ಮಾದರಿಯಲ್ಲಿ ಈ ಸಂಸ್ಥೆ ಇರಬೇಕು' ಎಂಬ ಖ್ಯಾತ ರಷ್ಯನ್ ಕಲಾವಿದ ಸ್ವೆಟಸ್ಲಾವ್ ರೋರಿಕ್ ಅವರ ಸಲಹೆಯಂತೆ ಪರಿಷ್ಕರಿಸಲ್ಪಟ್ಟು, 1981 ರಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಮಹಾವಿದ್ಯಾಲಯವಾಗಿ ಮರುನಾಮಕರಣಗೊಂಡಿತು. 2004ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ, ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಕಾವಾದಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ, ಫೋಟೋಗ್ರಫಿ, ಫೋಟೋ-ಜರ್ನಲಿಸಂ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜéುಅಲ್ ಆಟ್ಸರ್್, ಸ್ನಾತಕೋತ್ತರ ಡಿಪ್ಲೊಮ ಕೋಸರ್ುಗಳನ್ನು ನಡೆಸಲಾಗುತ್ತಿದೆ. ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ.
ಉನ್ನತ ವಿದ್ಯಾಭ್ಯಾಸಕ್ಕೆ ಸಕರ್ಾರ ಹಾಗೂ ಖಾಸಗಿ ವಲಯದ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯ ಅನ್ವಯ ಬೃಹತ್ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದ್ದು ಅವುಗಳಲ್ಲಿ ಪ್ರವೇಶ ಪಡೆಯಲು ವಿವಿಧ ರೀತಿಯ ಪ್ರವೇಶ ಪರೀಕ್ಷೆ, ಸಂದರ್ಶನಗಳನ್ನು ಎದುರಿಸಬೇಕಾದ ಅಗತ್ಯವಿದೆ. ಕೆಲವು ಸಂಶೋಧನಾಲಯಗಳಲ್ಲಿ ಆಯ್ಕೆಯಾದ ಅಭ್ಯಥರ್ಿಗಳಿಗೆ ಶಿಷ್ಯ ವೇತನ ಮತ್ತು ನೌಕರಿಯನ್ನು ಕೂಡ ನೀಡಲಾಗುತ್ತದೆ. ದ್ವಿತೀಯ ಪಿ.ಯು.ಸಿ.(10+2) ಅಥವಾ ಪದವಿ ಮುಗಿಸಿದ ಅಭ್ಯರ್ಥಗಳು ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಲೇ ಸೇವೆಸಲ್ಲಿಸಬಹುದು.
ಭಾರತದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಬಹುತೇಕ ಖಾಸಗೀ ಬ್ಯಾಂಕುಗಳು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಕಾಲೇಜಿಗೆ ಪಾವತಿಸಬೇಕಾಗಿರುವ ಶುಲ್ಕ, ಪಠ್ಯ ಪುಸ್ತಕ, ಕಂಪ್ಯೂಟರ್/ಲ್ಯಾಪ್ಟಾಪ್ ವೆಚ್ಚ, ಹಾಸ್ಟೆಲ್ ವೆಚ್ಚ, ಹೆಚ್ಚಿನ ತರಬೇತಿಗೆ ನೀಡುವ ವೆಚ್ಚ ಎಲ್ಲವೂ ಸೇರಿರುತ್ತದೆ. ವಿದೇಶಗಳಲ್ಲಿ ಓದಲು ಬಯಸುವ ವಿದ್ಯಾಥರ್ಿಗಳಿಗೆ ಪ್ರಯಾಣ ವೆಚ್ಚ ಮತ್ತು ಭದ್ರತಾ ಠೇವಣಿಯ ಗ್ಯಾರಂಟಿ ನೀಡುವ ಬ್ಯಾಂಕುಗಳು ಇವೆ. ಇತ್ತೀಚೆಗೆ ವಿದೇಶಿ ಬ್ಯಾಂಕುಗಳು ವಿದ್ಯಾಭ್ಯಾಸಕ್ಕೆ ಸಾಲ ನೀಡುವತ್ತ ಒಲವು ತೋರಿಸುತ್ತಿವೆ. ಕನಿಷ್ಟ 10 ಸಾವಿರದಿಂದ ಗರಿಷ್ಟ 25 ಲಕ್ಷಗಳವರೆಗೆ ಲಭ್ಯವಿರುವ ಈ ಸಾಲ ಸೌಲಭ್ಯವನ್ನು ಬಳಸಿಕೊಳ್ಳಲು ವಿವಿಧ ಬ್ಯಾಂಕುಗಳು ವಿವಿಧ ಶರತ್ತುಗಳನ್ನು ವಿಧಿಸಿವೆ. ಸಾಮಾನ್ಯವಾಗಿ ಕಡಿಮೆ ಮೊತ್ತದ ಸಾಲಕ್ಕೆ ಜಾಮೀನು, ಆಸ್ತಿ, ವಿಮೆ ಭದ್ರತೆ ಕೇಳುವಂತಿಲ್ಲವಾದರೂ ಐದು ಲಕ್ಷ ರೂಪಾಯಿಗಳ ಮೇಲ್ಪಟ್ಟ ಮೊತ್ತದಕ್ಕೆ ಎಲ್ಲ ರೀತಿಯ ಭದ್ರತೆ ಒದಗಿಸಬೇಕಾಗುತ್ತದೆ. ಬಡ್ಡಿ ದರವೂ ಕೂಡ 6% ರಿಂದ 15% ವರೆಗೆ ಇರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಶೈಕ್ಷಣಿಕ ಸಾಲ ಪಡೆಯುವುದು ಜಾಣತನ.
ನೀವು ಇನ್ನೊಬ್ಬರ ಲೆಕ್ಕ ಬರೆಯುವುದಕ್ಕಿಂತ ನಿಮ್ಮ ಲೆಕ್ಕವನ್ನು ನೀವೇ ಬರೆಯುವುದು ಉತ್ತಮ ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹುರಿದುಂಬಿಸುವ ನುಡಿ. ಅವರು ಗ್ರಾಮೀಣ ಯುವಜನರನ್ನು ರಾಷ್ಟ್ರದ ಮುಖ್ಯವಾಹಿನಿಯಲ್ಲಿ ತರಲು ಹಾಕಿಕೊಂಡ ಕನಸಿನ ಯೋಜನೆ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಇವರುಗಳು ಸೇರಿ 1982ರಲ್ಲಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ರುಡ್ಸೆಟ್) ರಾಜ್ಯದ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿದ್ದು ನೂರಾರು ಜನರಿಗೆ ವಿವಿಧ ವೃತ್ತಿಗಳಲ್ಲಿ ಉಚಿತವಾಗಿ ತರಬೇತಿ ಕೊಡುತ್ತಿದೆ. ತರಬೇತಿ ಅವಧಿಯಲ್ಲಿ ಊಟ-ವಸತಿ ಎಲ್ಲವೂ ಇಲ್ಲಿ ಉಚಿತ. ಹೊಲಿಗೆ, ಸಿದ್ಧ ಉಡುಪಗಳ ತಯಾರಿಕೆ, ಬ್ಯೂಟಿ ಪಾರ್ಲರ್, ಕಂಪ್ಯೂಟರ್-ಡಿ.ಟಿ.ಪಿ., ವಿದ್ಯುತ್ ಮೋಟಾರ್ ರೀವೈಂಡಿಂಗ್, ರೇಡಿಯೋ-ಟಿ.ವಿ. ರಿಪೇರಿ, ಮನೆಯಲ್ಲೇ ತಯಾರಿಸಬಹುದಾದ ವಸ್ತುಗಳು, ಫೋಟೋಗ್ರಫಿ, ವೀಡಿಯೋಗ್ರಫಿ, ಇತ್ಯಾದಿ ವಿಷಯಗಳ ಬಗ್ಗೆ ರುಡ್ಸೆಟ್ ಮತ್ತು ಇದೇ ರೀತಿಯ ಇತರೆ ಸಂಸ್ಥೆಗಳಲ್ಲಿ ತರಬೇತಿ ದೊರೆಯುತ್ತಿದ್ದು ಯಶಸ್ವೀ ಅಭ್ಯಥರ್ಿಗಳಿಗೆ ಪ್ರಮಾಣಪತ್ರ ಕೊಡಲಾಗುತ್ತಿದೆ. ಬ್ಯಾಂಕಿನಿಂದ ಹಣಕಾಸಿನ ನೆರವು ಬೇಕಾದಾಗ ಕಾರ್ಯಯೋಜನೆ ಸಿದ್ಧಮಾಡಿ ಬ್ಯಾಂಕಿಗೆ ಸಲ್ಲಿಸಿದರೆ ಆದ್ಯತೆಯ ಮೇಲೆ ಸಾಲ ಸೌಲಭ್ಯ ಸಿಗುತ್ತಿದೆ. ಹೀಗೆ ತರಬೇತಿ ಪಡೆದ ಲಕ್ಷಾಂತರ ಮಂದಿ ಇಂದು ಯಶಸ್ವೀ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ, ಇತರರಿಗೂ ಕೆಲಸ ಕೊಟ್ಟು ಅವರ ಕನಸಿಗೆ ರೆಕ್ಕೆ ಮೂಡಿಸಿದ್ದಾರೆ.
ದ್ವಿತೀಯ ಪಿ.ಯು.ಸಿ.(10+2)ತೇರ್ಗಡೆಯಾದ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸ್ಪಧರ್ಾತ್ಮಕ (ಐ.ಎ.ಎಸ್., ಐ.ಎಫ್.ಎಸ್., ಐ.ಪಿ.ಎಸ್. ಇತ್ಯಾದಿ) ಪರೀಕ್ಷೆಬರೆಯಲು ಸುವರ್ಣ ಅವಕಾಶ
ಮಾಜಿ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯಿಲಿ ಅವರು ಅಧ್ಯಕ್ಷರಾಗಿರುವ 14ನೇ ಆಡಳಿತ ಸುಧಾರಣಾ ಆಯೋಗ ತನ್ನ 377 ಪುಟಗಳ ಸುದೀರ್ಘ ವರದಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ನೇಮಕಾತಿ ಸ್ಪಧರ್ಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಗಮನ ಹರಿಸಲಾಗಿದ್ದು ದ್ವಿತೀಯ ಪಿ.ಯು.ಸಿ.(10+2) ತೇರ್ಗಡೆಯಾದ ಅಭ್ಯಥರ್ಿಗಳು ಕೂಡ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸ್ಪಧರ್ಾತ್ಮಕ (ಐ.ಎ.ಎಸ್., ಐ.ಎಫ್.ಎಸ್., ಐ.ಪಿ.ಎಸ್. ಇತ್ಯಾದಿ) ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈಗಾಗಲೇ ಕೇಂದ್ರದ ರಕ್ಷಣಾ ಪಡೆಗಳಲ್ಲಿ ಎನ್.ಡಿ.ಎ. ಸ್ಪಧರ್ಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ, ತರಬೇತಿ ನೀಡಿ, ನೇಮಕಾತಿ ಮಾಡಿಕೊಳ್ಳುವ ಪದ್ಧತಿ ಇರುವಂತೆಯೇ ಕೇಂದ್ರ ಸಕರ್ಾರದ ಆಡಳಿತ ವಿಭಾಗಗಳಿಗೂ ಕೂಡ ಸಮರ್ಥವಾಗಿ ಸೇವೆ ಸಲ್ಲಿಸುವ ಯುವ ಪಡೆಯನ್ನು ಸಿದ್ಧಪಡಿಸಲು ದ್ವಿತೀಯ ಪಿ.ಯು.ಸಿ.(10+2) ತೇರ್ಗಡೆಯಾದ ವಿದ್ಯಾರ್ಥಿಗಳು ಲೋಕಸೇವಾ ಆಯೋಗ ಏರ್ಪಡಿಸುವ ಎನ್.ಡಿ.ಎ. ಮಾದರಿಯ ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲ ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಷ್ಟ್ರೇಶನ್ (National Institutes of Public Administrations (NIPA) ಸಂಸ್ಥೆಯಲ್ಲಿ ವಿಶೇಷವಾಗಿ ತರಬೇತಿ ನೀಡಿ ರಾಷ್ಟ್ರದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. 'ಅದೇ ತಾನೇ ಕಾಲೇಜಿನಿಂದ ಹೊರಬರುವ ಹುಮ್ಮಸ್ಸುಳ್ಳ ಯುವ ಪಡೆಯನ್ನು ಸಾರ್ವಜನಿಕ ಸೇವೆಗೆ ತೊಡಗಿಸುವುದರಿಂದ ಆಡಳಿತದಲ್ಲಿ ಹೆಚ್ಚಿನ ವೇಗ, ಸುಧಾರಣೆ ಮತ್ತು ಗುಣಮಟ್ಟದ ಹೆಚ್ಚಳ ಕಂಡುಬರುತ್ತದೆ ಮತ್ತು ರಾಷ್ಟ್ರಸೇವೆಗೆ ಸೈನಿಕರಂತೆಯೇ ನಿಷ್ಠೆಯಿಂದ ದುಡಿಯುವ, ದೇಶದ ಉನ್ನತಿಗೆ ಶ್ರಮಿಸುವ, ಪ್ರಗತಿ ಪಥದತ್ತ ಕರೆದೊಯ್ಯುವ ಶ್ರದ್ಧಾಳುಗಳು ದೇಶಕ್ಕೆ ಆಸ್ತಿಯಾಗುತ್ತಾರೆ' ಎಂಬುದು ಆಯೋಗದ ಅಭಿಮತ. 'ಯುವಜನರು ಪಿ.ಯು.ಸಿ. ನಂತರ ಕೇಂದ್ರ ಸಕರ್ಾರದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದರಿಂದ ಕಲಿಕೆಯ ವೇಗವಾಗಿ ಜರುಗುವುದೇ ಅಲ್ಲದೇ ಈಗ ನಡೆಯುತ್ತಿರುವ ಟ್ಯೂಷನ್ ದಂಧೆಗೆ ವಿರಾಮ ನೀಡಿದಂತಾಗುತ್ತದೆ. ಈ ರೀತಿಯ ಆಡಳಿತಾತ್ಮಕ ತರಬೇತಿಯ ನಂತರ ಸಾರ್ವಜನಿಕ ಸೇವೆಯಲ್ಲಿ ತೊಡಗಲು ಬಯಸದ ಯುವಜನರು ಅದನ್ನು ತೊರೆದು ತಮಗೆ ಇಷ್ಟವಾದ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ನೀಡಲಾಗುತ್ತದೆ. ಹಾಗೆಯೇ ಯಾವುದೇ ಪದವಿ ಪಡೆದ ವಿದ್ಯಾಥರ್ಿಗಳು ಇಲ್ಲಿಗೆ ಬರುವ ಮೊದಲು ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ಬ್ರಿಜ್ ಕೋಸರ್್ ಮುಗಿಸಿ ಬರಬೇಕು' ಎನ್ನುತ್ತಾರೆ ಆಯೋಗದ ಅಧ್ಯಕ್ಷರಾದ ಶ್ರೀ ವೀರಪ್ಪ ಮೊಯಿಲಿ. ಈ ನೇಮಕಾತಿಗೆ ವಯೋಮಿತಿಯನ್ನು ಗರಿಷ್ಟ 26 ವರ್ಷಗಳಿಗೆ ನಿಗದಿಗೊಳಿಸಲು ಶಿಫಾರಸ್ಸು ಮಾಡಲಾಗಿದೆ. ಈ ರೀತಿ ಆರಂಭದಲ್ಲೇ ಸಾರ್ವಜನಿಕ ಆಡಳಿತದಲ್ಲಿ ಆಸಕ್ತಿ ಇರುವ ಯುವಜನರನ್ನು ಆಯ್ಕೆ ಮಾಡಿಕೊಳ್ಳಲು, ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ತರಬೇತಿ ನೀಡಿ, ಪದವಿ ಪ್ರದಾನ ಮಾಡಿ ದೇಶ ಸೇವೆಗೆ ಮುಡಿಪಾಗಿಡಲು ಕೇಂದ್ರ ಸಕರ್ಾರವು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಷ್ಟ್ರೇಶನ್ (National Institutes of Public Administrations (NIPA) ಆರಂಭಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ ಸಲಹೆ ಮಾಡಿದೆ.ಹೆಚ್ಚಿನ ವಿವರಗಳಿಗೆ ನೋಡಿ :
www.indiaedunews.net/Career/Aspirants_may_appear_for_civil_service_exam_after_class_XII_7232/
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಯೋಜಕತ್ವ ಮತ್ತು ಶಿಷ್ಯವೇತನದ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ 5 ವರ್ಷಗಳ ವಿಜ್ಞಾನ ವಿಷಯದ ಇಂಟಿಗ್ರೇಟೆಡ್ ಪಿ.ಜಿ. ತರಬೇತಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದು ಪ್ರತಿ ವಿದ್ಯಾಥರ್ಿಗೆ ರೂ.1000/ ಶಿಷ್ಯವೇತನವೂ ದೊರೆಯುತ್ತಿದೆ. ನಿವೃತ್ತ ಕುಲಪತಿಗಳು, ವಿಜ್ಞಾನದ ಪರಿಣತರು, ವಿಜ್ಞಾನಿಗಳು ಈ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು ಎರಡನೇ ವರ್ಷದಿಂದಲೇ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಮುಂದೆ ಡಿ.ಆರ್.ಡಿ.ಒ. ದಂತಹ ಉನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಉದ್ಯೋಗ ಅವಕಾಶ ಗ್ಯಾರಂಟಿ. ಪ್ರಚಾರದ ಕೊರತೆಯಿಂದ ಈ ಕೋಸರ್ು ಸೊರಗುತ್ತಿದೆ ಎನ್ನುವುದು ವಿಪಯರ್ಾಸ! ಗ್ರಾಮೀಣ ಪ್ರದೇಶದ ಅಭ್ಯಥರ್ಿಗಳಿಗಾಗಿ ಕಾಫಿ ಡೇ ಸಂಸ್ಥೆಯವರು ನಿರ್ವಹಣೆ ತರಬೇತಿ ನಡೆಸುತ್ತಿದ್ದು ಉಚಿತ ಊಟ, ವಸತಿ ಮತ್ತು ಉದ್ಯೋಗ ತರಬೇತಿ ನೀಡುತ್ತಿದ್ದಾರೆ. ಚಿಕ್ಕಮಗಳೂರಿನ ಬಳಿಯ ಸಿದ್ಧಾರ್ಥ ಸನಿವಾಸ ತರಬೇತಿ ಸಂಸ್ಥೆಯಲ್ಲಿ ಈ ತರಬೇತಿ ದೊರೆಯುತ್ತಿದೆ.
ಇತ್ತೀಚೆಗೆ 'ನಮ್ಮಲ್ಲಿ ತರಬೇತಿ ಕೊಡುತ್ತೇವೆ, ಎಲ್ಲರಿಗೂ ಉದ್ಯೋಗ ಗ್ಯಾರಂಟಿಯಾದ ತರಬೇತಿ ಇದು, ಹಾಜರಾಗಿ, ಲಾಭ ಗಳಿಸಿರಿ' ಎಂಬ ಜಾಹೀರಾತುಗಳು ಎಲ್ಲೆಡೆ ಕಾಣಸಿಗುತ್ತಿವೆ. ಈ ರೀತಿಯ ತರಬೇತಿಗೆ ಸಾವಿರಾರು ರೂಪಾಯಿಗಳ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ತರಬೇತಿಯ ನಂತರ ಕನಿಷ್ಟ ಸಂಬಳದ ಮೇಲ್ವಿಚಾರಕರ ನೌಕರಿಗೆ ಅವಕಾಶ ನೀಡಲಾಗುತ್ತಿದೆ ಮತ್ತು ಅದರಿಂದ ಬೇಸತ್ತ ಅಭ್ಯಥರ್ಿಗಳು ತಾವೇ ರಾಜಿನಾಮೆ ನೀಡಿ ಓಡುವಂತಾಗುತ್ತಿದೆ. ಇಂತಹ ಬೇನಾಮಿ ಸಂಸ್ಥೆಗಳ ತರಬೇತಿಗೆ ಸೇರುವ ಮೊದಲು ಅಭ್ಯಥರ್ಿಗಳು ಆ ಜಾಹೀರಾತುಗಳನ್ನು, ಸಂಸ್ಥೆಯ ವೆಬ್ಸೈಟ್ಗಳನ್ನು ಕೂಲಂಕಷವಾಗಿ ನೋಡಿ, ಬಲ್ಲವರಲ್ಲಿ ವಿಚಾರಿಸಿ ಸೇರುವುದು ಒಳಿತು. ನಕಲಿ ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ನೀಡುವ ನಕಲಿ ವಿಶ್ವವಿದ್ಯಾಲಯಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಯಾವುದಕ್ಕೂ ಸಕರ್ಾರದ ಅಧಿಕೃತ ಅಥವಾ ಮನ್ನಣೆ ಪಡೆದ ವಿದ್ಯಾ ಸಂಸ್ಥೆಗಳ ಮೂಲಕ ತರಬೇತಿಗೆ ಸೇರಿ ಪ್ರಮಾಣ ಪತ್ರ ಪಡೆದಲ್ಲಿ ಅದಕ್ಕೆ ಮನ್ನಣೆ, ಮಾನ್ಯತೆ ದೊರೆಯುತ್ತದೆ. ಅದು ಬಿಟ್ಟು ಕಂಡ ಕಂಡ ಸಂಸ್ಥೆಗಳಲ್ಲಿ ಸೇರಿ, ಹಣ ಕಳೆದುಕೊಂಡು, ನಂತರ ಪರಿತಪಿಸುವುದು ಸಲ್ಲ.
ವಿಳಾಸ: ಪ್ರಸಾರ ನಿರ್ವಾಹಕರು, ಆಕಾಶವಾಣಿ, ಚಿತ್ರದುರ್ಗ - 577 501, ಫೋ.:9448589089
Doodle - Google Uncle Jothe Maathu-Kathe - Informative Literature for Children - A Faction
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
Technology Information in Kannada - Article in Prajavani - Education Supplement 28.08.2019
-
QUESTION PAPERS OF GAZETTED PROBATIONERS PRELIMS EXAM 2011 http://kpsc.kar.nic.in/GP%202011%20PRELIMS%20QUESTION%20PAPERS.htm G...












