Wednesday, 23 January 2013
Tuesday, 22 January 2013
KPSC Mains 2011 GS Paper 2 - Article in Udayavani Josh 22 Jan 2013
KPSC Mains 2011 GS Paper 2 - Article in Udayavani Josh 22 Jan 2013
- ಈ ವಾರದ ಹೋಂವರ್ಕು
- ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವ
- Udayavani | Jan 21, 2013ಕ್ವೆಶ್ಚನ್ ಪೇಪರ್ ನಮ್ಮಲ್ಲಿ, ಆನ್ಸರ್ ಪೇಪರ್ ನಿಮ್ಮಲ್ಲಿ
ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಿತ್ತು. ದಿನಪತ್ರಿಕೆಗಳ ವಿಸ್ತಾರವಾದ ಓದು, ಪ್ರಸ್ತುತ ಘಟನಾವಳಿಗಳ ಅರಿವು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಪ್ರಕಟಿಸಿರುವ ಗ್ಲಿಂಪ್ಸಸ್ ಆಫ್ ಕರ್ನಾಟಕ, ಕರ್ನಾಟಕ ಕೈಪಿಡಿ, ಎ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಮತ್ತು ಅವುಗಳ ಜೊತೆಗೆ ನೀಡಲಾಗಿದ್ದ ಡಿವಿಡಿಯಲ್ಲಿ ಅಡಕಗೊಳಿಸಲಾಗಿದ್ದ ಆರ್ಥಿಕ ಸಮೀಕ್ಷೆ, ಎಕನಾಮಿಕ್ ಸರ್ವೇ, ಇಂಡಿಯ- 2010, ಜನಗಣತಿಯ ಅಂಕಿ ಅಂಶಗಳು ಮತ್ತು ಸಾಮಾನ್ಯ ಜ್ಞಾನ ಮಾಹಿತಿಯನ್ನು ಆಧರಿಸಿದ್ದ ಹಲವು ಪ್ರಶ್ನೆಗಳು ಬಂದಿದ್ದು ಸರ್ಕಾರದ ಅಧಿಕೃತ ಮಾಹಿತಿಯನ್ನು ಆಧರಿಸಿದ್ದ ಇಲಾಖೆಯ ಪ್ರಕಟಣೆಗಳನ್ನು, ಯೋಜನಾದಂತಹ ನಿಯತಕಾಲಿಕೆಗಳನ್ನು ಓದಿದವರಿಗೆ ಸುಲಭವೆನಿಸುವಂತಿದ್ದವು.
ಸಾಮಾನ್ಯ ಅಧ್ಯಯನ ಪತ್ರಿಕೆ- 2- 300 ಅಂಕಗಳು- 3 ಗಂಟೆ
1. ಭಾರತದ ರಾಜಕೀಯ/ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ
2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ
3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ
2011ರ ಕೆಎಎಸ್ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 2- ಅಂಕಗಳು 300
ಭಾಗ - ಎ
1. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200ರಿಂದ 250 ಪದಗಳಷ್ಟಿರಲಿ: 20 x 1= 20
ಎ. ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಣ್ಣಾ ತಂಡದ ನಡುವಿನ ವಿರಸ ಕುರಿತು ವಿಮಶಾìತ್ಮಕವಾಗಿ ಬರೆಯಿರಿ.
ಬಿ. ಇ-ಆಡಳಿತ ಎಂದರೇನು? ಕರ್ನಾಟಕ ಸರ್ಕಾರು ಆರಂಭಿಸಿರುವ ಇ-ಆಡಳಿತ ಪರಿಯೋಜನೆಗಳನ್ನು ಪರಿಶೀಲಿಸಿ.
2. ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-125 ಪದಗಳಲ್ಲಿ ಉತ್ತರಿಸಿ. 10x3=30
ಎ. ಈಗ ಕಂಡುಬರುತ್ತಿರುವ ರಾಜಕೀಯ ದೃಶ್ಯಾವಳಿಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿಕೊಳ್ಳುವ ನಿರೀಕ್ಷೆಯ ಕುರಿತು ವ್ಯಾಖ್ಯಾನಿಸಿ.
ಬಿ. ಕರ್ನಾಟಕದ ಹಿಂದುಳಿದ ವರ್ಗಗಳ ಚಳುವಳಿ ಕುರಿತು ಒಂದು ಟಿಪ್ಪಣಿ ಬರೆಯಿರಿ.
ಸಿ. ರಾಜ್ಯ ವಿಧಾನಸಭೆಯ ರಚನೆ, ಅಧಿಕಾರಗಳು ಹಾಗೂ ಕೆಲಸಗಳನ್ನು ವಿವರಿಸಿ.
ಡಿ. ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಭಾರತದ ಸಂಸತ್ತಿನಲ್ಲಿ ಲಿಂಗಾಧಾರಿತ ಪಾಲು ನೀಡಿಕೆ ಕುರಿತು ಚರ್ಚಿಸಿ.
ಇ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ.
3. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-55 ಪದಗಳಲ್ಲಿ ಉತ್ತರಿಸಿ: 5x4=20
ಎ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಚನೆ ಹಾಗೂ ಕಾರ್ಯವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.
ಬಿ. ಕೇಂದ್ರ- ರಾಜ್ಯಗಳ ಹಣಕಾಸು ಸಂಬಂಧಗಳನ್ನು ವಿವರಿಸಿ.
ಸಿ. ಧಾರ್ಮಿಕ ಸ್ವಾತಂತ್ರÂದ ಹಕ್ಕನ್ನು ಕುರಿತಂತೆ ಸಂವಿಧಾನದಲ್ಲಿರುವ ಉಪಬಂಧಗಳನ್ನು ವಿವರಿಸಿ.
ಡಿ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸಂವಿಧಾನಿಕ ರಕ್ಷಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ಇ. ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ.
ಎಫ್. 73ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ವಿಕೇಂದ್ರೀಕರಣವನ್ನು ಕುರಿತು ಪರಿಶೀಲಿಸಿ.
4. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20
ಎ. ನ್ಯಾಯಮೂರ್ತಿ ಸೋಮಶೇಖರ್ ಆಯೋಗ
ಬಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ
ಸಿ. ಟಾಟಾ ಟ್ರಕ್ ಪ್ರಕರಣ
ಡಿ. ಡಾ.ಡಿ.ಎಮ್. ನಂಜುಂಡಪ್ಪ ಸಮಿತಿ
ಇ. ಆಡಳಿತದಲ್ಲಿ ಪಾರದರ್ಶಕತೆ
ಎಫ್. ನಾಗರಿಕ ಸಮಾಜ
ಜಿ. ಡಿ. ದೇವರಾಜ ಅರಸ್
ಎಚ್. ವ್ಯಕ್ತಿಯ ಪ್ರತ್ಯಕ್ಷ ಹಾಜರಿ ಆದೇಶ(ರಿಟ್)
ಐ. ವಲಯ ಪರಿಷತ್ತುಗಳು
ಜೆ. ಸರೋಜಿನಿ ಮಹಿಷಿ ವರದಿ
ಭಾಗ- ಬಿ
5. ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200 ರಿಂದ 250 ಪದಗಳಿಗೆ ಮೀರದಂತಿರಬೇಕು: 20x1=20
ಎ. ಕರ್ನಾಟಕದಲ್ಲಿನ ಮಾನವ ಅಭಿವೃದ್ಧಿಯ ಪ್ರಾದೇಶಿಕ ಅಸಮತೆಗಳನ್ನು ವಿವರಿಸಿ.
ಬಿ. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಧ್ಯೇಯಗಳು ಹಾಗೂ ವ್ಯಾಪ್ತಿಯನ್ನು ವಿವರಿಸಿ. ಆಹಾರ ಭದ್ರತೆಯನ್ನು ಖಚಿತಪಡಿಸುವುದಕ್ಕೆ ಇದು ನೆರವಾಗುವುದೇ?
6. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 125 ಪದಗಳಲ್ಲಿ ಉತ್ತರಿಸಿ: 10x3=30
ಎ. ಸ್ಪರ್ಧಾಕಾನೂನಿನ ವಿಶಿಷ್ಟ ಲಕ್ಷಣಗಳೇನು?
ಬಿ. ಕರ್ನಾಟಕದಲ್ಲಿ ವಿದೇಶಿ ಹಣದ ನೇರ ಹೂಡಿಕೆಯ ಹರಿವಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ನಿರೂಪಿಸಿ.
ಸಿ. ಕರ್ನಾಟಕ ರಾಜ್ಯ ಬಜೆಟ್ 2012- 13ರ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿ.
ಡಿ. ಕರ್ನಾಟಕದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಕುರಿತು ವ್ಯಾಖ್ಯಾನಿಸಿ.
ಇ. ಭಾರತದ ಇಂಧನ ಬಿಕ್ಕಟ್ಟಿನ ಸ್ವರೂಪವನ್ನು ವಿವರಿಸಿ. ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ಸೂಚಿಸಿ.
7. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ/ ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50-55 ಪದಗಳ ಮಿತಿಯಲ್ಲಿರಬೇಕು: 5x4=20
ಎ. ಯುಎಸ್ ಡಾಲರ್‌ಗೆ ಪ್ರತಿಯಾಗಿ ರೂಪಾಯಿಯ ಮೌಲ್ಯವು ಕ್ಷೀಣಿಸುವುದಕ್ಕೆ ಕಾರಣಗಳನ್ನು ನಿರೂಪಿಸಿ.
ಬಿ. ಕರ್ನಾಟಕದ ಸಾರ್ವಜನಿಕ ವಿತರಣೆಯಲ್ಲಿರುವ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಿ.
ಸಿ. ಕರ್ನಾಟಕದ ಸಾರ್ವಜನಿಕ ವಲಯದ ನೋಟವನ್ನು ವಿವರಿಸಿ.
ಡಿ. ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೀವು ಯಾವ ಕಾರ್ಯನೀತಿಯ ಕ್ರಮಗಳನ್ನು ಸೂಚಿಸುತ್ತೀರಿ?
ಇ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಭಾರತವು ಆರಂಭಿಸಿರುವ ಕ್ರಮಗಳನ್ನು ವಿವರಿಸಿ.
ಎಫ್. ಭಾರತದ ಮೇಲೆ ಯೂರೋಪ್ ವಲಯದ ಬಿಕ್ಕಟ್ಟಿನ ಪರಿಣಾಮಗಳನ್ನು ವಿವರಿಸಿ.
8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20
ಎ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳು
ಬಿ. ಉನ್ನತ ಶಿಕ್ಷಣದ ಖಾಸಗೀಕರಣ
ಸಿ. ಯುವ ಭಾರತ
ಡಿ. ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು
ಇ. ಕರ್ನಾಟಕದಲ್ಲಿ ವಿದ್ಯುತ್ಛಕ್ತಿ ವಿತರಣೆ
ಎಫ್. ಕರ್ನಾಟಕದ ಹೊಸ ಕೈಗಾರಿಕಾ ನೀತಿ
ಜಿ. ಕರ್ನಾಟಕದಲ್ಲಿ ಉದ್ಯೋಗ ಕಾರ್ಯಕ್ರಮಗಳು
ಎಚ್. ಆಡಳಿತದಲ್ಲಿ ಐಇಖ
ಐ. ಪೆಟ್ರೋಲಿಯಂ ಸಬ್ಸಿಡಿಗಳು
ಜೆ. ಸಾಲದ ದರ ನಿರ್ಧಾರಣಾ ಏಜೆನ್ಸಿಗಳು
ಭಾಗ- ಸಿ
9. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20
ಎ. ಕರ್ನಾಟಕದ ನದಿ ವ್ಯವಸ್ಥೆಗಳನ್ನು ಕುರಿತು ವಿಸ್ತಾರವಾದ ಟಿಪ್ಪಣಿ ಬರೆಯಿರಿ.
ಬಿ. ಕರ್ನಾಟಕದ ವಿಶೇಷ ಉÇÉೇಖದೊಂದಿಗೆ ಭಾರತದ ಕರಾವಳಿ ಪ್ರದೇಶದ ಸಂಕ್ಷಿಪ್ತ ವಿವರಣೆ ನೀಡಿ.
10. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 100 ರಿಂದ 120 ಪದಗಳಷ್ಟಿರಲಿ: 10x1=10
ಎ. ಮಲೆನಾಡು ಪ್ರದೆಶದ ಭೌಗೋಳಿಕ ವೈಶಿಷ್ಟÂಗಳನ್ನು ವಿವರಿಸಿ.
ಬಿ. ಭಾರತದ ಸುವರ್ಣ ಚತುಭುìಜ/ ಚತುಷ್ಪತ ಕಾರಿಡಾರ್‌ಗಳ ಬಗ್ಗೆ ಬರೆಯಿರಿ.
11. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉತ್ತರ ಸುಮಾರು 50 ಪದಗಳಷ್ಟಿರಲಿ: 5x2= 10
ಎ. ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ.
ಬಿ. ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ನಿರೂಪಿಸಿ.
ಸಿ. ಮಹಾನಗರಗಳ ಬೆಳವಣಿಗೆ ಬಗ್ಗೆ ವಿವರಿಸಿ.
ಭಾಗ- ಡಿ
12. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20
ಎ. ಸಾಂಪ್ರದಾಯಿಕವಲ್ಲದ ಶಕ್ತಿ ಎಂದರೇನು? ಸಾಂಪ್ರದಾಯಿಕವಲ್ಲದ ಕೆಲವು ಮುಖ್ಯವಾದ ಶಕ್ತಿಮೂಲಗಳ ವಿಧಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ ಮತ್ತು ಅವುಗಳಿಂದ ಸಿಗುವ ಲಾಭಗಳನ್ನು ತಿಳಿಸಿ.
ಬಿ. ಕರ್ನಾಟಕ ಸರ್ಕಾರ 2011ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ ಹಾಗೂ ವಿದ್ಯುನ್ಮಾನ ಹಾರ್ಡ್‌ವೇರ್ ನೀತಿಯನ್ನು ಬಿಡುಗಡೆ ಮಾಡಿತು. ಈ ನೀತಿಗಳನ್ನು ಬಿಡುಗಡೆ ಮಾಡಿದ್ದರ ಹಿಂದಿರುವ ಪ್ರೇರಣೆ ಏನು ಎಂಬ ಬಗ್ಗೆ ಟಿಪ್ಪಣಿ ಬರೆಯಿರಿ ಮತ್ತು ಈ ಎರಡೂ ನೀತಿಗಳ ವಿವಿಧ ಲಕ್ಷಣಗಳನ್ನು ಕುರಿತು ಚರ್ಚಿಸಿ.
13. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10x4=40
ಎ. ತಾರಾ ಶಕ್ತಿ
ಬಿ. ಜೀವಾವರಣದ ಪಾದಮುದ್ರೆ
ಸಿ. ಪರಮಾಣು ವಿಕಿರಣಗಳ ಜೈವಿಕ ಪರಿಣಾಮಗಳು
ಡಿ. ಕರ್ನಾಟಕ ಹಾಗೂ ಭಾರತದ ತಂತ್ರವಿಜ್ಞಾನದ ಪರಿಚಯವನ್ನು ಹೆಚ್ಚಿಸುವಲ್ಲಿ, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಸ್ಥಾಪಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ(R - ಈ) ಪಾತ್ರ.
ಇ. ಸಾಮಾನ್ಯ ಬಳಕೆಯ ಪ್ಲಾರಸೆಂಟ್ ದೀಪಗಳು ಹಾಗೂ ಅಡಕ ಫ್ಲಾರಸೆಂಟ್ ದೀಪಗಳು.
ಎಫ್. ತಳಿವೈಜ್ಞಾನಿಕವಾಗಿ ಮಾರ್ಪಾಟು ಮಾಡಿದ(ಎM) ಬೆಳೆಗಳು ಹಾಗೂ ಆಹಾರ
14. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10=20
ಎ. ಫುÉರೋಸಿಸ್
ಬಿ. ವಾಯುಮಾಲಿನ್ಯ
ಸಿ. ಆಮ್ಲಮಳೆ
ಡಿ. ಜೆಲ್‌ಗಳು
ಇ. ಭೂಸವಕಳಿ
ಎಫ್. ಡಾಲಿ ಎಂಬ ಕುರಿ
ಜಿ. ಕರ್ನಾಟಕದ ಜಿÇÉಾಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ
ಎಚ್. ಬಯೋಮೆಟ್ರಿಕ್ ಸಾಧನಗಳು
ಐ. ಹೈನುಗಾರಿಕೆ ಮತ್ತು ಹೈನು ತಂತ್ರಜ್ಞಾನ
ಜೆ. ಕೃಷಿ ವಿಜ್ಞಾನ ಕೇಂದ್ರಗಳು
ರಾಷ್ಟ್ರೀಯ ಮತದಾರರ ದಿನ- ಜನವರಿ 25
2011ರಿಂದ ಪ್ರತಿ ವರ್ಷ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲು 2011ರ ಜನವರಿ 20ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನ ಇದಾಗಿದೆ. ಇದೇ ಜನವರಿಗೆ 18 ವರ್ಷ ದಾಟಿದ ಯುವ ಮತದಾರರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡುವ ವಿಶೇಷ ಕಾರ್ಯಕ್ರಮ ಯೋಜಿತವಾಗಿದ್ದು ಹೆಮ್ಮೆಯ ಮತದಾರರಾಗಿ- ಮತದಾನಕ್ಕೆ ಸಿದ್ಧರಾಗಿ ಎಂಬ ಘೋಷಣೆ ಹೊರಡಿಸಲಾಗಿದೆ. ಚಲಾಯಿಸಿ ನಿಮ್ಮ ಮತ- ಕಾಪಾಡಿ ದೇಶದ ಹಿತ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಧ್ಯೇಯದೊಂದಿಗೆ ಯುವಜನತೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ಜಿÇÉೆಯ ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಮಾಹಿತಿ ಮತ್ತು ನೊಂದಣಿಯ ಅಗತ್ಯ ಕುರಿತು ತಿಳಿಸಿಕೊಡಲಾಗುತ್ತಿದೆ. ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕವೂ ಮತದಾರರ ದಿನದ ಮಹತ್ವ ಕುರಿತ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಮತದಾರರ ಪ್ರತಿಜ್ಞಾ ವಿಧಿ
ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ
ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ.
21 ವರ್ಷ ದಾಟಿದವರಿಗೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿ 1989ರ ಮಾರ್ಚ್ 28ರಂದು ಸಂವಿಧಾನದ 61 ತಿದ್ದುಪಡಿಯ ಮೂಲಕ 326ನೇ ವಿಧಿಗೆ ಸೇರ್ಪಡೆ ಮಾಡಲಾಗಿತ್ತು.
Monday, 21 January 2013
Girl Child Day - Article in Prajavani Shikshana 21 Jan 2013
Girl Child Day - Article in Prajavani Shikshana 21 Jan 2013
ಇಂದು ನಮ್ಮದೇ, ಗೆಲುವು ನಮ್ಮದೇ!
- Mon, 01/21/2013 - 01:00
`ಈ ನೆಲದ ಮಗಳು ನಾನು ತಾರೆಯಾಗುವೆ ತಾರೆಯಾಗುವೆ, ನಾನು ಜಗವ ಬೆಳಗುವೆ...'
ಮೀನಾ ತಂಡದ ಈ ಹಾಡನ್ನು ಹೊಳೆನರಸೀಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಹೆಮ್ಮೆಯಿಂದ ಹೇಳುತ್ತಲೇ ಇದ್ದರು. ಮೀನಾ ತಂಡಗಳು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ವಿಶೇಷ ಪಾತ್ರ ವಹಿಸಿವೆ.
ಮೀನಾ ತಂಡದ ಈ ಹಾಡನ್ನು ಹೊಳೆನರಸೀಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಹೆಮ್ಮೆಯಿಂದ ಹೇಳುತ್ತಲೇ ಇದ್ದರು. ಮೀನಾ ತಂಡಗಳು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ವಿಶೇಷ ಪಾತ್ರ ವಹಿಸಿವೆ.
ರಾಜ್ಯ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಹೆಣ್ಣು ಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಆರಿಸಿದ ಕ್ಲಸ್ಟರ್‌ಗಳಲ್ಲಿ ಈ ಮೀನಾ ತಂಡಗಳನ್ನು ರಚಿಸಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. ಇದೀಗ ಈ ಜನಪ್ರಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗಿದೆ. ಸ
ರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸಾರ್ವತ್ರೀಕರಣಕ್ಕೆ 2003ರಿಂದಲೇ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಕಾರ್ಯಕ್ರಮದ (ಎನ್.ಪಿ.ಇ.ಜಿ.ಇ.ಎಲ್.) ಅಡಿ ವಿವಿಧ ಬಗೆಯ ತರಬೇತಿಗಳನ್ನು, ಜಾಗೃತಿ ಶಿಬಿರಗಳನ್ನು, ಆರೋಗ್ಯ ಮಾಹಿತಿ, ಸ್ವ-ಉದ್ಯೋಗದ ಕೌಶಲಗಳನ್ನು ತಿಳಿಸಿಕೊಡಲಾಗುತ್ತಿದೆ. ಇದರ ಕಾರ್ಯಸೂಚಿ ಕೈಪಿಡಿಯ ಮೊದಲ ಪುಟದಲ್ಲಿ ಕಮಲಾ ಭಾಸಿನ್ ಅವರು ಬರೆದ `ನಾನೊಬ್ಬಳು ಹುಡುಗಿಯಾಗಿದ್ದಕ್ಕಾಗಿ, ನಾನು ಓದಲೇ ಬೇಕಿದೆ' ಎಂಬ ಕವನ ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳುತ್ತದೆ.
ಹೆಣ್ಣು ಮಗುವಿನ ದಿನ
ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚಿಸಿದೆ. 1966ರ ಜನವರಿ 24 ರಂದು ಇಂದಿರಾ ಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನಿಯಾದ ಶುಭ ಸಂದರ್ಭವನ್ನು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿಯನ್ನು ತೊಲಗಿಸಿ, ವಿವಿಧ ಕ್ಷೇತ್ರಗಳಲ್ಲಿ ಅವರು ಮುಂದುವರಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ 2009ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚಿಸಿದೆ. 1966ರ ಜನವರಿ 24 ರಂದು ಇಂದಿರಾ ಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನಿಯಾದ ಶುಭ ಸಂದರ್ಭವನ್ನು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿಯನ್ನು ತೊಲಗಿಸಿ, ವಿವಿಧ ಕ್ಷೇತ್ರಗಳಲ್ಲಿ ಅವರು ಮುಂದುವರಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ 2009ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು, ಲಿಂಗ ತಾರತಮ್ಯ ನಿವಾರಿಸಲು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು `ಸಬಲಾ'ದಂತಹ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವರದಕ್ಷಿಣೆ ತಡೆ ಕಾಯ್ದೆ 2006, ಬಾಲ್ಯವಿವಾಹ ತಡೆ ಕಾಯ್ದೆ 2006, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2009 ಮೊದಲಾದ ಕಾನೂನುಗಳ ಸಹಾಯದಿಂದ ತಡೆಗಟ್ಟಿ, ಅವರಿಗೆ ಸೂಕ್ತ ರಕ್ಷಣೆ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯ 2007- 2012ರ ಮಕ್ಕಳ ಸಂರಕ್ಷಣೆ ಕುರಿತ ಕಾರ್ಯಕ್ರಮ ಸೂಚಿಯಲ್ಲೂ ಹೆಣ್ಣು ಮಗುವಿನ ಶಿಕ್ಷಣ ಮತ್ತು ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.
ಮೀನಾ- ರಾಜು- ಮಿಟ್ಟು
ಮೀನಾ ಎಂಬ ಪುಟ್ಟ ಬಾಲೆಯ ಸಾಹಸಗಳನ್ನು ಈಗಾಗಲೇ ನೀವೆಲ್ಲ ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಈ ಪರಿಕಲ್ಪನೆಯಲ್ಲಿ, ಮೀನಾಳ ತಮ್ಮ ರಾಜು ಮತ್ತು ಮುದ್ದು ಗಿಳಿ ಮಿಟ್ಟು ಮಕ್ಕಳಷ್ಟೇ ಅಲ್ಲದೆ ಹಳ್ಳಿಗರೆಲ್ಲರ ಮನ ಸೆಳೆಯುವಲ್ಲಿ, ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನಾ ಎಂಬ ಪುಟ್ಟ ಬಾಲೆಯ ಸಾಹಸಗಳನ್ನು ಈಗಾಗಲೇ ನೀವೆಲ್ಲ ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಈ ಪರಿಕಲ್ಪನೆಯಲ್ಲಿ, ಮೀನಾಳ ತಮ್ಮ ರಾಜು ಮತ್ತು ಮುದ್ದು ಗಿಳಿ ಮಿಟ್ಟು ಮಕ್ಕಳಷ್ಟೇ ಅಲ್ಲದೆ ಹಳ್ಳಿಗರೆಲ್ಲರ ಮನ ಸೆಳೆಯುವಲ್ಲಿ, ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನಾ ಪರಿಕಲ್ಪನೆ ದಕ್ಷಿಣ ಏಷ್ಯಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯುನಿಸೆಫ್ ರೂಪಿಸಿದ ವಿಶೇಷ ಕಾರ್ಯಕ್ರಮದ ಅಂಗವಾಗಿ 1990ರ ದಶಕದ ಕೊನೆಯಲ್ಲಿ ಕಾರ್ಯರೂಪಕ್ಕೆ ಬಂದಿತು. 1998ರ ಸೆಪ್ಟೆಂಬರ್ 24ರಂದು ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಮೀನಾ ಪರಿಕಲ್ಪನೆ ಶಿಕ್ಷಣ ಕ್ಷೇತ್ರವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದ್ದರಿಂದ, ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ `ಮೀನಾ ದಿನ'ವನ್ನಾಗಿ ಆಚರಿಸುತ್ತಾ ಬರಲಾಗಿದೆ.
ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿರುವ ಬಡತನ, ಅನಕ್ಷರತೆ, ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತಪದ್ಧತಿ, ಭಿಕ್ಷಾಟನೆಗಳನ್ನು ಹೊಡೆದೋಡಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಎಲ್ಲರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು `ಮೀನಾ' ಯಶಸ್ವಿಯಾಗಿದ್ದಾಳೆ. ಒಂಬತ್ತು ವರ್ಷದ ಬಾಲೆ ಮೀನಾಳ ಸಾಹಸಗಳನ್ನು ಒಳಗೊಂಡ ಸುಮಾರು 33 ಕಾರ್ಟೂನ್ ಪುಸ್ತಕಗಳು ಮತ್ತು ಪುಟ್ಟ ಚಲನಚಿತ್ರಗಳು ಕಳೆದ 13 ವರ್ಷಗಳಲ್ಲಿ ಜನಮನ ಸೂರೆಗೊಂಡಿವೆ. ದಕ್ಷಿಣ ಏಷ್ಯಾದ ಎಲ್ಲ ಭಾಷೆಗಳಿಗೆ ಮತ್ತು ವಿಶ್ವದ ಪ್ರಮುಖ ಭಾಷೆಗಳಿಗೆ ತರ್ಜುಮೆ ಆಗಿರುವ ಈ ಮಾಹಿತಿಯು ತೃತೀಯ ವಿಶ್ವದ ಜನಪ್ರಿಯ ಕಾರ್ಯಕ್ರಮವಾಗಿದೆ.
Tuesday, 15 January 2013
KAS Mains 2011 GS Paper 1 - Article in Udayavani Josh 15 Jan 2013
KAS Mains 2011 GS Paper 1 - Article in Udayavani Josh 15 Jan 2013
- ಟ್ರೈ ದಿಸ್ ಅಟ್ ಹೋಂ: ನಿಮ್ಮ ಮಾರ್ಕ್ ಎಷ್ಟು?
- ಜನರಲ್ ಸ್ಟಡೀಸ್ ಕ್ವೆಶ್ಚನ್ ಪೇಪರ್ ಇಲ್ಲಿದೆ. ಸಾಧ್ಯವಾದರೆ ನೀವೂ ಪರೀಕ್ಷೆ ಬರೆಯಿರಿ. ನಿಮಗೆಷ್ಟು ಗೊತ್ತು ಅನ್ನೋದ
- Udayavani | Jan 14, 2013ಜನರಲ್ ಸ್ಟಡೀಸ್ ಕ್ವೆಶ್ಚನ್ ಪೇಪರ್ ಇಲ್ಲಿದೆ. ಸಾಧ್ಯವಾದರೆ ನೀವೂ ಪರೀಕ್ಷೆ ಬರೆಯಿರಿ. ನಿಮಗೆಷ್ಟು ಗೊತ್ತು ಅನ್ನೋದನ್ನು ತಿಳಿದುಕೊಳ್ಳಿ.
ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 01 ಮತ್ತು 02 ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಂತಿದ್ದು, ಸಂತೆಗೆ ಮೂರು ಮೊಳ ನೇಯುವ ಅಭ್ಯರ್ಥಿಗಳಿಗೆ ನಿಜಕ್ಕೂ ಕಬ್ಬಿಣದ ಕಡಲೆಯೇ ಆಗಿದ್ದವು. ಆದರೆ ಮೊದಲಿನಿಂದಲೂ ವ್ಯಾಪಕ ಓದನ್ನು ರೂಢಿಸಿಕೊಂಡ, ಈಗಾಗಲೇ ಐಎಎಸ್ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರ ಅತ್ಯಂತ ಸುಲಭವಾಗಿತ್ತು, ಕಾರಣ ಅಲ್ಲಿ ಬಂದಿದ್ದ ಹಲವು ಪ್ರಶ್ನೆಗಳು ಬೇರೆ ರೂಪದಲ್ಲಿ ಇಲ್ಲಿಯೂ ಬಂದಿದ್ದವು. ಅಲ್ಲಿ 5- 10 ಅಂಕಗಳಿಗೆ ಇದ್ದ ಕೆಲವು ಪ್ರಶ್ನೆಗಳು ಇಲ್ಲಿ 2 ಅಂಕಗಳಿಗೆ ಬಂದಿದ್ದು, ಬರೆಯುವವರಿಗೆ ಸಮಯ ಮತ್ತು ವಿಸ್ತರಣೆಗೆ ಅವಕಾಶ ಸಾಲದೆ ಒ¨ªಾಡಿದ್ದು ಸಾಮಾನ್ಯ ದೃಶ್ಯವಾಗಿತ್ತು. ಎಷ್ಟೇ ವೇಗವಾಗಿ ಬರೆದರೂ ವಿಷಯಗಳ ವ್ಯಾಪ್ತಿಯ ಅಗಾಧತೆಯಿಂದ ಬರೆಯುತ್ತಲೇ ಸಾಗಿ ಕೊನೆಗೆ ಒಂದಷ್ಟು ಪ್ರಶ್ನೆಗಳನ್ನು ಹಾಗೇ ಬಿಟ್ಟುಬಂದವರೂ ಉಂಟು!
ಸಾಮಾನ್ಯ ಅಧ್ಯಯನ ಪತ್ರಿಕೆ 1- ಸಿಲಬಸ್- 300 ಅಂಕಗಳು- 3 ಗಂಟೆ
1. ಆಧುನಿಕ ಭಾರತದ ಇತಿಹಾಸ ಮತ್ತು ಸಂಸ್ಕೃತಿ- ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗೆ ವಿಶೇಷ ಆದ್ಯತೆ
2. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ಘಟನಾವಳಿಗಳು
3. ಅಂಕಿ-ಅಂಶಗಳ ವಿಶ್ಲೇಷಣೆ, ಗ್ರಾಫ್ ಮತ್ತು ಚಿತ್ರಗಳು, ನಕಾಶೆಗಳು
ಈ ಬಾರಿಯ ಪ್ರಶ್ನೆ ಪತ್ರಿಕೆ ಹೀಗಿತ್ತು:
2011ರ ಕೆಎಎಸ್ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 1 - ಅಂಕಗಳು 300
ಭಾಗ - ಎ
1. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 200 ರಿಂದ 250 ಪದಗಳಲ್ಲಿ ಉತ್ತರಿಸಿ: 20 x 2 = 40
ಎ. 1937ರ ಚುನಾವಣೆಗಳಲ್ಲಿ ಭಾಗವಹಿಸುವುದಕ್ಕೆ ಕಾಂಗ್ರೆಸ್ ಏಕೆ ಸಮ್ಮತಿಸಿತು? 1937-39ರ ಅವಧಿಯಲ್ಲಿ ಕಾಂಗ್ರೆಸ್ ಮಂತ್ರಿಮಂಡಲಗಳು ಪ್ರಾಂತ್ಯಗಳು ಕೈಗೊಂಡ ವಿವಿಧ ಕ್ರಮಗಳು ಯಾವುವು?
ಬಿ. ಪೂರ್ಣ ಸ್ವರಾಜ್ಯದ ಕರೆಗೆ ಕರ್ನಾಟಕದ ಜನರು ಹೇಗೆ ಪ್ರತಿಕ್ರಿಯಿಸಿದರು?
ಸಿ. ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಗೆ ಬ್ರಹ್ಮ ಸಮಾಜವು ನೀಡಿದ ಮುಖ್ಯ ಕೊಡುಗೆಗಳನ್ನು ವಿವರಿಸಿ.
ಡಿ. ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನಾರಚನೆಯು ಕರ್ನಾಟಕದ ನಿರ್ಮಾಣದ ಮೇಲೆ ಬೀರಿದ ಪರಿಣಾಮವನ್ನು ಕುರಿತು ಚರ್ಚಿಸಿ.
2. ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-120 ಪದಗಳಲ್ಲಿ ಉತ್ತರಿಸಿ: 10 x 4= 40
ಎ. ಕರ್ನಾಟಕದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯು ಯಾವ ಯಾವ ರೂಪಗಳನ್ನು ಪಡೆದುಕೊಂಡಿತ್ತು?
ಬಿ. 19ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಕುರಿತಂತೆ ಸುಧಾರಣಾಕಾರರು ಮೈಸೂರು ರಾಜ್ಯದಲ್ಲಿ ಮಾಡಿದ ಆರಂಭಿಕ ಪ್ರಯತ್ನಗಳನ್ನು ಕುರಿತು ಚರ್ಚಿಸಿ.
ಸಿ. 1932ರ ನಂತರ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹರಿಜನ ಚಳುವಳಿಯನ್ನು ಕುರಿತು ಟಿಪ್ಪಣಿ ಬರೆಯಿರಿ.
ಡಿ. ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿ ಎಂದರೇನು?
ಇ. ಭಾರತದ ಸ್ವಾತಂತ್ರÂ ಸಂಗ್ರಾಮದಲ್ಲಿ ಕ್ರಾಂತಿಕಾರಿ ಉಗ್ರಗಾಮಿಗಳು ಅಳವಡಿಸಿಕೊಂಡಂಥ ವಿಧಾನಗಳಿಗೆ ಕಾರಣಗಳೇನು? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ಎಫ್. ಮೈಸೂರಿನ ರಾಜಸಂಸ್ಥಾನದ ಮೇಲೆ ರಾಷ್ಟ್ರೀಯ ಚಳುವಳಿಯು ಯಾವ ರೀತಿಯ ಪರಿಣಾಮ ಉಂಟುಮಾಡಿತು?
3. ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-60 ಪದಗಳಲ್ಲಿ ಉತ್ತರಿಸಿ: 5 x 2= 10
ಎ. ಗಾಂಧಿಯವರು ತಮ್ಮ ಹಿಂದ್ ಸ್ವರಾಜ್ ಎಂಬ ಕೃತಿಯ ಮೂಲಕ ತಲುಪಿಸಿದ ಸಂದೇಶದ ಮುಖ್ಯಾಂಶಗಳನ್ನು ತಿಳಿಸಿ.
ಬಿ. ಸ್ವಾತಂತ್ರÂಕ್ಕಾಗಿ ಭಾರತವು ನಡೆಸಿದ ಹೋರಾಟದಲ್ಲಿ ಭಾರತದ ರಾಷ್ಟ್ರೀಯ ಸೇನೆ (ಐNಅ)ಯ ಪಾತ್ರವನ್ನು ಕುರಿತು ಚರ್ಚಿಸಿ.
ಸಿ. ಪ್ರತ್ಯೇಕ ಮತದಾರರ ಸಮುದಾಯದ ಪರವಾಗಿ ಅಂಬೇಡ್ಕರ್ ನಿಲುವು ತಳೆಯಲು ಕಾರಣಗಳೇನು?
4. ಈ ಕೆಳಗಿನ ಎಲ್ಲವುಗಳಿಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2 x 5= 10
ಎ. ಮೀರತ್ ಒಳಸಂಚು ಪ್ರಕರಣ
ಬಿ. ಅಖೀಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು
ಸಿ. ಮೈಸೂರು ರಾಜ್ಯದಲ್ಲಿ ಮಿಲ್ಲರ್ ಸಮಿತಿ ವರದಿಯ ಮಹತ್ವ
ಡಿ. ಕಿತ್ತೂರು ರಾಣಿ ಚೆನ್ನಮ್ಮ
ಇ. ಸಂತಾಲರ ದಂಗೆ
ಭಾಗ- ಬಿ
5. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 200 ರಿಂದ 250 ಪದಗಳಲ್ಲಿ ಉತ್ತರಿಸಿ: 20 x 3= 60
ಎ. ಕೂಡಂಕುಲಂ ಪರಿಯೋಜನೆ ಕುರಿತಾದ ಆಂದೋಲನದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು?
ಬಿ. ಭ್ರಷ್ಟಾಚಾರವು ಭಾರತದ ಪ್ರಗತಿಯನ್ನು ಕಾಡುತ್ತಿದೆಯೇ? ನಿಮ್ಮ ಟೀಕೆಗಳನ್ನು ಬರೆಯಿರಿ.
ಸಿ. ಬಹುದೊಡ್ಡ ಪರಿಸರದ ಸಮಸ್ಯೆಗಳನ್ನು(ಜಾಗತಿಕ ತಾಪಮಾನ ಏರಿಕೆ, ಅಂತರ್ಜಲ ಬರಿದಾಗುವಿಕೆ ಮುಂತಾದ ರೀತಿಯ) ಸರ್ಕಾರದ ಮಟ್ಟದಲ್ಲಿ ಮಾತ್ರ ನಿಭಾಯಿಸಲು ಸಾಧ್ಯ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇನ್ನೂ ಕೆಲವರು, ಸಾಂಸ್ಥಿಕ ಪರಿಹಾರಗಳಿಗಿಂತ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಪ್ರಯತ್ನಗಳು ಹೆಚ್ಚು ನಿರ್ಣಾಯಕ ಹಾಗೂ ಮೌಲ್ಯಯುತವಾಗಿರುತ್ತವೆ ಎಂದು ಭಾವಿಸುತ್ತಾರೆ. ಈ ಎರಡೂ ದೃಷ್ಟಿಕೋನಗಳ ಬಗ್ಗೆ ಚರ್ಚಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಡಿ. ಭಾರತದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದರ ಸಮಾಜೋ- ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಕುರಿತು ಪರಿಶೀಲಿಸಿ.
ಇ. ಐಪಿಎಲ್ ಬ್ರಾÂಂಡ್ ಇರುವುದು ಕ್ರಿಕೆಟ್‌ಗಾಗಿಯೇ ಹೊರತು ಹಗರಣಗಳಿಗಲ್ಲ. ಇಡೀ ದೇಶಾದ್ಯಂತ ಚರ್ಚೆಯನ್ನು ಎಬ್ಬಿಸಿದ ವಿವಾದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ಎಫ್. ಭಾರತದ ಹುಲಿ ಬಿಕ್ಕಟ್ಟನ್ನು ಸರಿಸ್ಕಾ ಅನುಭವವು ಹೇಗೆ ತೋರಿಸಿಕೊಟ್ಟಿದೆ?
6. ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10 x 5= 50
ಎ. ಕಿಂಗ್‌ಫಿಶರ್ ಏರ್‌ಲೈನ್ಸ್ ಪತನಕ್ಕೆ ಕಾರಣಗಳೇನು?
ಬಿ. ಭಾರತ -ಮಲೇಶಿಯ ಮುಕ್ತ ವ್ಯಾಪಾರ ಒಪ್ಪಂದ (ಊಖಅ)ದ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
ಸಿ. ನಗರಗಳಲ್ಲಿ ಸಾರ್ವಜನಿಕ ಸಾರಿಗಯ ಪ್ರಾಮುಖ್ಯತೆಯನ್ನು ಕುರಿತು ಚರ್ಚಿಸಿ.
ಡಿ. ಬದಲಾಗುತ್ತಿರುವ ಬ್ರಹ್ಮಗಿರಿ ವನ್ಯಜೀವಿಧಾಮದ ದೃಶ್ಯವಿವರ ಕುರಿತು ನಿರೂಪಿಸಿ.
ಇ. ಯುಎಸ್ ಹೊಣೆಗಾರಿಕೆ ಮಸೂದೆಯ ವಿಶಿಷ್ಟ ಅಂಶಗಳನ್ನು ತಿಳಿಸಿ.
ಎಫ್. ಸುಸ್ಥಿರ ಅಭಿವೃದ್ಧಿ ಎಂದರೇನು?
ಜಿ. ಭಾರತದಲ್ಲಿ ಆರೋಗ್ಯಕರವಾದ ಸಂಶೋಧನಾ ಸಂಸ್ಕೃತಿ ಇಲ್ಲದ ಕೊರತೆಯಿಂದಾಗುತ್ತಿರುವ ಪರಿಣಾಮಗಳನ್ನು ವಿವರಿಸಿ.
7. ಕೆಳಗಿನ ಯಾವುದಾದರೂ ಆರು ಪ್ರಶ್ನೆಗಳಿಗೆ ಉತ್ತರಿಸಿ, ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50- 60 ಪದಗಳ ಮಿತಿಯಲ್ಲಿರಬೇಕು: 5 x 6= 30
ಎ. ಅಂತರರಾಷ್ಟ್ರೀಯ ವಿಮಾನ ಸಾಗಾಣಿಕೆ ಸಂಘ(ಐnಠಿಛಿrnಚಠಿಜಿಟnಚl ಅಜಿr ಖrಚnsಟಟ್ಟಠಿ ಅssಟcಜಿಚಠಿಜಿಟn) ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.
ಬಿ. ಆರ್‌ಬಿಐ ನೀತಿ 2012- 2013ರ ಮುಖ್ಯಾಂಶಗಳನ್ನು ತಿಳಿಸಿ.
ಸಿ. ಚೆನ್ನೈ- ದಾವೈ ಕಾರಿಡಾರ್ ಪರಿಯೋಜನೆ ಎಂದರೇನು?
ಡಿ. ಮಳೆನೀರಿನ ಕೊಯ್ಲು ಮಾಡುವುದರ ಅಗತ್ಯತೆ ಕುರಿತು ಟಿಪ್ಪಣಿ ಬರೆಯಿರಿ.
ಇ. ಕನ್ನಡ ಲೇಖಕರಾದ ಕುವೆಂಪು ಪ್ರತಿಪಾದಿಸಿರುವ ವಿಶ್ವಮಾನವ ಪರಿಕಲ್ಪನೆಯ ಮಹತ್ವವನ್ನು ನಿರೂಪಿಸಿ.
ಎಫ್. ಅರ್ಹತಾ ಪ್ರಭುತ್ವ ಎಂದರೇನು?
ಜಿ. ಯಾವುದನ್ನು ಸಾಮಾನ್ಯುವಾಗಿ ಸೈಬರ್ ಬೆನ್ನಟ್ಟುವಿಕೆ ಎಂದು ಕರೆಯುತ್ತಾರೆ?
ಎಚ್. ಮರ್ಯಾದಾ ಹತ್ಯೆ ಎಂದರೇನು? ಸಂಕ್ಷಿಪ್ತವಾಗಿ ವಿವರಿಸಿ.
8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20- 25 ಪದಗಳ ಮಿತಿಯಲ್ಲಿರಬೇಕು: 2 x 10 = 20
ಎ. ಹಣ ನೀಡಿಕೆಯ ಸುದ್ದಿಸೇವೆ
ಬಿ. ಖRಐMs
ಸಿ. ಸಹಸ್ರಮಾನದ ಅಭಿವೃದ್ಧಿ ಗುರಿಗಳು
ಡಿ. Mಟsಠಿ ಊಚvಟurಛಿಛ Nಚಠಿಜಿಟn
ಇ. ರಾಷ್ಟ್ರೀಯ ಉಪಚಾರ (Nಚಠಿಜಿಟnಚl ಖrಛಿಚಠಿಞಛಿnಠಿ)
ಎಫ್. ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಪಂಪ ಪ್ರಶಸ್ತಿ
ಜಿ. ಖಜಛಿ 'ಖಜಿsಠಿಛಿಞಚ ಕullಟuಠಿ'
ಎಚ್. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನವು ಒಂದು ಕಾರ್ಯಸಾಧ್ಯ ಪರಿಹಾರವೇ?
ಐ. ಮೊಹಮದ್ ಅಜ್ಮಲ್ ಅಮೀರ್ ಕಸಬ್
ಜೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಭಾಗ- ಸಿ
9. ಎ.'lಛಿss ಠಿಜಚn' ಮತ್ತು 'ಞಟ್ಟಛಿ ಠಿಜಚn' ಆಗಿವ್‌ಗಳ ರಚನೆಯನ್ನು ವಿವರಿಸಿ. ಈ ಗ್ರಾಫ್ಗಳ ಉಪಯೋಗವನ್ನು ತಿಳಿಸಿ. -4
ಬಿ. ಒಂದು ಹೆಸರಾಂತ ವೃತ್ತಪತ್ರಿಕೆಯು ತನ್ನ ಸಾಪ್ತಾಹಿಕ ವಿಭಾಗದಲ್ಲಿ, ಒಂದು ರಾಜ್ಯದೊಳಗಿನ ವಿವಿಧ ವೃತ್ತಿಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕುರಿತು ಕೆಳಕಂಡ ಶೇಕಡಾವಾರು ದತ್ತಾಂಶವನ್ನು ಪ್ರಕಟಿಸಿದೆ:
ವೃತ್ತಿ ಶೇಕಡಾವಾರು- 2007 ಶೇಕಡಾವಾರು 2011
ಸಾಫ್ಟ್ವೇರ್ ಇಂಜಿನಿಯರುಗಳು 25 37
ರಕ್ಷಣಾ ಸೇವೆಗಳು 05 10
ವಿದೇಶಾಂಗ ಸೇವೆಗಳು 12 13
ಪತ್ರಕರ್ತರು 16 28
ನ್ಯಾಯವಾದಿಗಳು 28 32
ವಾಸ್ತು ಶಿಲ್ಪಿಗಳು 04 13
ಸನದು ಪಡೆದ ಲೆಕ್ಕಪರಿಶೋಧಕರು 13 20
ಮನೋರೋಗ ಚಿಕಿತ್ಸಕರು 43 58
ಅ. ಇಲ್ಲಿ ಕೊಟ್ಟಿರುವ ದತ್ತಾಂಶಕ್ಕೆ ಸೂಕ್ತ ರೇಖಾಚಿತ್ರವನ್ನು ರಚಿಸಿ.
ಆ. ಮಹಿಳಾ ಭಾಗವಹಿಸುವಿಕೆಯಲ್ಲಿ ಸ್ವಲ್ಪವೇ ಏರಿಕೆಯಾಗಿರುವ ಹಾಗೂ ಅತಿಶಯವಾದ ಏರಿಕೆಯಾಗಿರುವ ಎರಡು ವೃತ್ತಿಗಳನ್ನು ಹೆಸರಿಸಿ.
ಇ. ಪುರುಷ ಭಾಗವಹಿಸುವಿಕೆಯು ಒಂದೇ ರೀತಿಯಾಗಿ ಇಳಿಮುಖವಾಗಿರುವಂಥ ಎರಡು ವೃತ್ತಿಗಳು ಯಾವುವು?
ಈ. ಒಬ್ಬ ಮಹಿಳಾ ಹೋರಾಟಗಾರ್ತಿ ಹೀಗೆ ಬರೆಯುತ್ತಾರೆ, ಇತರ ವೃತ್ತಿಗಳಿಗೆ ಹೋಲಿಸಿದರೆ ಮಹಿಳೆಯರು ಅಲ್ಪ$ಸಂಖ್ಯಾತರಾಗಿರುವಂಥ ಸಂದರ್ಭದಲ್ಲಿ ಯಾವುದೇ ಒಂದು ಗೊತ್ತಾದ ಕಾಲದಲ್ಲಿ ಮಹಿಳೆಯರು ಗರಿಷ್ಠ ಅನುಕೂಲಗಳನ್ನು ಅನುಭವಿಸುತ್ತಾರೆ. ಇಲ್ಲಿ ಲಭ್ಯವಿರುವ ದತ್ತಾಂಶವನ್ನು ಆಧರಿಸಿ ಈ ಮಾಹಿತಿಯನ್ನು ವಿಮರ್ಶಿಸಿ. -10
ಸಿ. ಅ. ಕೃಷ್ಣಮೂರ್ತಿ ಎಂಬುವವರು 2011ರಲ್ಲಿ ಸರಾಸರಿ ಪ್ರತಿ ತಿಂಗಳೂ ರೂ.465 ಸಂದಾಯ ಮಾಡಿ¨ªಾರೆ. ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳವರೆಗೆ ಸೋಲಾರ್ ಹೀಟಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ರೂ.50 ರಿಯಾಯಿತಿ ಮೊತ್ತವನ್ನು ಕಂಪ್ಯೂಟರ್ ಕಡಿತ ಮಾಡಿಲ್ಲ ಎಂಬುದು ಅವರಿಗೆ ಈಗ ಗೊತ್ತಾಗಿದೆ. ಇದನ್ನು ಸರಿಪಡಿಸಿದರೆ ಮಾಸಿಕ ಸರಾಸರಿ ಎಷ್ಟಾಗುತ್ತದೆ?
ಆ. ಮಂಡಳಿಯ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ 10ನೇ ತರಗತಿಯ ಹುಡುಗರು ಹಾಗೂ ಹುಡುಗಿಯರ ಲಿಂಗಾನುಪಾತವು 4:5 ಆಗಿದೆ. 90 ವಿದ್ಯಾರ್ಥಿಗಳಿರುವ ವರ್ಗದ ಸರಾಸರಿ ಅಂಕಗಳು 64. ಹುಡುಗರ ಸರಾಸರಿ ಅಂಕ ಗಳೀಕೆ 60 ಆಗಿದ್ದರೆ ಹುಡುಗಿಯರು ಗಳಿಸಿದ ಒಟ್ಟು ಅಂಕಗಳು ಎಷ್ಟು? 4 + 2= 6
10. ಎ. ಒಂದು ಕುಟುಂಬದ ಮಾಸಿಕ ಖರ್ಚುಗಳ ದತ್ತಾಂಶವನ್ನು ಈ ಕೆಳಗೆ ನೀಡಲಾಗಿದೆ:
ಬಾಬ್ತು ಒಟ್ಟು ಖರ್ಚಿನ ಶೇಕಡಾವಾರು
ಆಹಾರ 65
ಬಟ್ಟೆ 10
ಮನೆ 12
ಇಂಧನ ಮತ್ತು ದೀಪದ ವ್ಯವಸ್ಥೆ 05
ಇತರೆ 08
ಅ. ಮೇಲ್ಕಂಡ ದತ್ತಾಂಶಕ್ಕೆ ಪೈ ರೇಖಾಚಿತ್ರವನ್ನು ಬರೆಯಿರಿ.
ಆ. ಕುಟುಂಬದ ಒಟ್ಟು ಮಾಸಿಕ ಖರ್ಚು ರೂ.25,000 ಆಗಿದ್ದರೆ ಪ್ರತ್ಯೇಕ ಬಾಬ್ತುಗಳಿಗೆ ಎಷ್ಟೆಷ್ಟು ಖರ್ಚು ಎಂಬುದನ್ನು ಕಂಡುಹಿಡಿಯಿರಿ.
ಇ. ಇಂಧನ ಹಾಗೂ ದೀಪದ ವ್ಯವಸ್ಥೆಗೆ ಖರ್ಚುಮಾಡಿದ್ದಕ್ಕಿಂತ ಶೇಕಡಾವಾರು ಎಷ್ಟು ಹಣವನ್ನು ಮನೆಗೆ ಅಧಿಕವಾಗಿ ಖರ್ಚು ಮಾಡಲಾಗಿದೆ ಎಂಬುದನ್ನು ಲೆಕ್ಕ ಮಾಡಿ. 4 + 2 + 2 = 8
ಬಿ. ಕೆಳಕಂಡ ಬೈವೇರಿಯೇಟ್ ದತ್ತಾಂಶವನ್ನು ಬಳಸಿಕೊಂಡು ಪಿರ್‌ಸನ್ನನ ಸಹ ಸಂಬಂಧ ಗುಣಾಂಕ ಹಾಗೂ ನಿರ್ಧಾರಣಾ ಗುಣಾಂಕವನ್ನು ಲೆಕ್ಕಹಾಕಿ:
x 5 9 13 17 21
y 12 20 25 33 35
ಮತ್ತು ಈ ಎರಡೂ ಗುಣಾಂಕಗಳ ಮೌಲ್ಯಗಳನ್ನು ಸಾಂಖೀÂಕವಾಗಿ ವ್ಯಾಖ್ಯಾನಿಸಿ. -6
ಸಿ. ಈ ಕೆಳಗಿನವುಗಳನ್ನು ಎಷ್ಟು ವಿವಿಧ ರೀತಿಗಳಲ್ಲಿ ಮಾಡಬಹುದು? 2 x 3= 6
ಅ. ಆರು ಪುಸ್ತಕಗಳನ್ನು ಒಂದು ಕಪಾಟಿನಲ್ಲಿ ಜೋಡಿಸುವ ವಿಧಗಳು.
ಆ. ಅತ್ಯಂತ ಹಿರಿಯ ಆಟಗಾರನು ಮೊದಲು ಎಸೆಯುವುದು ಸಾಧ್ಯವಾಗದಂತೆ, ಆರು ಮಂದಿ ಆಟಗಾರರನ್ನು ಕ್ರಿಕೆಟ್ ಚೆಂಡು ಎಸೆಯಲು ವ್ಯವಸ್ಥೆ ಮಾಡುವುದು.
ಇ. ಆರು ಮಂದಿ ಪುರುಷರು ಮತ್ತು ಮೂವರು ಮಹಿಳೆಯರು ಒಂದು ಮೇಜಿನ ಸುತ್ತಲೂ ಕೂರಬೇಕು, ಹೇಗೆಂದರೆ ಪ್ರತಿಯೊಬ್ಬ ಪುರುಷನ ಪಕ್ಕದಲ್ಲಿ ಒಬ್ಬ ಮಹಿಳೆ ಕೂತಿರಬೇಕು. ಇದು ಪ್ರಶ್ನೆಪತ್ರಿಕೆ. ಇದನ್ನು ಈಗ ನೀವೂ ಬಿಡಿಸಲು ಪ್ರಯತ್ನಿಸಬಹುದಲ್ಲವೇ? ಸ್ಕೋರ್ ಎಷ್ಟು?
Sunday, 13 January 2013
Saturday, 12 January 2013
Management Guru Swamy Vivekananda - Article in Vijayavani 12 Jan 2013
Management Guru Swamy Vivekananda - Article in Vijayavani 12 Jan 2013
http://epapervijayavani.in/ Details.aspx?id=5675&boxid=4134 4984
Subscribe to:
Comments (Atom)
Doodle - Google Uncle Jothe Maathu-Kathe - Informative Literature for Children - A Faction
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
Technology Information in Kannada - Article in Prajavani - Education Supplement 28.08.2019
-
QUESTION PAPERS OF GAZETTED PROBATIONERS PRELIMS EXAM 2011 http://kpsc.kar.nic.in/GP%202011%20PRELIMS%20QUESTION%20PAPERS.htm G...











