Tuesday, 5 February 2013

Corruption in India - Article in Udayavani Josh 05 Feb 2013

 Corruption in India - Article in Udayavani Josh 05 Feb 2013
Udayavani
  • ಭ್ರಷ್ಟಾಚಾರ ತಡೆಯುವುದು ಹೇಗೆ? ಒಂದು ವಾಕ್ಯದಲ್ಲಿ ಉತ್ತರಿಸಿ: ನೂರು ಅಂಕದ ಪ್ರಶ್ನೆ

  • ದಿನ ಬೆಳಗಾದರೆ ಮಾಧ್ಯಮಗಳ ತುಂಬಾ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕೂಗೇಳುತ್ತಿರುವುದು ಕೇಳಿಸ

    • Udayavani | Feb 04, 2013
      ದಿನ ಬೆಳಗಾದರೆ ಮಾಧ್ಯಮಗಳ ತುಂಬಾ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕೂಗೇಳುತ್ತಿರುವುದು ಕೇಳಿಸುತ್ತದೆ, ಕಾಣಿಸುತ್ತದೆ. ಇತ್ತೀಚೆಗೆ ನಡೆದ ಕೆಎಎಸ್‌ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪತ್ರಿಕೆ- 1ರಲ್ಲಿ ನೇರವಾಗಿ ಭ್ರಷ್ಟಾಚಾರ ವಿಷಯ ಕುರಿತ ಮುಖ್ಯ ಪ್ರಶ್ನೆಗಳಿದ್ದರೆ (ಭ್ರಷ್ಟಾಚಾರವು ಭಾರತದ ಪ್ರಗತಿಯನ್ನು ಕಾಡುತ್ತಿದೆಯೇ? ನಿಮ್ಮ ಟೀಕೆಗಳನ್ನು ಬರೆಯಿರಿ, ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ), ಪತ್ರಿಕೆ- 2ರಲ್ಲಿ ಸುತ್ತು ಬಳಸಿ ಅದೇ ವಿಷಯಕ್ಕೆ ಸಂಬಂಧಿಸಿದ ನಾಲ್ಕೈದು ಪ್ರಶ್ನೆಗಳಿದ್ದವು. (ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ, ಟಾಟಾ ಟ್ರಕ್‌ ಪ್ರಕರಣ, ಆಡಳಿತದಲ್ಲಿ ಪಾರದರ್ಶಕತೆ ಇತ್ಯಾದಿ) ಹಾಗೆಯೇ ಸಾರ್ವಜನಿಕ ಆಡಳಿತ ಪತ್ರಿಕೆಯಲ್ಲಿಯೂ ಕೂಡ ಈ ಕುರಿತಂತೆ ಪ್ರಶ್ನೆಗಳಿದ್ದವು. 

      ಭ್ರಷ್ಟಾಚಾರದ ಬಗ್ಗೆ ಇತ್ತೀಚೆಗೆ ನಡೆದ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪವಾಗಿದ್ದು, ಸಾಹಿತ್ಯ ವಲಯಕ್ಕೂ ಇದರ ಬಿಸಿ ತಟ್ಟಿದೆ ಎನ್ನುವುದನ್ನು ತೋರಿಸಿದರೆ ಆಶೀಶ್‌ ನಂದಿಯವರ ತಕ್ಷಣದ ಭಾವೋನ್ಮಾದದ ಪರಾಕಾಷ್ಟೆಯ ಮಾತುಗಳು ಭ್ರಷ್ಟಾಚಾರವನ್ನು ಸಮಾಜದ ನಿರ್ದಿಷ್ಟ ಪಂಗಡಗಳ ಕಡೆಗೆ ಬೊಟ್ಟು ಮಾಡಿ, ಸುಪ್ತವಾಗಿ ಕುದಿಯುತ್ತಿದ್ದ ಅಸಮಾಧಾನದ ಅಗ್ನಿಪರ್ವತವೇ ಸ್ಫೋಟಿಸಲಿಕ್ಕೆ ಕಾರಣವೂ ಆಗಿ¨ªಾರೆ. ಯಾವ ಹೇಳಿಕೆಗಳೂ ಸಾರ್ವಕಾಲಿಕ ಸತ್ಯವಲ್ಲ, ತಕ್ಷಣದ ಪ್ರತಿಕ್ರಿಯೆಗೆ ಭಾವೋದ್ರೇಕದ ಪರದೆ ಬೇಡ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ನಿರ್ದಿಷ್ಟ ಕಾರಣ, ವರ್ಗ, ವಯಸ್ಸು, ಲಿಂಗ ಎಂಬ ವರ್ಗೀಕರಣ ಇಲ್ಲ. ಕ್ಯಾನ್ಸರಿನೋಪಾದಿಯಲ್ಲಿ ಹಬ್ಬುತ್ತಿರುವ ಇದಕ್ಕೆ ಮೂಲದಲ್ಲಿಯೇ ಕತ್ತರಿ ಹಾಕಬೇಕಷ್ಟೇ! ಯುವಜನ ಶಕ್ತಿಯು ಮಂಥನಗೊಳ್ಳಲಿ, ಭ್ರಷ್ಟಾಚಾರ ನಿರ್ಮೂಲನೆಯಾಗಲಿ, ನಾಳಿನ ಭಾರತ ಉಜ್ವಲವಾಗಲಿ ಎಂದು ಹಾಡಬೇಕಷ್ಟೇ! 

      ಯಾವ ರಂಗದಲ್ಲಿ ಭ್ರಷ್ಟಾಚಾರವಿಲ್ಲ? ಯಾವ ಕಾರಣಕ್ಕಾಗಿ ಇದು ವ್ಯಾಪಕವಾಗಿ ಹಬ್ಬುತ್ತಿದೆ? ತಡೆಗಟ್ಟಲು ಸಾಧ್ಯವೇ? ಯುವಜನರಿಗೆ ಇದನ್ನು ತಡೆಯುವ ಚೈತನ್ಯ ಎಲ್ಲಿದೆ? ಈ ಎÇÉಾ ವಿಷಯಗಳಿಗೆ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ದಿನನಿತ್ಯ ಬರುತ್ತಿರುವ ಸುದ್ದಿಗಳೇ ಸಾಕ್ಷಿಯಾಗಿದ್ದರೂ ಅವುಗಳನ್ನು ವಿಶ್ಲೇಷಿಸುವ ಕೆಲಸ ಅಷ್ಟಾಗಿ ನಡೆದಿಲ್ಲವೆಂದೇ ಹೇಳಬೇಕು. ಉಪೇಂದ್ರ ಠಾಕೂರ್‌ ಅವರ ಕರಪ್ಷನ್‌ ಇನ್‌ ಏನ್‌ಶಿಯೆಂಟ್‌ ಇಂಡಿಯಾ ಕೃತಿ ಪ್ರಾಚೀನ ಭಾರತದಲ್ಲಿ ಇದ್ದ ಭ್ರಷ್ಟಾಚಾರದ ಸಂಗ್ರಹಿತ ಮಾಹಿತಿ ಒದಗಿಸಿದರೆ ಕಳೆದವಾರ ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ಸಾಮಾಜಿಕ ಕಾರ್ಯಕರ್ತ ವೈ. ಜಿ. ಮುರಳೀಧರನ್‌ ಅವರ ಭ್ರಷ್ಟಾಚಾರದ ಸುಳಿಯಲ್ಲಿ ಭಾರತ(ಪುಟಗಳು: 168, ಬೆಲೆ: ರೂ.120) ಮತ್ತು ಕರಪ್ಷನ್‌ ದ ರಾಟ್‌ ವಿಥಿನ್‌ ಎಂಬ ಕೃತಿಗಳು ಭಾರತದಲ್ಲಿ ಭ್ರಷ್ಟಾಚಾರದ ಪ್ರಸ್ತುತ ಸ್ಥಿತಿ-ಗತಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತದೆ.(ಪುಟಗಳು: 272, ಬೆಲೆ: ರೂ.225) 

      ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ಬಗ್ಗೆ ಪ್ರಕಟವಾಗಿರುವ ಲೇಖನ, ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಗಮನಿಸಿದರೆ ಈ ವಿಚಾರದ ಬಗ್ಗೆ ಬರೆಯಲು ಇನ್ನೇನೂ ಉಳಿದಿಲ್ಲವೇನೊ ಅನಿಸುತ್ತದೆ. ಅಷ್ಟೊಂದು ಮಾಹಿತಿ ರಾಶಿ ಇದೆ. ಆದರೆ ಇದರಲ್ಲಿ ಬಹುಪಾಲು ಸಾಮಗ್ರಿ ಇತ್ತೀಚೆಗೆ ಬೆಳಕಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ವ್ಯಾಖ್ಯಾನವಾಗಿದ್ದು, ಭ್ರಷ್ಟಾಚಾರದ ಮೂಲವನ್ನು ಶೋಧಿಸುವುದಿಲ್ಲ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಅದು ದಿಢೀರನೆ ಈ ಸಮಾಜಕ್ಕೆ ಕಾಲಿಡಲಿಲ್ಲ. ಅದೇ ರೀತಿ ಅದು ತಕ್ಷಣ ನಿರ್ಗಮಿಸುವುದೂ ಇಲ್ಲ. ಆದ್ದರಿಂದ ಭ್ರಷ್ಟಾಚಾರದ ಸಮಸ್ಯೆಗೆ ಕೂಡಲೇ ಪರಿಹಾರ ದೊರಕುವುದಿಲ್ಲ. ಅದರ ಬಗ್ಗೆ ಆಳವಾಗಿ ಅಭ್ಯಾಸ ಮಾಡುವ ಅಗತ್ಯವಿದೆ. ಭ್ರಷ್ಟಾಚಾರ ನಡೆದು ಬಂದ ರೀತಿ, ಅದರ ವಿಸ್ತಾರ ಮತ್ತು ಆಳ, ಅದರ ಕಾರಣಗಳು ಮತ್ತು ಪರಿಹಾರಗಳನ್ನು ಗುರುತಿಸಿ ಅದರ ಆಧಾರದ ಮೇಲೆ ಕಾರ್ಯಸೂಚಿಯೊಂದನ್ನು ತಯಾರಿಸಿ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ, ಎನ್ನುತ್ತಾ ತಮ್ಮ ಪ್ರಯತ್ನ ಈ ಕುರಿತಂತೆ ಹೆಚ್ಚಿನ ಬೆಳಕು ಚೆಲ್ಲುವಂತಹದ್ದು ಎಂದು ತಿಳಿಸಿ¨ªಾರೆ. 

      ಭ್ರಷ್ಟಾಚಾರ ಮತ್ತು ಅದರ ನಿಯಂತ್ರಣಕ್ಕೆ ಬೇಕಾದ ತಾತ್ವಿಕ ನೆಲೆಯನ್ನು ಸಿದ್ಧಪಡಿಸಿ ಕನ್ನಡ ಓದುಗರ ಮುಂದಿಡುವುದು ಅವಶ್ಯಕ. ಭ್ರಷ್ಟಾಚಾರವನ್ನು ಸಾರ್ವಜನಿಕರ ದೃಷ್ಟಿಯಿಂದಲೂ ನೋಡುವ ಅಗತ್ಯವಿದೆ. ಭ್ರಷ್ಟಾಚಾರದ ಸಮಸ್ಯೆಯನ್ನು ಕೇವಲ ಕಾನೂನುಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಆ ಜವಾಬ್ದಾರಿಯನ್ನು ಕೊಟ್ಟು ನಾಗರಿಕರು ಸುಮ್ಮನೆ ಕೈಕಟ್ಟಿ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಭ್ರಷ್ಟಾಚಾರ ಇಡೀ ಸಮುದಾಯದ ಸಮಸ್ಯೆ. ಹಾಗೆಯೇ ಅದನ್ನು ತಡೆಗಟ್ಟುವುದು ಇಡೀ ಸಮುದಾಯದ ಜವಾಬ್ದಾರಿ. ಈ ನಿಟ್ಟಿನಲ್ಲಿ ಜನಸಾಮಾನ್ಯರನ್ನು ಎಚ್ಚರಿಸುವ ಕೆಲಸವೂ ಆಗಬೇಕಿದೆ. ನಾಗರಿಕರನ್ನು ಸತತವಾಗಿ ಈ ಕೆಲಸಕ್ಕೆ ಹಚ್ಚಬೇಕು. ಯಾವುದೋ ಒಂದು ಸಂದರ್ಭದಲ್ಲಿ ಅಥವಾ ಒಂದು ಕಾಲಘಟ್ಟದಲ್ಲಿ ಅವರನ್ನು ರೊಚ್ಚಿಗೆಬ್ಬಿಸಿದರೆ ಭ್ರಷ್ಟಾಚಾರ ನಿಗ್ರಹವಾಗುವುದಿಲ್ಲ. ಭ್ರಷ್ಟಾಚಾರಕ್ಕೆ ದೀರ್ಘಾವಧಿಯ ಹೋರಾಟದ ಅಗತ್ಯವಿದೆ. ಈ ಎರಡೂ ಉದ್ದೇಶಗಳನ್ನಿಟ್ಟುಕೊಂಡು ಈ ಪುಸ್ತಕಗಳು ರಚಿತವಾಗಿವೆ ಎನ್ನುತ್ತಾರೆ ವೈ.ಜಿ. ಮುರಳೀಧರನ್‌. 

      ಭ್ರಷ್ಟಾಚಾರದ ಸುಳಿಯಲ್ಲಿ ಭಾರತ 

      ಸುಳಿಯ ವೃತ್ತ, ಸುಳಿಯ ಆಳ ಮತ್ತು ಸುಳಿಯಿಂದ ಬಿಡುಗಡೆ ಎಂಬ ಮೂರು ವಿಭಾಗಗಳಲ್ಲಿ 12 ಅಧ್ಯಾಯಗಳಲ್ಲಿ ಭಾರತವು ಹೇಗೆ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಒ¨ªಾಡುತ್ತಿದೆ ಎನ್ನುವುದನ್ನು ವಿವರಿಸಿ¨ªಾರೆ. 

      ಪುಸ್ತಕದ ಆರಂಭದಲ್ಲಿ ನೀಡಿರುವ ಗಣ್ಯರ ಅಭಿಪ್ರಾಯಗಳು ಮತ್ತು ಪುಸ್ತಕದ ಬಗೆಗಿನ ಅನಿಸಿಕೆಗಳು ಪ್ರಸ್ತುತ ಸನ್ನಿವೇಶವನ್ನು ವಿವರಿಸುತ್ತವೆ. ಸ್ವಾತಂತ್ರÂ ಹೋರಾಟಗಾರರು, ಲೇಖಕರು, ನಿವೃತ್ತ ನ್ಯಾಯಾಧೀಶರು ಮತ್ತು 79ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಕೋ. ಚೆನ್ನಬಸಪ್ಪ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್‌, ಕೇಂದ್ರ ವಿಚಕ್ಷಣ ಆಯುಕ್ತರು, ಕರ್ನಾಟಕದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಆರ್‌. ಶ್ರೀಕುಮಾರ್‌, ಕರ್ನಾಟಕದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ|| ಚಿರಂಜೀವಿ ಸಿಂಗ್‌, ಸ್ವಾತಂತ್ರÂ ಹೋರಾಟಗಾರರಾದ ಎಚ್‌.ಎಸ್‌. ದೊರೆಸ್ವಾಮಿ, ಮಾಜಿ ಲೋಕಸಭಾ ಸದಸ್ಯ, ಸುರವರಂ ಸುಧಾಕರ ರೆಡ್ಡಿ, ಅಮೆರಿಕದ ಕೆಟರಿಂಗ್‌ ವಿಶ್ವವಿದ್ಯಾಲಯದ ಡಾ|| ಬದರಿನಾಥ್‌ ಕೆ. ರಾವ್‌, ಸಾರ್ವಜನಿಕ ವ್ಯವಹಾರಗಳ ಕೇಂದ್ರದ ಸ್ಥಾಪಕರಾದ ಡಾ|| ಸ್ಯಾಮ್ಯುಯೆಲ್‌ ಪಾಲ್‌ ಅವರ ಪ್ರತಿಕ್ರಿಯೆಗಳು ಭ್ರಷ್ಟಾಚಾರವನ್ನು ಖಂಡಿಸುತ್ತಾ ಅದರ ಬಗ್ಗೆ ವಿಶ್ಲೇಷಣೆ ನಡೆಸಿರುವ ವೈ.ಜಿ. ಮುರಳೀಧರನ್‌ ಅವರ ಪ್ರಯತ್ನವನ್ನು ಶ್ಲಾ ಸಿವೆ. 

      ಭ್ರಷ್ಟಾಚಾರ- ಹಿರಿಯರು ಕಂಡಂತೆ 

      ಭ್ರಷ್ಟಾಚಾರವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಅದು ಒಂದು ದಿನ ಬಯಲಾಗಿಯೇ ಆಗುತ್ತದೆ. ಬಲವಾದ ಸಂಶಯ ಬಂದಾಗ ಸಂಬಂಧಪಟ್ಟವರಿಂದ ಸಮಜಾಯಿಷಿ ಕೇಳಲು, ಅವರನ್ನು ಅಧಿಕಾರದಿಂದ ವಜಾ ಮಾಡಲು, ನ್ಯಾಯಾಲಯದಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲು, ಅವರ ನಡತೆಯನ್ನು ಪರಿಶೀಲಿಸಲು, ಪಂಚಾಯತರನ್ನು ಅಥವಾ ತನಿಖಾಧಿಕಾರಿಯನ್ನು ನೇಮಿಸುವುದು ಸಾರ್ವಜನಿಕರ ಹಕ್ಕು ಹಾಗೂ ಕರ್ತವ್ಯ ಆಗಿರುತ್ತದೆ. 
      -ಮಹಾತ್ಮ ಗಾಂಧಿ 

      ಭ್ರಷ್ಟಾಚಾರ ಅತ್ಯಂತ ಹಾನಿಕರವಾದ್ದು. ಅದರ ವಿರುದ್ಧ ಎಲ್ಲ ಕಾರ್ಯ ಕ್ಷೇತ್ರಗಳಲ್ಲೂ, ಎಲ್ಲ ಹಂತಗಳಲ್ಲೂ ಸಮರ ಸಾರಬೇಕು. 
      - ಡಾ|| ಎಸ್‌. ರಾಧಾಕೃಷ್ಣನ್‌ 

      ನೈತಿಕ ನಿಯಮಗಳು ಮತ್ತು ಆರ್ಥಿಕತೆಯ ನಡುವೆ ಸಂಘರ್ಷ ಉಂಟಾದಾಗ ಗೆಲ್ಲುವುದು ಆರ್ಥಿಕತೆಯೇ. ಇತಿಹಾಸವೇ ಇದಕ್ಕೆ ಸಾಕ್ಷಿ. ಸಾಕಷ್ಟು ಒತ್ತಾಯ ಮಾಡದೇ ಇದ್ದ ಪಕ್ಷದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯಾವತ್ತಿಗೂ ಸ್ವಇಚ್ಛೆಯಿಂದ ಆರ್ಥಿಕತೆಯ ಮೇಲಿನ ತಮ್ಮ ಬಿಗಿಹಿಡಿತವನ್ನು ಬಿಟ್ಟುಕೊಡುವುದಿಲ್ಲ. 
      - ಬಿ. ಆರ್‌. ಅಂಬೇಡ್ಕರ್‌ 

      ಯಾವುದೇ ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿರಬೇಕು ಮತ್ತು ನೈತಿಕವಾಗಿ ಯಾ ಬೌದ್ಧಿಕವಾಗಿ ಶ್ರೇಷ್ಠತೆ ಸಾಧಿಸಿರುವ ಪ್ರಜೆಗಳನ್ನುಳ್ಳ ರಾಷ್ಟ್ರ ಎಂದೆನ್ನಿಸಿಕೊಳ್ಳಬೇಕೆಂದಾದರೆ ಆ ದಿಶೆಯಲ್ಲಿ ಸಮಾಜದಲ್ಲಿನ ಈ ಮೂವರು ಅತ್ಯಂತ ಮಹತ್ವದ, ಪರಿಣಾಮಕಾರಿಯಾದ ಕೊಡುಗೆ ನೀಡಬಲ್ಲರು ಎಂದು ದೃಢ ಆತ್ಮವಿಶ್ವಾಸದಿಂದ ಹೇಳಬÇÉೆ. ಅವರೆಂದರೆ ತಂದೆ, ತಾಯಿ ಮತ್ತು ಶಿಕ್ಷಕ. 
      - ಅಬ್ದುಲ್‌ ಕಲಾಮ್‌ 

      ಅಧಿಕಾರ ಯಾರನ್ನೂ ಭ್ರಷ್ಟಗೊಳಿಸುವುದಿಲ್ಲ. ಭ್ರಷ್ಟಾಚಾರದ ಮೂಲ ಭಯ, ಅಂಜಿಕೆ. ಅಧಿಕಾರದ ಗಾದಿ ಏರಿರುವವರು ಅದು ಎಲ್ಲಿ ತಮ್ಮ ಕೈತಪ್ಪಿ$ಹೋಗುವುದೋ ಎಂಬ ಭಯದಿಂದ ಭ್ರಷ್ಟಾಚಾರಕ್ಕೆ ಮೊರೆ ಹೋಗುತ್ತಾರೆ ಮತ್ತು ಅಧಿಕಾರದ ನೆರಳÇÉೇ ಅಧೀನರಾಗಿರುವವರು, ಪರತಂತ್ರರಾಗಿ ಇರುವವರು ಅದರ ದುಷ್ಪರಿಣಾಮಗಳಿಂದಲೇ ಭ್ರಷ್ಟರಾಗಿಬಿಡುತ್ತಾರೆ. 
      -ಆಂಗ್‌ ಸಾನ್‌ ಸು ಕೀ 

      14ನೇ ಹಣಕಾಸು ಆಯೋಗ 

      ರಿಸರ್ವ್‌ ಬ್ಯಾಂಕಿನ ನಿವೃತ್ತ ಗೌರ್ನರ್‌ ಡಾ.ವೈ.ವಿ. ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 14ನೇ ಹಣಕಾಸು ಆಯೋಗವನ್ನು ರಚಿಸಲಾಗಿದ್ದು, ಈ ಸಂಬಂಧವಾಗಿ ಜನವರಿ 2, 2013ರಂದು ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ಆಯೋಗದ ಅವಧಿ 31.10.2014 ರವರೆಗೆ ನಿಗದಿಯಾಗಿದ್ದು, ಅಷ್ಟರೊಳಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಬೇಕಿರುತ್ತದೆ. ಯೋಜನಾ ಆಯೋಗದ ಸದಸ್ಯ ಪೊ›. ಅಭಿಜಿತ್‌ ಸೆನ್‌, ಕೇಂದ್ರ ಹಣಕಾಸು ಮಾಜಿ ಕಾರ್ಯದರ್ಶಿ ಸುಷ್ಮಾನಾಥ್‌, ನವದೆಹಲಿಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಫೈನಾನ್ಸ್‌ ಆ್ಯಂಡ್‌ ಪಾಲಿಸಿ ಸಂಸ್ಥೆಯ ನಿರ್ದೇಶಕ ಡಾ.ಎಂ. ಗೋವಿಂದ ರಾವ್‌, ರಾಷ್ಟ್ರೀಯ ಅಂಕಿ ಅಂಶ ಆಯೋಗದ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಸುದೀಪೊ¤ ಮುಂಡ್ಲೆ ಅವರು ಈ ಹಣಕಾಸು ಆಯೋಗದ ಸದಸ್ಯರುಗಳಾಗಿದ್ದು, ಅಜಯ್‌ ನಾರಾಯಣ್‌ ಝಾ ಅವರು ಆಯೋಗದ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿ¨ªಾರೆ. 
      ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳನ್ನು ಅಧ್ಯಯನ, ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ, ಸಹಾಯಧನ, ಪಂಚಾಯತ್‌ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ ಈ ಆಯೋಗ¨ªಾಗಿರುತ್ತದೆ. 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳ ಅನುಷ್ಠಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ 2015ರ ಏಪ್ರಿಲ್‌ನಿಂದ ಮುಂದಿನ ಐದು ವರ್ಷಗಳವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸ್ಸುಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಮುಖ್ಯ ಕೆಲಸ. 

      ಐಎಎಸ್‌, ಐಪಿಎಸ್‌ ಪೂರ್ವಭಾವಿ ಪರೀಕ್ಷೆ 2013 

      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು ಇದೇ ಫೆಬ್ರವರಿ 02ರಂದು ಲೋಕಸೇವಾ ಆಯೋಗದ ವೆಬ್‌ಸೈಟ್‌, ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ವಿವರವಾದ ಪ್ರಕಟಣೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ 2013ರ ಮಾರ್ಚ್‌ 04 ಆಗಿದ್ದು, ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2012ರ ಮೇ 19 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2013ರ ನವೆಂಬರ್‌ 08ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯುತ್ತವೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! 
      ಹೆಚ್ಚಿನ ಮಾಹಿತಿ ಹಾಗು ಮಾದರಿ ಪತ್ರಿಕೆಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

      ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪರೀಕ್ಷೆ 2013 

      ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹು¨ªೆಗಳಿಗಾಗಿ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ನಡೆಸುವ ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪ್ರಥಮ ಹಂತದ(ಟೈರ್‌-1) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟವಾಗಿದೆ. ಇದೇ ಜನವರಿ 19ರಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಟೈರ್‌-1 ಪರೀಕ್ಷೆಗಳು ಏಪ್ರಿಲ್‌ 14 ಮತ್ತು 21ರಂದು ನಡೆಯಲಿದ್ದು, ಇದರಲ್ಲಿ ಆಯ್ಕೆಯಾದವರಿಗಾಗಿ ಟೈರ್‌-2 ಪರೀಕ್ಷೆಗಳು ಜುಲೈ 21 ಮತ್ತು ಸೆಪ್ಟೆಂಬರ್‌ 20ರಂದು ನಡೆಯಲಿವೆ. ಅಂತಿಮವಾಗಿ ಸ್ಕಿಲ್‌ಟೆಸ್ಟ್‌/ ಕಂಪ್ಯೂಟರ್‌ ಪರೀಕ್ಷೆ/ ಆಯ್ಕೆ ಸಂದರ್ಶನವೂ ಕೆಲವು ಹು¨ªೆಗಳಿಗೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! 
      ಹೆಚ್ಚಿನ ಮಾಹಿತಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

      ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ನಲ್ಲಿ ಕ್ರಾಷ್‌ಕೋರ್ಸ್‌ 

      ಮೈಸೂರಿನಲ್ಲಿರುವ ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಟೆಕ್ನಾಲಜಿ(ಇಐಕಉಖ) ಮೂಲಕ ಪರಿಶಿಷ್ಟ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಂದ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಟೆಕ್ನಾಲಜಿ ಟ್ರೆ„ನಿಂಗ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಯೋಮಿತಿ 18 ರಿಂದ 35 ವರ್ಷಗಳು. ತರಬೇತಿಯ ಅವಧಿ ಆರು ತಿಂಗಳು. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ, ವಸತಿ ನೀಡಿ ಮಾಹೆಯಾನ ರೂ.500 ಶಿಷ್ಯವೇತನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.02.2013. ಅರ್ಜಿಗಳನ್ನು ಜಿÇÉಾ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿ ಅಥವಾ ಜಿÇÉಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗಳಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಉಪನಿರ್ದೇಶಕರು, ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಟೆಕ್ನಾಲಜಿ, 437/ಎ, ಹೆಬ್ಟಾಳ ಇಂಡಸ್ಟ್ರಿಯಲ್‌ ಏರಿಯಾ, ಮೈಸೂರು- 570 016. ದೂರವಾಣಿ: 0821-2510349 / 2416128

Tuesday, 29 January 2013

LEAD Prayana 2013 - Article in Udayavani Josh 29 Jan 2013


LEAD Prayana 2013 - Article in Udayavani Josh 29 Jan 2013
Udayavani
  • ಮಹಾ ಪ್ರಯಾಣ: 2000 ಕಿಲೋಮೀಟರ್‌ಗಳ ಸುತ್ತಾಟ

  • ದೇಶದ ವಿವಿಧ ರಾಜ್ಯಗಳಿಂದ ಬಂದ 100 ಉತ್ಸಾಹಿ ಯುವಜನರು.

    • Udayavani | Jan 28, 2013
      ದೇಶದ ವಿವಿಧ ರಾಜ್ಯಗಳಿಂದ ಬಂದ 100 ಉತ್ಸಾಹಿ ಯುವಜನರು. 
      14 ದಿನಗಳು. 
      12 ಸಾಧಕರ(ರೋಲ್‌ಮಾಡೆಲ್‌) ಭೇಟಿ. 
      ಆಂಧ್ರ ಕರ್ನಾಟಕ ಸೇರಿ 9 ಆಯ್ದ ಸಾಧನಾ ಕ್ಷೇತ್ರಗಳು. 
      ಒಂದು ಮಹಾ ಪ್ರಯಾಣ! 

      ಇದೇ ಜನವರಿ 17ರಿಂದ ಆರಂಭಗೊಂಡು 30ರಂದು ಮುಕ್ತಾಯಗೊಳ್ಳುತ್ತಿರುವ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ಆಯೋಜಿಸಿರುವ ಲೀಡ್‌ ಪ್ರಯಾಣ 2013 ಯುವನಾಯಕತ್ವವನ್ನು ಉತ್ತೇಜಿಸಿ ಬೆಳೆಸುವ, ನೋಡಿ-ಕಲಿಯುವ, ಮಾಡಿ-ತಿಳಿಯುವ, ಕನಸನ್ನು ಸಾಕಾರಗೊಳಿಸುವ ಅವಕಾಶವಾಗಿದೆ. 

      ಲೀಡ್‌ ಪ್ರಯಾಣ ಎಲ್ಲಿಗೆ? 
      ಜನವರಿ 17- ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್ನಿನ ಸಹಸ್ಥಾಪಕಿ ಜಯಶ್ರೀ ದೇಶಪಾಂಡೆಯಿಂದ ಲೀಡ್‌ ಪಯಣ 2013ಕ್ಕೆ ಚಾಲನೆ, ಸಾಧಕರ ಭೇಟಿಯ ಪ್ರಯಾಣ ಆರಂಭ 
      ಜನವರಿ 18- ಆಂಧ್ರದ ಕುಪ್ಪಂನಲ್ಲಿ ಅಗಸ್ತÂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ಗೆ ಭೇಟಿ, ಶ್ರಮದಾನದ ಮೂಲಕ ಕಲಿಕೆ 
      ಜನವರಿ 19- ಕುಪ್ಪಂನಲ್ಲಿ ಪರಿಸರ ಪಯಣ- ಇಕೊ ವಾಕ್‌- ಅಗಸ್ತÂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಸ್ಥಾಪಕ ರಾಮ್‌ಜಿ ರಾಘವನ್‌ ಜೊತೆ ಸಂವಾದ- ಬೆಂಗಳೂರಿಗೆ ಪಯಣ 
      ಜನವರಿ 20- ಬೆಂಗಳೂರಿನಲ್ಲಿ ಉದ್ಯಮಿಗಳಾದ ಮ್ಯಾಗ್ಸೆàಸೆ ಪ್ರಶಸ್ತಿ ಪುರಸ್ಕತ ಸೆಲ್ಕೊ ಸೋಲಾರ್‌ನ ಹರೀಶ್‌ ಹಂದೆ, ಅಘÂìಂ ಸಂಸ್ಥಾಪಕಿ ರೋಹಿಣಿ ನಿಲೇಕಣಿ, ದೇಶಪಾಂಡೆ ಫೌಂಡೇಶನ್ನಿನ ಸಿಇಓ ನವೀನ್‌ ಝಾ, ಸಂಕಲ್ಪ$ಸೆಮಿಕಂಡಕ್ಟರ್ನ ವಿವೇಕ್‌ ಪವಾರ್‌, ರೆಡ್‌ಬಸ್‌ ಸಂಸ್ಥೆಯ ಫ‌ಣೀಂದ್ರ ಸಮಾ ಮತ್ತು ಐಎಎಸ್‌ ಅಧಿಕಾರಿ ಪಿ.ಮಣಿವಣ್ಣನ್‌ ಮೊದಲಾದ ಸಾಧಕರೊಂದಿಗೆ ಸಂವಾದ, ಗುಂಪು ಚರ್ಚೆ 
      ಜನವರಿ 21- ದೊಡ್ಡಬಳ್ಳಾಪುರಕ್ಕೆ ಭೇಟಿ- ಸಾವಯವ ಕೃಷಿಯ ಪ್ರಾತ್ಯಕ್ಷಿಕೆ, ಪರಿಚಯ, ಪ್ರಯೋಗಾನುಭವ, ಕಾರ್ಯಾನುಭವ, ಹಿರಿಯ ಕೃಷಿತಜ್ಞ ಡಾ.ಎಲ್‌. ನಾರಾಯಣ ರೆಡ್ಡಿಯವರೊಂದಿಗೆ ಸಂವಾದ- ಮೈಸೂರಿನೆಡೆಗೆ ಪಯಣ 
      ಜನವರಿ 22- ಮೈಸೂರಿನಲ್ಲಿ ಸುತ್ತೂರು ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರೊಂದಿಗೆ ಸಂವಾದ, ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ, ಜೆಎಸ್‌ಎಸ್‌ ವೈದ್ಯಕೀಯ ವಿಶ್ವವಿದ್ಯಾಲಯ, ಭೇಟಿ, ಕಲಿಕೆ, ಸಂವಾದ 
      ಜನವರಿ 23- ಮೈಸೂರಿನ ಇನ್‌ಫೋಸಿಸ್‌ ಕ್ಯಾಂಪಸ್‌ ಭೇಟಿ, ಸಾಧಕರ ಭೇಟಿ, ಸಂವಾದ, ಮಣಿಪಾಲದೆಡೆ ಪಯಣ 
      ಜನವರಿ 24- ಮಣಿಪಾಲ ವಿಶ್ವವಿದ್ಯಾಲಯಕ್ಕೆ ಭೇಟಿ, ಪೊ›-ಚಾನ್ಸಲರ್‌ ಡಾ.ಎಚ್‌.ಎಸ್‌. ಬÇÉಾಳ್‌ ಮತ್ತು ವೈಸ್‌ ಪೊ›-ಚಾನ್ಸಲರ್‌ ಡಾ.ಎಚ್‌. ವಿನೋದ್‌ ಭಟ್‌ ಅವರೊಂದಿಗೆ ಸಂವಾದ, ಗುಂಪು ಚರ್ಚೆ, ಮಂಗಳೂರಿಗೆ ಪಯಣ 
      ಜನವರಿ 25- ಮಂಗಳೂರಿನಲ್ಲಿ ಐಓಬಿ ಮುಖ್ಯ ವ್ಯವಸ್ಥಾಪಕ ಎಂ. ನರೇಂದ್ರ ಅವರೊಂದಿಗೆ ಸಂವಾದ, ಕ್ಯಾಂಪಸ್‌ ಭೇಟಿ, ಸಣ್ಣ ಕೈಗಾರಿಕೆಗಳಿಗೆ ಭೇಟಿ, ನ್ಯಾನೋಪಿಕ್ಸ್‌ಗೆ ಭೇಟಿ, ಧರ್ಮಸ್ಥಳಕ್ಕೆ ಪಯಣ 
      ಜನವರಿ 26- ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸಂವಾದ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಪ್ರಾಜೆಕ್ಟ್ಗೆ ಭೇಟಿ, ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ಪರಿಚಯ, ಭಾಗವಹಿಸುವಿಕೆಯ ಮೂಲಕ ಕಲಿಕೆ 
      ಜನವರಿ 27- ಹುಬ್ಬಳ್ಳಿ ಕಡೆಗೆ ಮರುಪ್ರಯಾಣ, ಮಾರ್ಗದಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ, ಚಟುವಟಿಕೆಗಳು
      ಜನವರಿ 28- ಹುಬ್ಬಳ್ಳಿಯಲ್ಲಿ ಇನ್‌ಫೋಸಿಸ್‌ನ ಸುಧಾಮೂರ್ತಿ ಅವರೊಂದಿಗೆ ಸಂವಾದ, ಕಲಕೇರಿಯ ಸಂಗೀತ ವಿದ್ಯಾಲಯಕ್ಕೆ ಭೇಟಿ, ವರೂರಿನ ವಿಆರ್‌ಎಲ್‌ ಕ್ಯಾಂಪಸ್‌ಗೆ ಭೇಟಿ, ಅಕ್ಷಯಪಾತ್ರ ಖ್ಯಾತಿಯ ಇಸ್ಕಾನ್‌ಗೆ ಭೇಟಿ, ಸಾಧಕರೊಂದಿಗೆ ಸಂವಾದ, ಚರ್ಚೆ, ಧಾರವಾಡಕ್ಕೆ ಪಯಣ 
      ಜನವರಿ 29- ಹುಬ್ಬಳ್ಳಿ-ಧಾರವಾಡದಲ್ಲಿನ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರಕ್ಕೆ ಮತ್ತು ಮಾರ್ಕೊಪೋಲೊ ಘಟಕಕ್ಕೆ ಭೇಟಿ, ದೇಶಪಾಂಡೆ ಫೌಂಡೇಶನ್ನಿನ ಗುರುರಾಜ ದೇಶಪಾಂಡೆ ಅವರೊಂದಿಗೆ ಸಂವಾದ, ವಿಚಾರ ವಿನಿಮಯ, ಚರ್ಚೆ 
      ಜನವರಿ 30- ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ ಆಯೋಜಿಸಿರುವ ಯುವ ಸಮ್ಮೇಳನದಲ್ಲಿ ಭಾಗವಹಿಸಿ ಟಾಟಾ ಸಮೂಹದ ರತನ್‌ ಟಾಟಾ, ಇನ್‌ಫೋಸಿಸ್‌ನ ನಾರಾಯಣ ಮೂರ್ತಿ, ಡಾ. ರಫ‌ುನಾಥ ಮಾಶೆಲ್ಕರ್‌ ಅವರೊಂದಿಗೆ ಸಂವಾದ. ಪಯಣದ ಸಮಾರೋಪ. 

      ಲೀಡ್‌ ಪ್ರಯಾಣ ಏತಕ್ಕೆ? 
      ನೈಜಪರಿಸರದಲ್ಲಿ ಸಾಧಕರ ಅಂಗಳದಲ್ಲಿಯೇ ಸಾಧನೆಯ ಪರಿಚಯ, ಸಾಧನೆಯ ಹಾದಿಯ ಪ್ರತ್ಯಕ್ಷ ಅನುಭವ, ವೈವಿಧ್ಯಮಯ ಪರಿಸರ, ವಿವಿಧ ರಾಜ್ಯಗಳಿಂದ ಬಂದ ಪ್ರತಿಭಾವಂತರೊಂದಿಗೆ ಬೆರೆತು ಕಲಿಯುವುದು, ನಾಯಕತ್ವದ ಪರಿಚಯ ಮಾಡಿಕೊಂಡು ಭವಿಷ್ಯದ ನಾಯಕತ್ವದ ಜವಾಬ್ದಾರಿ ನಿರ್ವಹಿಸಲು ಬೇಕಾದ ತರಬೇತಿ ಪಡೆದುಕೊಳ್ಳುವುದು, ಪ್ರಾತ್ಯಕ್ಷಿಕೆಗಳಿಂದ ಕಲಿಯುವುದಕ್ಕೆ 2011ರಿಂದ ಪ್ರತಿ ವರ್ಷವೂ ಲೀಡ್‌ ಪಯಣ ನಡೆಯುತ್ತಲೇ ಬಂದಿದೆ. 
      ನಾಯಕತ್ವದ ಹೊಣೆಗಾರಿಕೆಯನ್ನು ಪರಿಚಯಿಸುವುದರ ಮೂಲಕ ಪ್ರತಿಯೊಬ್ಬರೂ ನಾಯಕರಾಗಿ ಹೊರಹೊಮ್ಮುವಂತೆ ಮಾಡುವ ದೂರದೃಷ್ಟಿಯಿಂದ ಯುವಜನರಲ್ಲಿ ವಿನೂತನ ಆಲೋಚನೆಗಳನ್ನು ಬೆಳೆಸುವ, ಹುರಿದುಂಬಿಸುವ, ಹೊಸತನ್ನು ಹುಡುಕಿ ತೆಗೆಯುವ ಆಸಕ್ತಿ ಕೆರಳಿಸುವ ಉದ್ದೇಶದೊಂದಿಗೆ ಕಲಿಕೆ, ಮುನ್ನುಗ್ಗುವಿಕೆ, ನಾಯಕತ್ವ ವಹಿಸಿಕೊಳ್ಳುವಿಕೆಯನ್ನು ಸಾಧಿಸಿ ತೋರಿಸುವ ಈ ಲೀಡರ್ ಆಕ್ಸಿಲರೇಟಿಂಗ್‌ ಡೆವಲಪ್‌ಮೆಂಟ್‌ ಪ್ರಯಾಣ ದೇಶದ ವಿವಿಧ ಪ್ರಾಂತ್ಯಗಳ ಜನರನ್ನು ಒಟ್ಟಿಗೆ ಸೇರಿಸಿ ಬಾಂಧವ್ಯ ಬೆಸೆಯುವುದರ ಜೊತೆ ಅರಿವಿನ ಹರಹನ್ನು ವಿಸ್ತರಿಸುವುದಾಗಿದೆ. 

      ಲೀಡ್‌ ಪ್ರಯಾಣದ ತಂಡ 
      ಜಯಶ್ರೀ ಮತ್ತು ಗುರುರಾಜ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ನವೀನ್‌ ಝಾ, ಅಜಯ್‌ ಸುಮನ್‌ ಶುಕ್ಲಾ ಅವರ ನಾಯಕತ್ವದಲ್ಲಿನ ಲೀಡ್‌ ತಂಡದ ಮ್ಯಾನೇಜರ್‌ಗಳಾಗಿ ದೀಪಶ್ರೀ ರಾಮ್‌ಮೋಹನ್‌, ರಾಧಾಕೃಷ್ಣ ನಾಯಕ್‌, ಪ್ರಶಾಂತ್‌ ದೇಶಪಾಂಡೆ, ಗೀತಾ ಹೆಗಡೆ, ಕವಿತಾ ಕೌಲಗಿ, ಅಮೃತ್‌ ಪಾಟೀಲ್‌, ಅಭಿನಂದನ್‌ ಕೆ, ವಿನೋದ್‌ ಕುಮಾರ್‌ ಮಾರ್ಗದರ್ಶನ ಮಾಡುತ್ತಿದ್ದು, ದೀಪಕ್‌ ಗಿರಿಯಾಪುರ ಅವರು ಮಾಸ್ಟರ್‌ ಲೀಡರ್‌ಶಿಪ್‌ ಅಡಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿ¨ªಾರೆ. ದೇಶದ 10 ರಾಜ್ಯಗಳಿಂದ 100 ಯುವಜನರನ್ನು ಮಾತ್ರ ಈ ಪ್ರಯಾಣಕ್ಕೆ ಆಯ್ಕೆಮಾಡಿ ಮೂರು ಬಸ್‌ಗಳಲ್ಲಿ ಸಂಚಾರಕ್ಕೆ ಕಳುಹಿಸಿಕೊಡಲಾಗಿದೆ. 

      ಏನಿದು ಲೀಡ್‌? 
      2008ರ ಆಗಸ್ಟ್‌ 15ರಂದು ಆರಂಭವಾದ ಲೀಡ್‌ ಕಾರ್ಯಕ್ರಮ ಯುವಜನರು, ಅದರಲ್ಲೂ ಮುಖ್ಯವಾಗಿ ತಾಂತ್ರಿಕ ಶಿಕ್ಷಣ ಪಡೆಯುವ ಯುವಜನರು ನಿರ್ಮಿಸುವ, ಸಂಘಟಿಸುವ ಪ್ರಾಜೆಕ್ಟ್ಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿದ್ದು, ದೇಶಪಾಂಡೆ ಫೌಂಡೇಶನ್‌ ಈ ವಿಶೇಷ ಪ್ರಾಜೆಕ್ಟ್ಗಳನ್ನು ಬೆಂಬಲಿಸುವ, ನೆರವು ನೀಡುವ, ಉತ್ತಮ ಪಡಿಸುವ ಮತ್ತು ಹೆಚ್ಚಿನ ಅವಕಾಶ ಕಲ್ಪಿಸುವ ಕಾರ್ಯಕ್ರಮವಾಗಿದೆ. ಲೀಡ್‌ನ‌ ಹಣಕಾಸಿನ ನೆರವು ಮತ್ತು ಬೆಂಬಲದಿಂದ ಯುವನಾಯಕತ್ವವನ್ನು ಹುರಿದುಂಬಿಸುವ ಕನಸು ಮತ್ತು ಅದನ್ನು ಸಾಕಾರಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿ ಇದರಲ್ಲಿದೆ. ಉತ್ತರ ಕರ್ನಾಟಕ ಭಾಗದ ಹಲವು ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಈ ಪ್ರಾಜೆಕ್ಟ್‌ನ ಪ್ರಯೋಜನ ಪಡೆದುಕೊಳ್ಳುತ್ತಿ¨ªಾರೆ ಮತ್ತು ಲೀಡ್‌ ಕಾರ್ಯಕ್ರಮಕ್ಕೆ ಹೆಸರು ನೊಂದಾಯಿಸಿ¨ªಾರೆ. 

      ಲೀಡ್‌ನ‌ಲ್ಲಿ ಯಾರು ಭಾಗವಹಿಸಬಹುದು? 
      ಸೇವಾ ಮನೋಭಾವ ಇರುವ, ಕ್ರಿಯೇಟಿವ್‌ ಐಡಿಯಾಗಳ ಸಾಕಾರಕ್ಕಾಗಿ ಕಾತರಿಸುತ್ತಿರುವ, ನಾಯಕತ್ವ ಗುಣಗಳಿರುವ, ತಾನೂ ಬೆಳೆಯುತ್ತಾ ತನ್ನ ತಂಡವನ್ನು ಬೆಳೆಸಲು ಉತ್ಸುಕನಾಗಿರುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿ ಈ ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಲು ಮತ್ತು ಲೀಡ್‌ ಸದಸ್ಯತ್ವ ತೆಗೆದುಕೊಳ್ಳಲು ಅರ್ಹನಾಗಿರುತ್ತಾನೆ. ತನ್ನ ಸುತ್ತಲಿನ ಸಮಾಜದ ಉಪಯೋಗಕ್ಕೆ ಬರುವಂತಹ ಯಾವುದಾದರೂ ಒಂದು ಪ್ರಾಜೆಕ್ಟನ್ನು ಹಾಕಿಕೊಂಡು, ತನ್ನೊಂದಿಗೆ ಐದು ಮಂದಿಯ ತಂಡವನ್ನು ಕಟ್ಟಿಕೊಂಡು, ಕನಿಷ್ಟ ವಾರಕ್ಕೆ 4-5 ಗಂಟೆಗಳಷ್ಟು ಸಮಯ ಕಾರ್ಯನಿರ್ವಹಿಸಲು ಸಿದ್ಧವಿರುವವರು ಈ ಲೀಡ್‌ ಕಾರ್ಯಕ್ರಮದ ನೆರವು ಪಡೆಯಬಹುದು. 
      ಈಗಾಗಲೇ ಲೀಡ್‌ ಐಡಿಯಾ ಬ್ಯಾಂಕಿನಲ್ಲಿ 178ಕ್ಕೂ ಹೆಚ್ಚು ಐಡಿಯಾಗಳ ಪಟ್ಟಿಯೇ ಇದ್ದು ದಿನದಿನವೂ ಇದು ಬೆಳೆಯುತ್ತಿದೆ. ಇವುಗಳ ಜೊತೆಗೆ ತಮ್ಮದೇ ಹೊಸ ಐಡಿಯಾಗಳನ್ನು ಸೇರಿಸಲು ವಿದ್ಯಾರ್ಥಿಗಳಿಗೆ ಅವಕಾಶ ಇದ್ದೇ ಇದೆ. 

      ಯುವ ಸಮಾವೇಶ- 2013 
      ಲೀಡ್‌ ಮೇಳ ಎಂದು ಪ್ರಚಲಿತವಿದ್ದ ಈ ಯುವ ಉತ್ಸಾಹಿಗಳ ವಾರ್ಷಿಕ ಸಮಾವೇಶ 2011 ರಿಂದ ಯುವ ಮೇಳವಾಗಿ(ಯೂತ್‌ ಸಮಿಟ್‌) ಆಯೋಜಿತಗೊಳ್ಳುತ್ತಿದ್ದು, 2012ರ ಜನವರಿ 15 ರಂದು 2ನೇ ಯುವಮೇಳ ನಡೆದಿತ್ತು. ಇದೀಗ 2013ರ ಜನವರಿ 30ರಂದು ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿನ ದೇಶಪಾಂಡೆ ಫೌಂಡೇಶನ್ನಿನ ಲೀಡ್‌ ಕೇಂದ್ರದಲ್ಲಿ 3ನೇ ಯುವಮೇಳ ಆಯೋಜಿತವಾಗಿದ್ದು 2000ಕ್ಕೂ ಹೆಚ್ಚು ಯುವ ಉತ್ಸಾಹಿಗಳು ಭಾಗವಹಿಸುತ್ತಿ¨ªಾರೆ. ಟಾಟಾ ಸಂಸ್ಥೆಗಳ ನಿವೃತ್ತ ಛೇರ¾ನ್‌ ರತನ್‌ ಟಾಟಾ ಅವರು ಪ್ರಧಾನ ಭಾಷಣ ಮಾಡಲಿದ್ದು, ಇನ್‌ಫೊಸಿಸ್‌ನ ಎನ್‌.ಆರ್‌. ನಾರಾಯಣ ಮೂರ್ತಿ, ಸುಧಾ ಮೂರ್ತಿ, ಡಾ. ರಘುನಾಥ್‌ ಮಾಶೆಲ್ಕರ್‌, ಡಾ. ಗುರುರಾಜ ದೇಶ್‌ ದೇಶಪಾಂಡೆ, ಲಕ್ಷಿ¾à ಪ್ರಾಚುರಿ, ರಮೇಶ್‌ ರಾಸ್ಕರ್‌ ಮೊದಲಾದವರು ಈ ಸಮಾವೇಶದಲ್ಲಿ ಯುವ ಉತ್ಸಾಹಿಗಳಿಗೆ ಮಾರ್ಗದರ್ಶನ ಮಾಡಲಿ¨ªಾರೆ, ಸಂವಾದ, ಚರ್ಚೆಗಳಲ್ಲಿ ಭಾಗವಹಿಸಲಿ¨ªಾರೆ. 

      ದೇಶಪಾಂಡೆ ಪ್ರತಿಷ್ಠಾನ 
      ಸುಧಾ ಮೂರ್ತಿಯವರ ಸಹೋದರಿ ಜಯಶ್ರೀ ದೇಶಪಾಂಡೆ ಮತ್ತು ಗುರುರಾಜ ದೇಶಪಾಂಡೆ ಅವರು ದೇಶಪಾಂಡೆ ಪ್ರತಿಷ್ಠಾನವನ್ನು 1996ರಲ್ಲಿ ಸ್ಥಾಪಿಸಿದರು. ವಿದೇಶಗಳಲ್ಲಿ ಮಾತ್ರವಲ್ಲದೇ ಭಾರತದಲ್ಲಿಯೂ ಸಂಶೋಧನೆ, ಕೌಶಲ್ಯ ಮತ್ತು ಸಾಮಾಜಿಕ ಕಳಕಳಿ ಇರುವ ಉದ್ಯಮಶೀಲ ಯುವಜನರನ್ನು ಸಂಘಟಿಸಲು 2007ರಲ್ಲಿ ಹುಬ್ಬಳ್ಳಿ-ಧಾರವಾಡ ವಲಯದ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರವನ್ನು ಆರಂಭಿಸಿದರು. ಲೀಡ್‌ ಕಾರ್ಯಕ್ರಮವು ಈ ಸಾಮಾಜಿಕ ನಾಯಕತ್ವದ ಭಾಗವಾಗಿ ಉತ್ತರಕರ್ನಾಟಕದ ಜಿÇÉೆಗಳಲ್ಲಿನ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ದೇಶಪಾಂಡೆ ಫೌಂಡೇಶನ್ನಿನ ಸಮರ್ಥ ಮಾರ್ಗದರ್ಶನ ಮತ್ತು ಸ್ಟೈಫ‌ಂಡ್‌ನ‌ ನೆರವಿನಿಂದ ಹಲವು ಹೊಸ ಸಂಶೋಧನೆಗಳು, ಪ್ರಾಜೆಕ್ಟ್ಗಳು ನಿರ್ಮಾಣಗೊಳ್ಳುತ್ತಿವೆ. ಲೀಡ್‌ ಕಾರ್ಯಕ್ರಮದ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳಿಗೆ ಅವರಿಗೆ ಜಗತ್ತಿನ ಹಲವು ಸಾಧಕರನ್ನು (ರೋಲ್‌ಮಾಡೆಲ್‌) ಭೇಟಿಯಾಗುವ, ಅವರೊಡನೆ ಸಂವಾದ ನಡೆಸುವ ಅವಕಾಶ ಲಭಿಸುತ್ತಿದೆ. ಅವರಲ್ಲಿರುವ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು, ಪ್ರಾಜೆಕ್ಟ್ಗಳನ್ನು ಹಮ್ಮಿಕೊಳ್ಳಲು, ಸ್ಥಳೀಯ ಸಮುದಾಯಗಳೊಂದಿಗೆ ಸಂವಾದ ನಡೆಸಿ ಅವರ ಅಗತ್ಯಗಳಿಗೆ, ಅನುಕೂಲಗಳಿಗೆ ಸರಿಹೊಂದುವ ಸಾರ್ವಜನಿಕ ಸೌಕರ್ಯಗಳನ್ನು ನಿರ್ಮಿಸಲು, ಸಂವಹನ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ಪ್ರಾತ್ಯಕ್ಷಿಕೆ ಮತ್ತು ಪ್ರತ್ಯಕ್ಷÂ ಕಲಿಕೆ, ಅನುಭವ ಗಳಿಸಿಕೊಳ್ಳಲು, ನಾಯಕತ್ವ ವಹಿಸಲು ಉತ್ತಮ ಅವಕಾಶಗಳು ಸಿಗುತ್ತಿವೆ. 

      ಐಎಎಸ್‌, ಐಪಿಎಸ್‌ ಪೂರ್ವಭಾವಿ ಪರೀಕ್ಷೆ 
      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು ಇದೇ ಫೆಬ್ರವರಿ 02ರಂದು ಲೋಕಸೇವಾ ಆಯೋಗದ ವೆಬ್‌ಸೈಟ್‌, ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ವಿವರವಾದ ಪ್ರಕಟಣೆ ಹೊರಡಿಸಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ 2013ರ ಮಾರ್ಚ್‌ 4 ಆಗಿದ್ದು, ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2012ರ ಮೇ 19 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2013ರ ನವೆಂಬರ್‌ 08 ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯುತ್ತವೆ. 
      ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಬರುವ ವಾರದ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! ಹೆಚ್ಚಿನ ಮಾಹಿತಿ ಹಾಗು ಮಾದರಿ ಪತ್ರಿಕೆಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

      ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪರೀಕ್ಷೆ 2013 
      ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹು¨ªೆಗಳಿಗಾಗಿ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ನಡೆಸುವ ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪ್ರಥಮ ಹಂತದ (ಟೈರ್‌-1) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟವಾಗಿದೆ. ಇದೇ ಜನವರಿ 19 ರಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಟೈರ್‌-1 ಪರೀಕ್ಷೆಗಳು ಏಪ್ರಿಲ್‌ 14 ಮತ್ತು 21ರಂದು ನಡೆಯಲಿದ್ದು ಇದರಲ್ಲಿ ಆಯ್ಕೆಯಾದವರಿಗಾಗಿ ಟೈರ್‌-2 ಪರೀಕ್ಷೆಗಳು ಜುಲೈ 21 ಮತ್ತು ಸೆಪ್ಟೆಂಬರ್‌ 20 ರಂದು ನಡೆಯಲಿವೆ. ಅಂತಿಮವಾಗಿ ಸ್ಕಿಲ್‌ಟೆಸ್ಟ್‌, ಕಂಪ್ಯೂಟರ್‌ ಪರೀಕ್ಷೆ, ಆಯ್ಕೆ ಸಂದರ್ಶನವೂ ಕೆಲವು ಹು¨ªೆಗಳಿಗೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು : ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌!

Tuesday, 22 January 2013

KPSC Mains 2011 GS Paper 2 - Article in Udayavani Josh 22 Jan 2013


KPSC Mains 2011 GS Paper 2 - Article in Udayavani Josh 22 Jan 2013
Udayavani
  • ಈ ವಾರದ ಹೋಂವರ್ಕು

  • ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವ

    • Udayavani | Jan 21, 2013
      ಕ್ವೆಶ್ಚನ್‌ ಪೇಪರ್‌ ನಮ್ಮಲ್ಲಿ, ಆನ್ಸರ್‌ ಪೇಪರ್‌ ನಿಮ್ಮಲ್ಲಿ 
      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಿತ್ತು. ದಿನಪತ್ರಿಕೆಗಳ ವಿಸ್ತಾರವಾದ ಓದು, ಪ್ರಸ್ತುತ ಘಟನಾವಳಿಗಳ ಅರಿವು, ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆ ಪ್ರಕಟಿಸಿರುವ ಗ್ಲಿಂಪ್ಸಸ್‌ ಆಫ್ ಕರ್ನಾಟಕ, ಕರ್ನಾಟಕ ಕೈಪಿಡಿ, ಎ ಹ್ಯಾಂಡ್‌ ಬುಕ್‌ ಆಫ್ ಕರ್ನಾಟಕ ಮತ್ತು ಅವುಗಳ ಜೊತೆಗೆ ನೀಡಲಾಗಿದ್ದ ಡಿವಿಡಿಯಲ್ಲಿ ಅಡಕಗೊಳಿಸಲಾಗಿದ್ದ ಆರ್ಥಿಕ ಸಮೀಕ್ಷೆ, ಎಕನಾಮಿಕ್‌ ಸರ್ವೇ, ಇಂಡಿಯ- 2010, ಜನಗಣತಿಯ ಅಂಕಿ ಅಂಶಗಳು ಮತ್ತು ಸಾಮಾನ್ಯ ಜ್ಞಾನ ಮಾಹಿತಿಯನ್ನು ಆಧರಿಸಿದ್ದ ಹಲವು ಪ್ರಶ್ನೆಗಳು ಬಂದಿದ್ದು ಸರ್ಕಾರದ ಅಧಿಕೃತ ಮಾಹಿತಿಯನ್ನು ಆಧರಿಸಿದ್ದ ಇಲಾಖೆಯ ಪ್ರಕಟಣೆಗಳನ್ನು, ಯೋಜನಾದಂತಹ ನಿಯತಕಾಲಿಕೆಗಳನ್ನು ಓದಿದವರಿಗೆ ಸುಲಭವೆನಿಸುವಂತಿದ್ದವು. 

      ಸಾಮಾನ್ಯ ಅಧ್ಯಯನ ಪತ್ರಿಕೆ- 2- 300 ಅಂಕಗಳು- 3 ಗಂಟೆ 
      1. ಭಾರತದ ರಾಜಕೀಯ/ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ 
      2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ 
      3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ 

      2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 2- ಅಂಕಗಳು 300 
      ಭಾಗ - ಎ 
      1. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200ರಿಂದ 250 ಪದಗಳಷ್ಟಿರಲಿ: 20 x 1= 20 
      ಎ. ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಣ್ಣಾ ತಂಡದ ನಡುವಿನ ವಿರಸ ಕುರಿತು ವಿಮಶಾìತ್ಮಕವಾಗಿ ಬರೆಯಿರಿ. 
      ಬಿ. ಇ-ಆಡಳಿತ ಎಂದರೇನು? ಕರ್ನಾಟಕ ಸರ್ಕಾರು ಆರಂಭಿಸಿರುವ ಇ-ಆಡಳಿತ ಪರಿಯೋಜನೆಗಳನ್ನು ಪರಿಶೀಲಿಸಿ. 

      2. ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-125 ಪದಗಳಲ್ಲಿ ಉತ್ತರಿಸಿ. 10x3=30 
      ಎ. ಈಗ ಕಂಡುಬರುತ್ತಿರುವ ರಾಜಕೀಯ ದೃಶ್ಯಾವಳಿಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿಕೊಳ್ಳುವ ನಿರೀಕ್ಷೆಯ ಕುರಿತು ವ್ಯಾಖ್ಯಾನಿಸಿ. 
      ಬಿ. ಕರ್ನಾಟಕದ ಹಿಂದುಳಿದ ವರ್ಗಗಳ ಚಳುವಳಿ ಕುರಿತು ಒಂದು ಟಿಪ್ಪಣಿ ಬರೆಯಿರಿ. 
      ಸಿ. ರಾಜ್ಯ ವಿಧಾನಸಭೆಯ ರಚನೆ, ಅಧಿಕಾರಗಳು ಹಾಗೂ ಕೆಲಸಗಳನ್ನು ವಿವರಿಸಿ. 
      ಡಿ. ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಭಾರತದ ಸಂಸತ್ತಿನಲ್ಲಿ ಲಿಂಗಾಧಾರಿತ ಪಾಲು ನೀಡಿಕೆ ಕುರಿತು ಚರ್ಚಿಸಿ. 
      ಇ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ. 

      3. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-55 ಪದಗಳಲ್ಲಿ ಉತ್ತರಿಸಿ: 5x4=20 
      ಎ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಚನೆ ಹಾಗೂ ಕಾರ್ಯವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ. 
      ಬಿ. ಕೇಂದ್ರ- ರಾಜ್ಯಗಳ ಹಣಕಾಸು ಸಂಬಂಧಗಳನ್ನು ವಿವರಿಸಿ. 
      ಸಿ. ಧಾರ್ಮಿಕ ಸ್ವಾತಂತ್ರÂದ ಹಕ್ಕನ್ನು ಕುರಿತಂತೆ ಸಂವಿಧಾನದಲ್ಲಿರುವ ಉಪಬಂಧಗಳನ್ನು ವಿವರಿಸಿ. 
      ಡಿ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸಂವಿಧಾನಿಕ ರಕ್ಷಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. 
      ಇ. ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ. 
      ಎಫ್. 73ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ವಿಕೇಂದ್ರೀಕರಣವನ್ನು ಕುರಿತು ಪರಿಶೀಲಿಸಿ. 

      4. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20 
      ಎ. ನ್ಯಾಯಮೂರ್ತಿ ಸೋಮಶೇಖರ್‌ ಆಯೋಗ 
      ಬಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ 
      ಸಿ. ಟಾಟಾ ಟ್ರಕ್‌ ಪ್ರಕರಣ 
      ಡಿ. ಡಾ.ಡಿ.ಎಮ್‌. ನಂಜುಂಡಪ್ಪ ಸಮಿತಿ 
      ಇ. ಆಡಳಿತದಲ್ಲಿ ಪಾರದರ್ಶಕತೆ 
      ಎಫ್. ನಾಗರಿಕ ಸಮಾಜ 
      ಜಿ. ಡಿ. ದೇವರಾಜ ಅರಸ್‌ 
      ಎಚ್‌. ವ್ಯಕ್ತಿಯ ಪ್ರತ್ಯಕ್ಷ ಹಾಜರಿ ಆದೇಶ(ರಿಟ್‌) 
      ಐ. ವಲಯ ಪರಿಷತ್ತುಗಳು 
      ಜೆ. ಸರೋಜಿನಿ ಮಹಿಷಿ ವರದಿ 

      ಭಾಗ- ಬಿ 
      5. ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200 ರಿಂದ 250 ಪದಗಳಿಗೆ ಮೀರದಂತಿರಬೇಕು: 20x1=20 
      ಎ. ಕರ್ನಾಟಕದಲ್ಲಿನ ಮಾನವ ಅಭಿವೃದ್ಧಿಯ ಪ್ರಾದೇಶಿಕ ಅಸಮತೆಗಳನ್ನು ವಿವರಿಸಿ. 
      ಬಿ. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಧ್ಯೇಯಗಳು ಹಾಗೂ ವ್ಯಾಪ್ತಿಯನ್ನು ವಿವರಿಸಿ. ಆಹಾರ ಭದ್ರತೆಯನ್ನು ಖಚಿತಪಡಿಸುವುದಕ್ಕೆ ಇದು ನೆರವಾಗುವುದೇ? 

      6. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 125 ಪದಗಳಲ್ಲಿ ಉತ್ತರಿಸಿ: 10x3=30 
      ಎ. ಸ್ಪರ್ಧಾಕಾನೂನಿನ ವಿಶಿಷ್ಟ ಲಕ್ಷಣಗಳೇನು? 
      ಬಿ. ಕರ್ನಾಟಕದಲ್ಲಿ ವಿದೇಶಿ ಹಣದ ನೇರ ಹೂಡಿಕೆಯ ಹರಿವಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ನಿರೂಪಿಸಿ. 
      ಸಿ. ಕರ್ನಾಟಕ ರಾಜ್ಯ ಬಜೆಟ್‌ 2012- 13ರ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿ. 
      ಡಿ. ಕರ್ನಾಟಕದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಕುರಿತು ವ್ಯಾಖ್ಯಾನಿಸಿ. 
      ಇ. ಭಾರತದ ಇಂಧನ ಬಿಕ್ಕಟ್ಟಿನ ಸ್ವರೂಪವನ್ನು ವಿವರಿಸಿ. ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ಸೂಚಿಸಿ. 

      7. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ/ ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50-55 ಪದಗಳ ಮಿತಿಯಲ್ಲಿರಬೇಕು: 5x4=20 
      ಎ. ಯುಎಸ್‌ ಡಾಲರ್‌ಗೆ ಪ್ರತಿಯಾಗಿ ರೂಪಾಯಿಯ ಮೌಲ್ಯವು ಕ್ಷೀಣಿಸುವುದಕ್ಕೆ ಕಾರಣಗಳನ್ನು ನಿರೂಪಿಸಿ. 
      ಬಿ. ಕರ್ನಾಟಕದ ಸಾರ್ವಜನಿಕ ವಿತರಣೆಯಲ್ಲಿರುವ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಿ. 
      ಸಿ. ಕರ್ನಾಟಕದ ಸಾರ್ವಜನಿಕ ವಲಯದ ನೋಟವನ್ನು ವಿವರಿಸಿ. 
      ಡಿ. ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೀವು ಯಾವ ಕಾರ್ಯನೀತಿಯ ಕ್ರಮಗಳನ್ನು ಸೂಚಿಸುತ್ತೀರಿ? 
      ಇ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಭಾರತವು ಆರಂಭಿಸಿರುವ ಕ್ರಮಗಳನ್ನು ವಿವರಿಸಿ. 
      ಎಫ್. ಭಾರತದ ಮೇಲೆ ಯೂರೋಪ್‌ ವಲಯದ ಬಿಕ್ಕಟ್ಟಿನ ಪರಿಣಾಮಗಳನ್ನು ವಿವರಿಸಿ. 

      8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20 
      ಎ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳು 
      ಬಿ. ಉನ್ನತ ಶಿಕ್ಷಣದ ಖಾಸಗೀಕರಣ 
      ಸಿ. ಯುವ ಭಾರತ 
      ಡಿ. ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು 
      ಇ. ಕರ್ನಾಟಕದಲ್ಲಿ ವಿದ್ಯುತ್ಛಕ್ತಿ ವಿತರಣೆ 
      ಎಫ್. ಕರ್ನಾಟಕದ ಹೊಸ ಕೈಗಾರಿಕಾ ನೀತಿ 
      ಜಿ. ಕರ್ನಾಟಕದಲ್ಲಿ ಉದ್ಯೋಗ ಕಾರ್ಯಕ್ರಮಗಳು 
      ಎಚ್‌. ಆಡಳಿತದಲ್ಲಿ ಐಇಖ 
      ಐ. ಪೆಟ್ರೋಲಿಯಂ ಸಬ್ಸಿಡಿಗಳು 
      ಜೆ. ಸಾಲದ ದರ ನಿರ್ಧಾರಣಾ ಏಜೆನ್ಸಿಗಳು 

      ಭಾಗ- ಸಿ 
      9. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20 
      ಎ. ಕರ್ನಾಟಕದ ನದಿ ವ್ಯವಸ್ಥೆಗಳನ್ನು ಕುರಿತು ವಿಸ್ತಾರವಾದ ಟಿಪ್ಪಣಿ ಬರೆಯಿರಿ. 
      ಬಿ. ಕರ್ನಾಟಕದ ವಿಶೇಷ ಉÇÉೇಖದೊಂದಿಗೆ ಭಾರತದ ಕರಾವಳಿ ಪ್ರದೇಶದ ಸಂಕ್ಷಿಪ್ತ ವಿವರಣೆ ನೀಡಿ. 

      10. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 100 ರಿಂದ 120 ಪದಗಳಷ್ಟಿರಲಿ: 10x1=10 
      ಎ. ಮಲೆನಾಡು ಪ್ರದೆಶದ ಭೌಗೋಳಿಕ ವೈಶಿಷ್ಟÂಗಳನ್ನು ವಿವರಿಸಿ. 
      ಬಿ. ಭಾರತದ ಸುವರ್ಣ ಚತುಭುìಜ/ ಚತುಷ್ಪತ ಕಾರಿಡಾರ್‌ಗಳ ಬಗ್ಗೆ ಬರೆಯಿರಿ. 

      11. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉತ್ತರ ಸುಮಾರು 50 ಪದಗಳಷ್ಟಿರಲಿ: 5x2= 10 
      ಎ. ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ. 
      ಬಿ. ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ನಿರೂಪಿಸಿ. 
      ಸಿ. ಮಹಾನಗರಗಳ ಬೆಳವಣಿಗೆ ಬಗ್ಗೆ ವಿವರಿಸಿ. 

      ಭಾಗ- ಡಿ 
      12. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20 
      ಎ. ಸಾಂಪ್ರದಾಯಿಕವಲ್ಲದ ಶಕ್ತಿ ಎಂದರೇನು? ಸಾಂಪ್ರದಾಯಿಕವಲ್ಲದ ಕೆಲವು ಮುಖ್ಯವಾದ ಶಕ್ತಿಮೂಲಗಳ ವಿಧಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ ಮತ್ತು ಅವುಗಳಿಂದ ಸಿಗುವ ಲಾಭಗಳನ್ನು ತಿಳಿಸಿ. 
      ಬಿ. ಕರ್ನಾಟಕ ಸರ್ಕಾರ 2011ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ ಹಾಗೂ ವಿದ್ಯುನ್ಮಾನ ಹಾರ್ಡ್‌ವೇರ್‌ ನೀತಿಯನ್ನು ಬಿಡುಗಡೆ ಮಾಡಿತು. ಈ ನೀತಿಗಳನ್ನು ಬಿಡುಗಡೆ ಮಾಡಿದ್ದರ ಹಿಂದಿರುವ ಪ್ರೇರಣೆ ಏನು ಎಂಬ ಬಗ್ಗೆ ಟಿಪ್ಪಣಿ ಬರೆಯಿರಿ ಮತ್ತು ಈ ಎರಡೂ ನೀತಿಗಳ ವಿವಿಧ ಲಕ್ಷಣಗಳನ್ನು ಕುರಿತು ಚರ್ಚಿಸಿ. 

      13. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10x4=40 
      ಎ. ತಾರಾ ಶಕ್ತಿ 
      ಬಿ. ಜೀವಾವರಣದ ಪಾದಮುದ್ರೆ 
      ಸಿ. ಪರಮಾಣು ವಿಕಿರಣಗಳ ಜೈವಿಕ ಪರಿಣಾಮಗಳು 
      ಡಿ. ಕರ್ನಾಟಕ ಹಾಗೂ ಭಾರತದ ತಂತ್ರವಿಜ್ಞಾನದ ಪರಿಚಯವನ್ನು ಹೆಚ್ಚಿಸುವಲ್ಲಿ, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಸ್ಥಾಪಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ(R - ಈ) ಪಾತ್ರ. 
      ಇ. ಸಾಮಾನ್ಯ ಬಳಕೆಯ ಪ್ಲಾರಸೆಂಟ್‌ ದೀಪಗಳು ಹಾಗೂ ಅಡಕ ಫ್ಲಾರಸೆಂಟ್‌ ದೀಪಗಳು. 
      ಎಫ್. ತಳಿವೈಜ್ಞಾನಿಕವಾಗಿ ಮಾರ್ಪಾಟು ಮಾಡಿದ(ಎM) ಬೆಳೆಗಳು ಹಾಗೂ ಆಹಾರ 

      14. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10=20 
      ಎ. ಫ‌ುÉರೋಸಿಸ್‌ 
      ಬಿ. ವಾಯುಮಾಲಿನ್ಯ 
      ಸಿ. ಆಮ್ಲಮಳೆ 
      ಡಿ. ಜೆಲ್‌ಗ‌ಳು 
      ಇ. ಭೂಸವಕಳಿ 
      ಎಫ್. ಡಾಲಿ ಎಂಬ ಕುರಿ 
      ಜಿ. ಕರ್ನಾಟಕದ ಜಿÇÉಾಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ 
      ಎಚ್‌. ಬಯೋಮೆಟ್ರಿಕ್‌ ಸಾಧನಗಳು 
      ಐ. ಹೈನುಗಾರಿಕೆ ಮತ್ತು ಹೈನು ತಂತ್ರಜ್ಞಾನ 
      ಜೆ. ಕೃಷಿ ವಿಜ್ಞಾನ ಕೇಂದ್ರಗಳು 

      ರಾಷ್ಟ್ರೀಯ ಮತದಾರರ ದಿನ- ಜನವರಿ 25 
      2011ರಿಂದ ಪ್ರತಿ ವರ್ಷ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲು 2011ರ ಜನವರಿ 20ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನ ಇದಾಗಿದೆ. ಇದೇ ಜನವರಿಗೆ 18 ವರ್ಷ ದಾಟಿದ ಯುವ ಮತದಾರರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡುವ ವಿಶೇಷ ಕಾರ್ಯಕ್ರಮ ಯೋಜಿತವಾಗಿದ್ದು ಹೆಮ್ಮೆಯ ಮತದಾರರಾಗಿ- ಮತದಾನಕ್ಕೆ ಸಿದ್ಧರಾಗಿ ಎಂಬ ಘೋಷಣೆ ಹೊರಡಿಸಲಾಗಿದೆ. ಚಲಾಯಿಸಿ ನಿಮ್ಮ ಮತ- ಕಾಪಾಡಿ ದೇಶದ ಹಿತ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಧ್ಯೇಯದೊಂದಿಗೆ ಯುವಜನತೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ಜಿÇÉೆಯ ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಮಾಹಿತಿ ಮತ್ತು ನೊಂದಣಿಯ ಅಗತ್ಯ ಕುರಿತು ತಿಳಿಸಿಕೊಡಲಾಗುತ್ತಿದೆ. ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕವೂ ಮತದಾರರ ದಿನದ ಮಹತ್ವ ಕುರಿತ ಕಾರ್ಯಕ್ರಮಗಳು ಪ್ರಸಾರವಾಗಲಿವೆ. 

      ಮತದಾರರ ಪ್ರತಿಜ್ಞಾ ವಿಧಿ 
      ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ 
      ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ. 
      21 ವರ್ಷ ದಾಟಿದವರಿಗೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿ 1989ರ ಮಾರ್ಚ್‌ 28ರಂದು ಸಂವಿಧಾನದ 61 ತಿದ್ದುಪಡಿಯ ಮೂಲಕ 326ನೇ ವಿಧಿಗೆ ಸೇರ್ಪಡೆ ಮಾಡಲಾಗಿತ್ತು.

National Girl Child Day Jan 24 - Article in Vijayavani Lalitha 22 Jan 13


National Girl Child Day Jan 24 - Article in Vijayavani Lalitha 22 Jan 13

Monday, 21 January 2013

Girl Child Day - Article in Prajavani Shikshana 21 Jan 2013


Girl Child Day - Article in Prajavani Shikshana 21 Jan 2013
 ಪ್ರಜಾವಾಣಿ

ಇಂದು ನಮ್ಮದೇ, ಗೆಲುವು ನಮ್ಮದೇ!

`ಈ ನೆಲದ ಮಗಳು ನಾನು ತಾರೆಯಾಗುವೆ ತಾರೆಯಾಗುವೆ, ನಾನು ಜಗವ ಬೆಳಗುವೆ...'
ಮೀನಾ ತಂಡದ ಈ ಹಾಡನ್ನು ಹೊಳೆನರಸೀಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಹೆಮ್ಮೆಯಿಂದ  ಹೇಳುತ್ತಲೇ ಇದ್ದರು. ಮೀನಾ ತಂಡಗಳು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ವಿಶೇಷ ಪಾತ್ರ ವಹಿಸಿವೆ.
ರಾಜ್ಯ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಹೆಣ್ಣು ಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಆರಿಸಿದ ಕ್ಲಸ್ಟರ್‌ಗಳಲ್ಲಿ ಈ ಮೀನಾ ತಂಡಗಳನ್ನು ರಚಿಸಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. ಇದೀಗ ಈ ಜನಪ್ರಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗಿದೆ. ಸ
ರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸಾರ್ವತ್ರೀಕರಣಕ್ಕೆ 2003ರಿಂದಲೇ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಕಾರ್ಯಕ್ರಮದ (ಎನ್.ಪಿ.ಇ.ಜಿ.ಇ.ಎಲ್.) ಅಡಿ ವಿವಿಧ ಬಗೆಯ ತರಬೇತಿಗಳನ್ನು, ಜಾಗೃತಿ ಶಿಬಿರಗಳನ್ನು, ಆರೋಗ್ಯ ಮಾಹಿತಿ, ಸ್ವ-ಉದ್ಯೋಗದ ಕೌಶಲಗಳನ್ನು ತಿಳಿಸಿಕೊಡಲಾಗುತ್ತಿದೆ. ಇದರ ಕಾರ್ಯಸೂಚಿ ಕೈಪಿಡಿಯ ಮೊದಲ ಪುಟದಲ್ಲಿ ಕಮಲಾ ಭಾಸಿನ್ ಅವರು ಬರೆದ `ನಾನೊಬ್ಬಳು ಹುಡುಗಿಯಾಗಿದ್ದಕ್ಕಾಗಿ, ನಾನು ಓದಲೇ ಬೇಕಿದೆ' ಎಂಬ ಕವನ ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳುತ್ತದೆ.
ಹೆಣ್ಣು ಮಗುವಿನ ದಿನ
ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚಿಸಿದೆ. 1966ರ ಜನವರಿ 24 ರಂದು ಇಂದಿರಾ ಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನಿಯಾದ ಶುಭ ಸಂದರ್ಭವನ್ನು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿಯನ್ನು ತೊಲಗಿಸಿ, ವಿವಿಧ ಕ್ಷೇತ್ರಗಳಲ್ಲಿ ಅವರು ಮುಂದುವರಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ 2009ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. 
ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು, ಲಿಂಗ ತಾರತಮ್ಯ ನಿವಾರಿಸಲು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು `ಸಬಲಾ'ದಂತಹ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವರದಕ್ಷಿಣೆ ತಡೆ ಕಾಯ್ದೆ 2006, ಬಾಲ್ಯವಿವಾಹ ತಡೆ ಕಾಯ್ದೆ 2006, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2009 ಮೊದಲಾದ ಕಾನೂನುಗಳ ಸಹಾಯದಿಂದ ತಡೆಗಟ್ಟಿ, ಅವರಿಗೆ ಸೂಕ್ತ ರಕ್ಷಣೆ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯ 2007- 2012ರ ಮಕ್ಕಳ ಸಂರಕ್ಷಣೆ ಕುರಿತ ಕಾರ್ಯಕ್ರಮ ಸೂಚಿಯಲ್ಲೂ ಹೆಣ್ಣು ಮಗುವಿನ ಶಿಕ್ಷಣ ಮತ್ತು ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.
ಮೀನಾ- ರಾಜು- ಮಿಟ್ಟು
ಮೀನಾ ಎಂಬ ಪುಟ್ಟ ಬಾಲೆಯ ಸಾಹಸಗಳನ್ನು ಈಗಾಗಲೇ ನೀವೆಲ್ಲ ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಈ ಪರಿಕಲ್ಪನೆಯಲ್ಲಿ, ಮೀನಾಳ ತಮ್ಮ ರಾಜು ಮತ್ತು ಮುದ್ದು ಗಿಳಿ ಮಿಟ್ಟು ಮಕ್ಕಳಷ್ಟೇ ಅಲ್ಲದೆ ಹಳ್ಳಿಗರೆಲ್ಲರ ಮನ ಸೆಳೆಯುವಲ್ಲಿ, ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನಾ ಪರಿಕಲ್ಪನೆ ದಕ್ಷಿಣ ಏಷ್ಯಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯುನಿಸೆಫ್ ರೂಪಿಸಿದ ವಿಶೇಷ ಕಾರ್ಯಕ್ರಮದ ಅಂಗವಾಗಿ 1990ರ ದಶಕದ ಕೊನೆಯಲ್ಲಿ ಕಾರ್ಯರೂಪಕ್ಕೆ ಬಂದಿತು. 1998ರ ಸೆಪ್ಟೆಂಬರ್ 24ರಂದು ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಮೀನಾ ಪರಿಕಲ್ಪನೆ ಶಿಕ್ಷಣ ಕ್ಷೇತ್ರವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದ್ದರಿಂದ, ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ `ಮೀನಾ ದಿನ'ವನ್ನಾಗಿ ಆಚರಿಸುತ್ತಾ ಬರಲಾಗಿದೆ.
ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿರುವ ಬಡತನ, ಅನಕ್ಷರತೆ, ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತಪದ್ಧತಿ, ಭಿಕ್ಷಾಟನೆಗಳನ್ನು ಹೊಡೆದೋಡಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಎಲ್ಲರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು `ಮೀನಾ' ಯಶಸ್ವಿಯಾಗಿದ್ದಾಳೆ. ಒಂಬತ್ತು ವರ್ಷದ ಬಾಲೆ ಮೀನಾಳ ಸಾಹಸಗಳನ್ನು ಒಳಗೊಂಡ ಸುಮಾರು 33 ಕಾರ್ಟೂನ್ ಪುಸ್ತಕಗಳು ಮತ್ತು ಪುಟ್ಟ ಚಲನಚಿತ್ರಗಳು ಕಳೆದ 13 ವರ್ಷಗಳಲ್ಲಿ ಜನಮನ ಸೂರೆಗೊಂಡಿವೆ. ದಕ್ಷಿಣ ಏಷ್ಯಾದ ಎಲ್ಲ ಭಾಷೆಗಳಿಗೆ ಮತ್ತು ವಿಶ್ವದ ಪ್ರಮುಖ ಭಾಷೆಗಳಿಗೆ ತರ್ಜುಮೆ ಆಗಿರುವ ಈ ಮಾಹಿತಿಯು ತೃತೀಯ ವಿಶ್ವದ ಜನಪ್ರಿಯ ಕಾರ್ಯಕ್ರಮವಾಗಿದೆ.

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...