Wednesday, 24 April 2013
English is Easy - Latest Books by Bedre Manjunath - Published by Navakarnataka Publications, Bangalore
Thursday, 11 April 2013
Tuesday, 9 April 2013
We Shall Overcome - Start Your Study Club - Article in Udayavani Josh 09 April 2013

We Shall Overcome - Start Your Study Club - Article in Udayavani Josh 09 April 2013
- ಗೆದ್ದೇ ಗೆಲ್ತಿàವಿ: ಬೀ ಪಾಸಿಟಿವ್ ಬೀ ಕಾನ್ಫಿಡೆಂಟ್
- ಬದ್ಧತೆಯುಳ್ಳ, ಆಲೋಚನಾಪರ ನಾಗರಿಕರ ಚಿಕ್ಕ ಗುಂಪೊಂದು ಜಗತ್ತನ್ನೇ ಬದಲಿಸಬಲ್ಲದು ಎಂಬ ಬಗ್ಗೆ ಯಾವುದೇ ಸಂಶಯ ಬೇಡ. ಇದುವರೆ
- Udayavani | Apr 08, 2013ಬದ್ಧತೆಯುಳ್ಳ, ಆಲೋಚನಾಪರ ನಾಗರಿಕರ ಚಿಕ್ಕ ಗುಂಪೊಂದು ಜಗತ್ತನ್ನೇ ಬದಲಿಸಬಲ್ಲದು ಎಂಬ ಬಗ್ಗೆ ಯಾವುದೇ ಸಂಶಯ ಬೇಡ. ಇದುವರೆಗೆ ಆಗಿರುವ ಬದಲಾವಣೆಗಳೆಲ್ಲವೂ ಇಂತಹ ಚಿಕ್ಕ ಗುಂಪುಗಳಿಂದಲೇ.
- ಮಾರ್ಗರೇಟ್ ಮೀಡ್
ನೀವು ಯಾವ ಬದಲಾವಣೆ ಆಗಬೇಕೆಂದು ಬಯಸುತ್ತೀರೋ ಅದು ನಿಮ್ಮಿಂದಲೇ ಆಗಲಿ.
- ಮಹಾತ್ಮ ಗಾಂಧಿ
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಕಟಣೆ ಹೊರಬಿದ್ದ ಕೂಡಲೇ ಅರ್ಹ ಅಭ್ಯರ್ಥಿಗಳು ಆ ಪರೀಕ್ಷೆಗೆ ಸಂಬಂಧಿಸಿದ ಸ್ಟಡಿ ಮೆಟೀರಿಯಲ್ ಸಂಗ್ರಹಿಸುವುದು, ವೆಬ್‌ಸೈಟ್‌ಗಳಲ್ಲಿ ಏನಾದರೂ ಸಿಗುತ್ತದೆಯೋ ಎಂದು ನೋಡುವುದು, ತಕ್ಕ ಮಟ್ಟಿನ ಹಣಕಾಸಿನ ಅನುಕೂಲತೆ ಇದ್ದಲ್ಲಿ ಯಾವುದಾದರೂ ಒಂದು ಕೋಚಿಂಗ್ ಸೆಂಟರ್ ಸೇರಿ ತರಬೇತಿ ಪಡೆಯುವುದು, ಸ್ನೇಹಿತರ ಬಳಿ ಈ ಕುರಿತ ನೋಟ್ಸ್, ಹಳೆಯ ಪ್ರಶ್ನೆಪತ್ರಿಕೆಗಳು ಏನಾದರೂ ಇವೆಯೇ ಎಂದು ಹುಡುಕುವುದು ವೈಯಕ್ತಿಕ ಮಟ್ಟದಲ್ಲಿ ಸಾಮಾನ್ಯ. ಇದನ್ನೇ ಸ್ವಲ್ಪ ಸಾಂ ಕವಾಗಿ ಒಟ್ಟುಗೂಡಿಸಿದರೆ ಫಲಿತಾಂಶ ಹತ್ತುಪಟ್ಟು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ! ಇದನ್ನೇ ಸ್ಟಡಿಗ್ರೂಪ್, ಡಿಸ್ಕಷನ್ ಗ್ರೂಪ್, ಗ್ರೂಪ್ ಸ್ಟಡಿ, ಸ್ಟಡಿ ಕ್ಲಬ್, ಹಾಬಿ ಕ್ಲಬ್ ಅಂತ ಕರೆಯುವುದು. ಇಂತಹ ಸ್ಟಡಿ ಕ್ಲಬ್‌ಗಳಿಗೆ ಸುದೀರ್ಘ ಇತಿಹಾಸವಿದೆ ಮತ್ತು ಇವುಗಳ ಯಶಸ್ಸಿನ ಕಥೆಯೂ ರೋಚಕವಾಗಿದೆ. ಭೂಗೋಳ ವಿಷಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಬೆರಳೆಣಿಕೆಯಷ್ಟು ಸಾಹಸಿಗಳು 1880ರ ದಶಕದಲ್ಲಿ ಕಟ್ಟಿಕೊಂಡ ಸ್ಟಡಿ ಗ್ರೂಪ್, ಸಾಹಸಿ ಗ್ರೂಪ್ ಆಗಿ ಬೆಳೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಸ ಮತ್ತು ಪರಿಸರ ಅಧ್ಯಯನಕ್ಕೆ ಇರುವ ಅತ್ಯುನ್ನತ ಮಾದರಿ ಸಂಸ್ಥೆಯಾಗಿದ್ದು, ತನ್ನದೇ ಮ್ಯಾಗಝಿನ್ ಮತ್ತು ಟಿವಿ ಚಾನೆಲ್ ಹೊಂದಿರುವ ನ್ಯಾಷನಲ್ ಜಿಯಾಗ್ರಫಿಕ್ ಸಂಸ್ಥೆಯಂತಹ ನೂರಾರು ಉದಾಹರಣೆಗಳು ನಮ್ಮ ಕಣ್ಣಮುಂದೆ ಹಾದುಹೋಗುತ್ತವೆ.
ಚಿತ್ರದುರ್ಗ ಸ್ಟಡಿ ಕ್ಲಬ್!
ಚಿತ್ರದುರ್ಗದ ಬಂಡೆ-ಬೆಟ್ಟ-ಕಣಿವೆಗಳ ನಡುವೆ ಶಿಲಾರೋಹಣ, ಚಾರಣ, ಪರಿಸರ ಅಧ್ಯಯನ, ಸಾಹಸ ಶಿಬಿರಗಳ ಆಯೋಜನೆ, ಇಂಗ್ಲಿಷ್ ಭಾಷಾ ಕಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಂದರ್ಶನಗಳಿಗೆ ಸಿದ್ಧತೆ, ಸ್ಥಳೀಯ ಹಂತದಿಂದ ರಾಷ್ಟ್ರಮಟ್ಟದವರೆಗಿನ ಕ್ವಿಜ್, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ತಾಲೀಮು ನಡೆಸುತ್ತಿರುವ ಚಿತ್ರದುರ್ಗ ಹವ್ಯಾಸ ಮತ್ತು ಸಾಹಸ ಯುನೆಸ್ಕೊ ಕ್ಲಬ್ ಕಳೆದ 22 ವರ್ಷಗಳಲ್ಲಿ ಹಲವು ಯಶಸ್ಸಿನ ಗರಿಗಳನ್ನು ಮುಡಿಗೇರಿಸಿಕೊಂಡಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿ ಅಧಿಕಾರಿಗಳಾಗಿರುವ ಈ ಸಂಸ್ಥೆಯ ಸದಸ್ಯರು ಭಾನುವಾರಗಳಂದು ನಡೆಯುವ ಉಚಿತ ತರಬೇತಿ ತರಗತಿಗಳಿಗೆ ಈಗಲೂ ಹಾಜರಾಗಿ ಮಾರ್ಗದರ್ಶನ ಮಾಡುತ್ತಿ¨ªಾರೆ. ಹೆಚ್ಚೇಕೆ, ಈ ಸಂಸ್ಥೆಯ ಸದಸ್ಯರು ಹಾಜರಾಗುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕೂಡಲೇ ಇತರರೊಂದಿಗೆ ಹಂಚಿಕೊಂಡು, ಚರ್ಚಿಸಿ, ಮುಂದಿನ ಪರೀಕ್ಷೆಗಳಲ್ಲಿ ತಮ್ಮ ಸಾಧನೆಯನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂಬುದನ್ನು ಕುರಿತು ಯೋಜನೆ ಹಾಕುತ್ತಾರೆ. ಬಹುತೇಕ ಎಲ್ಲರೂ ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಮತ್ತು ಫೇಸ್‌ಬುಕ್ ಅಕೌಂಟ್‌ಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ.
ಕಳೆದ ಎರಡು ವರ್ಷಗಳಲ್ಲಿ ಈ ನಾವ್ ರೆಡಿ ಅಂಕಣದಲ್ಲಿ ಮೂಡಿಬಂದ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳ ವಿವರಗಳು, ಪ್ರಶ್ನೆಪತ್ರಿಕೆಗಳು ಅದರಲ್ಲೂ ಐಎಎಸ್ ಮತ್ತು ಕೆಎಎಸ್ ಪತ್ರಿಕೆಗಳ ವಿವರಗಳನ್ನು ಒದಗಿಸಿದವರು ಈ ಕ್ಲಬ್‌ನ ಪ್ರಸ್ತುತ ಸಂಚಾಲಕರಾಗಿರುವ ಪ್ರಶಾಂತ್ ಎಸ್. ಚಿನ್ನಪ್ಪನವರ್ (ಜಠಿಠಿಟ://ಟಚssಜಿಟnಜಿಚs.ಚಿlಟಜsಟಟಠಿ.ಜಿn) ಮತ್ತು ಎಂ. ಸುಷ್ಮಾರಾಣಿ.
ಇವರಿಬ್ಬರೂ ತಾವು ಬರೆದುಬಂದ ಪತ್ರಿಕೆಯನ್ನು ಪರೀಕ್ಷೆ ಮುಗಿದ ಅರ್ಧಗಂಟೆಯೊಳಗಾಗಿ ಸ್ಕಾÂನ್‌ಮಾಡಿ ಅಥವಾ ಮೊಬೈಲ್ ಫೋನ್‌ನಲ್ಲಿಯೇ ಫೋಟೋ ತೆಗೆದು ಈ ಲೇಖಕರಿಗೆ ಕಳಿಸಿಕೊಟ್ಟು ಸಹಕರಿಸಿದ್ದರಿಂದ ಬಿಸಿ ಬಿಸಿ ಸುದ್ದಿಯನ್ನು ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೊದಲು ಈ ಅಂಕಣದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿತ್ತು!
ಒಗ್ಗಟ್ಟಿನಲ್ಲಿ ಬಲವಿದೆ- ಸಹಕಾರ ತತ್ವಕ್ಕೆ ಯಶಸ್ಸಿದೆ!
ಯಾವುದೇ ಖರ್ಚಿಲ್ಲದೆ, ಪ್ರತಿ ಭಾನುವಾರ ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯುತ್ತಿರುವ ತರಬೇತಿ ತರಗತಿಗೆ ಹಾಜರಾಗುವವರೆಲ್ಲರೂ ಸದಸ್ಯರೇ, ತರಬೇತುದಾರರೇ, ಸಂಚಾಲಕರೇ! ಯಾವುದೇ ಹಣಕಾಸಿನ ಅಪೇಕ್ಷೆ ಇಲ್ಲದೆ ಕೇವಲ ಜ್ಞಾನದ ಕೊಡು-ಕೊಳ್ಳುವಿಕೆಯ ಸಹಕಾರಿ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಈ ಕ್ಲಬ್‌ಗ ನೂರಾರು ಹಿರಿಯರು, ಅನುಭವಿಗಳು ಬಂದು, ಮಾರ್ಗದರ್ಶನ ಮಾಡಿ ಹರಸಿ¨ªಾರೆ.
ಯೋಜನಾ, ಸಿವಿಲ್ ಸರ್ವೀಸಸ್ ಕ್ರಾನಿಕಲ್, ಸಿಎಸ್‌ಆರ್, ಪ್ರತಿಯೋಗ್ಯತಾ ದರ್ಪಣ್, ಕುರುಕ್ಷೇತ್ರ, ಡೌನ್-ಟು-ಅರ್ತ್, ವರ್ಲ್ಡ್ ಫೋಕಸ್, ಸಿವಿಲ್ ಸರ್ವೀಸಸ್ ಟೈಮ್ಸ್, ಎಂಪ್ಲಾಯ್‌ಮೆಂಟ್ ನ್ಯೂಸ್ ಸೇರಿದಂತೆ ಒಂದÇÉಾ ಒಂದು ಸ್ಪರ್ಧಾತ್ಮಕ ನಿಯತಕಾಲಿಕೆಯನ್ನು ಒಬ್ಬರÇÉಾ ಒಬ್ಬರು ತಂದೇ ತರುತ್ತಾರೆ, ಹಂಚಿಕೊಳ್ಳುತ್ತಾರೆ, ನೋಟ್ಸ್ ಮಾಡಿಕೊಳ್ಳುತ್ತಾರೆ. ಐದನೇ ತರಗತಿಯ ಪುಟಾಣಿ ನವೋದಯ ವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವುದು ಹೇಗೆ ಎಂಬುದನ್ನು ತಿಳಿಯಲು ಇಲ್ಲಿಗೆ ಬಂದರೆ, ಎಂಟನೇ ತರಗತಿಯ ವಿದ್ಯಾರ್ಥಿ ಎನ್‌ಎಂಎಂಎಸ್ ಪರೀಕ್ಷೆ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿ ಎನ್‌ಟಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವುದು ಹೇಗೆ, ಪ್ರಶ್ನೆ ಪತ್ರಿಕೆ ಬಿಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಬರುತ್ತಾನೆ/ಳೆ.
ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆಗಳ ಮಾಹಿತಿ ತಿಳಿಯಲು, ಪತ್ರಿಕೆ ಬಿಡಿಸುವುದನ್ನು ಕಲಿಯಲು ಬರುವವರ ಸಂಖ್ಯೆ ಏರುತ್ತಲೇ ಇದೆ. ಯಶಸ್ಸಿನ ಕಥೆಯೂ ಸಾಕಷ್ಟು ದೊಡ್ಡದೇ ಇದೆ!
ವ್ಯಕ್ತಿತ್ವ ವಿಕಸನದ ಅಂತಾರಾಷ್ಟ್ರೀಯ ತರಬೇತುದಾರ ರಾಬಿನ್‌ಶರ್ಮ ಪ್ರತಿಪಾದಿಸುವ ಲೀಡರ್ ವಿಥೌಟ್ ಎ ಟೈಟಲ್ ಪರಿಕಲ್ಪನೆಯನ್ನು ಅವರಿಗಿಂತಲೂ ಮೊದಲೇ ಎರಡು ದಶಕಗಳಿಗೂ ಹೆಚ್ಚುಕಾಲ ಯಶಸ್ವಿಯಾಗಿ ಅನುಷ್ಠಾನಗೊಳಿಸಿಕೊಂಡು ಬರುತ್ತಿರುವ ಈ ಕ್ಲಬ್‌ನಲ್ಲಿ ಯಾರೋ ಒಬ್ಬ ನಾಯಕ ಇಲ್ಲ, ಅಭಿದಾನವೂ ಇಲ್ಲ, ಬದಲಿಗೆ ಎಲ್ಲರೂ ನಾಯಕತ್ವ ವಹಿಸುತ್ತಾರೆ, ಯಶಸ್ಸಿನ ರೂವಾರಿಗಳಾಗುತ್ತಾರೆ. ಯಾವುದೇ ಪದವಿ, ಜವಾಬ್ದಾರಿ ಹೇರಲ್ಪಡುವುದಿಲ್ಲ, ಎಲ್ಲರೂ ತಮ್ಮ ದೃಷ್ಟಿಯಲ್ಲಿ ಸರಿ ತೋರಿದ್ದನ್ನು, ಎಲ್ಲರ ಒಳಿತಿಗಾಗಿ ಹಂಚಿಕೊಳ್ಳುತ್ತಾರೆ.
1985ರಲ್ಲಿ ಶಿವಮೊಗ್ಗದಲ್ಲಿ ಮತ್ತು 1989ರಲ್ಲಿ ಭದ್ರಾವತಿಯಲ್ಲಿ ಆರಂಭಗೊಂಡು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗೆ ಸಂಯೋಜನೆಗೊಂಡಿದ್ದ ಕ್ವಿಜ‚… ಮತ್ತು ಅಡ್ವೆಂಚರ್ ಕ್ಲಬ್‌ಗಳು ಕ್ರಮೇಣ ಇನ್ನಿತರೆ ಸ್ಥಳಗಳಿಗೂ ವ್ಯಾಪಿಸಿದವು. ಇವುಗಳ ಸದಸ್ಯರು ನೌಕರಿಗೆ ಸೇರಿಕೊಂಡು ದೂರದ ಊರುಗಳಿಗೆ ಹೋದ ನಂತರದಲ್ಲಿ ಇವು ಕ್ರಮೇಣ ತೆರೆಗೆ ಸರಿದರೂ ಕಾರ್ಯಕ್ರಮಗಳನ್ನು ಸಣ್ಣದಾಗಿ ನಡೆಸಿಕೊಂಡು ಹೋಗುತ್ತಲೇ ಇವೆ. ಚಿತ್ರದುರ್ಗದ ಕ್ಲಬ್ ಹೆಚ್ಚಿನ ಯಶಸ್ಸು ಗಳಿಸಿದ್ದು, ಇನ್ನೂ ತರಬೇತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಯುವಜನರ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ತರಬೇತಿ ಕ್ಲಬ್, ಸ್ಟಡಿ ಕ್ಲಬ್‌ಗಳು ಎಲ್ಲಾ ಊರುಗಳಲ್ಲಿ ಹರಡಿ, ಜ್ಞಾನದ ಸಿಹಿಯನ್ನು ಹಂಚುವ ಕೆಲಸ ಆಗಬೇಕಾಗಿದೆ.
ಕೆಲವು ಕಾಲೇಜುಗಳಲ್ಲಿ ಉದ್ಯೋಗ ಮಾರ್ಗದರ್ಶನ ಘಟಕಗಳಿದ್ದರೂ ಕೇವಲ ಶಾಸ್ತ್ರಕ್ಕೆಂದು ಒಂದೆರಡು ತರಗತಿಗಳನ್ನು ನಡೆಸಿ ಸುಮ್ಮನಾಗುತ್ತವೆ. ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ವೃತ್ತಿ ಮಾರ್ಗದರ್ಶಿ ಘಟಕದ ಪ್ರೋ. ನಾರಾಯಣ ಪ್ರಸಾದ್ ಮತ್ತು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಕೇಂದ್ರದ ಪೊ›. ಕರ್ಣಂ ರಾಮರಾವ್ ಅವರಂತಹ ಅಪರೂಪದ ಸಂಘಟಕರು ತಮ್ಮ ಸುತ್ತಲಿನ ಜಿÇÉೆಗಳ ಕಾಲೇಜುಗಳಲ್ಲಿಯೂ ಘಟಕಗಳನ್ನು ತೆರೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಉದ್ಯೋಗದಾತರನ್ನು ಆಹ್ವಾನಿಸಿ ಕ್ಯಾಂಪಸ್ ಸೆಲೆಕ್ಷನ್ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿ¨ªಾರೆ. ಇಂತಹ ನೂರಾರು ಘಟಕಗಳು ರಾಜ್ಯಾದ್ಯಂತ ಆರಂಭವಾಗಬೇಕಾದ ಅನಿವಾರ್ಯತೆ ಇದೆ.
ಬಿಸಿ ಬಿಸಿ ಸುದ್ದಿ
ನೆಲದೊಡಲ ಚಿಗುರು- ನಾರಾಯಣ ರೆಡ್ಡಿ ಯಶಸ್ಸಿನ ಕಥೆ
ಮಣ್ಣಿನೊಡನೆ ಒಡನಾಡುತ್ತಾ ಹೊನ್ನಿನಂತಹ ಬೆಳೆ ತೆಗೆಯುತ್ತಿರುವ ನಾಡೋಜ ಡಾ.ಎಲ್. ನಾರಾಯಣ ರೆಡ್ಡಿಯವರ ಬದುಕು-ಚಿಂತನೆಗಳ ಸಂಗ್ರಹ ರೂಪ ನೆಲದೊಡಲ ಚಿಗುರು ಕಳೆದ ವಾರ ಬಿಡುಗಡೆಯಾಗಿ ಕೃಷಿಕರಿಗೆ ಹೊಸ ವಿಧಾನಗಳನ್ನು ತೆರೆದು ತೋರಿಸಿದೆ, ಹೊಸ ಚಿಂತನೆಗೆ ಹಚ್ಚಿದೆ.(ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು. ಫೋನ್: 080-22203580) ಮಣ್ಣಿನ ನರುಗಂಪನ್ನು ಉಳಿಸುವ ಸಾವಯವ ಪದ್ಧತಿಯ ಪ್ರತಿಪಾದಕ ನಾರಾಯಣ ರೆಡ್ಡಿಯವರ ಜೀವನ-ಸಾಧನೆಯನ್ನು ಅವರೊಡನೆ ಕೆಲಸಮಾಡಿರುವ ಎನ್.ಎಲ್. ಆನಂದ್ ಮತ್ತು ಗುಂಡಪ್ಪ ದೇವಿಕೇರಿಯವರು ಆಸಕ್ತಿ ಮೂಡಿಸುವಂತೆ ನಿರೂಪಿಸಿ¨ªಾರೆ.
ಇಂದಿನ ಯುವಕರು ಈ ಮನುಷ್ಯ ಜನ್ಮದ ಉದ್ದೇಶಗಳನ್ನೇ ಮರೆತು, ಕ್ಷಣಿಕ ಸುಖದ ಬೆನ್ಹತ್ತಿ, ತಮ್ಮ ಪವಿತ್ರವಾದ ಜೀವನವನ್ನು ವ್ಯರ್ಥಮಾಡಿಕೊಂಡು ಪಶ್ಚಾತ್ತಾಪಪಡುತ್ತಿ¨ªಾರೆ. ಇದು ಆರೋಗ್ಯಕರ ಸಮಾಜದ ಒಳ್ಳೆಯ ಬೆಳವಣಿಗೆಯಲ್ಲ. ಅವರು ಉದಾತ್ತ ಧ್ಯೇಯವನ್ನು ಹೊಂದು, ಚಿಂತನೆಗಳನ್ನು ಮೈಗೂಡಿಸಿಕೊಂಡು ಶ್ರಮಿಸಿದರೆ, ಗೌರವದಿಂದ ಕೂಡಿದ ನೆಮ್ಮದಿಯ ಬದುಕು ನಡೆಸಿ ಸಮಾಜಕ್ಕೆ ದಾರಿ ತೋರಿಸಬಲ್ಲರೆಂಬುದು ನನ್ನ ನಂಬುಗೆ. ಅದೇ ಈ ಪುಸ್ತಕದ ಆಶಯ.
ಮನುಷ್ಯನ ಏಳಿಗೆಗೆ ಹೆಚ್ಚಿನ ವಿದ್ಯೆ ಮತ್ತು ಐಶ್ವರ್ಯ ಅನಿವಾರ್ಯವಲ್ಲವೆಂಬುದು ನನ್ನ ಬದುಕಿನಲ್ಲಿ ನಾನು ಕಂಡುಕೊಂಡ ನಿತ್ಯಸತ್ಯವನ್ನು ಈ ಹೊತ್ತಿಗೆಯಲ್ಲಿ ನೈಜ ಸ್ಥಿತಿಯಲ್ಲಿ ನಿರೂಪಿಸಲಾಗಿದೆ. ಯುವಕರು-ವಿದ್ಯಾರ್ಥಿಗಳು, ರೈತಾಪಿ ಬಂಧುಗಳು, ಕೃಷಿ ಸ್ನೇಹಿ ಮನಸುಗಳು ಈ ಪುಸ್ತಕವನ್ನು ಓದಿ, ಚಿಂತಿಸಿ, ಪ್ರಯತ್ನಿಸಿ ಸಫಲರಾದರೆ ಈ ಇಬ್ಬರು ಯುವ ಬರಹಗಾರರ ಶ್ರಮವನ್ನು ಗೌರವಿಸಿದಂತೆಯೇ ಸರಿ. ಯುವಕರಲ್ಲಿ, ಹೆಚ್ಚಿನ ಮಟ್ಟಿಗೆ ಗ್ರಾಮೀಣರಲ್ಲಿ, ನಮ್ಮಿಂದ ಏಳಿಗೆ ಸಾಧ್ಯವಿಲ್ಲ ಎಂಬ ಹಿಂಜರಿಯುವಿಕೆನ್ನು ತೊಡೆದು ನಾನು ಸಾಧಿಸಿ ತೋರಿಸಬÇÉೆ ಎಂಬ ಛಲ ಮೂಡಿಸುವಲ್ಲಿ ಈ ಹೊತ್ತಗೆಯು ಸಹಾಯವಾಗಬಲ್ಲದು ಎಂಬುದರಲ್ಲಿ ನನಗೆ ವಿಶ್ವಾಸವಿದೆ, ಎನ್ನುತ್ತಾರೆ ಸಾಧಕ ನಾರಾಯಣ ರೆಡ್ಡಿಯವರು.
ಸಾವಯವ ಯೋಗಿ ಎಂದು ಹೆಸರು ಪಡೆಯಲು ಮತ್ತು ಅವರಿಗೆ ದೇಶವಿದೇಶಗಳ ಕೃಷಿ ತಜ್ಞರಿಂದ, ಸರಕಾರಗಳಿಂದ ಸಂದಿರುವ ಪ್ರಶಸ್ತಿಗಳೂ ಅಷ್ಟೇನು ಸುಲಭವಾಗಿ ದೊರೆತಿಲ್ಲ. ಅವರು ರಾತ್ರಿ ಹಗಲು ಹೆಂಡತಿ ಮಕ್ಕಳೊಂದಿಗೆ ಅನ್ನ ನೀರು ಕಡೆಗಣಿಸಿ ದುಡಿದಿ¨ªಾರೆ. ಶಿಸ್ತು, ಶ್ರದ್ಧೆ, ಸಂಕಲ್ಪಗಳಿಂದ, ಧರ್ಮಜೀವನದಲ್ಲಿಯೇ ನಡೆದುಬಂದಿ¨ªಾರೆ; ಅಸಂಖ್ಯ ಕಷ್ಟಗಳನ್ನು ಅನುಭವಿಸಿ¨ªಾರೆ. ಈ ದಾರಿಯಲ್ಲಿ ಮಹೋನ್ನತ ಸಾಧನೆಗಳನ್ನು ಮಾಡಿ ಸಮಾಜಕ್ಕೆ ತೋರಿಸಿ¨ªಾರೆ. ದಾರಿಯುದ್ದಕ್ಕೂ ಗಾಂಧೀಜಿಯವರ ಸರಳ, ಸತ್ಯ ಮಾರ್ಗಗಳನ್ನೇ ಅನುಸರಿಸುತ್ತ ಬಂದಿರುವುದು ಕಾಣುತ್ತದೆ. ಈ ಕಥೆ ಓದಿ ಮರುಚಿಂತನೆಯನ್ನು ಮಾಡುವಾಗ, ಏಳುವ ಪ್ರಶ್ನೆಯೊಂದಿದೆ. ಈ ಹಳ್ಳಿಯ ಸಾಧಾರಣ ಯುವಕ, ತನಗೆ ತಾನೇ ಗುರುವಾಗಿ, ತ್ಯಾಗ ಮತ್ತು ಶ್ರದ್ಧೆಗಳಿಂದ, ಇಂತಹ ಮಹೋನ್ನತ ಸಾಧನೆಯನ್ನು ಮಾಡಬೇಕಾದರೆ, ಈ ಸಾರ್ಥಕ ಸಾಧನೆಯ ಮೂಲವೇನು? ಪ್ರೇರಣೆಯೇನು?
ಇದಕ್ಕೆ ಸರಳವಾದ ಉತ್ತರ ಸಿಗುವುದಿಲ್ಲ. ಜೀವನದಲ್ಲಿ ಯಾವುದೇ ಮಹಾತ್ಮರ ಕೃಪೆ ಅವರಿಗೆ ಒದಗಿ ಬಂದಿಲ್ಲ; ಯಾವುದೇ ಅದ್ಭುತ ಘಟನೆಯ ಪ್ರಭಾವಕ್ಕೆ ಒಳಗಾಗಿಲ್ಲ. ಉದ್ದಕ್ಕೂ ಕಷ್ಟ ನಿಷ್ಟುರಗಳನ್ನು ಎದುರಿಸುವಾಗ, ಎಲ್ಲರ ಹೃದಯದಲ್ಲೂ ಅಡಗಿರುವ ಧರ್ಮನಿಷ್ಠೆಯನ್ನು ಇವರು ಎಚ್ಚರಿಸಿಕೊಂಡಿದ್ದೇ ಈ ಸಾಧನೆಗೆ ಕಾರಣವೆಂದು ಕಾಣುತ್ತದೆ. ಅದು ತ್ಯಾಗ, ಶ್ರದ್ಧೆ ಮತ್ತು ಸಂಕಲ್ಪದ ಫಲ, ಕೇವಲ ಅವಕಾಶದ ಫಲವಲ್ಲ, ಎನ್ನುತ್ತಾರೆ ಹಿರಿಯ ಕೃಷಿ ತಜ್ಞ ಡಾ.ಆರ್. ದ್ವಾರಕೀನಾಥ್. ಈ ಮಾರ್ಗದರ್ಶಿ ಕೃತಿಯನ್ನು ನಮ್ಮ ಯುವಜನರು ಓದಲೇಬೇಕು ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಿಲ್ಲ, ಅಲ್ಲವೇ?
ಒಂದಷ್ಟು ಸ್ಫೂರ್ತಿ ತುಂಬುವ ಕೃತಿಗಳು ನಿಮಗಾಗಿ
ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ!
ಅಚೀವರ್ ಎವೆರಿವ್ಹೇರ್! ಜೋ ಜೀತಾ ವಹಿ ಸಿಕಂದರ್! ಇದು ಗೆಲ್ಲುವವರ ಕಾಲ. ಜಿಸ್ ಕಾ ದಂಡ ಉಸ್ ಕಾ ಭೈಂಸ್ ಎನ್ನುವ ಸ್ಪರ್ಧೆಯ ಕಾಲ. ಗೆದ್ದೇ ಗೆಲ್ಲುವೆವು ನಾವು ಗೆದ್ದೇ ಗೆಲ್ಲುವೆವು ಎಂದು ಚಾಲೆಂಜ್ ಮಾಡುವ ಕಾಲ. ಸಾಧಿಸಿ ತೋರಿಸುವ ಕಾಲ. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಸ್ವತಂತ್ರ ಉದ್ಯಮವನ್ನು ಸ್ಥಾಪಿಸುವ ಹಾದಿಯನ್ನು ಆಯ್ಕೆಮಾಡಿಕೊಂಡ ಅಹಮದಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಇಪ್ಪತ್ತೆ„ದು ಕಠಿಣ ಪರಿಶ್ರಮಿ ಪದವೀಧರರು ಗೆದ್ದು, ಬಿದ್ದು, ಎದ್ದು, ಜಗತ್ತಿಗೇ ಸಾಧನೆಯ ಸವಿ ಉಣಬಡಿಸಿದ ಸಾಹಸಗಾಥೆಗಳನ್ನು ರಶ್ಮಿ ಬನ್ಸಾಲ್ ಸ್ಟೇ ಹಂಗ್ರಿ, ಸ್ಟೇ ಫೂಲಿಶ್ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿ¨ªಾರೆ. (ಇದರ ಕನ್ನಡ ಅನುವಾದ ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ- ಅನುವಾದಕರು: ಯಗಟಿ ರಘು ನಾಡಿಗ್. ಕನೆಕ್ಟ್ ದ ಡಾಟ್ಸ್(ಎಂಬಿಎ ಪದವಿ ಪಡೆಯದಿದ್ದರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕರ ಕಥೆ), ಐ ಹ್ಯಾವ್ ಅ ಡ್ರೀಮ್, ಫಾಲೋ ಎವೆರಿ ರೈನ್‌ಬೋ (25 ಮಹಿಳಾ ಉದ್ಯಮಿಗಳ, ಸಾಧಕಿಯರ ಯಶೋಗಾಥೆ), ಪೂರ್ ಲಿಟ್ಲ ರಿಚ್ ಸ್ಲಮ್ ಮುಂತಾದ ರಶ್ಮಿ ಬನ್ಸಾಲ್ ಪುಸ್ತಕಗಳು ಸಾಧನೆಯ ನಿಜಜೀವನದ ಕಥೆಗಳ ಮೂಲಕ ಯುವಜನರನ್ನು ಸಾಧನೆಯ ಹಾದಿಗೆ ಹಚ್ಚುತ್ತಿವೆ.
ಯಶಸ್ಸಿಗೆ 10000 ಸಾವಿರ ಗಂಟೆಗಳ ಪರಿಶ್ರಮದ ನಿಯಮ!
ದಿನವೊಂದಕ್ಕೆ ಕನಿಷ್ಟ ಎಂಟರಿಂದ ಹತ್ತು ಗಂಟೆ ಸತತ ಪರಿಶ್ರಮ ಪಟ್ಟರೂ ಸುಮಾರು ಒಂದು ಸಾವಿರ ದಿನ(ಎರಡು ಮುಕ್ಕಾಲು ವರ್ಷ) ತೆಗೆದುಕೊಳ್ಳುವ 10000 ಸಾವಿರ ಗಂಟೆಗಳ ಪರಿಶ್ರಮದ ನಿಯಮ ಯಶಸ್ಸನ್ನು ತಂದುಕೊಟ್ಟೇ ತೀರುತ್ತದೆ ಎಂದು ಪ್ರತಿಪಾದಿಸುತ್ತಾನೆ ಕೆನಡಿಯನ್-ಅಮೆರಿಕನ್ ಪತ್ರಕರ್ತ ಮಾಲ್‌ಕಮ್ ಗ್ಲಾಡ್‌ವೆಲ್ ತನ್ನ ಔಟ್‌ಲೆçಯರ್ - ದ ಸ್ಟೋರಿ ಆಫ್ ಸಕ್ಸಸ್ (Ouಠಿlಜಿಛಿrs ಖಜಛಿ ಖಠಿಟ್ಟy ಟf ಖuccಛಿss) ಪುಸ್ತಕದಲ್ಲಿ. ಈ ಯಶಸ್ಸಿನ ಕಥೆಯನ್ನು ರವಿಕೃಷ್ಣಾರೆಡ್ಡಿಯವರು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಅಂಕಣವಾಗಿ ಹಿಡಿದಿಟ್ಟಿದ್ದರು. ಆ ಕಂತುಗಳೆಲ್ಲವೂ ಇದೀಗ ದೇಶ-ಕಾಲ-ಶ್ರಮ: ಸಾಧನೆಯ ಹಿಂದಿನ ಕಥೆ ಎಂಬ ಕೃತಿ ರೂಪದಲ್ಲಿ ಪ್ರಕಟವಾಗಿದೆ.(ಪುಟ: 82, ಬೆಲೆ: ರೂ.60, ಪ್ರಕಾಶಕರು: ಮೌಲ್ಯಾಗ್ರಹ ಪ್ರಕಾಶನ, ಬಿಟಿಎಂ ಲೇಔಟ್, ಬೆಂಗಳೂರು. ಫೋನ್: 9686080005)
ಗೆದ್ದೇ ಗೆಲ್ಲುವೆವು- ಯಶಸ್ಸಿನ ಸೂತ್ರಗಳ ವಿಶಿಷ್ಟ ಕೈಪಿಡಿ
ಗೆದ್ದೇ ಗೆಲ್ಲುವೆವು ಒಂದು ದಿನ.... ಎಂಬ ಆತ್ಮವಿಶ್ವಾಸದೊಂದಿಗೆ ಜೋಶ್ ಪುರವಣಿಯಲ್ಲಿ ಮೂಡಿಬರುತ್ತಿದ್ದ ನಾವ್ ರೆಡಿ ಅಂಕಣ ಬರಹಗಳ ಸಂಕಲನ ಗೆದ್ದೇ ಗೆಲ್ಲುವೆವು- ಸ್ಪರ್ಧಾತ್ಮಕ ಪರೀಕ್ಷೆಗಳು- ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೊರ್ಸ್‌ಗಳ ಮಾಹಿತಿ ಸಾಹಿತ್ಯ ಕೈಪಿಡಿ- ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡು ಎರಡು ಮುದ್ರಣಗಳನ್ನು ಕಂಡಿದೆ.
ಎಂಪ್ಲಾಯಬಿಲಿಟಿ ಸ್ಕಿಲ್ಸ್- ಪೂರ್ವಸಿದ್ಧತೆ, ಸ್ಪರ್ಧಾತ್ಮಕ ಪರೀಕ್ಷೆಗಳು, ಕಲಿಕೆ- ಗಳಿಕೆಯ ಕೋರ್ಸ್‌ಗಳು, ಅತ್ಯುಪಯುಕ್ತ ವೆಬ್‌ಸೈಟ್ ಮತ್ತು ಪುಸ್ತಕಗಳು ಹಾಗೂ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಎಂಬ ಐದು ಭಾಗಗಳಲ್ಲಿ- 114 ಅಧ್ಯಾಯಗಳಲ್ಲಿ ಸಂಕಲಿತವಾಗಿರುವ ಗೆದ್ದೇ ಗೆಲ್ಲುವೆವು- ಸ್ಪರ್ಧಾತ್ಮಕ ಪರೀಕ್ಷೆಗಳು- ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೊರ್ಸ್‌ಗಳ ಮಾಹಿತಿ ಸಾಹಿತ್ಯ ಕೈಪಿಡಿ ಕನ್ನಡದಲ್ಲಿ ದೊರೆಯುವ ಸಮಗ್ರ ವೃತ್ತಿ ಮಾರ್ಗದರ್ಶಿ ಮಾಹಿತಿ ಸಾಹಿತ್ಯ ಕೃತಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪೋಷಕರಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ, ಡಿ.ಇಡಿ, ಬಿ.ಇಡಿ, ಎಂ.ಇಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವವರಿಗೂ ಅತ್ಯುಪಯುಕ್ತವಾಗಿದೆ. ಗಗಗ = ಗಉ ಗಐಔಔ ಗಐN, ಗೆದ್ದೇ ಗೆಲ್ಲುವೆವು! ಹೇಗೆ? ಎಂಬ ಗೆಲುವಿನ ಗುಟ್ಟನ್ನು ಹಂಚಿಕೊಳ್ಳುತ್ತದೆ.
ಸೋಲೇ ಗೆಲುವಿನ ಸೋಪಾನ
ಜೀವನದಲ್ಲಿ ಸೋತುಹೋದೆವೆಂದು ಸಾಯುವುದು ಅಂಥ ದೊಡ್ಡ ಸಾಧನೆಯಲ್ಲ. ಆದರೆ ಆ ಸೋಲಿನ ನೋವನ್ನು ನಸುನಗೆಯೊಂದಿಗೆ ಸಹಿಸುತ್ತಾ ಜೀವಿಸುವುದು ಅತಿ ದೊಡ್ಡ ಸಾಧನೆ.
ಗೆಲುವೆ, ಗೆಲುವೆ, ಗೆಲುವೆ, ಎಂದೆಂದಿಗೂ ಗೆಲುವೆ.... ಎಂಬ ಆತ್ಮವಿಶ್ವಾಸದ ಹಾಡು.
ಗೆದ್ದೇ ಗೆಲ್ಲುವೆವು, ಗೆದ್ದೇ ಗೆಲ್ಲುವೆವು,
ನಾವು ಗೆದ್ದೇ ಗೆಲ್ಲುವೆವು, ಒಂದು ದಿನ,
ಮನದಲಿ ವಿಶ್ವಾಸ, ಪೂರಾ ವಿಶ್ವಾಸ,
ನಾವು ಗೆದ್ದೇ ಗೆಲ್ಲುವೆವು, ಒಂದು ದಿನ....
ಎಂಬ ಹಂ ಹೋಂಗೇ ಕಾಂಯಾಬ್.... ಗೀತೆಯ ಅನುರಣವೇ ಎÇÉಾ ಕಡೆ ಕೇಳಿಬರುವುದನ್ನು ಎಲ್ಲರೂ ಬಯಸುವುದು ಸಹಜ. ಆದರೆ ಎÇÉಾ ಸಂದರ್ಭಗಳಲ್ಲಿಯೂ ಗೆಲುವು ನಮ್ಮದೇ ಆಗಬೇಕೆಂದೇನಿಲ್ಲ. ತೀವ್ರತರ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹೋರಾಡಿದರೂ ಗೆಲುವು ಕೂದಲೆಳೆಯಂತರದಲ್ಲಿ ನುಣುಚಿಕೊಳ್ಳಲೂಬಹುದು. ಸೋತವರು ಹತಾಶರಾಗಿ, ಲೈಫು ಇಷ್ಟೇನೇ ಎಂದು ಹಿಂದಿರುಗಿ ಬರಲಾರದಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಅತಿರೇಕಕ್ಕೂ ಹೋಗಬಹುದು. ಆದರೆ, ಬದುಕಿ, ಹೋರಾಡಿ, ಕಳೆದುಕೊಂಡÇÉೇ ಮತ್ತೆ ಹುಡುಕಿ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ.
ನೂರು ವರುಷ ಬಾಳಿರಿ
ನೂರು ದೀಪ ಬೆಳಗಿರಿ
ನೂರು ಬಾಳು ಬೆಳಗಲು
ನೀವೇ ಜ್ಯೋತಿ ಆಗಿರಿ//ಪ//
ಲಕ್ಷಿ¾à ಸರಸ್ವತಿ ಚಿತ್ರದ ಈ ಗೀತೆಯ ಹಾರೈಕೆ ಪಿ. ಸುಶೀಲಾ ಅವರ ಮಧುರ ಧ್ವನಿಯಲ್ಲಿ ಅನುರಣಿಸುತ್ತಲೇ ಇರುತ್ತದೆ.
ದೀಪದಿಂದ ದೀಪ ಹಚ್ಚುವ ಕೆಲಸ, ಒಂದು ಒಳ್ಳೆಯ ಕೆಲಸದಿಂದ ಸಾವಿರಾರು ಜನರನ್ನು ಉತ್ತಮ ಕೆಲಸಗಳ ಕಡೆಗೆ ಕರೆದೊಯ್ಯುವ ಕೆಲಸ ನಡೆಯುತ್ತಲೇ ಇರುತ್ತದೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ ಎಂಬ ಕೆಂಟ್ ಎಂ. ಕೀತ್ (ಅನುವಾದ: ರವಿ ಕೃಷ್ಣಾರೆಡ್ಡಿ) ಅವರ ಕೃತಿ ಯುವಜನರನ್ನು ಯಶಸ್ಸಿನ ಹಾದಿಯ ಕಡೆಗೆ ಕರೆದೊಯ್ಯುತ್ತಲೇ ಇದೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ....
ಓದುಗರೆಲ್ಲರಿಗೂ ಯುಗಾದಿ ಹಬ್ಬದ, 1935ನೇ ಶಾಲೀವಾಹನ ಶಕ ವರ್ಷ, ವಿಜಯ ಸಂವತ್ಸರದ ಹಾರ್ದಿಕ ಶುಭಾಶಯಗಳು.
Friday, 5 April 2013
Tuesday, 2 April 2013
Tuesday, 26 March 2013
KAS Interview 2013 How to Face it - Article in Udayavani Josh 26 March 2013
- KAS ಐಎಎಸ್ ಸ್ಪೆಷಲ್ ಆಫರ್: ಕಂಕಣ ಭಾಗ್ಯ ಸ್ಕೀಂ, ಆಶೀರ್ವಾದ ಸ್ಕೀಂ
- ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್-ಜನವರಿಯಲ್ಲಿ ನಡೆಸಿದ ಗೆಝೆಟೆಡ್ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ
- Udayavani | Mar 25, 2013ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್-ಜನವರಿಯಲ್ಲಿ ನಡೆಸಿದ ಗೆಝೆಟೆಡ್ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಕಳೆದವಾರ ಪ್ರಕಟಿಸಿದೆ. ಒಟ್ಟು 362 ಹು¨ªೆಗಳಿಗೆ ನಡೆಸಲಾದ ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ 5574 ಅಭ್ಯರ್ಥಿಗಳ ಅಂಕಗಳನ್ನು ವಿಷಯವಾರು ಕೋಡ್ ಸಹಿತ ಪ್ರಕಟಿಸಲಾಗಿದೆ. ಅತ್ಯಂತ ಹೆಚ್ಚು ಅಂಕ 1109 ಇದ್ದರೆ, ಅತಿ ಕಡಿಮೆ ಅಂಕ 152 ಇದೆ. 1000ಕ್ಕೂ ಹೆಚ್ಚು ಅಂಕಗಳಿಸಿದವರು 108 ಅಭ್ಯರ್ಥಿಗಳಿದ್ದರೆ, 950ಕ್ಕೂ ಹೆಚ್ಚು ಗಳಿಸಿದವರು 293. 900 ಕ್ಕೂ ಹೆಚ್ಚು ಗಳಿಸಿದವರು 600 ಮತ್ತು 850ಕ್ಕೂ ಹೆಚ್ಚು ಅಂಕಗಳಿಸಿದವರು 1103 ಜನ ಇ¨ªಾರೆ. ಕನ್ನಡ ಮತ್ತು ಇಂಗ್ಲಿಷ್ ಕಡ್ಡಾಯ ಅರ್ಹತಾ ಪರೀಕ್ಷೆಯಲ್ಲಿ 309 ಜನ ಫೇಲಾಗಿ¨ªಾರೆ! ಕೆಲವರು ಕನ್ನಡದಲ್ಲಿ ಕನಿಷ್ಠ ಅಂಕ ಗಳಿಸಿದ್ದರೆ ಒಂದಿಬ್ಬರು ಸೊನ್ನೆ ಗಳಿಸಿ¨ªಾರೆ! ಕನ್ನಡದಲ್ಲಿ 118ಕ್ಕೂ ಹೆಚ್ಚು ಅಂಕಗಳಿಸಿ ಇಂಗ್ಲಿಷ್‌ನಲ್ಲಿ ಕನಿಷ್ಠ ಅಂಕಗಳಿಸಲಾರದೇ ಹೋಗಿರುವವರ ಜೊತೆ ಇಂಗ್ಲಿಷ್‌ನಲ್ಲಿ ಶೂನ್ಯ ಸಂಪಾದನೆ ಮಾಡಿದವರೂ ಎರಡಂಕಿಯಷ್ಟಿ¨ªಾರೆ! 54 ಅಭ್ಯರ್ಥಿಗಳ ಫಲಿತಾಂಶವನ್ನು ವಿವಿಧ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 27. ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂತಿಮ ಫಲಿತಾಂಶ ಪಟ್ಟಿಯ ಪ್ರಕಟಣೆ ಮತ್ತು ಸಂದರ್ಶನ ನಡೆಸಲು ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಸಧ್ಯ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣ ಮತ್ತು ಹು¨ªೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಪತ್ರ ಕಳಿಸಲಾಗುತ್ತದೆ.
ಮಾತೃಭಾಷಾ ಪ್ರೇಮಕ್ಕೆ ಹೆಚ್ಚು ಅಂಕ!
ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯ ಆಯ್ಕೆಯಲ್ಲಿ ಈ ಬಾರಿ ಉರ್ದು ಭಾಷೆಯ ಸಾಹಿತ್ಯ ಆರಿಸಿಕೊಂಡಿದ್ದ ಸುಮಾರು 9 ಅಭ್ಯರ್ಥಿಗಳಲ್ಲಿ ಒಬ್ಬರು ಅತ್ಯಂತ ಹೆಚ್ಚು ಅಂದರೆ 441 ಗಳಿಸಿದ್ದರೆ ಮೂವರು 400ಕ್ಕೂ ಹೆಚ್ಚು ಅಂಕಗಳಿಸಿ¨ªಾರೆ! ಕನ್ನಡ ಸಾಹಿತ್ಯ ತೆಗೆದುಕೊಂಡವರಲ್ಲಿ ಹೆಚ್ಚು ಗಳಿಸಿದವರು 432.5 ತೆಗೆಯಲಷ್ಟೇ ಸಮರ್ಥರಾಗಿ¨ªಾರೆ. ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ ನಡೆಯುತ್ತಿರುವ ಈ ದಿನಗಳಲ್ಲಿ ಮಾತೃಭಾಷಾ ಪ್ರೇಮಿಗಳು ಯಾವರೀತಿ ಅನುಕೂಲ ಪಡೆಯುತ್ತಾರೆ ಎಂಬುದಕ್ಕೆ ಇದಕ್ಕಿಂತಲೂ ಒಳ್ಳೆಯ ಉದಾಹರಣೆ ಇನ್ನೆಲ್ಲಿ ಸಿಗಬಹುದು ಹೇಳಿ?
ಉಳಿದ ವಿಷಯಗಳಲ್ಲಿ ಭೂಗೋಳ 427.5, ಮನಃಶಾಸ್ತ್ರ 413.5, ಸಮಾಜಶಾಸ್ತ್ರ 405 ಅಂಕಗಳೇ ಅತಿ ಹೆಚ್ಚು ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ಅಂಶ. ಅಂದಹಾಗೆ ಈ ಎÇÉಾ ವಿಷಯಗಳೂ ಎಲ್ಲಿ ಬಹಿರಂಗಗೊಳ್ಳುತ್ತಿವೆ ಎಂಬ ಕುತೂಹಲ ಇದೆ ಅಲ್ಲವೇ? ಕರ್ನಾಟಕ ಲೋಕ ಸೇವಾ ಆಯೋಗದ ಪರೀûಾರ್ಥಿಗಳು ತಮ್ಮದೇ ಒಂದು ಗ್ರೂಪ್ ಅನ್ನು ಫೇಸ್‌ಬುಕ್‌ನಲ್ಲಿ ರಚಿಸಿಕೊಂಡಿದ್ದು ಅದರಲ್ಲಿ ಈ ಅಂಶಗಳನ್ನು ಮೊಗೆದು ತೆಗೆದು ಅಂಟಿಸುತ್ತಿ¨ªಾರೆ. ಇಂತಹದೇ ಇನ್ನೊಂದು ಗುಂಪು ಬ್ಲಾಗ್‌ನ ಕೆಎಎಸ್ ಪ್ರಶ್ನೆ ಪತ್ರಿಕೆ- ಮಾದರಿ ಉತ್ತರಗಳ ಕೊಂಡಿಯಲ್ಲಿ ಸೇರಿಕೊಂಡಿದ್ದು ಅಲ್ಲಿಯೂ ಪರಸ್ಪರ ಚರ್ಚೆ ನಡೆಯುತ್ತಿದೆ. ಎಲ್ಲಿಂದಲೋ ಹಾರಿ ಬರುವ ಸುದ್ದಿಗಳು ಅನೇಕವೇಳೆ ನೈಜ ಮಾಹಿತಿ ಮತ್ತು ಅಧಿಕೃತ ಅಂಕಿ-ಅಂಶಗಳನ್ನು ತಿಳಿಸುತ್ತಿವೆ. ಹೆಸರನ್ನು ಹಲವು ವೇಳೆ ಗೌಪ್ಯವಾಗಿಡಲಾಗುತ್ತದೆ. ಪರಸ್ಪರ ದೋಷಾರೋಪಗಳೂ, ಜಗಳಗಳೂ ಇರುತ್ತವೆ ಅನ್ನಿ.
ಕಂಕಣ ಭಾಗ್ಯ ಸ್ಕೀಂ- ಆಶೀರ್ವಾದ ಸ್ಕೀಂ- ಶಿಫಾರಸ್ಸು ಸ್ಕೀಂ
ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಂದರ್ಶನದಂತೆಯೇ ಕರ್ನಾಟಕ ಲೋಕಸೇವಾ ಆಯೋಗದ ಸಂದರ್ಶನವೂ ಇರುತ್ತದೆ. ವಸ್ತುನಿಷ್ಠವಾಗಿ ಸಂದರ್ಶನ ನಡೆದಲ್ಲಿ ನಿಜಕ್ಕೂ ಪ್ರತಿಭಾವಂತರಿಗೆ ಮಾತ್ರ ಅವಕಾಶ ಸಿಗುತ್ತದೆ. ಆದರೆ ಈ ಫೇಸ್‌ಬುಕ್ ಗ್ರೂಪ್‌ಗ್ಳಲ್ಲಿ ನಡೆಯುತ್ತಿರುವ ಚರ್ಚೆಯ ಜಾಡನ್ನು ಹಿಡಿದು ಹೋದಲ್ಲಿ ಪ್ರತಿಭೆಗಿಂತ ಇರಬೇಕೆಂಬ ಅಂಶ ಗೋಚರಿಸುತ್ತಿದೆ. ಹಾಗೆಯೇ ವಿವಿಧ ಸ್ಕೀಂಗಳ ಪರಿಚಯವೂ ಆಗುತ್ತಿದೆ. ಕಂಕಣ ಭಾಗ್ಯ ಸ್ಕೀಂ ತುಂಬಾ ಜನಪ್ರಿಯವಾಗಿದೆ. ಸಂದರ್ಶನಕ್ಕೆ ಹಾಜರಾಗುತ್ತಿರುವ ಅರ್ಹ ಅವಿವಾಹಿತ ಯುವಕನಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಸಿದ್ಧರಾಗುವ ಕನ್ಯಾಪಿತೃಗಳು ಹೇಗಾದರೂ ಮಾಡಿ ಆಯ್ಕೆ ಮಾಡಿಸಿ ಕೆಲಸ ಕೊಡಿಸುವ ಜವಾಬ್ದಾರಿ ಹೊತ್ತು, ನಿಭಾಯಿಸಿ, ಸಂದರ್ಶನ ಸಮಿತಿಯ ಸದಸ್ಯರನ್ನು ನಯವಿನಯಗಳಿಂದ ಒಲಿಸಿ, ಕಾಣಿಕೆ ಸಲ್ಲಿಸಿ ಯಶಸ್ವಿಯಾಗಿ ಕೆಲಸ ಗಿಟ್ಟಿಸಿ ಕನ್ಯೆಯನ್ನು ದಾಟಿಸುವ ಈ ಕಂಕಣಭಾಗ್ಯ ಸ್ಕೀಂಗೆ ಅನೇಕರು ಹೆಸರು ಹಚ್ಚಿ¨ªಾರೆ, ಹಲವರು ಫಲಾನುಭವಿಗಳೂ ಇ¨ªಾರೆ. ಪ್ರಭಾವಶಾಲಿ ಮಠಮಾನ್ಯಗಳ ಸ್ವಾಮೀಜಿಗಳು, ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳ ಶಿಫಾರಸ್ಸು ಒಂದಷ್ಟು ಜನರಿಗೆ ಶ್ರೀರಕ್ಷೆ ನೀಡಿದರೆ ಮತ್ತಷ್ಟು ಜನರು ಸೂಟ್‌ಕೇಸ್‌ಗಟ್ಟಲೇ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಆಶೀರ್ವಾದ ಪಡೆಯಲು ಸಿದ್ಧರಾಗಿರುತ್ತಾರೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತ ಎಂಬಂತೆ ಸಂದರ್ಶನಗಳಲ್ಲಿಯೂ ಶತಾಯ-ಗತಾಯ ಲಾಭ ಪಡೆದೇ ತೀರಬೇಕೆಂಬ ಹಠ ಅಭ್ಯರ್ಥಿಗಳನ್ನು ಎಂತಹ ಕನಿಷ್ಠ ಮಟ್ಟಕ್ಕೂ ಇಳಿಸಿಬಿಡುತ್ತದೆ!
15 ರಿಂದ 60 ಲಕ್ಷ ರೂಪಾಯಿಗಳವರೆಗೆ ವಹಿವಾಟು ನಡೆಯುತ್ತಿದೆ ಎನ್ನುವುದು ಫೇಸ್‌ಬುಕ್ ಗ್ರೂಪ್‌ನಲ್ಲಿ ಮೂಡಿಬರುತ್ತಿರುವ ಕರ್ಣಾಕರ್ಣಿ. ಮೇಲುನೋಟಕ್ಕೆ ಇವೆಲ್ಲ ಸುಳ್ಳು. ಅರ್ಹತೆ ಇರುವವರಿಗೆ, ಪ್ರತಿಭಾವಂತರಿಗೆ ಅವಕಾಶ ಇದ್ದೇ ಇದೆ ಎನ್ನುವುದು ಲೋಕಸೇವಾ ಆಯೋಗದ ಸದಸ್ಯರ ಅನ್ನಿಸಿಕೆಯಾದರೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಜಾತಿ-ಪಂಗಡಗಳನ್ನು ಪ್ರತಿನಿಧಿಸುತ್ತಿರುವ ಈ ಸದಸ್ಯರು ಅವರವರ ಸ್ಥಾಪಿತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳದೇ ಹೊರಗೆ ಹೋಗುವಂತಿಲ್ಲ. ಅವರು ಪ್ರಾಮಾಣಿಕರಾಗಿದ್ದರೂ ಅವರ ಮೇಲೆ ಪಕ್ಷ, ಪಂಗಡಗಳು ಹೇರುವ ಒತ್ತಡಕ್ಕೆ ಮಣಿಯಲೇಬೇಕಾದ, ಋಣ ತೀರಿಸಬೇಕಾದ, ಅನಿವಾರ್ಯತೆ ಇದ್ದೇ ಇದೆ. ಇದಕ್ಕೆ ಅಪವಾದಗಳೂ ಇಲ್ಲದೇ ಇಲ್ಲ. ಈ ವಿಷಯಗಳೆÇÉಾ ಒಂದು ರೀತಿಯ ಬಹಿರಂಗ ಸತ್ಯ. ಫೇಸ್‌ಬುಕ್‌ನಲ್ಲಿ ಓಡಾಡುತ್ತಲಿದೆ ನಿತ್ಯ!
ಹತಾಶೆ ಬೇಡ- ಸಂದರ್ಶನ ಎದುರಿಸಿ
ಎಲ್ಲಾ ಸಂದರ್ಶನಗಳೂ ಕೇವಲ ಕಣ್ಣೊರೆಸುವ ತಂತ್ರ, ಕೇವಲ ಬೂಟಾಟಿಕೆ, ಮೊದಲಿಗೇ ತಮಗೆ ಬೇಕಾದವರನ್ನು ನೇಮಿಸಿಕೊಂಡು ಉಳಿದವರಿಗೆ ಸುಮ್ಮನೇ ತೊಂದರೆ ಕೊಡುವ ಪ್ರಕ್ರಿಯೆ. ತಮ್ಮ ಯೋಗ್ಯತೆ ಗಿಂತಲೂ ಕಡಿಮೆ ಅರ್ಹತೆ ಇರುವವರಿಗೆ ಕೆಲಸ ಕೊಡುವ ಇಂತಹ ಸಂದರ್ಶನಗಳಿಗೆ ಹೋಗುವುದೇ ವ್ಯರ್ಥ. ಎಲ್ಲಾ ಕಡೆಯೂ ಹಣವೇ ಹಣ. ಹಣ ಕೊಟ್ಟು ಹು¨ªೆ ಕೊಳ್ಳುತ್ತಿರುವುದರಿಂದ ಸಂದರ್ಶನಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಎಲ್ಲವೂ ಮೋಸ ಎಂಬ ಮಾತುಗಳು ಆಗಾಗ್ಗೆ ಅಲ್ಲಲ್ಲಿ ಕೇಳಿಬರುತ್ತವೆ. ಈ ಮಾತುಗಳಲ್ಲಿ ಹುರುಳಿದೆಯೋ, ಇಲ್ಲವೋ ಎಂಬುದರ ಬಗ್ಗೆ ಅಭ್ಯರ್ಥಿಗಳು ಚಿಂತಿಸಬೇಕಾದ ಅಗತ್ಯ ಇಲ್ಲ. ಕೆಲವೊಮ್ಮೆ ಇದು ಕೆಲಸ ಸಿಗದ ಹತಾಶ ಅಭ್ಯರ್ಥಿಗಳು ಹಬ್ಬಿಸಿದ ಗಾಳಿ ಸುದ್ದಿಯೂ ಆಗಿರಬಹುದು. ಎಟುಕದ ದ್ರಾಕ್ಷಿ ಹುಳಿ ಎನ್ನುವಂತಹ ಹುಳಿಹುಳಿ ಅನುಭವದ ಸಂತರ್ಪಣೆಯೂ ಆಗಿರಬಹುದು! ನಿಜವಾದ ಅರ್ಹತೆ ಇರುವ ಅಭ್ಯರ್ಥಿಗಳು ನಮ್ಮ ದೇಶದ ಆಸ್ತಿ. ಅರ್ಹರಿಗೆ ಒಂದಿÇÉಾ ಒಂದು ಕಡೆ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ. ಕಾಯುವ, ಪ್ರಯತ್ನಿಸುವ ಮತ್ತು ಗೆಲ್ಲುವ ತಾಳ್ಮೆ ಮತ್ತು ಛಲ ಇರಬೇಕು, ಅಷ್ಟೇ!
ಮಾದರಿ ಸಂದರ್ಶನ ಹೀಗಿರುತ್ತದೆ
ಕರ್ನಾಟಕ ಲೋಕಸೇವಾ ಆಯೋಗ 2005-06ರಲ್ಲಿ ನಡೆಸಿದ ಯಶಸ್ವಿ ಕೆಎಎಸ್ ಅಭ್ಯರ್ಥಿಗಳ ಸಂದರ್ಶನದಲ್ಲಿ ಭಾಗವಹಿಸಿ ಸೂಪರಿಂಟೆಂಡೆಂಟ್ ಆಫ್ ಪ್ರಿಸನ್ಸ್ ಆಗಿ ಆಯ್ಕೆಯಾದ ರಮೇಶ್ ಅವರಿಗೆ ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ, ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುವಾಗಿನ ಅನುಭವಗಳು ಕುರಿತು ತುಂಬಾ ಸರಳವಾದ ಪ್ರಶ್ನೆಗಳನ್ನು ಮಾತ್ರ ಕೇಳಿದ್ದರಂತೆ! ತುಂಬಾ ಕಷ್ಟವಾದ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕಷ್ಟಪಟ್ಟು ಓದಿಕೊಂಡು, ಹೆದರುತ್ತಲೇ ಹಾಜರಾದವರು ಹಕ್ಕಿಯಂತೆ ಹಗುರಾಗಿ ಹಾರುತ್ತಾ ಬಂದರಂತೆ!
ಇದೇ ಸರಣಿಯಲ್ಲಿ ಸಂದರ್ಶನ ಎದುರಿಸಿದ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರಿಗೆ ಅವರ ವಿದ್ಯಾಭ್ಯಾಸ, ಹಿನ್ನೆಲೆ, ಅನುಭವ ವಿವರಿಸುವಂತೆ ಕೇಳಿದರಂತೆ. ದಲಿತ ಕುಟುಂಬದಿಂದ ಕಡು ಬಡತನದಲ್ಲಿ ಬೆಂದುಬಂದಿದ್ದ ಡಾ. ಸಿದ್ದೇಶ್ ಅವರಿಗೆ ಸಂಶೋಧನೆಗಾಗಿ ಆಯ್ದುಕೊಂಡಿದ್ದ ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸಿŒಗಳ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ, ಸಾಹಿತ್ಯ ಸಂದರ್ಭದ ಬಗ್ಗೆ, ಮೆಚ್ಚಿನ ಲೇಖಕರ ಬಗ್ಗೆ ಮತ್ತು ತೀರಾ ಮುಖ್ಯವಾಗಿ ಅಂಬೇಡ್ಕರ್ ಅವರ ವಿಚಾರಧಾರೆಯ ಬಗ್ಗೆ ಹಾಗೂ ಅದರ ಪ್ರಭಾವ ಜನರ ಮೇಲೆ, ಸಿದ್ದೇಶ್ ಅವರ ಬದುಕಿನ ಮೇಲೆ ಆಗಿರುವ ಬಗ್ಗೆ ಸುದೀರ್ಘವಾಗಿ ಕೇಳಿದರಂತೆ. ಕೇಳಿದ 20 ಪ್ರಶ್ನೆಗಳಲ್ಲಿ 19 ಪ್ರಶ್ನೆಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರಿಸಿದ್ದಕ್ಕಾಗಿ ಶಹಭಾಸ್‌ಗಿರಿ ಸಿಕ್ಕಿದರೂ ಡಾ. ಸಿದ್ದೇಶ್ ಅವರು ಆ ಸಂದರ್ಶನದಲ್ಲಿ ಆಯ್ಕೆಯಾಗಲಿಲ್ಲ!
ಕಳೆದ ಕೆಲವು ವರ್ಷಗಳ ಹಿಂದೆ ಇದೇ ಕೆಎಎಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ಖಜಾನೆ ಅಧಿಕಾರಿ ಅ.ನಾ. ಪ್ರಾಣೇಶ್ ಅವರು ಕಲೆ ಮತ್ತು ಕಾನೂನು ಅಭ್ಯಾಸ ಮಾಡಿದ ಅಭ್ಯರ್ಥಿಯಾಗಿದ್ದರೂ ಅವರಿಗೆ ಥರ್ಮಲ್ ಪವರ್ ಜನರೇಶನ್ ವಿಧಾನ ಕುರಿತು ತಿಳಿಸಿ ಎಂದು ಕೇಳಲಾಗಿತ್ತು! ಕಲಾ ವಿದ್ಯಾರ್ಥಿಗೆ ವಿಜ್ಞಾನದ ವಿಷಯದ ಪ್ರಶ್ನೆ ಎಂದು ಮೂಗಿನಮೇಲೆ ಬೆರಳಿಡಬೇಡಿ. ಆಂಗ್ಲ ಉಪನ್ಯಾಸಕರ ಹು¨ªೆಗೆ ಹಾಜರಾದ ಈ ಲೇಖಕನಿಗೆ ಬಯಾಪ್ಸಿ ಎಂದರೇನು? ಎಂದು ಜೀವವಿಜ್ಞಾನ, ಅದರಲ್ಲೂ ವೈದ್ಯಕೀಯ ವಿಜ್ಞಾನದ, ಪ್ರಶ್ನೆ ಕೇಳಲಾಗಿತ್ತು. ಜೊತೆಗೆ ಬಾಹ್ಯಾಂತರೀಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕುರಿತ ಪ್ರಶ್ನೆಗಳನ್ನೂ ಕೇಳಲಾಗಿತ್ತು! ಇಬ್ಬರೂ ಕ್ವಿಜ್ ಸ್ಪರ್ಧೆಗಳಲ್ಲಿ ಛಾಂಪಿಯನ್ ಆಗಿದ್ದರಿಂದ ಆ ಪ್ರಶ್ನೆಗಳಿಗೆ ಸೂಕ್ತರೀತಿಯಲ್ಲಿ ಉತ್ತರಿಸಿದರೂ ಆ ಹು¨ªೆಗಳು ಮಾತ್ರ ಸಿಗಲಿಲ್ಲ.
ಯಶಸ್ವೀ ಸಂದರ್ಶನ ಹೀಗಿತ್ತು
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2005ರ ಅಖೀಲ ಭಾರತ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ವಿಯಾದವರ ರ್‍ಯಾಂಕ್ ಪಟ್ಟಿ 2006ರ ಮೇ 12ರಂದು ಪ್ರಕಟವಾದಾಗ ಕರ್ನಾಟಕದ ಸುಮಾರು 18 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದಲ್ಲಿ 9ನೇ ರ್‍ಯಾಂಕ್‌ಗಳಿಸಿ ರಾಜ್ಯಕ್ಕೆ ಮೊದಲಿಗರಾದ ಚಿತ್ರದುರ್ಗ ಜಿÇÉೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಡಾ.ಎಸ್. ರಘುರಾಂ ಅವರನ್ನು ಸಂದರ್ಶಿಸಿ ನಿಮ್ಮ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಹೇಗಿತ್ತು? ಎಂದು ಪ್ರಶ್ನಿಸಿದಾಗ, ತುಂಬಾ ಆತ್ಮೀಯವಾಗಿತ್ತು. ಸಂದರ್ಶನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಗುಮುಖದಿಂದ ಮಾತಾಡಿಸಿದರು. ನಾನು ಓದಿದ ವಿಷಯಗಳು, ನನ್ನ ಕುಟುಂಬದ ವಿವರಗಳು, ನನ್ನ ಆಯ್ಕೆಯ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ನಾನು ಐಎಫ್ಎಸ್ ಆಯ್ಕೆ ಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದುದರಿಂದ ನಮ್ಮ ನೆರೆಹೊರೆಯ ದೇಶಗಳೊಂದಿಗೆ ನಮ್ಮ ದೇಶದ ಸಂಬಂಧ, ಅಂತಾರಾಷ್ಟ್ರೀಯ ಸಂಬಂಧ ಇವುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಲಾಗಿತ್ತು. ಇಲ್ಲಿ ನೀವು ಕೇಳಲಾದ ಪ್ರಶ್ನೆಗೆ ಏನು ಉತ್ತರ ಹೇಳುತ್ತೀರಿ ಎನ್ನುವುದಕ್ಕಿಂತ ಎಷ್ಟು ಪ್ರಾಮಾಣಿಕವಾಗಿ ನಿಮಗೆ ಗೊತ್ತಿರುವುದನ್ನು ಹೇಳುತ್ತೀರಿ, ಸ್ಪಷ್ಟವಾಗಿ ನಿಮ್ಮ ನಿಲುವನ್ನು ವ್ಯಕ್ತಗೊಳಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹತ್ತು ಪ್ರಶ್ನೆಗಳಿಗೆ ನೀವು ಒಂಬತ್ತಕ್ಕೆ ಸರಿ ಉತ್ತರ ನೀಡುವಲ್ಲಿ ಅಸಫಲರಾದರೂ ನೀಡುವ ಒಂದೇ ಪ್ರಶ್ನೆಯ ಉತ್ತರ ನಿಮ್ಮ ಧನಾತ್ಮಕ ಆಲೋಚನೆ, ನಿಮ್ಮ ವ್ಯಕ್ತಿತ್ವದ ಅನಾವರಣಗೊಳಿಸುವಂತಿದ್ದರೆ ಖಂಡಿತಾ ನೀವು ಆಯ್ಕೆಯಾಗುತ್ತೀರಿ. ನಿಮಗೆ ಕೇಳುವ ಪ್ರಶ್ನೆಗಳು ನಿಮ್ಮ ಸ್ವ-ವಿವರದೊಂದಿಗೆ ಲಗತ್ತಿಸಿರುವ ವಿವರಗಳನ್ನು ಆಧರಿಸಿಯೇ ಇರುತ್ತವೆ ಆದ್ದರಿಂದ ಅದಕ್ಕೆ ಪೂರಕವಾಗುವಂತೆ ನೀವು ನಿಮ್ಮ ಸಿದ್ಧತೆ ನಡೆಸಿದ್ದರೆ ಸಾಕು. ಕೇವಲ ಕ್ವಿಜ್ ರೀತಿಯಲ್ಲಿ ಸಂದರ್ಶನ ಇರುವುದಿಲ್ಲ. ನಿಮ್ಮ ವ್ಯಕ್ತಿಗತ ನಿಲುವುಗಳು, ಆಸಕ್ತಿ, ಅಭಿವ್ಯಕ್ತಿಗಳು, ನಿಮ್ಮ ಪ್ರಾಮಾಣಿಕ ವರ್ತನೆ ಎಲ್ಲವೂ ಇಲ್ಲಿ ಲೆಕ್ಕಕ್ಕೆ ಬರುವುದರಿಂದ ಯಾವುದೇ ಗಡಿಬಿಡಿಗೆ ಒಳಗಾಗದೆ ಸಂದರ್ಶನ ಎದುರಿಸಿ ಯಶಸ್ವಿಯಾಗಬಹುದು ಎಂದರು.
ಅದೇ ವರ್ಷ ಐಎಎಸ್‌ನಲ್ಲಿ 32ನೇ ಸ್ಥಾನ ಪಡೆದಿರುವ ಆರ್. ಸಂಗೀತಾ ಕಂಪ್ಯೂಟರ್ ಸೈನ್ಸ್ ಪದವೀಧರೆ. ಜೊತೆಗೆ ಹಣಕಾಸು ವಿಷಯದಲ್ಲಿ ಎಂಬಿಎ ಮತ್ತು ಕಾನೂನು ವ್ಯಾಸಂಗವನ್ನೂ ಮಾಡಿದವರು. ಇವರಿಗೆ ಸಂದರ್ಶನದಲ್ಲಿ ಕೇಳಿದ ಮೊದಲ ಪ್ರಶ್ನೆ ಇಷ್ಟೊಂದು ವಿವಿಧ ಕ್ಷೇತ್ರಗಳ ವ್ಯಾಸಂಗ ಯಾಕೆ ಮಾಡಿದ್ದು? ಅಂತ. ಉಳಿದಂತೆ ಅವರ ಸ್ವ-ವಿವರ, ಹಿನ್ನೆಲೆ, ಊರು, ರಾಜ್ಯದ ಪ್ರಶ್ನೆಗಳಿದ್ದವಂತೆ. ನಾಲ್ಕನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರಿಂದ ಆ ಎÇÉಾ ಪ್ರಯತ್ನಗಳಲ್ಲಿಯೂ ಒಂದೇ ವಿಷಯಗಳನ್ನು ಆಯ್ದಕೊಂಡಿದ್ದರೆ? ಎಂದು ಕೇಳಿದರಂತೆ. ಕೊನೆಯದಾಗಿ ಈಶಾನ್ಯ ರಾಜ್ಯಗಳ ಜಿÇÉೆಯೊಂದರ ಜಿÇÉಾಧಿಕಾರಿಯಾಗಿ ನೇಮಕವಾದರೆ ಅಲ್ಲಿನ ಜನರಲ್ಲಿ ಪ್ರಚಲಿತವಿರುವ ಪರಿವರ್ತಿತ ಬೇಸಾಯ ಪದ್ಧತಿಯನ್ನು ಬದಲಾಯಿಸಲು ಏನು ಪ್ರಯತ್ನ ಮಾಡುವಿರಿ? ಎಂಬುದಾಗಿತ್ತಂತೆ.
2003ರಲ್ಲಿ 6ನೇ ರ್‍ಯಾಂಕ್ ಗಳಿಸಿದ ಮಯೂರ್ ಮಾಹೇಶ್ವರಿಯವರಿಗೆ ಮಾತ್ರ ಕೇಳಿದ ಪ್ರಶ್ನೆಗಳು ಸಾಮಾನ್ಯ ಜ್ಞಾನದ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದವು. ಮೊದಲ ಪ್ರಶ್ನೆ ಭಾರತದ ಜವಳಿ ಉದ್ಯಮ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಈ ಉದ್ಯಮ ಬೀರುತ್ತಿರುವ ಪ್ರಭಾವ, ಅದರ ಸಾಧಕ-ಬಾಧಕ ಗಳನ್ನು ಕುರಿತು ಇತ್ತು. ಸಂವಿಧಾನದ 356 ನೇ ವಿಧಿ ಮತ್ತು ಅದರ ಸದುಪಯೋಗ, ದುರುಪಯೋಗ ಕುರಿತು ಸದಸ್ಯರೊಬ್ಬರು ಪ್ರಶ್ನೆ ಮಾಡಿದರಂತೆ. ಹಿಂದುಳಿದ ರಾಜ್ಯಗಳಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಸಮಸ್ಯೆಯ ಬಗ್ಗೆ ಮಹಿಳಾ ಸದಸ್ಯರೊಬ್ಬರು ಪ್ರಶ್ನೆ ಕೇಳಿದರು. ಆಗ ನಡೆಯುತ್ತಿದ್ದ ಅಮೇರಿಕಾ ಮತ್ತು ಇರಾಕ್ ಕೊಲ್ಲಿ ಯುದ್ಧದ ಕುರಿತು ಪ್ರಶ್ನೆ ಇತ್ತು. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಅಸಮತೋಲನ, ಕೊಳ್ಳುಬಾಕ ಸಂಸ್ಕೃತಿ, ಜಾಗತೀಕರಣದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೊನೆಯಲ್ಲಿ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ನಡುವೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಕುರಿತು ವಿವರಿಸಲು ಕೇಳಿದರಂತೆ.(ಆಗ ಆ ಎರಡೂ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿದ್ದರು.)
ಈ ಮಾತುಗಳನ್ನು ಓದುವಾಗ ರಾಷ್ಟ್ರದಲ್ಲಿಯೇ ಉನ್ನತ ಹು¨ªೆಗೆ ನಡೆಸಲಾದ ವ್ಯಕ್ತಿತ್ವ ಪರೀಕ್ಷೆಯ(ಸಂದರ್ಶನದ) ಸ್ಪಷ್ಟ ಚಿತ್ರಣ ದೊರೆತಂತಾಗುತ್ತದೆ, ಅಲ್ಲವೇ? ಬಹುಶಃ ಇದೇ ಮಾದರಿಯಲ್ಲಿಯೇ ನಮ್ಮ ದೇಶದ ಎÇÉಾ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸುವ ಸಂದರ್ಶನಗಳು ಇರುತ್ತವೆ ಎನಿಸುತ್ತದೆ. ಸಂದರ್ಶಕರ ಸಮಿತಿಯು ವಿವಿಧ ಕ್ಷೇತ್ರಗಳ ದಿಗ್ಗಜರನ್ನು ಪ್ರತಿನಿಧಿಸುವುದರಿಂದ, ಆಯ್ಕೆಯ ಮಾನದಂಡಗಳೂ ಪೂರ್ವ ನಿರ್ಧಾರಿತವಾಗಿರುವುದರಿಂದ, ವಸ್ತುನಿಷ್ಟವಾಗಿಯೂ ವ್ಯಕ್ತಿನಿಷ್ಟವಾಗಿಯೂ ನಡೆಯುತ್ತವೆ. ಇಂಗ್ಲೆಂಡಿನ ಸ್ಕಾಟ್ಲೆಂಡ್‌ಯಾರ್ಡ್, ಅಮೇರಿಕಾದ ಪೆಂಟಗನ್ ಮತ್ತು ರಷ್ಯಾದ ಕೆಜಿಬಿಗಳಿಗೆ ನಡೆಯುವ ನೇಮಕಾತಿ ಸಂದರ್ಶನಗಳ ಸಾಲಿನಲ್ಲಿಯೇ ಭಾರತದ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಂದರ್ಶನಗಳು ನಿಲ್ಲುತ್ತಿವೆ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಡೆಯುತ್ತಿದ್ದು ವಿಶ್ವಾಸಾರ್ಹತೆಗಳಿಸಿವೆ. ಯಶಸ್ವಿ ಅಭ್ಯರ್ಥಿಗಳೇ, ಗುಡ್‌ಲಕ್!
ಹೆಚ್ಚಿನ ಮಾಹಿತಿಗೆ ನೋಡಿ: ಸಂದರ್ಶನ- ವ್ಯಕ್ತಿತ್ವದ ಸಮಗ್ರ ದರ್ಶನ, ನವಕರ್ನಾಟಕ ಪ್ರಕಾಶನ, ಬೆಂಗಳೂರು.
ಬಾಕ್ಸ್
ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ತಡೆಗಳೆಲ್ಲ ನಿವಾರಣೆ
ಕಳೆದ ಗುರುವಾರ ಮಧ್ಯಾಹ್ನ ಲೋಕಸಭೆಯಲ್ಲಿ ಸಿಬ್ಬಂದಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿಯವರು ಚರ್ಚೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್ ಪೊ›ಬೆಷನರ್‌ಗಳ ನೇಮಕಾತಿ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ವಿಷಯದಲ್ಲಿ ತಂದಿರುವ ಕಟ್ಟುನಿಟ್ಟಿನ ಬದಲಾವಣೆಯನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಮಾರ್ಚ್ 15ರಂದು ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಯೋಗದೊಂದಿಗೆ ಚರ್ಚಿಸಿ ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
- ಅಭ್ಯರ್ಥಿಯು ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು.
- ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿಯನ್ನು ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದ್ದು ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ.
- ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ(22 ಸಂವಿಧಾನ ಅನುಮೋದಿಸಿದ ಭಾಷೆಗಳು ಮತ್ತು ಇಂಗ್ಲಿಷ್) ಇವುಗಳಲ್ಲಿ ಯಾವುದೇ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಓದಿದ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ.
- ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್ ಕಾಂಪ್ರಹೆನÒನ್ ಮತ್ತು ಪ್ರಸಿ(ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಹಾಗೆಯೇ ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆಯೇ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ.
ಅಂತೂ ಗುಡ್ಡ ಅಗೆದು ಇಲಿ ಹಿಡಿದರು ಎಂಬಂತೆ ವರ್ಷಗಟ್ಟಲೇ ಉನ್ನತ ಅಧ್ಯಯನ ಸಮಿತಿ ನಡೆಸಿದ ಸಂಶೋಧನೆಯ ಫಲಶೃತಿಯನ್ನು ಭಾವನಾತ್ಮಕ ಒತ್ತಡಗಳಿಗೆ ಬಲಿಕೊಟ್ಟು ಉನ್ನತ ಶಿಕ್ಷಣದ ಆಶಯವನ್ನೇ ಅಣಕಿಸುವ ಕಾರ್ಯ ನಡೆದಿದೆ. ಎರಡು ಐಚ್ಛಿಕ ವಿಷಯಗಳ ಬದಲಿಗೆ ಒಂದೇ ಐಚ್ಛಿಕ ವಿಷಯ ಮತ್ತು ಎರಡು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳು ಎಂಬುದಷ್ಟೇ ಹೊಸ ಬದಲಾವಣೆಯ ಹೂರಣ!
ಅದಕ್ಕಾಗಿ ಕೋಟಿ ಕೋಟಿ ಹಣ ವ್ಯಯಿಸಬೇಕಿತ್ತೇ?
KAS Interview 2013 How to Face it - Article in Udayavani Josh 26 March 2013
Monday, 25 March 2013
UPSC Mains 2013 Syllabus Changed - Article in Prajavani Shikshana 25 March 2013
ಕೇಂದ್ರ ನಾಗರಿಕ ಸೇವೆ
ಬದಲಾಗಲಿದೆ ಪರೀಕ್ಷಾ ಮಾದರಿ
- Mon, 03/25/2013 - 01:00
ಕೇಂದ್ರ
ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್‌ಗಳ (ಕೇಂದ್ರ ನಾಗರಿಕ ಸೇವೆ) ನೇಮಕಾತಿಗಾಗಿ
ನಡೆಸುವ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಈ ವರ್ಷದಿಂದ ಬದಲಾಗಲಿದೆ. ಆದರೆ ಈ
ಬದಲಾವಣೆಯ ಕೆಲವು ಅಂಶಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ,
ಅದರಲ್ಲಿ ಕೊಂಚ ಮಾರ್ಪಾಡುಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ.
ವಿಶ್ವವಿದ್ಯಾಲಯ
ಧನಸಹಾಯ ಆಯೋಗದ ನಿವೃತ್ತ ಅಧ್ಯಕ್ಷ ಪ್ರೊ. ಅರುಣ್ ಎಸ್. ನಿಗವೇಕರ್ ಅವರ
ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು, ಮುಖ್ಯ ಪರೀಕ್ಷೆಯ ಸುಧಾರಣಾ ಕ್ರಮಗಳಿಗೆ
ಸಂಬಂಧಿಸಿದಂತೆ ಸಲ್ಲಿಸಿದ್ದ ಶಿಫಾರಸುಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಫೆ. 27ರಂದು
ಒಪ್ಪಿಗೆ ಸೂಚಿಸಿದ್ದರು. ಈ ಶಿಫಾರಸುಗಳಿಗೆ ಪೂರಕವಾಗಿಯೇ ಈ ಬಾರಿಯ ಮುಖ್ಯ
ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ, ಪೂರ್ವಭಾವಿ ಪರೀಕ್ಷೆಗಾಗಿ
ಮಾರ್ಚ್ 4ರಂದು ಆಯೋಗ ಅಧಿಸೂಚನೆಯನ್ನೂ ಹೊರಡಿಸಿದೆ.
ಆದರೆ,
ಹೊಸ ಶಿಫಾರಸುಗಳ ಅನ್ವಯ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ
ಆಯ್ಕೆ ವಿಷಯದಲ್ಲಿ ತರಲು ಹೊರಟಿದ್ದ ಕಟ್ಟುನಿಟ್ಟಿನ ಬದಲಾವಣೆಗಳು ಪರೀಕ್ಷೆ
ಆಕಾಂಕ್ಷಿಗಳಿಗೆ ಆಘಾತ ಉಂಟು ಮಾಡಿವೆ. ನೂತನ ಬದಲಾವಣೆಗಳನ್ನು ಮರುಪರಿಶೀಲನೆಗೆ
ಒಳಪಡಿಸುವಂತೆ ಆಗ್ರಹಿಸಿ ಮಾರ್ಚ್ 15ರಂದು ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ
ಹಿನ್ನೆಲೆಯಲ್ಲಿ `ಹೊಸ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ'
ಎಂದು ಸಿಬ್ಬಂದಿ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಇತ್ತೀಚೆಗೆ ಲೋಕಸಭೆಗೆ
ತಿಳಿಸಿದ್ದಾರೆ. ಆದರೆ ಈ ಸಂಬಂಧ ಆಯೋಗ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಾಗಿದೆ.
ಹೀಗಾಗಿ
ಇತ್ತೀಚೆಗೆ ಆಯೋಗ ಪ್ರಕಟಿಸಿರುವ ಹೊಸ ತೀರ್ಮಾನಗಳು ಮತ್ತು ಅದರಲ್ಲಿ ಆಗಬಹುದಾದ
ಪರಿಷ್ಕೃತ ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ. (ಆಯೋಗದಿಂದ ಪ್ರಕಟಣೆ ಹೊರಬಿದ್ದ
ನಂತರವಷ್ಟೇ ಪರಿಷ್ಕೃತ ಬದಲಾವಣೆಗಳು ಅಧಿಕೃತಗೊಳ್ಳಲಿವೆ. ಈ ಲೇಖನ ಪ್ರಕಟವಾಗುವ
ಹೊತ್ತಿಗೆ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ)
ಅಸಮಾಧಾನಕ್ಕೆ ಕಾರಣವಾಗಿರುವ ಹೊಸ ತೀರ್ಮಾನಗಳು ಹೀಗಿವೆ
1. ಅರ್ಹತಾ ಪರೀಕ್ಷೆಯಾಗಿದ್ದ ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳನ್ನು ತೆಗೆದುಹಾಕಲಾಗಿದೆ.
1. ಅರ್ಹತಾ ಪರೀಕ್ಷೆಯಾಗಿದ್ದ ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳನ್ನು ತೆಗೆದುಹಾಕಲಾಗಿದೆ.
2. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ವಿಷಯವನ್ನು ಕಡ್ಡಾಯ ಮಾಡಲಾಗಿದೆ.
3. ಎರಡು ಐಚ್ಛಿಕ ವಿಷಯಗಳ ಬದಲಿಗೆ ಕೇವಲ ಒಂದನ್ನು ಆಯ್ದುಕೊಳ್ಳುವ ಅವಕಾಶ ಇದೆ.
4.ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳನ್ನು ಬರೆಯಬೇಕು.
5.
ಪದವಿ ಹಂತದಲ್ಲಿ ಓದಿರುವ ಭಾಷಾ ಸಾಹಿತ್ಯ ವಿಷಯವನ್ನು ಇಲ್ಲೂ ಆಯ್ದುಕೊಳ್ಳಬಹುದು. ಇತರ
ಪದವಿಯವರು ಭಾಷಾ ಸಾಹಿತ್ಯ ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.
6.
ಪದವಿ ಹಂತದಲ್ಲಿ ಕನ್ನಡ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಿದ್ದರೆ ಮಾತ್ರ ಆ
ಭಾಷಾ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಬಹುದು. ಕನಿಷ್ಠ 25 ಅಭ್ಯರ್ಥಿಗಳು ಹೀಗೆ ಒಂದು
ಭಾಷೆಯ ಮಾಧ್ಯಮವನ್ನು ತೆಗೆದುಕೊಂಡಲ್ಲಿ ಮಾತ್ರ ಅವಕಾಶ ಕೊಡಲಾಗುತ್ತದೆ. ಇಲ್ಲದಿದ್ದಲ್ಲಿ
ಅವರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
7.
ಇಂಗ್ಲಿಷ್ ಹೊರತುಪಡಿಸಿ ವಿದೇಶಿ ಭಾಷಾ ಸಾಹಿತ್ಯ ಪತ್ರಿಕೆಗಳನ್ನು ರದ್ದು ಮಾಡಲಾಗಿದೆ.
ಹಾಗೆಯೇ ಅತ್ಯಂತ ಸುಲಭವಾಗಿದ್ದ `ಪಾಲಿ ಭಾಷಾ ಸಾಹಿತ್ಯ' ಪತ್ರಿಕೆ ಕೂಡ ರದ್ದಾಗಿದೆ.
8. ಸಂದರ್ಶನಕ್ಕೆ 1: 3ರ ಪ್ರಮಾಣದ ಬದಲು ಇನ್ನು ಮುಂದೆ 1: 2 ಪ್ರಮಾಣದಲ್ಲಿ ಕರೆ ಪತ್ರ ಕಳುಹಿಸಲಾಗುತ್ತದೆ.
ಸಂಭವನೀಯ ಪರಿಷ್ಕೃತ ಬದಲಾವಣೆಗಳ ವಿವರ
1. ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು.
1. ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು.
2.
ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿ ಹಾಗೂ
ಪದವಿಯಲ್ಲಿ ಅದೇ ಭಾಷಾ ಮಾಧ್ಯಮದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು
ತೆಗೆದುಹಾಕಲಾಗಿದೆ. ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ
ಇಚ್ಛೆಗೆ ಬಿಡಲಾಗಿದೆ.
3.
ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು
ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ (ಸಂವಿಧಾನ ಅನುಮೋದಿಸಿದ
22 ಭಾಷೆಗಳು ಮತ್ತು ಇಂಗ್ಲಿಷ್) ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು.
ಪದವಿಯಲ್ಲಿ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ
ಇಲ್ಲ.
4.
ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್
ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು
ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಈ ಮೊದಲು ಇದ್ದ
ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆಗಳು
ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆ
ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ.
ಒಂದು
ವೇಳೆ ಮೇಲಿನ ಈ ಎಲ್ಲ ಉದ್ದೇಶಿತ ಬದಲಾವಣೆಗಳು ಜಾರಿಗೆ ಬಂದಿದ್ದೇ ಆದಲ್ಲಿ, ಪರೀಕ್ಷೆ
ಬರೆಯುವ ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಪೂರ್ವಭಾವಿ ಪರೀಕ್ಷೆ
2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೇಂದ್ರ ಗೆಜೆಟ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಬಿದ್ದಿದೆ. ಪರೀಕ್ಷೆಗಳು ಮೇ 26ರಂದು ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯ ಮಾದರಿ ಎರಡು ವರ್ಷಗಳ ಹಿಂದಷ್ಟೇ ಬದಲಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಹೊಸ ಮಾರ್ಪಾಡುಗಳು ಈ ಪರೀಕ್ಷೆಗೆ ಅನ್ವಯಿಸುವುದಿಲ್ಲ.
2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೇಂದ್ರ ಗೆಜೆಟ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಬಿದ್ದಿದೆ. ಪರೀಕ್ಷೆಗಳು ಮೇ 26ರಂದು ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯ ಮಾದರಿ ಎರಡು ವರ್ಷಗಳ ಹಿಂದಷ್ಟೇ ಬದಲಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಹೊಸ ಮಾರ್ಪಾಡುಗಳು ಈ ಪರೀಕ್ಷೆಗೆ ಅನ್ವಯಿಸುವುದಿಲ್ಲ.
ಇಂಡಿಯನ್
ಫಾರೆಸ್ಟ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರು ಈ ಬಾರಿ ಸಿವಿಲ್ ಸರ್ವೀಸಸ್
ಪ್ರಿಲಿಮಿನರಿ ಪರೀಕ್ಷೆಗೆ ಕರೆದಿರುವ ಅರ್ಜಿಯನ್ನೇ ಸಲ್ಲಿಸಬೇಕು. ಅಭ್ಯರ್ಥಿಗಳು ಸಿವಿಲ್
ಸರ್ವೀಸಸ್ (ಸುಮಾರು 1000+ ಹುದ್ದೆಗಳು) ಮತ್ತು ಐಎಫ್‌ಎಸ್‌ನಲ್ಲಿ (ಸುಮಾರು 85
ಹುದ್ದೆಗಳು) ಯಾವುದಾದರೂ ಒಂದನ್ನು ಅಥವಾ ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು. ಎರಡನ್ನೂ
ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಿವಿಲ್ ಸರ್ವೀಸಸ್ ಮತ್ತು
ಫಾರೆಸ್ಟ್ ಸರ್ವೀಸಸ್ ಮುಖ್ಯ ಪರೀಕ್ಷೆಗಳನ್ನು ಪ್ರತ್ಯೇಕ ದಿನಾಂಕಗಳಂದು
ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ
ಪತ್ರಿಕೆ 1: ಸಾಮಾನ್ಯ ಜ್ಞಾನ- 200 ಅಂಕಗಳು- ಅವಧಿ ಎರಡು ಗಂಟೆ
*ಪ್ರಸಕ್ತ ವಿದ್ಯಮಾನ- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗತಿಗಳು.
*ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.
*ಭಾರತ ಮತ್ತು ಪ್ರಪಂಚದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶ.
*ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ- ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ವಿವಿಧ ಯೋಜನೆಗಳು ಇತ್ಯಾದಿ.
*ಪರಿಸರ ಅಧ್ಯಯನ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಮುಂತಾದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ತುಂಬಾ ಆಳವಾದ ಪರಿಣತಿಯ ಅಗತ್ಯ ಇಲ್ಲ.)
*ಸಾಮಾನ್ಯ ವಿಜ್ಞಾನ.
ಪತ್ರಿಕೆ 1: ಸಾಮಾನ್ಯ ಜ್ಞಾನ- 200 ಅಂಕಗಳು- ಅವಧಿ ಎರಡು ಗಂಟೆ
*ಪ್ರಸಕ್ತ ವಿದ್ಯಮಾನ- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗತಿಗಳು.
*ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.
*ಭಾರತ ಮತ್ತು ಪ್ರಪಂಚದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶ.
*ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ- ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ವಿವಿಧ ಯೋಜನೆಗಳು ಇತ್ಯಾದಿ.
*ಪರಿಸರ ಅಧ್ಯಯನ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಮುಂತಾದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ತುಂಬಾ ಆಳವಾದ ಪರಿಣತಿಯ ಅಗತ್ಯ ಇಲ್ಲ.)
*ಸಾಮಾನ್ಯ ವಿಜ್ಞಾನ.
ಪತ್ರಿಕೆ 2: ಸಿವಿಲ್ ಸರ್ವೀಸ್ ಆ್ಯಪ್ಟಿಟ್ಯೂಡ್- ಅಂಕ 200 - ಅವಧಿ ಎರಡು ಗಂಟೆ
*ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು (ಕಾಂಪ್ರಿಹೆನ್ಷನ್)
*ಸಂವಹನ ಕೌಶಲ ಮತ್ತು ವೈಯಕ್ತಿಕ ಕೌಶಲ (ಇಂಟರ್‌ಪರ‌್ಸನಲ್ ಸ್ಕಿಲ್ಸ್)
*ತಾರ್ಕಿಕ ಆಲೋಚನೆ, ತುಲನಾತ್ಮಕ ಸಾಮರ್ಥ್ಯ
*ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ
*ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
*ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)
*ಇಂಗ್ಲಿಷ್ ಭಾಷೆಯ ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.
*ಇಂಗ್ಲಿಷ್ ಕಾಂಪ್ರಿಹೆನ್ಷನ್
*ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು (ಕಾಂಪ್ರಿಹೆನ್ಷನ್)
*ಸಂವಹನ ಕೌಶಲ ಮತ್ತು ವೈಯಕ್ತಿಕ ಕೌಶಲ (ಇಂಟರ್‌ಪರ‌್ಸನಲ್ ಸ್ಕಿಲ್ಸ್)
*ತಾರ್ಕಿಕ ಆಲೋಚನೆ, ತುಲನಾತ್ಮಕ ಸಾಮರ್ಥ್ಯ
*ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ
*ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
*ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)
*ಇಂಗ್ಲಿಷ್ ಭಾಷೆಯ ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.
*ಇಂಗ್ಲಿಷ್ ಕಾಂಪ್ರಿಹೆನ್ಷನ್
ಪರೀಕ್ಷೆ ಇಲ್ಲಿ ನಡೆಯಲಿದೆ
ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿರುವ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ. ಅಂಧ ಅಭ್ಯರ್ಥಿಗಳು ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಲಖನೌ, ಡಿಸ್‌ಪುರ್ ಮತ್ತು ಮುಂಬೈ ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬೇಕು.
ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿರುವ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ. ಅಂಧ ಅಭ್ಯರ್ಥಿಗಳು ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಲಖನೌ, ಡಿಸ್‌ಪುರ್ ಮತ್ತು ಮುಂಬೈ ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬೇಕು.
UPSC Mains 2013 Syllabus Changed - Article in Prajavani Shikshana 25 March 2013
Subscribe to:
Comments (Atom)
Doodle - Google Uncle Jothe Maathu-Kathe - Informative Literature for Children - A Faction
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...
-
Technology Information in Kannada - Article in Prajavani - Education Supplement 28.08.2019
-
QUESTION PAPERS OF GAZETTED PROBATIONERS PRELIMS EXAM 2011 http://kpsc.kar.nic.in/GP%202011%20PRELIMS%20QUESTION%20PAPERS.htm G...
















