Monday, 8 November 2010

NDA Examination 2011 - Why not for Women - Article in Prajavani Shikshana Supplement 08 Nov. 2010

 NDA Examination 2011 - Why not for Women
Article in Prajavani Shikshana Supplement 08 Nov. 2010


ಪ್ರಜಾವಾಣಿ » ಶಿಕ್ಷಣ ಪುರವಣಿ



ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆ

ಹೆಣ್ಣುಮಕ್ಕಳಿಗೆ ಅವಕಾಶ ಏಕಿಲ್ಲ?

ಸುಧಾ ಆರ್



2011 ರ ಏಪ್ರಿಲ್ 18ರಂದು ನಡೆಯುವ ಎನ್‌ಡಿಎ (ಫಸ್ಟ್ ಸೆಷನ್) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇದೇ 15 ನವೆಂಬರ್ 2010 ಕೊನೇ ದಿನ ಆಗಿದ್ದು ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ ಆಗಿವೆ. ಆದರೆ ಹೆಣ್ಣುಮಕ್ಕಳಿಗೆ ಎನ್‌ಡಿಎದಲ್ಲಿ ಪ್ರವೇಶಾವಕಾಶವಿಲ್ಲ.


ಭಾರತದ ರಾಷ್ಟ್ರಪತಿ, ಲೋಕಸಭೆಯ ಸ್ಪೀಕರ್, ಸಂಸತ್ತಿನ ವಿರೋಧಪಕ್ಷದ ನಾಯಕರು, ಕೇಂದ್ರ ಸರ್ಕಾರದ ಸಮನ್ವಯ ಸಮಿತಿಯ ನೇತಾರರು ಎಲ್ಲರೂ ಮಹಿಳೆಯರೇ ಆಗಿರುವ ಈ ಸುಸಂದರ್ಭದಲ್ಲಿ ಮಹಿಳೆಯರಿಗೆ ಕೆಲವು ಸೇವೆಗಳಲ್ಲಿ, ಉದ್ಯೋಗಗಳಲ್ಲಿ ಅವಕಾಶ ನೀಡದೇ ವಂಚಿಸುತ್ತಿರುವುದು ಎಷ್ಟು ಸಮರ್ಥನೀಯ?

ಮಹಿಳಾ ಮೀಸಲು ಮಸೂದೆ ಜಾರಿ ಆದಲ್ಲಿ ಶೇ. 33ರಷ್ಟು ಮಹಿಳೆಯರು ರಾಜಕೀಯ  ಪ್ರವೇಶಿಸಲು ಸಿದ್ಧವಿರುವಾಗ ಸೇನಾಪಡೆಗಳ ಆರಂಭದ ಮೆಟ್ಟಿಲು ಎನ್.ಡಿ.ಎ.ದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಎನ್‌ಡಿಎ ಕೂಡ ಇಲ್ಲ. 

 2011 ರ ಏಪ್ರಿಲ್ 18ರಂದು ನಡೆಯುವ ಎನ್‌ಡಿಎ (ಫಸ್ಟ್ ಸೆಷನ್) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇದೇ 15 ನವೆಂಬರ್ 2010 ಕೊನೇ ದಿನ ಆಗಿದ್ದು ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ ಆಗಿವೆ.


12ನೇ ತರಗತಿ / ದ್ವಿತೀಯ ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ, 16 1/2 ಯಿಂದ 19 ವರ್ಷ ವಯೋಮಿತಿಯೊಳಗಿರುವ (1993 ರ ಜನವರಿ 2ರಿಂದ ಈಚೆಗೆ 1995 ರ ಜುಲೈ1ಕ್ಕಿಂತ ಮೊದಲು ಜನಿಸಿರುವ) ಅವಿವಾಹಿತ ಯುವಕರು ಮಾತ್ರ ಎನ್.ಡಿ.ಎ. ಪರೀಕ್ಷೆ ತೆಗೆದುಕೊಳ್ಳಲು ಅರ್ಹರು. ಹೆಣ್ಣುಮಕ್ಕಳಿಗೆ ಎನ್.ಡಿ.ಎ.ದಲ್ಲಿ ಪ್ರವೇಶಾವಕಾಶವಿಲ್ಲ.  2011 ರಲ್ಲಿ 12ನೇ ತರಗತಿ / ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.  

ನೌಕಾ ಸೇನೆ ಮತ್ತು ವಾಯುಸೇನೆ ವಿಭಾಗಕ್ಕೆ ಸೇರ್ಪಡೆಗೊಳ್ಳಲು 12ನೇ ತರಗತಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಪತ್ರಿಕೆಗಳನ್ನು ಕಡ್ಡಾಯವಾಗಿ ಕಲಿತಿರಬೇಕು. ಭೂಸೇನಾ ವಿಭಾಗಕ್ಕೆ ಸೇರಲು ಕಲೆ, ವಿಜ್ಞಾನ, ವಾಣಿಜ್ಯ, ತಾಂತ್ರಿಕ ಇತ್ಯಾದಿ ಯಾವುದೇ ವಿಷಯ ಓದಿರಬಹುದು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ / ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರವೇಶ ಪರೀಕ್ಷೆ, ಸರ್ವೀಸ್ ಸೆಲೆಕ್ಷನ್ ಬೋರ್ಡ್ ನಡೆಸುವ ಬೌದ್ಧಿಕ ಹಾಗೂ ವ್ಯಕ್ತಿತ್ವ ಪರೀಕ್ಷೆ ಹಾಗೂ ಸರ್ವೀಸ್ ಮೆಡಿಕಲ್ ಬೋರ್ಡ್ ನಡೆಸುವ ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವವರನ್ನು ಎನ್.ಡಿ.ಎ.ಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಎನ್.ಡಿ.ಎ. ಪರೀಕ್ಷೆಯ ಮೊದಲ ಹಂತ - ಲಿಖಿತ ಪರೀಕ್ಷೆಗೆ ನಿಗದಿಗೊಳಿಸಿರುವ ಪತ್ರಿಕೆಗಳು ಹೀಗಿವೆ:
ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯುವ ಈ ಪರೀಕ್ಷೆಯ ಕಡ್ಡಾಯ ಗಣಿತ ಪತ್ರಿಕೆಯಲ್ಲಿ ಈ ಕೆಲವು ವಿಷಯಗಳು ಸೇರ್ಪಡೆಯಾಗಿರುತ್ತವೆ:
Paper I - Mathematics : (Maximum Marks 300)
Arithmetic, Mensuration, Algebra, Geometry, Trigonometry, Statistics.

ಸಾಮಾನ್ಯ ಸಾಮರ್ಥ್ಯ ಪತ್ರಿಕೆಯಲ್ಲಿ ಎರಡು ಭಾಗಗಳಿದ್ದು ಅವುಗಳಿಗೆ ನಿಗದಿಗೊಳಿಸಿರುವ ವಿಷಯಗಳು ಹೀಗಿವೆ:
Paper II -  General Ability
Part A -  English (Maximum Marks 200)
Part B -  General Knowledge (Maximum Marks 400)    Section A (Physics)    Section B (Chemistry)    Section C (General Science)   Section D (History, Freedom Movement etc) 
Section E (Geography) 
Section F (Current Event)

ವಿಶೇಷ ಸೂಚನೆ : ಪ್ರತಿಯೊಂದು ತಪ್ಪು ಉತ್ತರಕ್ಕೆ ಒಂದು ಅಂಕ ಕಳೆಯುವ (ನೆಗಟಿವ್ ಮಾರ್ಕಿಂಗ್) ಪದ್ಧತಿ ಇದೆ.  

ಪ್ರವೇಶ ಹೇಗೆ?
ಕೇಂದ್ರ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ (http://www.upsconline.nic.in ) ನೀಡಿರುವ ಆನ್‌ಲೈನ್ ಅಪ್ಲಿಕೇಷನ್ ತುಂಬಿ ಭಾವಚಿತ್ರ ಮತ್ತು ಹಸ್ತಾಕ್ಷರದ ಇಮೇಜ್ ಲಗತ್ತಿಸಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಸಲ್ಲಿಸುವವರಿಗಾಗಿ ರಿಯಾಯಿತಿ ಶುಲ್ಕ ರೂ. 25/- ಇದ್ದು ಅದನ್ನು ವೀಸಾ / ಮಾಸ್ಟರ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಲ್ಲವೇ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪಾವತಿ ಮೂಲಕವೂ ಸಲ್ಲಿಸಲು ಅವಕಾಶವಿದೆ. 

ದೇಶದ ಎಲ್ಲ ಜಿಲ್ಲೆಗಳ ಪ್ರಮುಖ ಅಂಚೆ ಕಛೇರಿಗಳಲ್ಲಿ ಲೋಕಸೇವಾ ಆಯೋಗದ ಸಾಮಾನ್ಯ ಅರ್ಜಿ ನಮೂನೆ ಲಭ್ಯವಿದ್ದು ರೂ.20 ಪಾವತಿಸಿ ಪಡೆದುಕೊಂಡು, ತುಂಬಿಸಿ ಅದಕ್ಕೆ ರೂ.50ಮೊತ್ತವನ್ನು ಕೇಂದ್ರೀಯ ನೇಮಕಾತಿ ಅರ್ಜಿ ಸ್ಟ್ಯಾಂಪ್ (ಸೆಂಟ್ರಲ್ ರೆಕ್ರೂಟ್‌ಮೆಂಟ್ ಫೀ ಸ್ಟಾಂಪ್) ರೂಪದಲ್ಲಿ ಪರೀಕ್ಷಾ ಶುಲ್ಕ ತುಂಬಬೇಕಿರುತ್ತದೆ. ಇತರೆ ಯಾವುದೇ ರೂಪದಲ್ಲಿ ಅರ್ಜಿಶುಲ್ಕ ಸಲ್ಲಿಸುವಂತಿಲ್ಲ.  ಅರ್ಜಿ ಸಲ್ಲಿಸುವ ವಿಳಾಸ : Secretary, Union Public Service Commission, Dholpur, House, New Delhi-110 011 ವಿಳಾಸಕ್ಕೆ ಕಳಿಸಿಕೊಡಬೇಕು. 

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಪ್ರಕ್ರಿಯೆ ಮತ್ತು ಎನ್.ಡಿ.ಎ. ಸೇರ್ಪಡೆಯ ಸೂಚನಾ ಪುಸ್ತಿಕೆಗಾಗಿ ಈ ಅಂತರಜಾಲತಾಣಗಳನ್ನು ಭೇಟಿ ಮಾಡಬಹುದು:
http://upsc.gov.in , http://nda.nic.in 

No comments:

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...