Thursday 7 May, 2009

Career Opportunities after SSLC and PUC - Article in Sudha Weekly 14-05-2009










Career Opportunities after SSLC & PUC
ಎಸ್.ಎಸ್.ಎಲ್.ಸಿ. / ಪಿ.ಯು.ಸಿ. ನಂತರ ಮುಂದೇನು?

ಶಿಕ್ಷಣ - ಮಾಹಿತಿ - ಮಾರ್ಗದರ್ಶನವಿವಿಧ ಕೋರ್ಸ್ ಪರಿಚಯ

ಇದೀಗ ತಾನೇ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಫಲಿತಾಂಶಗಳು ಹೊರಬಿದ್ದಿವೆ. ಸಹಸ್ರಾರು ವಿದ್ಯಾರ್ಥಿಗಳಿಗೆ - ಪೋಷಕರಿಗೆ ಮುಂದೇನು ಎಂಬುದೇ ಚಿಂತೆಯಾಗಿದೆ. ಪಿ.ಯು.ಸಿ., ಪದವಿ, ಡಿಪ್ಲೊಮ, ಜೆ.ಒ.ಸಿ., ಐ.ಟಿ.ಐ., ಸ್ವಯಂ ಉದ್ಯೋಗ ತರಬೇತಿ ಹೀಗೆ ನಾನಾ ಅವಕಾಶಗಳನ್ನು ಅರಸುತ್ತಾ ಅವರೆಲ್ಲಾ ರಾಜ್ಯದಾದ್ಯಂತ ಇರುವ, ವಿವಿಧ ಶಾಲಾಕಾಲೇಜುಗಳ ಬಗ್ಗೆ, ವೈವಿಧ್ಯಮಯ ಕೋಸರ್್ಗಳ ಬಗ್ಗೆ ಮಾಹಿತಿಗಾಗಿ ಪರದಾಡುವುದು ಸಾಮಾನ್ಯ ಸಂಗತಿ. ಇವರಿಗಾಗಿಯೇ ಸಕರ್ಾರದ ಶಿಕ್ಷಣ ಇಲಾಖೆ, ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಗಳು ವಿವರವಾದ ಮಾಹಿತಿಯನ್ನು ತಮ್ಮ ಅಂತರಜಾಲ ತಾಣಗಳಲ್ಲಿ ಒದಗಿಸಿವೆ. ಶಿಕ್ಷಣ ಮತ್ತು ಉದ್ಯೋಗ ಎಂಬ ಎರಡು ದೋಣಿಗಳಲ್ಲಿ ಒಟ್ಟಿಗೇ ಪ್ರಯಾಣಿಸಲು ಬಯಸುವವರೇ ಹೆಚ್ಚು. ಹಿಂದೆ ಮೆಟ್ರಿಕ್ ಪಾಸಾದರೆ ಸಾಕು, ಯಾವುದೋ ಒಂದು ಕೆಲಸ ಸಿಗುತ್ತಿತ್ತು. ಇಂದಿನ ದಿನಗಳಲ್ಲಿ ಎಷ್ಟೇ ಉನ್ನತ ಪದವಿಗಳಿದ್ದರೂ, ಕೌಶಲಗಳಿದ್ದರೂ ನೌಕರಿ ಸಿಗುವುದು ದುಸ್ತರವಾಗಿದೆ. ಹೀಗಾಗಿ ಉದ್ಯೋಗಕ್ಕೆ ಅರ್ಹತೆ ನೀಡುವ ಪದವಿಯನ್ನು ಆಯ್ದುಕೊಳ್ಳುವುದು, ಕಲಿಯುವಾಗಲೇ ನೌಕರಿಗೆ ಸೇರಲು 'ಕ್ಯಾಂಪಸ್ ಸೆಲೆಕ್ಷನ್' ಎಂಬ ಕಸರತ್ತು ಮಾಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ದುಕೊಳ್ಳುವುದು, ಯಶಸ್ಸುಗಳಿಸುವುದು ಸರ್ವೇ ಸಾಮಾನ್ಯವಾಗಿದೆ.

ಎಸ್.ಎಸ್.ಎಲ್.ಸಿ. ನಂತರ ಮುಂದೇನು?

ಹತ್ತನೇ ತರಗತಿಯವರೆಗೆ ನಿಶ್ಚಿಂತೆಯಿಂದ ಇದ್ದವರೆಲ್ಲಾ ಫಲಿತಾಂಶ ಬರುತ್ತಲೇ ಗಡಬಡಿಸಿ ಎದ್ದು 'ಯಾವ ಕೋಸರ್ಿಗೆ ಸೇರಬೇಕು?' ಎಂದು ಕಂಡ ಕಂಡವರ ಸಲಹೆ ಕೇಳಲು ಆರಂಭಿಸುವವರು ಕೆಲವರಾದರೆ 'ಇಂಥದ್ದೇ ಕೋಸರ್್ ಸೇರಿ, ಇಂತಹ ಪದವಿಗಾಗಿಯೇ ಸಿದ್ಧತೆ ನಡೆಸುತ್ತೇನೆ' ಎಂಬ ಆತ್ಮವಿಶ್ವಾಸ ಉಳ್ಳವರು ಇರುತ್ತಾರೆ. ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ತನ್ನ ಅಂತರಜಾಲ ತಾಣದಲ್ಲಿ ಪದವಿ ಪೂರ್ವ ಶಿಕ್ಷಣದ ಅವಕಾಶಗಳನ್ನು ಪ್ರಕಟಿಸಿದೆ. ಕಲಾ (ಆಟ್ಸರ್್) ವಿಷಯಗಳಲ್ಲಿ 42, ವಾಣಿಜ್ಯ ವಿಷಯಗಳಲ್ಲಿ 8 ಮತ್ತು ವಿಜ್ಞಾನ ವಿಷಯಗಳಲ್ಲಿ 6 ವಿವಿಧ ಕಾಂಬಿನೇಷನ್ಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ನೋಡಿ : http://www.pue.kar.nic.in/
ಇದರೊಟ್ಟಿಗೆ ಕರ್ನಾಟಕದ ಸುಮಾರು 521 ಪದವಿ ಪೂರ್ವ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣಕ್ಕೆ (ಜಾಬ್ ಓರಿಯಂಟೆಡ್ ಕೋಸರ್್ - ಜೆ.ಒ.ಸಿ.) ಅವಕಾಶ ಕಲ್ಪಿಸಲಾಗಿದ್ದು ಸುಮಾರು 92ಕ್ಕೂ ಹೆಚ್ಚು ವಿವಿಧ ವಿಷಯಗಳಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ತತ್ಸಮಾನವಾದ ತರಬೇತಿ ನೀಡಲಾಗುತ್ತಿದೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಡೈರಿ, ತೋಟಗಾರಿಕೆ, ಚರ್ಮ ಕೈಗಾರಿಕೆ, ಬೇಕರಿ, ಸಿನಿಮಾಟೋಗ್ರಫಿ ಇತ್ಯಾದಿ ತಾಂತ್ರಿಕ ತರಬೇತಿ ಜೊತೆಗೆ, ಕಲೆ, ಸೆಕ್ರೆಟೆರಿಯಲ್ ಪ್ರಾಕ್ಟೀಸ್ನಂತಹ ಕೌಶಲ ತರಬೇತಿಗೂ ಅವಕಾಶ ಕಲ್ಪಿಸಲಾಗಿದೆ. ಈ ತರಬೇತಿಯನ್ನು ಮುಗಿಸಿದವರು ಆಯಾ ವಿಷಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಸೇರಲು ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಕೂಡ ಅವಕಾಶವಿದೆ. ಅನೇಕ ಜೆ.ಒ.ಸಿ. ಅಭ್ಯಥರ್ಿಗಳು ಅಪ್ರೆಂಟಿಸ್ಗಳಾಗಿ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡಿ ಮುಂದೆ ನೌಕರಿಗೆ ಸೇರಿರುವ ಉದಾಹರಣೆಗಳೂ ಇವೆ. ಕೆಲವರು ತಮ್ಮ ಊರುಗಳಲ್ಲಿಯೇ ಸ್ವಯಂ ಉದ್ಯೋಗ ನಡೆಸಿಕೊಂಡು ಬರುತ್ತಿದ್ದಾರೆ. 2006 ರಿಂದಲೇ ರಾಜ್ಯದ ಪ್ರತಿಯೊಂದು ಪ್ರೌಢಶಾಲೆಯಲ್ಲಿ 'ದಾರಿದೀಪ - ಶೈಕ್ಷಣಿಕ ವೃತ್ತಿ ಮಾರ್ಗದರ್ಶನ' ತರಬೇತಿ ನೀಡಲಾಗುತ್ತಿದ್ದು ಎಸ್.ಎಸ್.ಎಲ್.ಸಿ. ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ. ಅದಕ್ಕಾಗಿ ಪ್ರತ್ಯೇಕ ಕೈಪಿಡಿಯೊಂದನ್ನು ನೀಡಲಾಗಿದೆ. ಭವಿಷ್ಯದ ಉದ್ಯೋಗ ರಂಗಕ್ಕೆ ಪಾದಾರ್ಪಣೆ ಮಾಡುವವರಿಗೆ ವ್ಯಕ್ತಿತ್ವ, ಕ್ರಿಯಾಶೀಲತೆ, ಆತ್ಮ ವಿಶ್ವಾಸ, ಸಮಯಪಾಲನೆ, ಸತತ ಪರಿಶ್ರಮ, ವೃತ್ತಿ ಗೌರವ, ವಿಷಯ ಜ್ಞಾನ, ಸಕಾರಾತ್ಮಕ ನಿಲುವು, ಆರೋಗ್ಯಕರ ಚಚರ್ೆ, ತಾಳ್ಮೆ, ಯಶಸ್ಸಿನ ಸೂತ್ರ, ಚಿಂತನೆ, ಅವಕಾಶಗಳ ಸದ್ಬಳಕೆ ಕುರಿತು ತರಬೇತಿ ನೀಡಲಾಗಿದೆ. 'ದಾರಿದೀಪ - ಶೈಕ್ಷಣಿಕ ವೃತ್ತಿ ಮಾರ್ಗದರ್ಶನ' ಕೈಪಿಡಿಯಲ್ಲಿ ಎಸ್.ಎಸ್.ಎಲ್.ಸಿ. ನಂತರದ ಸಾಮಾನ್ಯ ಪದವಿ ಪೂರ್ವ ಶಿಕ್ಷಣದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಜೊತೆ ತಾಂತ್ರಿಕ ಶಿಕ್ಷಣದಲ್ಲಿರುವ ಮೂರು ವರ್ಷಗಳ ಡಿಪ್ಲೊಮಾ (26 ವಿವಿಧ ವಿಷಯಗಳು), ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋಸರ್್ (6 ವಿಷಯಗಳು) ಮತ್ತು ಎರಡು ವರ್ಷಗಳ ಐ.ಟಿ.ಐ. (34 ವಿಷಯಗಳು)ತರಬೇತಿಗಳ ಮಾಹಿತಿ, ಅಲ್ಪಾವಧಿ ಮತ್ತು ದೀಘರ್ಾವಧಿ ತರಬೇತಿ ಕೋಸರ್್ಗಳು, ಅಲ್ಲದೇ ಉದ್ಯೋಗ ರಂಗಕ್ಕೆ ಸೇರ್ಪಡೆಯಾಗುವ ವಿವಿಧ ಕ್ಷೇತ್ರಗಳ ಸಂಕ್ಷಿಪ್ತ ಪರಿಚಯವಿದೆ. ಹಾಗೆಯೇ ಪಿ.ಯು.ಸಿ. ನಂತರದ ಹತ್ತಾರು ಪ್ರಮುಖ ಕೋಸರ್್ಗಳು ಮತ್ತು ಉದ್ಯೋಗಾವಕಾಶಗಳನ್ನು ಸುದೀರ್ಘವಾಗಿ ಪಟ್ಟಿಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ನೋಡಿ :

ಪಿ.ಯು.ಸಿ. ನಂತರ ಮುಂದೇನು?

ದ್ವಿತೀಯ ಪಿ.ಯು.ಸಿ. (10+2) ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ಮತ್ತು ವಿದ್ಯಾಥರ್ಿಗೆ ಇರುವ ಆಸಕ್ತಿ ಇವುಗಳ ಆಧಾರದ ಮೇಲೆ ಮುಂದಿನ ಕೋಸರ್್ಗಳ ಆಯ್ಕೆ ಮಾಡುವುದು ಸಾಮಾನ್ಯ. ಮೊದಲಿನಂತೆ ಈಗ ಕೇವಲ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಎಂಬ ಸೀಮಿತ ಕೋಸರ್್ಗಳಿಗೇ ಮುಗಿಬೀಳುವ ಅಗತ್ಯವಿಲ್ಲ. ಹೊಸದಾಗಿ ಸುಮಾರು 300 ವಿವಿಧ ವಿಷಯಗಳ, ವಿವಿಧ ಅವಧಿಗಳ ಕೋಸರ್್ಗಳು ನಮ್ಮಲ್ಲಿ ಲಭ್ಯ. ದೂರಶಿಕ್ಷಣದ ಮೂಲಕವೂ ಕಲಿಕೆ ನಡೆಯುತ್ತಿದ್ದು ರಾಜ್ಯದ, ಹೊರ ರಾಜ್ಯದ ವಿಶ್ವವಿದ್ಯಾಲಯಗಳ ಜೊತೆ ವಿದೇಶೀ ವಿಶ್ವವಿದ್ಯಾಲಯಗಳಿಂದಲೂ ತರಬೇತಿ ದೊರೆಯುತ್ತಿದೆ. ಇಂದು ಶಿಕ್ಷಣ ಆಯ್ಕೆಯ ವಿಷಯವಾಗಿರುವುದರಿಂದ ಓದುವ ಕಾಲೇಜು, ಅಲ್ಲಿ ಸಿಗುವ ಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳೂ, ಪೋಷಕರೂ ತೀವ್ರ ಕಾಳಜಿ ವಹಿಸುತ್ತಿದ್ದಾರೆ. ಪಿ.ಯು.ಸಿ. ನಂತರ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ದೊರೆಯುತ್ತಿದ್ದು ಅದರಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗಳ ಮೂಲಕ ಪ್ರವೇಶ ಗಿಟ್ಟಿಸಿಕೊಳ್ಳುವ ನೂರಾರು ಕೋರ್ಸ್ ಗಳಿವೆ. ಇಂಜಿನಿಯರಿಂಗ್ ವಿಷಯಗಳು ಪಾತಾಳದಿಂದ ಆಕಾಶದವರೆಗೆ ವ್ಯಾಪಿಸಿದ್ದು ಮೆರೀನ್ ಜಿಯಾಲಜಿಯಿಂದ ಆಸ್ಟ್ರೋಫಿಸಿಕ್ಸ್ ವರೆಗೆ ನೂರಾರು ಕೋರ್ಸ್ ಗಳಿವೆ. ಪ್ರತಿಷ್ಠಿತ ಕಾಲೇಜುಗಳಿಗೆ ಸಿ.ಇ.ಟಿ., ಕಾಮೆಡ್-ಕೆ, ಐಐಟಿ, ಜೆಇಇ, ಎಐಇಇಇ, ಬಿಟ್ಸ್ಯಾಟ್, ನಾಟಾ, ಜೆಸ್ಟ್, ಸಿಪೆಟ್, ಸೀಡ್, ಸಿಫ್ನೆಟ್ ಮೊದಲಾದ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಈ ಪ್ರವೇಶ ಪರೀಕ್ಷೆಯ ಅರ್ಜಿಯೊಂದಿಗೆ ನೀಡಲಾಗುವ ಕೈಪಿಡಿಯಲ್ಲಿ ಆಯಾ ವಿಷಯಗಳ ಆಯ್ಕೆಯ ಮಾನದಂಡಗಳ ಕುರಿತು ಸುದೀರ್ಘ ವಿವರಗಳಿವೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ ಶಾಸ್ತ್ರ ವಿಷಯಗಳೂ ಕೂಡ ಈಗ ತಾಂತ್ರಿಕ ತರಬೇತಿಗೆ ಸೇರಿರುವುದರಿಂದ ಅಲ್ಲಿಯೂ ಪ್ರವೇಶಕ್ಕೆ ನೂಕುನುಗ್ಗಲು.
ವಿವರಗಳಿಗೆನೋಡಿ:

ಸಾಮಾನ್ಯ ವಿಜ್ಞಾನದ ಆಯ್ಕೆಯಲ್ಲಿಯೂ ಸುಮಾರು 90 ವಿವಿಧ ವಿಷಯಗಳಿದ್ದು 3 ವರ್ಷದ (6 ಸೆಮಿಸ್ಟರ್) ಪದವಿ ಇಲ್ಲವೇ 5 ವರ್ಷಗಳ ಇಂಟಿಗ್ರೇಟೆಡ್ ಪಿ.ಜಿ. ಕೋಸರ್್ ಸೇರಲು ಅವಕಾಶಗಳಿವೆ. ಹಾಗೆಯೇ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಬಿ.ಕಾಂ., ಬಿ.ಬಿ.ಎಂ., ಎಂಬಿ.ಎ., ಸಿ.ಎ., ಸಿ.ಎಫ್.ಎ., ಸಿ.ಡಬ್ಲ್ಯು.ಎ., ಸಿ.ಎಸ್., ಮೊದಲಾದವುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಕಾಲೇಜುಗಳಿಲ್ಲವೆಂಬ ದೂರುಗಳಿವೆ. ಕಲೆಯ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಡೆದುಕೊಂಡು ಬಂದಿರುವ ಭಾಷೆ ಮತ್ತು ಇತರೆ ಐಚ್ಛಿಕ ವಿಷಯಗಳ ಕಲಾ ಪದವಿ, ಸ್ನಾತಕೋತ್ತರ ಪದವಿಗಳಿಗೆ ಈಗ ಹೊಸ ವಿಷಯಗಳೂ ಸೇರಿವೆ. ಪತ್ರಿಕೋದ್ಯಮ, ಫೋಟೋ-ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್, ಕ್ರಿಮಿನಾಲಜಿ ಮತ್ತು ನ್ಯಾಯಿಕ ವೈದ್ಯಶಾಸ್ತ್ರ, ಮಾಧ್ಯಮ ಅಧ್ಯಯನ, ದೂರಶಿಕ್ಷಣ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಹರಳು ಮತ್ತು ಆಭರಣಗಳ ವಿನ್ಯಾಸ ಇತ್ಯಾದಿ ವಿಷಯಗಳು ವಿದ್ಯಾಥರ್ಿಗಳಲ್ಲಿ ಆಸಕ್ತಿ ಕೆರಳಿಸಿವೆ. ಕಂಪ್ಯೂಟರ್ ಎಂಬ ಮಾಯಾಲೋಕ ತಂತ್ರಾಂಶ ಮತ್ತು ಯಂತ್ರಾಂಶಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದು ಖಾಸಗಿಯಾಗಿಯೂ ನೂರಾರು ಕೋಸರ್್ಗಳನ್ನು ಕಲಿತು, ಕಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶಗಳನ್ನು ತೆರೆದಿಟ್ಟಿದೆ. ಅನಿಮೇಶನ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿತವರು ಕೈತುಂಬಾ ಗಳಿಸಿಕೊಳ್ಳುತ್ತಿರುವುದು ಆ ಕ್ಷೇತ್ರದ ಕಡೆಗೆ ಜನ ಆಸಕ್ತಿ ತೋರಿಸಲು ಕಾರಣವಾಗಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲೆ-ವಾಣಿಜ್ಯ-ವಿಜ್ಞಾನ-ಲಲಿತಕಲೆ-ದೃಶ್ಯಕಲೆ-ಮುದ್ರಣ-ಮಾಹಿತಿ ತಂತ್ರಜ್ಞಾನ-ಅನ್ವಯಿಕ ವಿಷಯಗಳ ಕುರಿತು ಡಿಪ್ಲೊಮಾ-ಪದವಿ-ಸ್ನಾತಕೋತ್ತರ ಪದವಿ-ಸ್ನಾತಕೋತ್ತರ ಡಿಪ್ಲೊಮಾ -ಸಂಶೋಧನೆ-ಡಾಕ್ಟರೇಟ್ ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ವಿವರಗಳಿಗೆ ಈ ಕೆಲವು ಅಂತರಜಾಲ ತಾಣಗಳನ್ನು ಸಂಪರ್ಕಿಸಬಹುದು:

ಚಿತ್ರಕಲೆಯ ಅಮರಲೋಕ

ದೃಶ್ಯ ಮಾಧ್ಯಮಗಳಲ್ಲಿ ದೊರೆಯುತ್ತಿರುವ ವಿಫುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್, ಫೋಟೋ ಜರ್ನಲಿಸಂ, ವೆಬ್ ಡಿಸೈನಿಂಗ್, ಅನಿಮೇಶನ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗಿದೆ. ಐದು ವರ್ಷಗಳ ಚಿತ್ರಕಲಾ ಡಿಪ್ಲೊಮಾ ಅಥವಾ ಫೈನ್ ಆರ್ಟ್ಸ್ ನಲ್ಲಿ ಪದವಿ ಪಡೆದವರಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಅನಿಮೇಶನ್ ತಂತ್ರಾಂಶಗಳ ಪರಿಚಯ ಇದ್ದರೆ ಜಗತ್ತಿನಲ್ಲಿ ಎಲ್ಲೆಡೆ ಅವರಿಗೆ ಬೇಡಿಕೆ ಇದ್ದದ್ದೇ! ಕನರ್ಾಟಕದಲ್ಲಿನ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಯೋಜಿತ ಕಾಲೇಜುಗಳ ಮೂಲಕ ಕಲಾ ಶಿಕ್ಷಣ ದೊರೆಯುತ್ತಿದ್ದರೂ ಖಾಸಗಿಯಾಗಿಯೂ ಹಲವು ಚಿತ್ರಕಲಾ ಶಾಲೆಗಳು ತರಬೇತಿ ನೀಡುತ್ತಲೇ ಇವೆ. ಹಲವು ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಇತ್ತೀಚೆಗೆ ವಾರಾಂತ್ಯದ ತರಬೇತಿ ತರಗತಿಗಳೂ, ಕ್ರಾಷ್ ಕೋರ್ಸ್ ಗಳು ಏರ್ಪಾಡಾಗುತ್ತಿವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗ, ಕುವೆಂಪು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಲಲಿತಕಲಾ ಕಾಲೇಜುಗಳು, ಕೆನ್ ಸ್ಕೂಲ್ ಆಫ್ ಆಟ್ಸರ್್ನಂತಹ ಖಾಸಗೀ ಸಂಸ್ಥೆಗಳೂ ಹೆಸರುವಾಸಿಯಾಗಿವೆ. ಅತ್ಯಂತ ಬೇಡಿಕೆಯುಳ್ಳ ಎರಡು ಲಲಿತಕಲಾ ವಿದ್ಯಾಲಯಗಳು ಇಲ್ಲಿವೆ.

ಚಿತ್ರಕಲಾ ಪರಿಷತ್ತಿನ ಲಲಿತಕಲಾ ಮಹಾವಿದ್ಯಾಲಯ, ಬೆಂಗಳೂರು

ಚಿತ್ರಕಲಾ ಪರಿಷತ್ತಿನ ಆಶ್ರಯದಲ್ಲಿ, 1964 ರಲ್ಲಿ ಆರಂಭಗೊಂಡಿದ್ದ ಚಿತ್ರಕಲಾ ವಿದ್ಯಾಲಯ 1983 ರಲ್ಲಿ ಲಲಿತಕಲಾ ಮಹಾವಿದ್ಯಾಲಯವಾಗಿ (ಕಾಲೇಜ್ ಆಫ್ ಫೈನ್ ಆಟ್ಸರ್್) ಉನ್ನತೀಕರಿಸಲ್ಪಟ್ಟು 1990 ರಿಂದ, ಸ್ನಾತಕೋತ್ತರ ಶಿಕ್ಷಣ, ಸ್ನಾತಕೋತ್ತರ ಡಿಪ್ಲೊಮ ತರಗತಿಗಳನ್ನು ನಡೆಸುತ್ತಿದ್ದು 2008 ರಿಂದ ಸಂಶೋಧನಾ ವ್ಯಾಸಂಗಕ್ಕೂ ಅವಕಾಶಮಾಡಿಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದಿರುವ ಈ ಕಾಲೇಜಿಗೆ ನ್ಯಾಕ್ ಸಮಿತಿ ಃ++ ಗ್ರೇಡ್ ನೀಡಿದೆ. ಇಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆಟ್ಸರ್್ ಮತ್ತು ಕಲಾ ಇತಿಹಾಸ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜéುಅಲ್ ಆಟ್ಸರ್್, ಸ್ನಾತಕೋತ್ತರ ಡಿಪ್ಲೊಮ ಕೋಸರ್ುಗಳನ್ನು ನಡೆಸಲಾಗುತ್ತಿದೆ. ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾಥರ್ಿಗಳು ಮುಗಿಬೀಳುತ್ತಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನೋಡಿ:

ಚಾಮರಾಜೇಂದ್ರ ದೃಶ್ಯಕಲಾ ಮಹಾವಿದ್ಯಾಲಯ
(ಚಾಮರಾಜೇಂದ್ರ ಆಕಾಡೆಮಿ ಆಫ್ ವಿಜುಅಲ್ ಆರ್ಟ್ಸ್ -ಕಾವಾ), ಮೈಸೂರು

1906ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್, 'ಮುಂಬೈನ ಜೆ.ಜೆ. ಸ್ಕೂಲ್ ಆಫ್ ಆಟ್ಸರ್್ ಮಾದರಿಯಲ್ಲಿ ಈ ಸಂಸ್ಥೆ ಇರಬೇಕು' ಎಂಬ ಖ್ಯಾತ ರಷ್ಯನ್ ಕಲಾವಿದ ಸ್ವೆಟಸ್ಲಾವ್ ರೋರಿಕ್ ಅವರ ಸಲಹೆಯಂತೆ ಪರಿಷ್ಕರಿಸಲ್ಪಟ್ಟು, 1981 ರಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಮಹಾವಿದ್ಯಾಲಯವಾಗಿ ಮರುನಾಮಕರಣಗೊಂಡಿತು. 2004ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ, ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಕಾವಾದಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ, ಫೋಟೋಗ್ರಫಿ, ಫೋಟೋ-ಜರ್ನಲಿಸಂ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜéುಅಲ್ ಆಟ್ಸರ್್, ಸ್ನಾತಕೋತ್ತರ ಡಿಪ್ಲೊಮ ಕೋಸರ್ುಗಳನ್ನು ನಡೆಸಲಾಗುತ್ತಿದೆ. ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ನೋಡಿ:

ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು

ಉನ್ನತ ವಿದ್ಯಾಭ್ಯಾಸಕ್ಕೆ ಸಕರ್ಾರ ಹಾಗೂ ಖಾಸಗಿ ವಲಯದ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯ ಅನ್ವಯ ಬೃಹತ್ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದ್ದು ಅವುಗಳಲ್ಲಿ ಪ್ರವೇಶ ಪಡೆಯಲು ವಿವಿಧ ರೀತಿಯ ಪ್ರವೇಶ ಪರೀಕ್ಷೆ, ಸಂದರ್ಶನಗಳನ್ನು ಎದುರಿಸಬೇಕಾದ ಅಗತ್ಯವಿದೆ. ಕೆಲವು ಸಂಶೋಧನಾಲಯಗಳಲ್ಲಿ ಆಯ್ಕೆಯಾದ ಅಭ್ಯಥರ್ಿಗಳಿಗೆ ಶಿಷ್ಯ ವೇತನ ಮತ್ತು ನೌಕರಿಯನ್ನು ಕೂಡ ನೀಡಲಾಗುತ್ತದೆ. ದ್ವಿತೀಯ ಪಿ.ಯು.ಸಿ.(10+2) ಅಥವಾ ಪದವಿ ಮುಗಿಸಿದ ಅಭ್ಯರ್ಥಗಳು ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಲೇ ಸೇವೆಸಲ್ಲಿಸಬಹುದು.
ಭಾರತದಲ್ಲಿರುವ ಪ್ರಮುಖ 50 ಉನ್ನತ ಶಿಕ್ಷಣ ಸಂಸ್ಥೆಗಳ ಜಾಲತಾಣಗಳು ಇಲ್ಲಿವೆ:

ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ನವದೆಹಲಿ

ಆರ್ಮಡ್ ಫೋರ್ಸಸ್ ಮೆಡಿಕಲ್ ಕಾಲೇಜ್, ಪುಣೆ

ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಕಾರೈಕುಡಿ

ಸೆಂಟ್ರಲ್ ಫುಟ್ವೇರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಚೆನ್ನೈ

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ನಾಟಿಕಲ್ & ಇಂಜಿನಿಯರಿಂಗ್ ಟ್ರೈನಿಂಗ್, ಕೊಚ್ಚಿ

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚೆನ್ನೈ

ಸೆಂಟ್ರಲ್ ಲೆದರ್ ರಿಸಚರ್್ ಇನ್ಸ್ಟಿಟ್ಯೂಟ್, ಚೆನ್ನೈ

ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಪುಣೆ

ಸೆಂಟರ್ ಫಾರ್ ಡೆವೆಲಪ್ಮೆಂಟ್ ಸ್ಟಡೀಸ್, ತಿರುವನಂತಪುರಂ

ಚೆನ್ನೈ ಮ್ಯಾಥಮೆಟಿಕಲ್ ಇನ್ಸ್ಟಿಟ್ಯೂಟ್, ಸಿರುಸೆರಿ

ಇಂಗ್ಲಿಷ್ & ಫಾರಿನ್ ಲಾಂಗ್ವೇಜಸ್ ಯೂನಿವರ್ಸಿಟಿ, ಹೈದರಾಬಾದ್

ಫಿಲ್ಮ್ & ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ, ಪುಣೆ
ಫಾರೆಸ್ಟ್ ಕಾಲೇಜ್ &ರಿಸರ್ಚ್ ಇನ್ಸ್ಟಿಟ್ಯೂಟ್, ಡೆಹ್ರಾಡೂನ್

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಟೆಕ್ನಾಲಜಿ, ಭಾದೋಯಿ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್, ನವದೆಹಲಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ, ತಿರುವನಂತಪುರಂ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೂರಿಸಂ & ಟ್ರಾವೆಲ್ ಮ್ಯಾನೇಜ್ಮೆಂಟ್, ನವದೆಹಲಿ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ & ರಿಸರ್ಚ್, ಪುಣೆ

ಇಂಡಿಯನ್ ಮ್ಯಾರಿಟೈಂ ಯುನಿವರ್ಸಿಟಿ, ಚೆನ್ನೈ

ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್, ಹೈದರಾಬಾದ್

ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಯೂನಿವರ್ಸಿಟಿ, ಧನಬಾದ್

ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಕೊಲ್ಕತ್ತಾ

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ, ನವದೆಹಲಿ
ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ & ವರ್ಕ್ಸ್ ಅಕೌಂಟೆಂಟ್ಸ್, ಕೊಲ್ಕತ್ತಾ

ಇನ್ಸ್ಟಿಟ್ಯೂಟ್ ಆಫ್ ಹೊಟೆಲ್ ಮ್ಯಾನೇಜ್ಮೆಂಟ್, ನೊಯ್ಡಾ

ಜವಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಎಜುಕೇಶನ್ & ರಿಸರ್ಚ್, ಪುದುಚೆರಿ

ಕಲಾಮಂಡಲಂ, ತ್ರಿಸ್ಸೂರ್
ಲಕ್ಷ್ಮೀಬಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್, ಗ್ವಾಲಿಯರ್

ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್, ಚೆನ್ನೈ

ನ್ಯಾಷನಲ್ ಡೈರಿ ರಿಸಚರ್್ ಇನ್ಸ್ಟಿಟ್ಯೂಟ್, ಹರ್ಯಾಣ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಪುಣೆ

ನ್ಯಾಷನಲ್ ಫೈರ್ ಸರ್ವಿಸಸ್ ಕಾಲೇಜ್, ರಾಂಪುರ್/ನಾಗಪುರ್

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ಅಹಮದಾಬಾದ್

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ನವದೆಹಲಿ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್, ಬೆಂಗಳೂರು

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯ, ನಾಗರಬಾವಿ, ಬೆಂಗಳೂರು

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ನವದೆಹಲಿ

ನೇತಾಜಿ ಸುಭಾಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್, ಪಟಿಯಾಲ

ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು

ಸ್ಕೂಲ್ ಆಫ್ ಪ್ಲಾನಿಂಗ್ & ಆಚರ್ಿಟೆಕ್ಚರ್, ದೆಹಲಿ

ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ

ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಮುಂಬೈ

ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಸೈನ್ಸ್, ಪಿಲಾನಿ

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ

ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಹೈದರಾಬಾದ್

ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ & ಎನರ್ಜಿ ಸ್ಟಡೀಸ್, ಡೆಹ್ರಾಡೂನ್

ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯಗಳು

ಭಾರತದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಬಹುತೇಕ ಖಾಸಗೀ ಬ್ಯಾಂಕುಗಳು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಕಾಲೇಜಿಗೆ ಪಾವತಿಸಬೇಕಾಗಿರುವ ಶುಲ್ಕ, ಪಠ್ಯ ಪುಸ್ತಕ, ಕಂಪ್ಯೂಟರ್/ಲ್ಯಾಪ್ಟಾಪ್ ವೆಚ್ಚ, ಹಾಸ್ಟೆಲ್ ವೆಚ್ಚ, ಹೆಚ್ಚಿನ ತರಬೇತಿಗೆ ನೀಡುವ ವೆಚ್ಚ ಎಲ್ಲವೂ ಸೇರಿರುತ್ತದೆ. ವಿದೇಶಗಳಲ್ಲಿ ಓದಲು ಬಯಸುವ ವಿದ್ಯಾಥರ್ಿಗಳಿಗೆ ಪ್ರಯಾಣ ವೆಚ್ಚ ಮತ್ತು ಭದ್ರತಾ ಠೇವಣಿಯ ಗ್ಯಾರಂಟಿ ನೀಡುವ ಬ್ಯಾಂಕುಗಳು ಇವೆ. ಇತ್ತೀಚೆಗೆ ವಿದೇಶಿ ಬ್ಯಾಂಕುಗಳು ವಿದ್ಯಾಭ್ಯಾಸಕ್ಕೆ ಸಾಲ ನೀಡುವತ್ತ ಒಲವು ತೋರಿಸುತ್ತಿವೆ. ಕನಿಷ್ಟ 10 ಸಾವಿರದಿಂದ ಗರಿಷ್ಟ 25 ಲಕ್ಷಗಳವರೆಗೆ ಲಭ್ಯವಿರುವ ಈ ಸಾಲ ಸೌಲಭ್ಯವನ್ನು ಬಳಸಿಕೊಳ್ಳಲು ವಿವಿಧ ಬ್ಯಾಂಕುಗಳು ವಿವಿಧ ಶರತ್ತುಗಳನ್ನು ವಿಧಿಸಿವೆ. ಸಾಮಾನ್ಯವಾಗಿ ಕಡಿಮೆ ಮೊತ್ತದ ಸಾಲಕ್ಕೆ ಜಾಮೀನು, ಆಸ್ತಿ, ವಿಮೆ ಭದ್ರತೆ ಕೇಳುವಂತಿಲ್ಲವಾದರೂ ಐದು ಲಕ್ಷ ರೂಪಾಯಿಗಳ ಮೇಲ್ಪಟ್ಟ ಮೊತ್ತದಕ್ಕೆ ಎಲ್ಲ ರೀತಿಯ ಭದ್ರತೆ ಒದಗಿಸಬೇಕಾಗುತ್ತದೆ. ಬಡ್ಡಿ ದರವೂ ಕೂಡ 6% ರಿಂದ 15% ವರೆಗೆ ಇರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಶೈಕ್ಷಣಿಕ ಸಾಲ ಪಡೆಯುವುದು ಜಾಣತನ.
ವಿವರಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು:

ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಮಾಹಿತಿ

ಮಾಹಿತಿ ಒದಗಿಸುವ ಕಾರ್ಯದಲ್ಲಿ ಕನ್ನಡದ ಪ್ರಮುಖ ಪತ್ರಿಕೆಗಳೇನೂ ಹಿಂದೆ ಬಿದ್ದಿಲ್ಲ. ಸುಧಾ ವಾರಪತ್ರಿಕೆಯ 'ಶೈಕ್ಷಣಿಕ - ಮಾರ್ಗದರ್ಶನ' ಲೇಖನಗಳು, ಪ್ರಜಾವಾಣಿಯ 'ಶಿಕ್ಷಣ ಪುರವಣಿ', ಕನ್ನಡದ ಇತರೆ ಪತ್ರಿಕೆಗಳ ಶೈಕ್ಷಣಿಕ ವಿಶೇಷಾಂಕಗಳು, ಮಲಯಾಳಂ ಮನೋರಮಾದವರ 'ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್-2009', ಖಾಸಗಿ ಪ್ರಕಾಶನಗಳ 'ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್', 'ಎಜು-ಛಾಯ್ಸ್', 'ಕನರ್ಾಟಕ ಎಜುಕೇಷನ್ ಡೈರೆಕ್ಟರಿ' ಮೊದಲಾದ ಬೃಹತ್ ಕೋಶಗಳು ನಮ್ಮ ರಾಜ್ಯದಲ್ಲಿರುವ ವಿವಿಧ ಶಾಲಾ-ಕಾಲೇಜುಗಳನ್ನು ಮತ್ತು ಅಲ್ಲಿ ಲಭ್ಯವಿರುವ ಹಲವು ಕೋಸರ್ುಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಜಯಂತಿ ಘೋಷ್ ಅವರ 'ಹಾರ್ಪರ್ ಕೋಲಿನ್ಸ್ - ಎನ್ಸೈಕ್ಲೊಪಿಡಿಯಾ ಆಫ್ ಕೆರೀರ್ಸ್' ಕೃತಿಯಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ಪಠ್ಯಕ್ರಮ ವಿವರಗಳ ಜೊತೆ ಹತ್ತಾರು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿಳಾಸಗಳ ಜೊತೆ ವೃತ್ತಿಕ್ಷೇತ್ರಕ್ಕೆ ಹೇಗೆ ಪ್ರವೇಶ ಗಿಟ್ಟಿಸಿಕೊಳ್ಳಬಹುದು ಎಂಬ ವಿವರಗಳಿವೆ. ಈ ಕೈಪಿಡಿಗಳಲ್ಲಿ ಜಿಲ್ಲಾಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗಿನ ಸಾವಿರಾರು ಶಾಲಾ-ಕಾಲೇಜುಗಳ ವಿಳಾಸಗಳು, ಅಲ್ಲಿ ಲಭ್ಯವಿರುವ ಕೋಸರ್್ಗಳ ಕುರಿತು ಸಂಕ್ಷಿಪ್ತ ವಿವರಗಳು ದಾಖಲಾಗಿವೆ. ಪೂರ್ವ ಪ್ರಾಥಮಿಕ ತರಗತಿ (ಪ್ಲೇ ಹೋಂ), ರಾಜ್ಯ ಪಠ್ಯಕ್ರಮ, ಸಿ.ಬಿ.ಎಸ್.ಸಿ. ಮತ್ತು ಐ.ಸಿ.ಎಸ್.ಸಿ. ಪಠ್ಯಕ್ರಮ, ವೃತ್ತಿಪರ ಕೋಸರ್್ಗಳು, ನಸರ್ಿಂಗ್, ದೂರಶಿಕ್ಷಣ, ವಿಶಿಷ್ಟ ಕೋರ್ಸಗಳು, ತರಬೇತಿ ಕೇಂದ್ರಗಳು, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ವಿದೇಶಿ ವಿಶ್ವವಿದ್ಯಾಲಯಗಳ ಸ್ಟಡಿ ಸೆಂಟರ್ಗಳು, ತರಬೇತಿ ವಿಷಯಗಳ ವಿವರಗಳ ಜೊತೆ ಶೈಕ್ಷಣಿಕ ಸಾಲ ದೊರೆಯುವ ಬಗ್ಗೆಯೂ ಮಾಹಿತಿ ಇಲ್ಲಿ ಲಭ್ಯ.

ಸ್ವಯಂ ಉದ್ಯೋಗ - ಅಪರಿಮಿತ ಅವಕಾಶ

ನೀವು ಇನ್ನೊಬ್ಬರ ಲೆಕ್ಕ ಬರೆಯುವುದಕ್ಕಿಂತ ನಿಮ್ಮ ಲೆಕ್ಕವನ್ನು ನೀವೇ ಬರೆಯುವುದು ಉತ್ತಮ ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹುರಿದುಂಬಿಸುವ ನುಡಿ. ಅವರು ಗ್ರಾಮೀಣ ಯುವಜನರನ್ನು ರಾಷ್ಟ್ರದ ಮುಖ್ಯವಾಹಿನಿಯಲ್ಲಿ ತರಲು ಹಾಕಿಕೊಂಡ ಕನಸಿನ ಯೋಜನೆ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಇವರುಗಳು ಸೇರಿ 1982ರಲ್ಲಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ರುಡ್ಸೆಟ್) ರಾಜ್ಯದ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿದ್ದು ನೂರಾರು ಜನರಿಗೆ ವಿವಿಧ ವೃತ್ತಿಗಳಲ್ಲಿ ಉಚಿತವಾಗಿ ತರಬೇತಿ ಕೊಡುತ್ತಿದೆ. ತರಬೇತಿ ಅವಧಿಯಲ್ಲಿ ಊಟ-ವಸತಿ ಎಲ್ಲವೂ ಇಲ್ಲಿ ಉಚಿತ. ಹೊಲಿಗೆ, ಸಿದ್ಧ ಉಡುಪಗಳ ತಯಾರಿಕೆ, ಬ್ಯೂಟಿ ಪಾರ್ಲರ್, ಕಂಪ್ಯೂಟರ್-ಡಿ.ಟಿ.ಪಿ., ವಿದ್ಯುತ್ ಮೋಟಾರ್ ರೀವೈಂಡಿಂಗ್, ರೇಡಿಯೋ-ಟಿ.ವಿ. ರಿಪೇರಿ, ಮನೆಯಲ್ಲೇ ತಯಾರಿಸಬಹುದಾದ ವಸ್ತುಗಳು, ಫೋಟೋಗ್ರಫಿ, ವೀಡಿಯೋಗ್ರಫಿ, ಇತ್ಯಾದಿ ವಿಷಯಗಳ ಬಗ್ಗೆ ರುಡ್ಸೆಟ್ ಮತ್ತು ಇದೇ ರೀತಿಯ ಇತರೆ ಸಂಸ್ಥೆಗಳಲ್ಲಿ ತರಬೇತಿ ದೊರೆಯುತ್ತಿದ್ದು ಯಶಸ್ವೀ ಅಭ್ಯಥರ್ಿಗಳಿಗೆ ಪ್ರಮಾಣಪತ್ರ ಕೊಡಲಾಗುತ್ತಿದೆ. ಬ್ಯಾಂಕಿನಿಂದ ಹಣಕಾಸಿನ ನೆರವು ಬೇಕಾದಾಗ ಕಾರ್ಯಯೋಜನೆ ಸಿದ್ಧಮಾಡಿ ಬ್ಯಾಂಕಿಗೆ ಸಲ್ಲಿಸಿದರೆ ಆದ್ಯತೆಯ ಮೇಲೆ ಸಾಲ ಸೌಲಭ್ಯ ಸಿಗುತ್ತಿದೆ. ಹೀಗೆ ತರಬೇತಿ ಪಡೆದ ಲಕ್ಷಾಂತರ ಮಂದಿ ಇಂದು ಯಶಸ್ವೀ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ, ಇತರರಿಗೂ ಕೆಲಸ ಕೊಟ್ಟು ಅವರ ಕನಸಿಗೆ ರೆಕ್ಕೆ ಮೂಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ, ಕೃಷಿಯಲ್ಲಿ, ಹೈನುಗಾರಿಕೆಯಲ್ಲಿ, ನೇಯ್ಗೆಯಲ್ಲಿ, ಗುಡಿ ಕೈಗಾರಿಕೆಗಳಲ್ಲಿ ಯಶಸ್ಸು ಕಾಣುವ ಅವಕಾಶ ಬಳಸಿಕೊಳ್ಳುವವರಿಗಾಗಿ ಕಾಯುತ್ತಿದೆ. ಹಾಗೆಯೇ ತಾಂತ್ರಿಕ ಮತ್ತು ವಿದ್ಯುನ್ಮಾನ ಕ್ಷೇತ್ರಗಳಲ್ಲಿಯೂ ಯಥೇಚ್ಚ ಅವಕಾಶಗಳಿವೆ.

ಕೆನ್ಗೋಲ್ಡ್ ಎಂಬ ಆರ್ಥಿಕ ತಜ್ಞನ ಹನಿ ಲೆಟ್ ಅಸ್ ಮೇಕ್ ಮನಿ ಎಂಬ ಜನಪ್ರಿಯ ಕೃತಿ ಸ್ವಯಂ ಉದ್ಯೋಗ ಮಾಡುವುದೇ ಮಾನವನ ಲಕ್ಷಣ ಎಂದು ಸಾಧಿಸುತ್ತದೆ. ಸರಕಾರದ ಅಥವಾ ಇತರೆ ಸಂಸ್ಥೆಗಳಲ್ಲಿ ನೌಕರಿಗೆ ಸೇರುವುದು ಎಂದರೆ ಗುಲಾಮಗಿರಿಗೆ ಒಪ್ಪಿಸಿಕೊಂಡಂತೆ. ಬದಲಿಗೆ ಸ್ವಯಂ ಉದ್ಯೋಗ ಕೈಗೊಂಡಲ್ಲಿ ನಮ್ಮ ಮನಸ್ಸಿಗೆ ಸರಿತೋರಿದಂತೆ, ಇತರರಿಗೂ ಒಳಿತಾಗುವಂತೆ, ಹತ್ತಾರು ಕೈಗಳಿಗೆ ದುಡಿಮೆ, ಅವಕಾಶ ಒದಗಿಸಿಕೊಡುವಲ್ಲಿ, ಯಶಸ್ಸು ಗಳಿಸುವಲ್ಲಿ, ಸಾಧನೆಯ ಕನಸಿಗೆ ರೆಕ್ಕೆ ಕಟ್ಟುವಲ್ಲಿ ಸಫಲರಾಗುತ್ತೇವೆ, ಎನ್ನುತ್ತಾರೆ ಕೆನ್ಗೋಲ್ಡ್. ನೀವು ನಿಜವಾಗಿಯೂ ಕಷ್ಟಪಡುವ, ಕಷ್ಟದ ದಿನಗಳನ್ನು ಮಾತ್ರ ಎದುರು ನೋಡುವವರಾಗಿದ್ದರೆ ಕೆಲಸಕ್ಕೆ ಸೇರಿರಿ. ಸುಖದ ಜೀವನ ಅರಸುವಿರಾದರೆ, ಶ್ರೀಮಂತಿಕೆಯನ್ನು ಸವಿಯುವುದಾದರೆ ಖಂಡಿತಾ ಸ್ವಯಂ ಉದ್ಯೋಗ ಕೈಗೊಳ್ಳಿ. ನಿಮ್ಮ ಯಶಸ್ಸನ್ನು ನೀವು ಮಾತ್ರ ತಡೆಯಬಲ್ಲಿರಿ ಇಲ್ಲ ಪಡೆಯಬಲ್ಲಿರಿ. ಬೇರೆಯವರಿಂದ ಅದು ಅಸಾಧ್ಯ. ಸ್ವಯಂ ಉದ್ಯೋಗಿಗಳು ಭವಿಷ್ಯದ ಉದ್ಯೋಗದಾತರು. ಅದು ನೀವೇ ಆಗಬಹುದಲ್ಲವೇ?ಎಂದು ಕೆನ್ಗೋಲ್ಡ್ ನಮ್ಮ ಯುವಪಡೆಯನ್ನು ಹುರಿದುಂಬಿಸುತ್ತಿದ್ದಾರೆ. ಅವಕಾಶವೂ ಇದೆ; ಆಕಾಂಕ್ಷೆಯೂ ಇದೆ; ದಾರಿ ತೆರೆದೇ ಇದೆ; ಬಳಸಿಕೊಳ್ಳುವವರಿಗಾಗಿ ಕಾದಿದೆ. ಗುಡ್ ಲಕ್!

ದ್ವಿತೀಯ ಪಿ.ಯು.ಸಿ.(10+2)ತೇರ್ಗಡೆಯಾದ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸ್ಪಧರ್ಾತ್ಮಕ (ಐ.ಎ.ಎಸ್., ಐ.ಎಫ್.ಎಸ್., ಐ.ಪಿ.ಎಸ್. ಇತ್ಯಾದಿ) ಪರೀಕ್ಷೆಬರೆಯಲು ಸುವರ್ಣ ಅವಕಾಶ
ಮಾಜಿ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯಿಲಿ ಅವರು ಅಧ್ಯಕ್ಷರಾಗಿರುವ 14ನೇ ಆಡಳಿತ ಸುಧಾರಣಾ ಆಯೋಗ ತನ್ನ 377 ಪುಟಗಳ ಸುದೀರ್ಘ ವರದಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ನೇಮಕಾತಿ ಸ್ಪಧರ್ಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಗಮನ ಹರಿಸಲಾಗಿದ್ದು ದ್ವಿತೀಯ ಪಿ.ಯು.ಸಿ.(10+2) ತೇರ್ಗಡೆಯಾದ ಅಭ್ಯಥರ್ಿಗಳು ಕೂಡ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸ್ಪಧರ್ಾತ್ಮಕ (ಐ.ಎ.ಎಸ್., ಐ.ಎಫ್.ಎಸ್., ಐ.ಪಿ.ಎಸ್. ಇತ್ಯಾದಿ) ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈಗಾಗಲೇ ಕೇಂದ್ರದ ರಕ್ಷಣಾ ಪಡೆಗಳಲ್ಲಿ ಎನ್.ಡಿ.ಎ. ಸ್ಪಧರ್ಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ, ತರಬೇತಿ ನೀಡಿ, ನೇಮಕಾತಿ ಮಾಡಿಕೊಳ್ಳುವ ಪದ್ಧತಿ ಇರುವಂತೆಯೇ ಕೇಂದ್ರ ಸಕರ್ಾರದ ಆಡಳಿತ ವಿಭಾಗಗಳಿಗೂ ಕೂಡ ಸಮರ್ಥವಾಗಿ ಸೇವೆ ಸಲ್ಲಿಸುವ ಯುವ ಪಡೆಯನ್ನು ಸಿದ್ಧಪಡಿಸಲು ದ್ವಿತೀಯ ಪಿ.ಯು.ಸಿ.(10+2) ತೇರ್ಗಡೆಯಾದ ವಿದ್ಯಾರ್ಥಿಗಳು ಲೋಕಸೇವಾ ಆಯೋಗ ಏರ್ಪಡಿಸುವ ಎನ್.ಡಿ.ಎ. ಮಾದರಿಯ ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲ ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಷ್ಟ್ರೇಶನ್ (National Institutes of Public Administrations (NIPA) ಸಂಸ್ಥೆಯಲ್ಲಿ ವಿಶೇಷವಾಗಿ ತರಬೇತಿ ನೀಡಿ ರಾಷ್ಟ್ರದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. 'ಅದೇ ತಾನೇ ಕಾಲೇಜಿನಿಂದ ಹೊರಬರುವ ಹುಮ್ಮಸ್ಸುಳ್ಳ ಯುವ ಪಡೆಯನ್ನು ಸಾರ್ವಜನಿಕ ಸೇವೆಗೆ ತೊಡಗಿಸುವುದರಿಂದ ಆಡಳಿತದಲ್ಲಿ ಹೆಚ್ಚಿನ ವೇಗ, ಸುಧಾರಣೆ ಮತ್ತು ಗುಣಮಟ್ಟದ ಹೆಚ್ಚಳ ಕಂಡುಬರುತ್ತದೆ ಮತ್ತು ರಾಷ್ಟ್ರಸೇವೆಗೆ ಸೈನಿಕರಂತೆಯೇ ನಿಷ್ಠೆಯಿಂದ ದುಡಿಯುವ, ದೇಶದ ಉನ್ನತಿಗೆ ಶ್ರಮಿಸುವ, ಪ್ರಗತಿ ಪಥದತ್ತ ಕರೆದೊಯ್ಯುವ ಶ್ರದ್ಧಾಳುಗಳು ದೇಶಕ್ಕೆ ಆಸ್ತಿಯಾಗುತ್ತಾರೆ' ಎಂಬುದು ಆಯೋಗದ ಅಭಿಮತ. 'ಯುವಜನರು ಪಿ.ಯು.ಸಿ. ನಂತರ ಕೇಂದ್ರ ಸಕರ್ಾರದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದರಿಂದ ಕಲಿಕೆಯ ವೇಗವಾಗಿ ಜರುಗುವುದೇ ಅಲ್ಲದೇ ಈಗ ನಡೆಯುತ್ತಿರುವ ಟ್ಯೂಷನ್ ದಂಧೆಗೆ ವಿರಾಮ ನೀಡಿದಂತಾಗುತ್ತದೆ. ಈ ರೀತಿಯ ಆಡಳಿತಾತ್ಮಕ ತರಬೇತಿಯ ನಂತರ ಸಾರ್ವಜನಿಕ ಸೇವೆಯಲ್ಲಿ ತೊಡಗಲು ಬಯಸದ ಯುವಜನರು ಅದನ್ನು ತೊರೆದು ತಮಗೆ ಇಷ್ಟವಾದ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ನೀಡಲಾಗುತ್ತದೆ. ಹಾಗೆಯೇ ಯಾವುದೇ ಪದವಿ ಪಡೆದ ವಿದ್ಯಾಥರ್ಿಗಳು ಇಲ್ಲಿಗೆ ಬರುವ ಮೊದಲು ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ಬ್ರಿಜ್ ಕೋಸರ್್ ಮುಗಿಸಿ ಬರಬೇಕು' ಎನ್ನುತ್ತಾರೆ ಆಯೋಗದ ಅಧ್ಯಕ್ಷರಾದ ಶ್ರೀ ವೀರಪ್ಪ ಮೊಯಿಲಿ. ಈ ನೇಮಕಾತಿಗೆ ವಯೋಮಿತಿಯನ್ನು ಗರಿಷ್ಟ 26 ವರ್ಷಗಳಿಗೆ ನಿಗದಿಗೊಳಿಸಲು ಶಿಫಾರಸ್ಸು ಮಾಡಲಾಗಿದೆ. ಈ ರೀತಿ ಆರಂಭದಲ್ಲೇ ಸಾರ್ವಜನಿಕ ಆಡಳಿತದಲ್ಲಿ ಆಸಕ್ತಿ ಇರುವ ಯುವಜನರನ್ನು ಆಯ್ಕೆ ಮಾಡಿಕೊಳ್ಳಲು, ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ತರಬೇತಿ ನೀಡಿ, ಪದವಿ ಪ್ರದಾನ ಮಾಡಿ ದೇಶ ಸೇವೆಗೆ ಮುಡಿಪಾಗಿಡಲು ಕೇಂದ್ರ ಸಕರ್ಾರವು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಷ್ಟ್ರೇಶನ್ (National Institutes of Public Administrations (NIPA) ಆರಂಭಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ ಸಲಹೆ ಮಾಡಿದೆ.ಹೆಚ್ಚಿನ ವಿವರಗಳಿಗೆ ನೋಡಿ :

ಹೊಸ ಹೊಸ ಹೊಸ ಕೋರ್ಸ್ ಗಳು!

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಯೋಜಕತ್ವ ಮತ್ತು ಶಿಷ್ಯವೇತನದ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ 5 ವರ್ಷಗಳ ವಿಜ್ಞಾನ ವಿಷಯದ ಇಂಟಿಗ್ರೇಟೆಡ್ ಪಿ.ಜಿ. ತರಬೇತಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದು ಪ್ರತಿ ವಿದ್ಯಾಥರ್ಿಗೆ ರೂ.1000/ ಶಿಷ್ಯವೇತನವೂ ದೊರೆಯುತ್ತಿದೆ. ನಿವೃತ್ತ ಕುಲಪತಿಗಳು, ವಿಜ್ಞಾನದ ಪರಿಣತರು, ವಿಜ್ಞಾನಿಗಳು ಈ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು ಎರಡನೇ ವರ್ಷದಿಂದಲೇ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಮುಂದೆ ಡಿ.ಆರ್.ಡಿ.ಒ. ದಂತಹ ಉನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಉದ್ಯೋಗ ಅವಕಾಶ ಗ್ಯಾರಂಟಿ. ಪ್ರಚಾರದ ಕೊರತೆಯಿಂದ ಈ ಕೋಸರ್ು ಸೊರಗುತ್ತಿದೆ ಎನ್ನುವುದು ವಿಪಯರ್ಾಸ! ಗ್ರಾಮೀಣ ಪ್ರದೇಶದ ಅಭ್ಯಥರ್ಿಗಳಿಗಾಗಿ ಕಾಫಿ ಡೇ ಸಂಸ್ಥೆಯವರು ನಿರ್ವಹಣೆ ತರಬೇತಿ ನಡೆಸುತ್ತಿದ್ದು ಉಚಿತ ಊಟ, ವಸತಿ ಮತ್ತು ಉದ್ಯೋಗ ತರಬೇತಿ ನೀಡುತ್ತಿದ್ದಾರೆ. ಚಿಕ್ಕಮಗಳೂರಿನ ಬಳಿಯ ಸಿದ್ಧಾರ್ಥ ಸನಿವಾಸ ತರಬೇತಿ ಸಂಸ್ಥೆಯಲ್ಲಿ ಈ ತರಬೇತಿ ದೊರೆಯುತ್ತಿದೆ.

ಎಚ್ಚರಿಕೆ! ಎಚ್ಚರಿಕೆ!!

ಇತ್ತೀಚೆಗೆ 'ನಮ್ಮಲ್ಲಿ ತರಬೇತಿ ಕೊಡುತ್ತೇವೆ, ಎಲ್ಲರಿಗೂ ಉದ್ಯೋಗ ಗ್ಯಾರಂಟಿಯಾದ ತರಬೇತಿ ಇದು, ಹಾಜರಾಗಿ, ಲಾಭ ಗಳಿಸಿರಿ' ಎಂಬ ಜಾಹೀರಾತುಗಳು ಎಲ್ಲೆಡೆ ಕಾಣಸಿಗುತ್ತಿವೆ. ಈ ರೀತಿಯ ತರಬೇತಿಗೆ ಸಾವಿರಾರು ರೂಪಾಯಿಗಳ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ತರಬೇತಿಯ ನಂತರ ಕನಿಷ್ಟ ಸಂಬಳದ ಮೇಲ್ವಿಚಾರಕರ ನೌಕರಿಗೆ ಅವಕಾಶ ನೀಡಲಾಗುತ್ತಿದೆ ಮತ್ತು ಅದರಿಂದ ಬೇಸತ್ತ ಅಭ್ಯಥರ್ಿಗಳು ತಾವೇ ರಾಜಿನಾಮೆ ನೀಡಿ ಓಡುವಂತಾಗುತ್ತಿದೆ. ಇಂತಹ ಬೇನಾಮಿ ಸಂಸ್ಥೆಗಳ ತರಬೇತಿಗೆ ಸೇರುವ ಮೊದಲು ಅಭ್ಯಥರ್ಿಗಳು ಆ ಜಾಹೀರಾತುಗಳನ್ನು, ಸಂಸ್ಥೆಯ ವೆಬ್ಸೈಟ್ಗಳನ್ನು ಕೂಲಂಕಷವಾಗಿ ನೋಡಿ, ಬಲ್ಲವರಲ್ಲಿ ವಿಚಾರಿಸಿ ಸೇರುವುದು ಒಳಿತು. ನಕಲಿ ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ನೀಡುವ ನಕಲಿ ವಿಶ್ವವಿದ್ಯಾಲಯಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಯಾವುದಕ್ಕೂ ಸಕರ್ಾರದ ಅಧಿಕೃತ ಅಥವಾ ಮನ್ನಣೆ ಪಡೆದ ವಿದ್ಯಾ ಸಂಸ್ಥೆಗಳ ಮೂಲಕ ತರಬೇತಿಗೆ ಸೇರಿ ಪ್ರಮಾಣ ಪತ್ರ ಪಡೆದಲ್ಲಿ ಅದಕ್ಕೆ ಮನ್ನಣೆ, ಮಾನ್ಯತೆ ದೊರೆಯುತ್ತದೆ. ಅದು ಬಿಟ್ಟು ಕಂಡ ಕಂಡ ಸಂಸ್ಥೆಗಳಲ್ಲಿ ಸೇರಿ, ಹಣ ಕಳೆದುಕೊಂಡು, ನಂತರ ಪರಿತಪಿಸುವುದು ಸಲ್ಲ.
- ಬೇದ್ರೆ ಮಂಜುನಾಥ
ವಿಳಾಸ: ಪ್ರಸಾರ ನಿರ್ವಾಹಕರು, ಆಕಾಶವಾಣಿ, ಚಿತ್ರದುರ್ಗ - 577 501, ಫೋ.:9448589089
ಬೇದ್ರೆ ಪ್ರತಿಷ್ಠಾನ
ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...