Friday 14 January, 2011

All India Radio Literary Meet - Akashavani Sahitya Sammelana 2011 at Mysore

All India Radio Literary Meet
Akashavani Sahitya Sammelana 2011 at Mysore
on 30th January 2011, Sunday
at Swami Vivekananda Sabhangana
Mahajana College, Jayalaxmipuram, Mysore
Contact : 9448464201

Monday 10 January, 2011

Radio Tele Quiz - Article in Prajavani Shikshana Margadarshi 10 Jan 2011


Radio Tele Quiz - Article in Prajavani Shikshana Margadarshi 10 Jan 2011
ಪ್ರಜಾವಾಣಿ » ಶಿಕ್ಷಣ ಪುರವಣಿ



ರೇಡಿಯೋ ಟೆಲಿ ಕ್ವಿಜ್: ಯಶಸ್ಸಿಗೆ, ಬಹುಮಾನಕ್ಕೆ

ಮೈತ್ರೇಯಿ



ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಾಯೋಜಿಸಿರುವ ಈ ರೇಡಿಯೋ ಟೆಲಿಕ್ವಿಜ್ ಕಾರ್ಯಕ್ರಮ ಕರ್ನಾಟಕದ ಮೂವತ್ತೂ ಜಿಲ್ಲೆಗಳ ಕೇಳುಗರ ಜೊತೆ ನೆರೆ ರಾಜ್ಯಗಳ ಶ್ರೋತೃಗಳನ್ನು ಸೆಳೆದಿದೆ.





ಹಲೋ! ಪ್ರಶ್ನೆಗೆ ಉತ್ತರ ಹೇಳ್ಲಿಕ್ಕೆ ರೆಡಿ ಇದ್ದೀರಾ? ಹಾಗಾದರೆ ಇಗೋ ನಿಮ್ಮ ಪ್ರಶ್ನೆ. ಓಗರ ಎಂದರೇನು?
 ಸಾರು.
ಓಹ್! ಸಾರಿ. ಉತ್ತರ ತಪ್ಪಾಗಿದೆ. ಅದು ಸಾರು ಅಲ್ಲ. ಉತ್ತರವನ್ನು ನಮ್ಮ ಸ್ನೇಹಿತರು ಹೇಳ್ತಾರೆ ಕೇಳಿ.
ಓಗರ ಅಂದರೆ ಅನ್ನ ಅಂತ.

ಮುಂದಿನ ಪ್ರಶ್ನೆ 2010ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು ಯಾರು?
ಡಾ. ರಹಮತ್ ತರೀಕೆರೆ - ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದವರು.
ನಿಮ್ಮ ಉತ್ತರ ಸರಿಯಾಗಿದೆ. ಅವರ ಕತ್ತಿಯಂಚಿನ ದಾರಿ ವಿಮರ್ಶಾ ಕೃತಿಗೆ ಈ ಪ್ರಶಸ್ತಿ ಬಂದಿದೆ.

 ನಿಮಗೆ ಮುಂದಿನ ಪ್ರಶ್ನೆ. ಮಧ್ವಾಚಾರ್ಯರು ಹುಟ್ಟಿದ ಸ್ಥಳ ಯಾವುದು?
ಪಾಜಕ.


ಸರಿ, ನಿಮ್ಮ ಕೊನೇ ಪ್ರಶ್ನೆ. ಪ್ರಶ್ನೆ ತುಂಬಾ ಸುಲಭ ಇದೆ. ಬ್ರೈಲ್ ಲಿಪಿ ಕಂಡುಹಿಡಿದವರು ಯಾರು?
ಬ್ರೈಲ್.
ಬ್ರೈಲ್. ಸರಿ. ಅವರ ಪೂರ್ಣ ಹೆಸರು?
ಲೂಯಿ ಬ್ರೈಲ್.

ಹೀಗೆ, ಪ್ರತಿ ಸೋಮವಾರ ರಾತ್ರಿ 9.30ರಿಂದ 10.30 ರವರೆಗೆ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗುತ್ತಿರುವ ರೇಡಿಯೋ ಟೆಲಿಕ್ವಿಜ್ ಕಾರ್ಯಕ್ರಮ ಈಗಾಗಲೇ ನಾಲ್ಕು ಕಂತುಗಳನ್ನು ಮುಗಿಸಿದ್ದು ಇನ್ನೂ ಎಂಟು ಕಂತುಗಳಲ್ಲಿ ಪ್ರಸಾರವಾಗಲಿದೆ. ಪ್ರತಿ ಕಾರ್ಯಕ್ರಮದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಪೂರ್ವಭಾವಿ ಮತ್ತು ಅಂತಿಮ ಸುತ್ತು ಎಂದು ವಿಭಾಗಿಸಿಕೊಂಡಿದ್ದು ಪೂರ್ವಭಾವಿ ಸುತ್ತಿನಲ್ಲಿ ಎರಡು ಸುಲಭ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡೂ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಅಂತಿಮ ಸುತ್ತಿಗೆ ಅವಕಾಶ ಸಿಕ್ಕು ಅಲ್ಲಿ ಅವರು ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕು. ಹೀಗೆ ಆರೂ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಸ್ಪರ್ಧಿಗೆ ರೂ.1,000/- ಬಹುಮಾನ. 

ಒಂದು ಗಂಟೆ ಕಾಲ ನಡೆಯುವ ಈ ಫೋನ್ ಇನ್ ಟೆಲಿಕ್ವಿಜ್ ನಲ್ಲಿ ಕೇಳುಗರಿಗಾಗಿಯೇ ಎಸ್.ಎಂ.ಎಸ್. ಪ್ರಶ್ನೆಯೊಂದನ್ನು ಕೊಡಲಾಗುತ್ತಿದ್ದು ಮರುದಿನ ಸಂಜೆಯವರೆಗೆ 5676744 ಸಂಖ್ಯೆಗೆ ಉತ್ತರಗಳನ್ನು ಕಳಿಸಿಕೊಡುವ ಅವಕಾಶ ಕಲ್ಪಿಸಲಾಗಿದೆ.ಸಹಸ್ರಾರು ಜನ ಸರಿ ಉತ್ತರ ನೀಡುವುದರಿಂದ ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುತ್ತಿದೆ.ವಿಜೇತರಿಗೆ ರೂ. 1000/- ಬಹುಮಾನವಿದೆ.

ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಾಯೋಜಿಸಿರುವ ಈ ರೇಡಿಯೋ ಟೆಲಿಕ್ವಿಜ್ ಕಾರ್ಯಕ್ರಮ ಕರ್ನಾಟಕದ ಮೂವತ್ತೂ ಜಿಲ್ಲೆಗಳ ಕೇಳುಗರ ಜೊತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳಗಳಿಂದಲೂ ಶ್ರೋತೃಗಳನ್ನು ಸೆಳೆದಿದೆ.  ಕಳೆದ ವಾರದ ಕಾರ್ಯಕ್ರಮದಲ್ಲಿ ಸಾಂಗ್ಲಿಯಿಂದ ಉತ್ತರಗಳು ಬಂದದ್ದು ವಿಶೇಷವಾಗಿತ್ತು.

1988-89 ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಮೊದಲ ಕನ್ನಡ ಟೆಲಿಫೋನ್ ರಸಪ್ರಶ್ನೆ ಕಾರ್ಯಕ್ರಮ ಆರಂಭಿಸಿದ ಡಾ. ಬಸವರಾಜ ಸಾದರ್ ಅವರು 22 ವರ್ಷಗಳ ನಂತರ ಮತ್ತೊಮ್ಮೆ ಅದೇ ರೀತಿಯ ರಾಜ್ಯವ್ಯಾಪಿ ರೇಡಿಯೋ ಟೆಲಿಕ್ವಿ್ ಕಾರ್ಯಕ್ರಮ ಆರಂಭಿಸಿದ್ದಾರೆ.

ದಿನ ನಿತ್ಯ ನಾವು ಓದುವ ಪತ್ರಿಕೆಗಳು, ನೋಡುವ, ಕೇಳುವ ಟಿ.ವಿ. ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಏನಾದರೊಂದು ಹೊಸತು ಇದ್ದೇ ಇರುತ್ತದೆ.  ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಈ ರೀತಿಯ ರಸಪ್ರಶ್ನೆಯ ಮೂಲಕ ಹೆಚ್ಚು ಮಾಹಿತಿ ದೊರೆಯುತ್ತಿದೆ.

ಅಂದ ಹಾಗೆ ನೀವೂ ಈ ರೇಡಿಯೋ ಟೆಲಿಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ? ಹಾಗಾದರೆ ತೆಗೆದುಕೊಳ್ಳಿ ಫೋನ್.  ಇಂದೇ ರಾತ್ರಿ (ಪ್ರತಿ ಸೋಮವಾರ ರಾತ್ರಿ) ಡಯಲ್ ಮಾಡಿ ಈ ನಂಬರ್‌ಗಳಿಗೆ :

080 - 22370477 080 - 22370488 080 - 22370499  ಎಸ್.ಎಂ.ಎಸ್. ಸಂಖ್ಯೆ: 5676744

Friday 7 January, 2011

Swami Vivekananda's Voice - Dubbed by Subheer Ghosh

These are the recordings dubbed for a feature to promote Swamiji's Message.  As per the records available and cassettes released by HMV this is the voice of  
SUBHEER GHOSH

http://www.youtube.com/watch?v=lxUzKoIt5aM



http://www.youtube.com/watch?v=ShrD0zjPGrs



http://www.youtube.com/watch?v=JntwFFlzecA&feature=related



http://www.youtube.com/watch?v=vuU20dnVbkg&feature=related

http://www.youtube.com/watch?v=cfSWa9bH1kY&feature=related

http://www.youtube.com/watch?v=Gryu_7zVIhg&feature=related





http://gdhar.com/2009/02/19/swami-vivekananda-1893/

There was only one recording of Swamiji’s voice with the Maharaja of Mysore. It was a phonographic record.
    Swami Vivekananda’s speech was personally recorded by Nalvadi Krishnaraja Wodeyar in a Phonograph Cylinder (which was made of Paraffin and Wax) and unfortunately, it BURNT along with the earlier Wooden Palace which stood in the place of Amba Vilas Palace.
That recording which is being passed on the net is a prank. It is the rendition of various speeches at Chicago by Subir Ghosh .  It might have been commissioned by Ramakrishna Mission and released by HMV

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...