Monday 17 June, 2013

Income Tax Returns eFiling is easy - Article in Udayavani Isiri 17 June 2013


Income Tax Returns eFiling is easy - Article in Udayavani Isiri 17 June 2013
http://www.udayavani.com/news/314030L15-%E0%B2%90%E0%B2%9F--%E0%B2%88%E0%B2%97-E%E0%B2%9D-.html

Udayavani
  • ಐಟಿ ಈಗ Eಝೀ

  • ಇ-ಫೈಲಿಂಗ್‌ ಮಾಡೋದು ಹೀಗೆ? ಇನ್‌ಕಮ್‌ಟ್ಯಾಕ್ಸ್‌ ರಿಟರ್ನ್ ನೀವೇ ಫೈಲ್‌ ಮಾಡಬಹುದು

    • Udayavani | Jun 16, 2013
      ಇ-ಫೈಲಿಂಗ್‌ ಮಾಡೋದು ಹೀಗೆ? ಇನ್‌ಕಮ್‌ಟ್ಯಾಕ್ಸ್‌ ರಿಟರ್ನ್ ನೀವೇ ಫೈಲ್‌ ಮಾಡಬಹುದು 


      ಜೂನ್‌ ಬಂದಾಗಿದೆ. ತೆರಿಗೆ ಪಾವತಿ ಮಾಡಲು ಕೊನೇವಾರ, ಕೊನೇ ದಿನದ ತನಕ ಕಾಯಬೇಡಿ. ಸರತಿಯಲ್ಲಿ ನಿಂತು ಪಾವತಿ ಮಾಡುವ ಬದಲು, ಮನೆಯಲ್ಲೇ ಕೂತು ಇ-ಫೈಲಿಂಗ್‌ ಮಾಡಿ. ಸಮಯ, ಹಣ ಎಲ್ಲವೂ ಉಳಿಯುತ್ತೆ. 



      ಜೂನ್‌ ಬಂತಲ್ಲ. ಇನ್ನು ಆದಾಯ ತೆರಿಗೆ ಕಟ್ಟಲು ಎಲ್ಲರೂ ಸಿದ್ಧರಾಗಬೇಕು. ಪ್ರತಿ ವರ್ಷ ಜೂನ್‌ ಮೊದಲ ವಾರದಿಂದಲೇ ಆದಾಯ ತೆರಿಗೆ ಪಾವತಿಯ (ಐ.ಟಿ.ರಿಟರ್ನ್ಸ್) ಫಾರಂಗಳನ್ನು ಸಲ್ಲಿಸುವ ಅವಕಾಶ ಇದೆ. ಆದರೆ ನಮ್ಮ ಪಾವತಿದಾರರು ಕೊನೆಯ ದಿನ ಜುಲೈ 31 ರ ತನಕ ಕಾಯುತ್ತಾರೆ. ಮೈಲುದ್ದ ಸರತಿ ಸಾಲಿನಲ್ಲಿ ನಿಂತು, ಆ ಐ.ಟಿ. ಕಚೇರಿಯ ಕ್ಲರ್ಕ್‌ ಬಳಿ ತಮ್ಮ ಎಲ್ಲಾ ದಾಖಲೆಗಳನ್ನು ತೋರಿಸಿ, ಸ್ವೀಕೃತಿ ಪತ್ರ ಪಡೆಯುವ ಪರಿಪಾಠ ಬೆಳೆಸಿಕೊಂಡಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಇದನ್ನು ಸರಳಗೊಳಿಸಲು ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್‌ ಎಂಬ ಅಂತರಜಾಲದ ಮೂಲಕವೇ ಪಾವತಿ ದಾಖಲೆಗಳನ್ನು ಸಲ್ಲಿಸುವ ವಿಧಾನ ಜಾರಿಗೆ ತಂದಿದೆ. 
      ಇದು ಬಹಳ ಸುಲಭ. ಒಂದರ್ಥದಲ್ಲಿ ನೀವು ಗ್ಯಾಸ್‌ ಬುಕ್‌ ಮಾಡುವಷ್ಟೇ ಸುಲಭ. ಒಂದೆರಡು ವರ್ಷ ಮಾಡಿದರೆ ನೀರು ಕುಡಿದಷ್ಟೇ ಸರಾಗ. 
      ನಿಮಗೆ ಅಗತ್ಯವಿರುವ ದಾಖಲೆ ಇಷ್ಟಿದ್ದರೆ ಸಾಕು. ನಿಮ್ಮ ಹೆಸರು, ವಿಳಾಸ, ಪ್ಯಾನ್‌ ಸಂಖ್ಯೆ, ವಾರ್ಷಿಕ ಆದಾಯ, ತೆರಿಗೆಗೆ ಒಳಪಡುವ ಆದಾಯ, ತೆರಿಗೆ ಪಾವತಿ ವಿವರ ಇಷ್ಟೇ ವಿವರಗಳು ಬೇಕಿರುವುದು. ಐದೇ ನಿಮಿಷದಲ್ಲಿ ನಿಮ್ಮ ಕೆಲಸ ಫಿನಿಷ್‌! 2013-14ನೇ ಘೋಷಿತ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ಪಾವತಿಯ (ಐ.ಟಿ.ರಿಟರ್ನ್ಸ್) ಫಾರಂಗಳನ್ನು ಸಲ್ಲಿಸುವ ಸಹಜ್‌ (ಐಟಿಆರ್‌-1) ಸುಗಮ್‌ (ಐಟಿಆರ್‌-2,3,4) ಫಾರಂಗಳು ಇದೀಗ ಆದಾಯ ತೆರಿಗೆ ಇಲಾಖೆಯ ಅಂತರಜಾಲ ತಾಣದಲ್ಲಿ ಲಭ್ಯ. ಇದನ್ನು ಸರಿಯಾಗಿ ಬಳಸಿ ಕೊಂಡರೆ ಸರತಿ ಸಾಲಿನಲ್ಲಿ ನಿಂತು ಸಮಯ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ. 

      ಫಾರಂ - 16 ಆಧರಿಸಿ ಭರ್ತಿಮಾಡಿ 
      2012-13 ನೇ ಸಾಲಿನಲ್ಲಿ ಸರ್ಕಾರಿ ನೌಕರರು ಪಡೆದಿರುವ ಸಂಬಳ, ಭತ್ಯೆ, ಬೋನಸ್‌ ಇತ್ಯಾದಿ ಒಟ್ಟು ಮೊತ್ತದಲ್ಲಿ ಪಾವತಿಸಿದ ವಿವಿಧ ರೀತಿಯ ತೆರಿಗೆಗಳು, ಉಳಿತಾಯ, ಮನೆ ಸಾಲದ ಮೇಲಿನ ಬಡ್ಡಿ, ಅಸಲು, ಇತ್ಯಾದಿ ಖರ್ಚು ಕಳೆದು, ತೆರಿಗೆ ಪಾವತಿ ಕಟ್ಟಿರುವ ವಿವರಗಳನ್ನು ದಾಖಲಿಸಿದ ಫಾರಂ - 16 ಈಗಾಗಲೇ ಎಲ್ಲರ ಬಳಿ ಇರುತ್ತದೆ. ಅಲ್ಲಿ ನಮೂದಾಗಿರುವ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಗತ ಆದಾಯ ತೆರಿಗೆ ಪಾವತಿಸಲು ITR-1 (SAHAJ) ಎಂಬ ಅರ್ಜಿ ನಮೂನೆಯಲ್ಲಿ ನೀಡಿರುವ ವಿವಿಧ ಕಾಲಂಗಳಲ್ಲಿ ವಿವರಗಳನ್ನು ಭರ್ತಿಮಾಡಿ ಕಚೇರಿಗೆ ಸಲ್ಲಿಸಬಹುದು. ಇದರ ಬದಲಿಗೆ ಅಂತರಜಾಲದ ಮೂಲಕ ಮನೆಯಿಂದಲೇ ಪಾವತಿ ಸಲ್ಲಿಸಬಹುದು. ಇತರೆ ಆದಾಯ ಮೂಲಗಳನ್ನು ಹೊಂದಿರುವವರು ತಮ್ಮ ಅಗತ್ಯಕ್ಕೆ ತಕ್ಕ ITR-3 ITR-4, ITR4S (SUGAM), ITR-5 and ITR-6  ಗಳನ್ನು ತುಂಬಿ ಸಲ್ಲಿಸಬೇಕು. 

      ITR1_2013.zip  ಫೈಲ್‌ ಡೌನ್‌ಲೋಡ್‌ ಮಾಡಿ 

      ಆದಾಯ ತೆರಿಗೆ ಇಲಾಖೆಯ ww.incometaxindia.gov.in ಅಂತರಜಾಲ ತಾಣಕ್ಕೆ ಭೇಟಿನೀಡಿ. ಅದರ ಎಡಬದಿಯಲ್ಲಿ ನೀಡಲಾಗಿರುವ ಇ-ಫೈಲಿಂಗ್‌ ಕೊಂಡಿಯನ್ನು ಕ್ಲಿಕ್‌ ಮಾಡಿ. ಅಲ್ಲಿ ಮೂಡುವ ತೆರೆಯ ಬಲಬದಿಯಲ್ಲಿ ನೋಂದಣಿಯ ಕೊಂಡಿ ಇದೆ. ಅಲ್ಲಿ ಕ್ಲಿಕ್‌ ಮಾಡಿ ನಿಮ್ಮ ಪಾನ್‌ ನಂಬರ್‌ ನಮೂದಿಸಿ, ಗುಪ್ತ ಸಂಕೇತವೊಂದನ್ನು ನೀಡಿ ನೋಂದಾಯಿಸಬೇಕು. ನಂತರ ಬಲಬದಿಯಲ್ಲಿರುವ ಡೌನ್‌ಲೋಡ್‌ ವಿಭಾಗದಲ್ಲಿನ 2012-13 ನೇ ಸಾಲಿನ ತೆರಿಗೆ ಪಾವತಿ ಸಲ್ಲಿಕೆಯ ಕೊಂಡಿಯನ್ನು ಒತ್ತಿದರೆITR1_2013.zip ಫೈಲ್‌ ಡೌನ್‌ಲೋಡ್‌ ಆಗುತ್ತದೆ. ಅದನ್ನು ತೆರೆದಾಗ ಆದಾಯ ತೆರಿಗೆ ಪಾವತಿಯ ITR-1   ಅರ್ಜಿ ಎಕ್ಸೆಲ್‌ ತಂತ್ರಾಂಶದಲ್ಲಿ ಮೂಡಿಬರುತ್ತದೆ. ಅದರಲ್ಲಿನ ಹಸಿರು ಬಣ್ಣದ ಮನೆಗಳಲ್ಲಿ ನಿಮ್ಮ ಬಳಿ ಇರುವ ಫಾರಂ - 16 ಆಧರಿಸಿ ವಿವರಗಳನ್ನು ಭರ್ತಿಮಾಡಬೇಕು. ಇಲ್ಲಿ ಪಾನ್‌ ನಂಬರ್‌ ಕಡ್ಡಾಯ. 
      ಕೆಂಪು ಗುರುತು ಇರುವ ಮನೆಗಳನ್ನು ಕಡ್ಡಾಯವಾಗಿ ತುಂಬಬೇಕು. ಕೊನೆಯಲ್ಲಿ ನೀಡಿರುವ Validateಸಂಪರ್ಕ ಕೊಂಡಿ ಒತ್ತಿ. ನಂತರ ತುಂಬಿಸಿರುವ ಎಲ್ಲ ವಿವರಗಳನ್ನು ಒಮ್ಮೆ ಪರೀಕ್ಷಿಸಿ ನೋಡಬೇಕು. ಎಲ್ಲವೂ ಸರಿಯಾಗಿದೆ ಎಂದು ಅದು ವರದಿ ನೀಡಿದ ಮೇಲೆ ಅದರ ಪಕ್ಕದಲ್ಲಿರುವ Generate ಎಂಬ ಕೊಂಡಿಯನ್ನು ಕ್ಲಿಕ್ಕಿಸಿದರೆ ಅಂತಿಮ ವರದಿ ಇರುವ ಎಕ್ಸೆಲ್‌ ತಂತ್ರಾಂಶದ XML file  ಸಿದ್ಧವಾಗುತ್ತದೆ. 
      ತೆರಿಗೆ ಪಾವತಿ ಮಾಡಿ ಸ್ವೀಕೃತಿ ಪತ್ರ ಪಡೆಯಿರಿ 
      ಅಂತರಜಾಲ ತಾಣದ ಬಲಬದಿಯಲ್ಲಿರುವ Submit Return ಎಂಬ ಗುಂಡಿ ಒತ್ತಿದಾಗ ಮೂಡಿಬರುವ ಕಿಟಕಿಯಲ್ಲಿ ನಿಮ್ಮ ನೋಂದಾವಣೆ (ಪಾನ್‌) ಸಂಖ್ಯೆ ಮತ್ತು ಗುಪ್ತ ಸಂಕೇತ ಬಳಸಿ ಪ್ರವೇಶ ಮಾಡಿದರೆ ಪಾವತಿ ಸಲ್ಲಿಕೆಯ ಕಿಟಕಿ ತೆರೆಯುತ್ತದೆ. ಅಲ್ಲಿ ನಿಮ್ಮ XML file ಅನ್ನು ಸೇರ್ಪಡೆಗೊಳಿಸಿ ಅಪ್‌ಲೋಡ್‌ ಗುಂಡಿ ಒತ್ತಿದರೆ ಒಂದೆರಡು ನಿಮಿಷಗಳ ಒಳಗಾಗಿ ನಿಮ್ಮ ಪಾವತಿ ಸಲ್ಲಿಸಲ್ಪಟ್ಟು ನಿಮ್ಮ ಇ-ಮೇಲ್‌ ವಿಳಾಸಕ್ಕೆ ಒಂದು ಪತ್ರ ಬರುತ್ತದೆ. ಅದರಲ್ಲಿ ಸ್ವೀಕೃತಿಯ ITR-V Form  ಫಾರಂ ಇದ್ದು ಅದನ್ನು ಅಡೋಬ್‌ ಆಕ್ರೋಬಾಟ್‌ ರೀಡರ್‌ನಲ್ಲಿ ತೆಗೆದು ಓದಲು ನಿಮ್ಮ ಪಾನ್‌ ನಂಬರ್‌ ಮತ್ತು ಜನ್ಮದಿನಾಂಕವನ್ನು ಸಂಕೇತವಾಗಿ ಸಣ್ಣ ಅಕ್ಷರಗಳಲ್ಲಿ ನಮೂದಿಸಬೇಕು. ನಂತರ ಅದರ ಮುದ್ರಿತ ಪ್ರತಿ ತೆಗೆದು ನಿಮ್ಮ ತೆರಿಗೆ ಪಾವತಿಯ ಕಡತಕ್ಕೆ ಸೇರಿಸಿಕೊಳ್ಳಬಹುದು. 
      ಹೀಗೆ ತೆಗೆದ ಮುದ್ರಿತ ITR-V Form ಫಾರಂನ ಒಂದು ಪ್ರತಿಯನ್ನು ಇ-ಫೈಲಿಂಗ್‌ ಮಾಡಿದ ಒಂದು ತಿಂಗಳೊಳಗಾಗಿ Income Tax Department – CPC, Post Bag No - 1, Electronic City Post Office, Bangalore - 560 100  ಈ ವಿಳಾಸಕ್ಕೆ ಸಾಧಾರಣ ಅಂಚೆಯ ಮೂಲಕ ಕಳಿಸಿಕೊಡಬೇಕು. ಇಲ್ಲಿಗೆ ನಿಮ್ಮ ಇ-ಫೈಲಿಂಗ್‌ ಯಶಸ್ವಿಯಾಗುತ್ತದೆ. 
      ಹೆಚ್ಚಿನ ಮಾಹಿತಿಗಾಗಿ ಈ ತಾಣಗಳಿಗೆ ಭೇಟಿ ನೀಡಿ : 
      www.incometaxindia.gov.in/home.asp
      https://incometaxindiaefiling.gov.in/portal/indexp
      https://incometaxindiaefiling.gov.in/portal/individual_huf.do

      ಎಷ್ಟೊಂದು ಸರಳ, ಸುಲಭ ವಿಧಾನ! ನಾನಂತೂ ಫೈಲ್‌ಮಾಡಿದ್ದೇನೆ. ಆನ್‌ಲೈನ್‌ ಸ್ವೀಕೃತಿ ಪತ್ರವೂ ಬಂದಿದೆ. ನೀವೂ ಪ್ರಯತ್ನಿಸಿ. ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ. 

      ಬೇದ್ರೆ ಮಂಜುನಾಥ

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...