ಇಂಗ್ಲಿಷ್ ಕಲಿಕೆ: ರೆಡಿ ಸ್ಟಡಿ ಗೋ...!
ಒಂದನೇ
ತರಗತಿಯಿಂದಲೇ ಮಕ್ಕಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಿಕೊಡುವ ವ್ಯವಸ್ಥೆಯಾಗಬೇಕು
ಎಂಬುದು ರಾಜ್ಯದ ನೂತನ ಮುಖ್ಯಮಂತ್ರಿ ಅವರ ಆಶಯ. ಇಂಗ್ಲಿಷ್ ಹೇಳಿಕೊಡಲು ಪ್ರಾಥಮಿಕ
ಶಿಕ್ಷಕರಿಗೆ ದೂರಸಂಪರ್ಕದ ಮೂಲಕ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಡಯಟ್‌ಗಳ
ಮೂಲಕ ನೇರ ಸಂವಾದ ತರಗತಿಗಳಲ್ಲಿ ಭಾಷಾ ಬೋಧನಾ ತರಬೇತಿ ನೀಡಿ, ಹೊಸ ಸವಾಲನ್ನು ಎದುರಿಸಲು
ಶಿಕ್ಷಣ ಇಲಾಖೆ ಅವರನ್ನು ಸಿದ್ಧಗೊಳಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಈ
ಪ್ರಕ್ರಿಯೆ ನಡೆಯುತ್ತಲೇ ಇದೆ. ಪರಿಣಾಮಕಾರಿ ಕಲಿಕೆಯತ್ತ ಹೆಜ್ಜೆ ಇಟ್ಟಾಗಿದೆ.
ಮೌಖಿಕ
ಪದ್ಧತಿ ಬಳಸಿ ಕಥೆಗಳು, ಶಿಶುಗೀತೆಗಳು, ಭಾಷಾ ಆಟಗಳು, ಸಂಭಾಷಣಾ ಪಾಠ ಮತ್ತು
ಪ್ರಾತ್ಯಕ್ಷಿಕೆಗಳ ಮೂಲಕ ಇಂಗ್ಲಿಷ್ ಕಲಿಸಿಕೊಡಲು ಚಿತ್ರಮಯ ಪಠ್ಯಪುಸ್ತಕ ಆಟಟ
ಕೊಡಲಾಗಿದೆ. ಇವೆಲ್ಲವೂ ಪ್ರಥಮ ಭಾಷೆ ಇಂಗ್ಲಿಷ್ ಕಲಿಸುವವರಿಗೆ ನೆರವಾಗುವಂತಿದ್ದು,
ನಾವು ಕಲಿಸುತ್ತಿರುವುದು ದ್ವಿತೀಯ ಭಾಷೆ ಇಂಗ್ಲಿಷ್ ಎಂಬುದನ್ನೇ ಮರೆತಂತಿದೆ! ಇಂಗ್ಲಿಷ್
ಭಾಷೆಯೂ ನಮ್ಮ ಮಾತೃಭಾಷೆಯಷ್ಟೇ ಸುಲಭವಾದ, ಸರಳವಾದ ಮತ್ತು ಬೇಗನೇ ಹಿಡಿತಕ್ಕೆ ಸಿಗುವ
ಭಾಷೆ ಎಂದುಕೊಂಡಾಗ ಅದು ಅಂಗೈ ನೆಲ್ಲಿಯಾಗುತ್ತದೆ.
ಅಮೆರಿಕದಲ್ಲಿ
ಪ್ರಕಟವಾದ ಸಂಶೋಧನಾ ವರದಿಯು, ಯಾವ ಮಗು ತನ್ನ ಮಾತೃಭಾಷೆಯ ಮೂಲಕ ಇಂಗ್ಲಿಷ್
ಕಲಿಯುತ್ತದೋ ಅದು ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಗಳಿಸಿಕೊಳ್ಳಲು
ಸಫಲವಾಗುತ್ತದೆ ಎಂದು ತಿಳಿಸಿದೆ. ಹೊರದೇಶಗಳಿಂದ ಹೋಗಿ ನೆಲೆಸಿರುವ ಅಲ್ಲಿನ ತಂದೆ
ತಾಯಂದಿರು ಮತ್ತು ಗುರುಗಳು ಆ ಮಗುವಿನ ಮಾತೃಭಾಷೆಯ (ಹಿಂದಿ, ಗುಜರಾತಿ, ತಮಿಳು ಇಲ್ಲವೇ
ಆಫ್ರಿಕನ್, ಸ್ಪ್ಯಾನಿಷ್, ಫ್ರೆಂಚ್ ಇತ್ಯಾದಿ) ಮೂಲಕವೇ ಇಂಗ್ಲಿಷ್ ಭಾಷೆಯನ್ನು ಕಲಿಸುವ
ಹೊಸ ಪದ್ಧತಿ ಅಳವಡಿಸಿ ಕೊಂಡಿದ್ದಾರಂತೆ. ಹೀಗಿರುವಾಗ, ಕನ್ನಡದ ಮೂಲಕ ಇಂಗ್ಲಿಷ್ ಕಲಿಯಲು
ಮತ್ತು ಕಲಿಸಲು ನಮ್ಮಲ್ಲಿ ಹಲವರು ಯಾಕೆ ಮುಜುಗರ ಪಟ್ಟುಕೊಳ್ಳುವರೋ ತಿಳಿಯದು!
ಗರ್ಭಾವಸ್ಥೆಯಿಂದಲೇ ಇಂಗ್ಲಿಷ್!
ಮಗುವೊಂದು ಧರೆಗಿಳಿಯುವ ಮುನ್ನವೇ ಇಂಗ್ಲಿಷ್ ಅದರ ಕಿವಿಯ ಮೇಲೆ ಬಿದ್ದಿರುತ್ತದಂತೆ. ಪ್ರೆಗ್ನೆನ್ಸಿ ಟೆಸ್ಟ್, ಪಾಸಿಟಿವ್, ಕನ್‌ಸೀವ್ಡ್ ಎಂಬಲ್ಲಿಂದ ಆರಂಭ ಆಗುವ ಪದಗಳು ಮುಂದೆ ಮೆಡಿಕಲ್ ಚೆಕ್‌ಅಪ್, ಸ್ಕ್ಯಾನಿಂಗ್, ಟಿ.ಟಿ. ಇಂಜೆಕ್ಷನ್, ಐರನ್ ಟ್ಯಾಬ್‌ಲೆಟ್ಸ್, ಟಾನಿಕ್, ಹೆಲ್ತಿ ಫುಡ್, ಪೀರಿಯಾಡಿಕಲ್ ಚೆಕ್‌ಅಪ್ ಇತ್ಯಾದಿ ರೂಪದಲ್ಲಿ ಭ್ರೂಣಕ್ಕೆ ಕೇಳಿಸುತ್ತಾ ಹೋಗುತ್ತವೆ!

ಅಜ್ಜಿ ಇಂಗ್ಲಿಷ್!
ನಮ್ಮ ಹಳ್ಳಿಯಲ್ಲಿರುವ ಅಜ್ಜಿಗೆ ಕೂಡ ಇಂಗ್ಲಿಷ್ ಎಂದರೆ ಪಂಚಪ್ರಾಣ. `ಬಸ್ ಬಂತಾ ನೋಡ್ಲಾ ಮಗಾ. ಲೇಟ್ ಆಯ್ತದೆ ಇಸ್ಕೂಲ್‌ಗೆ. ಬಸ್ ಮಿಸ್ ಮಾಡ್ಕೋಬ್ಯಾಡಪ್ಪಾ.
ಬೈಕ್
ಮ್ಯೋಗೆ ನಿನ್ನ ಕರ‌್ಕೊಂಡ್ ಹೋಗಾಕೆ ನಿಮ್ಮಪ್ಪ ಸಿಟ್ ಮಾಡ್ಕತಾನೆ. ಲೇಟಾಗಿ ಓದ್ರೆ
ಫೈನ್ ಬೇರೆ ಆಕ್ತಾರಂತೆ, ಹೌದಾ? ಹೋಂವರ್ಕ್ ಎಲ್ಲ ಮಾಡಿದ್ಯಾ ಕಂದಾ. ಗುಡ್ ಗುಡ್. ಫಸ್ಟ್
ಬರ‌್ಬೇಕು ಇಸ್ಕೂಲ್‌ಗೆ.
ಗೋ, ಗೋ..., ಅಂತ ಮೊಮ್ಮಗ ಕಲಿಸಿದ ಹರಕುಮುರುಕು ಇಂಗ್ಲಿಷ್‌ನಲ್ಲಿ ಹೇಳುತ್ತೆ ಗೊತ್ತಾ?
ಅಗತ್ಯ ಮತ್ತು ಅವಶ್ಯಕತೆಗೆ ತಕ್ಕಂತೆ ಇಂಗ್ಲಿಷ್ ಬೆಳೆಯುತ್ತಲೇ ಇದೆ. ವ್ಯವಹಾರಕ್ಕೆ ಬ್ಯುಸಿನೆಸ್ ಇಂಗ್ಲಿಷ್, ಎಂಜಿನಿಯರ್‌ಗಳಿಗೆ ಟೆಕ್ನಿಕಲ್ ಇಂಗ್ಲಿಷ್, ಟೀಚರ್‌ಗಳಿಗೆ ಇಂಗ್ಲಿಷ್ ಲ್ಯಾಂಗ್ವೇಜ್ ಟೀಚಿಂಗ್ (ಇ.ಎಲ್.ಟಿ.), ವೈದ್ಯರಿಗೆ ಮೆಡಿಕಲ್ ಇಂಗ್ಲಿಷ್, ಸ್ವಾಮೀಜಿಗಳಿಗೆ ಸ್ಪಿರಿಚುಯಲ್ ಇಂಗ್ಲಿಷ್... ಹೀಗೆ ಹೊಸ ಬಗೆಯ ಇಂಗ್ಲಿಷ್ ಬಳಕೆಗೆ ಬಂದಿದೆ.
ಗಮನಿಸಿ
ಇಂಗ್ಲಿಷ್ ಕಲಿಯಲು ಮಾಹಿತಿಗಾಗಿ ಕೆಳಗಿನ ಕೆಲವು ವೆಬ್ ವಿಳಾಸಗಳನ್ನು ನೋಡಬಹುದು: |
ಮಗು
ಹುಟ್ಟುವ ಸಂದರ್ಭದಲ್ಲಿ ಆಪರೇಷನ್ ಥಿಯೇಟರ್, ಬೇಬಿ, ಕ್ಲೀನಿಂಗ್, ಬ್ರೆಸ್ಟ್ ಫೀಡಿಂಗ್,
ರ‌್ಯಾಪಿಂಗ್, ಇನ್‌ಕ್ಯುಬೇಟರ್, ವೆಯ್ಟ, ಹೈಟ್ ಎಂಬ ಪದಗಳೂ ಅದರ ಕಿವಿಗೆ
ಬಿದ್ದಿರಬಹುದು. ಹೀಗೆ ತೊಟ್ಟಿಲಿನಿಂದ ಆರಂಭವಾಗಿ ಸಮಾಧಿಯವರೆಗೆ (ಫ್ರಂ ಕ್ರೆಡಲ್ ಟು
ಗ್ರೇವ್) ನಮ್ಮಂದಿಗೆ ಇಂಗ್ಲಿಷ್ ಪ್ರಯಾಣ ಮಾಡುತ್ತಲೇ ಇರುತ್ತದೆ.
ಮಕ್ಕಳನ್ನೇ
ತೆಗೆದುಕೊಳ್ಳಿ. ಅವರನ್ನು ಬೇಬಿ ಅಂತಲೇ ಕರೆಯುವುದು ರೂಢಿ. ಅವರು ಶಾಲೆಗೆ
ಸಿದ್ಧರಾಗಬೇಕು ಎಂದರೆ ಯೂನಿಫಾರಂ, ಸಾಕ್ಸ್, ಷೂಸ್, ಟೈ, ಬೆಲ್ಟ್, ಶರ್ಟ್, ಹಾಫ್
ಪ್ಯಾಂಟ್, ಕರ್ಚೀಫ್, ಲಂಚ್ ಬ್ಯಾಗ್, ಸ್ಕೂಲ್ ಬ್ಯಾಗ್, ಜಾಮಿಟ್ರಿ ಬಾಕ್ಸ್, ಲಂಚ್
ಬಾಕ್ಸ್, ಪೆನ್ಸಿಲ್, ರಬ್ಬರ್, ಪೆನ್, ಪೇಪರ್, ಬುಕ್, ನೋಟ್‌ಬುಕ್, ಬೆಂಚ್, ಡೆಸ್ಕ್,
ಬೋರ್ಡ್, ಡಸ್ಟರ್... ಛೇ ಬಿಡಿ ಅದೊಂದು ವಿಸ್ಮಯ ಲೋಕ!
ಭಾಷಾ ಕೌಶಲ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು. ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಅಥವಾ ಇನ್ನಾವುದೇ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಮಾತೃಭಾಷೆಯ ವಿಷಯದಲ್ಲಿ ನಮಗೇ ಗೊತ್ತಿಲ್ಲದಂತೆ ನಮ್ಮ ತೊಟ್ಟಿಲಿನಿಂದಲೇ ಆರಂಭವಾಗಿರುತ್ತದೆ. ಆದರೆ ಮತ್ತೊಂದು ಭಾಷೆಯನ್ನು ಪ್ರಯತ್ನಪೂರ್ವಕವಾಗಿ ಕಲಿಯುವಾಗ ಇವೆಲ್ಲವೂ ಹೊಸದೆನಿಸುತ್ತವೆ. ಬಹುಮಾಧ್ಯಮ ವೈಜ್ಞಾನಿಕ ವಿಧಾನದಿಂದ ಭಾಷಾ ಕಲಿಕೆ ಅತ್ಯಂತ ಸುಲಭ ಹಾಗೂ ಮನೋರಂಜಕ ಆಗಿರುತ್ತದೆ.

ಪದಸಂಪತ್ತು- ದೇಹ ಭಾಷೆ- ಉಚ್ಚಾರ
ನಾವು ಬಳಸುವ ಭಾಷೆಯಲ್ಲಿ ಕೇವಲ ಶೇ 7ರಷ್ಟು ಭಾಗ ಮಾತ್ರ ಪದಗಳಿರುತ್ತವೆ. ಉಳಿದ ಶೇ 55ರಷ್ಟು ಭಾಗ ನಮ್ಮ ದೇಹ ಭಾಷೆ (ಹಾವಭಾವ- ಭಂಗಿ- ಮುಗುಳ್ನಗು- ಕೈ- ಬಾಯಿ- ಮುಖದ ಚಲನೆ- ಉಡುಪು- ಕೂದಲಿನ ಒಪ್ಪ- ಅಚ್ಚುಕಟ್ಟುತನ ಇತ್ಯಾದಿ) ಮತ್ತು ಶೇ 38ರಷ್ಟು ಭಾಗ ಧ್ವನಿಯ ಏರಿಳಿತ, ಮೃದುತ್ವ, ನಯ-ವಿನಯ, ಗಾಂಭೀರ್ಯ, ಉಚ್ಚಾರಣಾ ಶೈಲಿ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ನಮ್ಮ ಸಮಗ್ರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತೆ ಭಾಷೆ ಕೆಲಸ ಮಾಡುತ್ತದೆ. ದೇಹ ಭಾಷೆಯ ಬಗ್ಗೆ ನಾವು ನಿಗಾ ವಹಿಸುವುದು ತೀರಾ ಕಡಿಮೆ. ಹಾಗಾಗಿ ಇಂಗ್ಲಿಷ್ ಕಲಿಯುವ ಮತ್ತು ಕಲಿಸುವ ಸಂದರ್ಭದಲ್ಲಿ ಇದಕ್ಕೂ ಒತ್ತು ನೀಡಬೇಕಾಗಿದೆ.

ದೃಶ್ಯ- ಶ್ರವಣ
ಭಾಷಾ ಕಲಿಕೆಯ ಮೂಲ ಕೌಶಲ ಆಲಿಸುವುದು. ರೇಡಿಯೊ ಮತ್ತು ಟಿ.ವಿ.ಗಳಲ್ಲಿ ಬಿತ್ತರವಾಗುವ ನೂರಾರು ಕಾರ್ಯಕ್ರಮಗಳು ನಮಗೆ ನಿರಂತರ ಆಲಿಸುವ ಮತ್ತು ನೋಡಿ ತಿಳಿಯುವ ಅವಕಾಶ ಕಲ್ಪಿಸಿಕೊಡುತ್ತಲೇ ಇರುತ್ತವೆ. ಕೇಬಲ್ ಟಿ.ವಿ. ಇಲ್ಲವೇ ಡಿ.ಟಿ.ಎಚ್. ಮೂಲಕವೂ ನಮಗೆ ಬೇಕಾದ ಕಾರ್ಯಕ್ರಮಗಳನ್ನು ಆಯ್ದು ಕೇಳುವ, ಕೇಳುತ್ತಲೇ ಅಲ್ಲಿ ಬಳಸಲಾಗುವ ಆಂಗಿಕ ಭಾಷೆ (ಬಾಡಿ ಲ್ಯಾಂಗ್ವೇಜ್) ನೋಡುವ ಅವಕಾಶ ಇದೆ. ಮಾತನಾಡುವುದರ ಜೊತೆಗೆ ನಾವು ಬಳಸುವ ಬಾಡಿ ಲಾಂಗ್ವೇಜ್ ಕೂಡ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ. ಹೀಗಾಗಿ ದೃಶ್ಯ ಮಾಧ್ಯಮ ನಮಗೆ ಈ ವಿಷಯದಲ್ಲಿ ತರಬೇತಿ ನೀಡುವ ಆಪ್ತಮಿತ್ರ. ಇಂಗ್ಲಿಷ್ ಕಲಿಕೆಗಂತೂ ಇದು ಅತ್ಯುತ್ತಮ ಸಂಪನ್ಮೂಲ.

ಟೇಪ್
ರೆಕಾರ್ಡರ್‌ನಲ್ಲಿ ಧ್ವನಿಯನ್ನು ಸೆರೆಹಿಡಿದು, ಮಾದರಿ ಸಂಭಾಷಣೆಯ ತುಣುಕುಗಳನ್ನು
ಧ್ವನಿಮುದ್ರಿಸಿ ಕೇಳಿ ಕಲಿಯಲು, ಮಾದರಿಗಳನ್ನು ಅನುಸರಿಸಿ ಉಚ್ಚಾರ ಮಾಡಿ, ಸತತ
ಅಭ್ಯಾಸದಿಂದ ಯಶಸ್ಸು ಗಳಿಸಲು ಸಾಧ್ಯ. ಬೆಂಗಳೂರು, ಹೈದರಾಬಾದ್, ಮೈಸೂರು,
ಮುಂಬೈಗಳಲ್ಲಿನ ಭಾಷಾ ಪ್ರಯೋಗ ಶಾಲೆಗಳಲ್ಲಿ, ಜೊತೆಗೆ ಬಿ.ಬಿ.ಸಿ.ಯಂತಹ ಖಾಸಗಿ
ಪ್ರಕಾಶಕರಲ್ಲಿ ಭಾಷಾ ಕಲಿಕೆಗಾಗಿಯೇ ಹತ್ತಾರು ಕ್ಯಾಸೆಟ್‌ಗಳು, ಸಿ.ಡಿ.ಗಳು ಸಿಗುತ್ತವೆ.
ನಿತ್ಯ ಬಳಕೆಯ ಮೊಬೈಲ್ ಮತ್ತು ಟ್ಯಾಬ್‌ಲೆಟ್‌ಗಳಲ್ಲಿ ಇರುವ ರೆಕಾರ್ಡಿಂಗ್ ಸೌಲಭ್ಯ,
`ಟಾಕಿಂಗ್ ಟಾಮ್'ನಂತಹ ಅಪ್ಲಿಕೇಶನ್‌ಗಳ ಸಹಾಯದಿಂದ ಮಾತನಾಡಿಸಿ, ಪುನರಾವರ್ತಿಸಿ ಕೇಳುವ
ಸೌಲಭ್ಯ ಬಳಸಿಕೊಳ್ಳಬಹುದು.
ಕಂಪ್ಯೂಟರ್ ಮತ್ತು ಇಂಟರ್‌ನೆಟ್: ಶಿಕ್ಷಣ
ಕ್ಷೇತ್ರದ ಭವಿಷ್ಯ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಎಂಬ ಮಾಯಾಲೋಕದ ಜಾಲದಲ್ಲಿ
ಸಿಲುಕಿದೆ. ಒಮ್ಮೆ ನಾವು ಇದರ ಇ- ಪ್ರಪಂಚದ ಒಳಹೊಕ್ಕರೆ ಕಲಿಕೆಗೆ ಅಸಾಧ್ಯ ಎಂಬ ಮಾತೇ
ಹೊರಡದು. ಮನೆ ಮನೆಯಲ್ಲೂ, ಶಾಲೆ ಶಾಲೆಯಲ್ಲೂ ಬಹುಮಾಧ್ಯಮ ಕಂಪ್ಯೂಟರ್ ಸಾಮ್ರೋಜ್ಯ
ವಿಸ್ತರಿಸುತ್ತಿದೆ. ಅದನ್ನು ನಮ್ಮ ಭಾಷಾ ಕಲಿಕೆಗೆ, ಹಾಗೆಯೇ ಕಷ್ಟ ಎಂದು ಭಾವಿಸಲಾಗುವ
ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ ಕಲಿಕೆಗೆ ಕೂಡ ಬಳಸಿಕೊಳ್ಳಬಹುದು.
ಆಲಿಸುವಿಕೆ
ಮತ್ತು ಮಾತನಾಡುವಿಕೆಗೆ ಸಂಬಂಧಿಸಿದಂತೆ ಹತ್ತಾರು ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು
ಲಭ್ಯವಿದ್ದು ಅವುಗಳ ಸಹಾಯದಿಂದ ಮಾಹಿತಿ, ಶಿಕ್ಷಣ, ಮನರಂಜನೆಯನ್ನು ಕುಳಿತಲ್ಲೇ
ಸೃಷ್ಟಿಸಬಹುದು, ಅನುಭವಿಸಬಹುದು.AUDACITY, WAVELAB, WAVELABLITE, COOLEDIT,
SOUNDFORGE ಮೊದಲಾದ ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು ಲಭ್ಯವಿದ್ದು, ಕೆಲವು
ಉಚಿತವಾಗಿಯೂ ಸಿಗುತ್ತವೆ. ವಿಂಡೋಸ್‌ನ ಇತ್ತೀಚಿನ ಅವತರಣಿಕೆಯ ಜೊತೆಯಲ್ಲಿ
ಧ್ವನಿಮುದ್ರಣದ ಸೌಲಭ್ಯವೂ ಇದೆ. ಇತರ ಭಾಷೆಯ ಪದಗಳ ಉಚ್ಚಾರಕ್ಕೆ ಸಂಬಂಧಿಸಿದಂತೆ ಸಿ.ಡಿ.
ಪದಕೋಶಗಳಲ್ಲೇ ಉಚ್ಚಾರಣೆಯನ್ನೂ ನೀಡಲಾಗಿದೆ. ನಮಗೆ ಸೂಕ್ತ ಕಂಡ ಉಚ್ಚಾರವನ್ನು ಆಯ್ಕೆ
ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ.
ಇತ್ತೀಚೆಗೆ
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಕನ್ನಡ- ಇಂಗ್ಲಿಷ್-
ಹಿಂದಿ ಮೂರೂ ಭಾಷೆಗಳ ಮೂಲಕ ಒಂದೇ ಕಡೆ ಕಲಿಯುವಂತೆ ಹಲವಾರು ಸಿ.ಡಿ.ಗಳನ್ನು ರೂಪಿಸಿ
ಕರ್ನಾಟಕದಾದ್ಯಂತ ನೂರಾರು ಶಾಲೆಗಳಿಗೆ ಹಂಚಿವೆ. ಅಂತರ್ಜಾಲದಲ್ಲಿ ಸಿಗುವ ಸಾಫ್ಟ್‌ವೇರ್
ಮತ್ತು ಮಾಹಿತಿಯ ಮಹಾಪೂರವನ್ನೇ ಭಾಷಾ ಕಲಿಕೆಗೂ ಬಳಸಿಕೊಳ್ಳಲು ಸಾಧ್ಯವಿದೆ. ಇಂಗ್ಲಿಷ್
ಕಲಿಕೆಗಂತೂ ಲಕ್ಷಗಟ್ಟಲೆ ವೆಬ್‌ಸೈಟ್‌ಗಳು ಸಿಗುತ್ತವೆ.
ಪಾಠ
ಬೋಧನೆಯ ವಿಧಾನ, ಮಾದರಿ ಪಾಠಗಳು, ಧ್ವನಿಮುದ್ರಿತ ರೂಪದ ಪಾಠಗಳು, ವಿಡಿಯೊ ಪಾಠಗಳು,
ಸಂವಾದದ ಪಾಠಗಳು ಹೀಗೆ ಏನೆಲ್ಲಾ ಇಲ್ಲಿ ಲಭ್ಯ. ಭಾಷೆಯ ಕಲಿಕೆ ವ್ಯಕ್ತಿತ್ವಕ್ಕೆ ಮೆರುಗು
ನೀಡುತ್ತದೆ. ವಿಕಸಿತ ವ್ಯಕ್ತಿತ್ವದ ದ್ಯೋತಕ ಪರಿಶುದ್ಧ ಭಾಷಾ ಬಳಕೆ. ಇಂತಹ ಭಾಷೆಯೆಂಬ
ಆಯುಧವನ್ನು ನಮ್ಮ ಬತ್ತಳಿಕೆಯಲ್ಲಿ ಇರಿಸಿಕೊಳ್ಳೋಣ.
ಇಂಗ್ಲಿಷ್
ಭಾಷೆಯನ್ನು ಕಲಿಸಲು ಇರುವ ಹದಿನೈದಕ್ಕೂ ಹೆಚ್ಚು ವಿಧಾನಗಳಲ್ಲಿ ಆಧುನಿಕ ಬಹುಮಾಧ್ಯಮ
ಬೋಧನೋಪಕರಣಗಳನ್ನು ಬಳಸಿಕೊಂಡು ಇಂಗ್ಲಿಷ್ ಕಲಿಸುವ ಹೊಸ ವಿಧಾನವೇ Multi-Media
Approach - The New Way.
(ವಿವರಗಳಿಗೆ ನೋಡಿ Multimedia
Language Laboratory to learn Spoken and Written English - Published by
Navakarnataka Publications. Rs.20/- Ph. 08022203580).