Monday, 6 September 2010

Bedre Web Corner Article 1 - Employment News Weekly


ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ
ಉದ್ಯೋಗ ಮಾಹಿತಿ ಅಂತರಜಾಲ ಪತ್ರಿಕೆ - ಎಂಪ್ಲಾಯ್ಮೆಂಟ್ ನ್ಯೂಸ್


ಉದ್ಯೋಗ ಜಗತ್ತು ಕನ್ನಡದಲ್ಲಿ ನಿಮಗಾಗಿ ಉದ್ಯೋಗಾವಕಾಶಗಳ ಅಗಾಧ ಮಾಹಿತಿಯನ್ನು ಹೊತ್ತುತರುತ್ತಿರುವುದು ನಿಮಗೆ ಗೊತ್ತೇ ಇದೆ. ಇದೇ ಕೆಲಸವನ್ನು ಇಂಗ್ಲಿಷ್, ಉದರ್ು ಮತ್ತು ಹಿಂದಿಯಲ್ಲಿ 1976 ರ ಏಪ್ರಿಲ್ನಿಂದ ಮಾಡುತ್ತಾ ಬರುತ್ತಿದೆ ಭಾರತದ ಹೆಮ್ಮೆಯ ಉದ್ಯೋಗ ಮಾಹಿತಿ ವಾರಪತ್ರಿಕೆ ಎಂಪ್ಲಾಯ್ಮೆಂಟ್ ನ್ಯೂಸ್.
ಕೇಂದ್ರ ಲೋಕಸೇವಾ ಆಯೋಗ, ಸಿಬ್ಬಂದಿ ನೇಮಕಾತಿ ಆಯೋಗ, ರೈಲ್ವೇ ನೇಮಕಾತಿ ಮಂಡಳಿ, ರಕ್ಷಣಾ ಪಡೆಗಳ ನೇಮಕಾತಿ ಮಂಡಳಿಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್, ಫೈನಾನ್ಸ್, ಮಾಹಿತಿ ತಂತ್ರಜ್ಞಾನ ಹೀಗೆ ದೇಶದ ಉದ್ದಗಲಕ್ಕೂ ಹರಡಿರುವ ಸಕರ್ಾರಿ ಮತ್ತು ಸ್ವಾಯತ್ತ ಮಂಡಳಿಗಳು ನಡೆಸುವ ಸ್ಪಧರ್ಾತ್ಮಕ ಪರೀಕ್ಷೆಗಳು, ಲಭ್ಯವಿರುವ ಉದ್ಯೋಗಾವಕಾಶಗಳ, ನೇಮಕಾತಿ ವಿಧಾನಗಳು ಇತ್ಯಾದಿ ಮಾಹಿತಿಯನ್ನು ಯುವಜನರಿಗೆ ತಲುಪಿಸಲೆಂದೇ ಕೇಂದ್ರ ವಾತರ್ಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣಾ ವಿಭಾಗವು ಪ್ರಕಟಿಸುತ್ತಿರುವ ಎಂಪ್ಲಾಯ್ಮೆಂಟ್ ನ್ಯೂಸ್ ದೇಶದ ಅತಿ ಹೆಚ್ಚು ಪ್ರಸಾರದಲ್ಲಿರುವ ವಾರಪತ್ರಿಕೆ ಎಂಬ ಖ್ಯಾತಿಗಳಿಸಿದೆ.
ಕಳೆದ ಕೆಲವು ವರ್ಷಗಳಿಂದ ಅಂತರಜಾಲದಲ್ಲಿಯೂ ಲಭ್ಯವಿರುವ ಎಂಪ್ಲಾಯ್ಮೆಂಟ್ ನ್ಯೂಸ್ ವಿದ್ಯುನ್ಮಾನ ಪತ್ರಿಕೆಯಲ್ಲಿ ಮುದ್ರಿತ ಪತ್ರಿಕೆಯಲ್ಲಿರುವ ವಿವರಗಳ ಜೊತೆಗೆ ಕೆರೀರ್ ಲಿಂಕ್ ವಿಭಾಗದಲ್ಲಿ ಹೆಚ್ಚಿನ ಮಾಹಿತಿ ನೀಡುವ, ಸಕರ್ಾರದ ವಿವಿಧ ಇಲಾಖೆಗಳ ಮತ್ತು ಪ್ರಕಟಣಾಲಯಗಳ ಸಂಪರ್ಕ ಕೊಂಡಿಗಳಿವೆ. ಕೆಲಸ ಖಾಲಿ ಇರುವ ಮಾಹಿತಿಯನ್ನು ಇ-ಮೇಲ್ ಮೂಲಕ ಪಡೆದುಕೊಳ್ಳಲು ಜಾಬ್ ಅಲಟರ್್ ಮತ್ತು ಕೆರೀರ್ ಕ್ವಯರಿ ಎಂಬ ವಿಭಾಗಗಳಿದ್ದು ಆಸಕ್ತರು ತಮ್ಮ ಇ-ಮೇಲ್ ವಿಳಾಸದೊಂದಿಗೆ ನೋಂದಾವಣೆ ಮಾಡಿಕೊಳ್ಳಬಹುದು. ಕ್ವೆಶ್ಚನ್ & ಆನ್ಸರ್ ವಿಭಾಗದಲ್ಲಿ ನೂರಾರು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳಿವೆ.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :
http://employmentnews.gov.in

Source : http://bedrebrains.blogspot.com

Open Book Evaluation - A Boon or Bane - Article in Shikshana Varthe Monthly of July 2024.

      Open Book Evaluation - A Boon or Bane - Article in Shikshana Varthe Monthly of July 2024.