Tuesday 27 November, 2012

KAS Mains 2012 and Book by Bipan Chandra - Article in Josh 27 Nov 2012

 KAS Mains 2012 and Book by Bipan Chandra - Article in Josh 27 Nov 2012
  •  Udayavani ಟೈಮ್‌ ಟೇಬಲ್‌ ಬರ್ಕೊಳಿ ಇನ್ನೇನು ಪರೀಕ್ಷೆ ಬಂದೇಬಿಡ್ತು

  • 2012ರ ಡಿಸೆಂಬರ್‌ 15ರಿಂದ 2013ರ ಜನವರಿ 6ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್‌ ಪ್ರೊಬೆಷನರ್‌ಗಳ ನೇಮ

    • Udayavani | Nov 26, 2012
      2012ರ ಡಿಸೆಂಬರ್‌ 15ರಿಂದ 2013ರ ಜನವರಿ 6ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್‌ ಪ್ರೊಬೆಷನರ್‌ಗಳ ನೇಮಕಾತಿ ಮುಖ್ಯ(ಮೇನ್‌) ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ. ಡಿಸೆಂಬರ್‌ 15ರಂದು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳ ಕಡ್ಡಾಯ ಪತ್ರಿಕೆಗಳು, 16 ರಂದು ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳು ನಿಗದಿಯಾಗಿದ್ದು 17ರಿಂದ ಜನವರಿ 6ರವರೆಗೆ ವಿವಿಧ ಐಚ್ಛಿಕ ವಿಷಯಗಳ ಎರಡೆರಡು ಪತ್ರಿಕೆಗಳು ಇರಲಿವೆ. 

      ಪತ್ರಿಕೆ-3: ಸಾಮಾನ್ಯ ಅಧ್ಯಯನ ಪತ್ರಿಕೆ 1- 300 ಅಂಕಗಳು- 3 ಗಂಟೆ 
      1. ಆಧುನಿಕ ಭಾರತದ ಇತಿಹಾಸ ಮತ್ತು ಸಂಸ್ಕೃತಿ- ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗೆ ವಿಶೇಷ ಆದ್ಯತೆ 
      2. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ಘಟನಾವಳಿಗಳು 
      3. ಅಂಕಿ- ಅಂಶಗಳ ವಿಶ್ಲೇಷಣೆ, ಗ್ರಾಫ್ ಮತ್ತು ಚಿತ್ರಗಳು, ನಕಾಶೆಗಳು 

      ಪತ್ರಿಕೆ-4: ಸಾಮಾನ್ಯ ಅಧ್ಯಯನ ಪತ್ರಿಕೆ 2- 300 ಅಂಕಗಳು- 3 ಗಂಟೆ 
      1. ಭಾರತದ ರಾಜಕೀಯ/ ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ 
      2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ 
      3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ 

      ಆಧುನಿಕ ಭಾರತದ ಇತಿಹಾಸ 
      ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಮತ್ತು ನೇಮಕಾತಿ ಮಂಡಳಿಗಳು ನಡೆಸುತ್ತಿರುವ ಸ್ಪರ್ಧಾತ್ಮಕ ಆಯ್ಕೆ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದಾಗ ಶೇಕಡಾ 5ರಷ್ಟು ಪ್ರಶ್ನೆಗಳು ಆಧುನಿಕ ಭಾರತದ ಇತಿಹಾಸ ಮತ್ತು ಶೇಕಡಾ 15ರಷ್ಟು ಪ್ರಶ್ನೆಗಳು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಭಾರತ ಸ್ವಾತಂತ್ರÂ ಸಂಗ್ರಾಮದ ಇತಿಹಾಸ ಮತ್ತು ಸಂವಿಧಾನ ರಚನೆಯ ಹಿನ್ನೆಲೆ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂವಿಧಾನದಲ್ಲಿ ಉÇÉೇಖೀಸಲಾಗಿರುವ ಪ್ರಮುಖ ನಿರ್ಣಾಯಕ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳನ್ನು, ತಿದ್ದುಪಡಿಗಳನ್ನು ಆಧರಿಸಿದ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತಿದೆ. ಸಾರ್ವಜನಿಕ ಆಡಳಿತ ವಿಷಯದ ಮೂಲಾಧಾರ ಸಂವಿಧಾನವಾಗಿರುವುದರಿಂದ ಭಾರತದ ಆಡಳಿತ ವ್ಯವಸ್ಥೆಯನ್ನು ಕುರಿತ ಪ್ರಶ್ನೆಗಳಿಗೆ ಸಂವಿಧಾನವೇ ಉತ್ತರ ನೀಡುತ್ತದೆ. 

      ಭಾರತ ಸಂವಿಧಾನ ದಿನ- ನವೆಂಬರ್‌ 26 
      ಭಾರತ 1947ರ ಆಗಸ್ಟ್‌ 14ರಂದು ಮಧ್ಯರಾತ್ರಿ ಸ್ವಾತಂತ್ರÂ ಗಳಿಸಿತು. ಡಾ.ಬಾಬು ರಾಜೇಂದ್ರ ಪ್ರಸಾದರ ನೇತೃತ್ವದ ಸಂವಿಧಾನ ರಚನಾ ಸಭೆಯು ವಿಶ್ವದ ಅತ್ಯಂತ ದೊಡ್ಡ, ವ್ಯವಸ್ಥಿತ ಮತ್ತು ವೈಜ್ಞಾನಿಕ ಸಂವಿಧಾನವನ್ನು 1949ರ ನವೆಂಬರ್‌ 26ರಂದು ಸಿದ್ಧಪಡಿಸಿ 1950ರ ಜನವರಿ 26ರಿಂದ ಜಾರಿಗೊಳಿಸಿತು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿದ್ದ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತಾವನೆ, 395 ವಿಧಿಗಳನ್ನೊಳಗೊಂಡ 22 ಭಾಗಗಳು, 12 ಅನುಸೂಚಿಗಳು, ಅನುಬಂಧ ಮತ್ತು 97 ತಿದ್ದುಪಡಿಗಳನ್ನೊಳಗೊಂಡಿರುವ ಬೃಹತ್‌ ಸಂವಿಧಾನ ನಮ್ಮದು. 2012ರ ನವೆಂಬರ್‌ವರೆಗೆ 117 ತಿದ್ದುಪಡಿಗಳ ಕರಡುಗಳನ್ನು ಮಂಡಿಸಲಾಗಿದ್ದು, 97 ತಿದ್ದುಪಡಿಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ.
  •  ಬಿಪಿನ್‌ ಚಂದ್ರರ ಹೊಸ ಪುಸ್ತಕ

  • ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾರತದ ಇತಿಹಾಸವನ್ನು ಕುರಿತಂತೆ ನೂರಾರು ಪುಸ್ತಕಗಳು ಪ್ರಕಟವಾಗಿದ್ದರೂ ಸ್ಪರ್ಧಾತ್ಮಕ ಪರ

    • Udayavani | Nov 26, 2012
      ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾರತದ ಇತಿಹಾಸವನ್ನು ಕುರಿತಂತೆ ನೂರಾರು ಪುಸ್ತಕಗಳು ಪ್ರಕಟವಾಗಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡಬೇಕಿರುವ ವಿಶ್ಲೇಷಣಾತ್ಮಕ ಉತ್ತರಕ್ಕೆ ಸೂಕ್ತ ಮೂಲ ಸಾಮಗ್ರಿ ಒದಗಿಸುವ ಡಾ. ಬಿಪಿನ್‌ ಚಂದ್ರ ಅವರ ಆಧುನಿಕ ಭಾರತದ ಇತಿಹಾಸ ಕೃತಿಯು ಬ್ರಿಟಿಷ್‌ ಇಂಡಿಯಾದ ಇತಿಹಾಸದ ಸ್ಥೂಲ ಪರಿಚಯ ಮಾಡಿಕೊಡುತ್ತದೆ. ಇಲ್ಲಿ ಹದಿನೆಂಟನೆಯ ಶತಮಾನದಲ್ಲಿ ಭಾರತವು ಮೊದಲು ಬ್ರಿಟಿಷ್‌ ಇಂಡಿಯಾ ಕಂಪೆನಿ, ನಂತರ ಬ್ರಿಟನ್‌ ಸಾಮ್ರಾಜ್ಯಕ್ಕೆ ಹೇಗೆ ಬಲಿಯಾಯಿತು ಎಂಬುದನ್ನು ಅಂದಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಮೂಲಕ ಪರಿಶೀಲಿಸಲಾಗಿದೆ. 
      ಮುಘಲ್‌ ಸಾಮ್ರಾಜ್ಯದ ಅವನತಿ, 18ನೆಯ ಶತಮಾನದಲ್ಲಿ ಭಾರತೀಯ ಸಂಸ್ಥಾನಗಳು ಮತ್ತು ಸಮಾಜ ಯೂರೋಪಿಯನ್ನರ ಪ್ರವೇಶ ಮತ್ತು ಬ್ರಿಟಿಷರಿಂದ ಭಾರತದ ವಶ, ಭಾರತದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ಆರ್ಥಿಕ ನೀತಿಗಳು ಮತ್ತು ಸರ್ಕಾರದ ಸಂರಚನೆ, ಆಡಳಿತಾತ್ಮಕ ವ್ಯವಸ್ಥೆ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೀತಿ, 19ನೇ ಶತಮಾನದ ಪೂರ್ವಾಧದಲ್ಲಿ ಸಾಮಾಜಿಕ ಮತ್ತು ಸಾಂಸ್ಕತಿಕ ಜಾಗೃತಿ, 1857ರ ಬಂಡಾಯ, 1858ರ ನಂತರ ಆಡಳಿತದಲ್ಲಿ ಬದಲಾವಣೆಗಳು, ಬ್ರಿಟಿಷ್‌ ಆಳ್ವಿಕೆಯ ಆರ್ಥಿಕ ಪರಿಣಾಮ, ರಾಷ್ಟ್ರೀಯ ಚಳುವಳಿ, 1858ರ ನಂತರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು, ಸ್ವರಾಜ್ಯಕ್ಕಾಗಿ ಹೋರಾಟ, ರೈತರು ಮತ್ತು ಕಾರ್ಮಿಕರ ಚಳುವಳಿಗಳು, ಕಾಂಗ್ರೆಸ್‌ ಮತ್ತು ವಿಶ್ವದ ವಿದ್ಯಮಾನಗಳು, ಸಂಸ್ಥಾನೀ ರಾಜ್ಯಗಳಲ್ಲಿ ಜನರ ಹೋರಾಟ, ಕೋಮುವಾದದ ಬೆಳವಣಿಗೆ ಮತ್ತು ಯುದ್ಧಾನಂತರದ ಹೋರಾಟ ಇವೇ ಮೊದಲಾದ ಅಧ್ಯಾಯಗಳಿಂದ ಕೂಡಿದ 372 ಪುಟಗಳ ಬಿಪಿನ್‌ ಚಂದ್ರ ಅವರ ಈ ಕೃತಿಯನ್ನು ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಗಳಾಗಿರುವ ಡಾ.ಎಚ್‌.ಎಸ್‌. ಗೋಪಾಲರಾವ್‌ ಅವರು ಕನ್ನಡಕ್ಕೆ ಅನುವಾದಿಸಿದ್ದು, ನವಕರ್ನಾಟಕ ಪ್ರಕಾಶನವು ಇದನ್ನು ಪ್ರಕಟಿಸಿದ್ದು ಇದೇ ನವೆಂಬರ್‌ 25 ರಂದು ಲೋಕಾರ್ಪಣೆಯಾಗಿದೆ. ಕೆಎಎಸ್‌ ಮುಖ್ಯ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯಂತ ಉಪಯುಕ್ತ ಗ್ರಂಥವಾಗಿದೆ. 

      ಹೀಗೊಂದು ಪುಸ್ತಕ 
      ಇಫ‚ಾìನ್‌ ಹಬೀಬ್‌ ಅವರ ರಾಷ್ಟ್ರೀಯ ಆಂದೋಲನ: ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನಗಳು (ಪುಟಗಳು 144, ಬೆಲೆ : ರೂ.90-00, ಪ್ರಕಾಶಕರು: ನವಕರ್ನಾಟಕ ಪ್ರಕಾಶನ) ಇಂಗ್ಲಿಷ್‌ ಕೃತಿಯಲ್ಲಿ ಗಾಂಧೀಜಿ: ಬದುಕು, ಗಾಂಧೀ ಮತ್ತು ರಾಷ್ಟ್ರೀಯ ಆಂದೋಲನ, ಜವಾಹರಲಾಲ್‌ ನೆಹರುರವರ ಐತಿಹಾಸಿಕ ಅಂತದೃìಷ್ಟಿ, ಕಾಯ್ದೆ ಭಂಗ ಚಳುವಳಿ 1930-31, ಎಡಪಂಥ ಮತ್ತು 
      ರಾಷ್ಟ್ರೀಯ ಆಂದೋಲನ ಎಂಬ ಐದು ಪ್ರಬಂಧಗಳಿದ್ದು ಬ್ರಿಟಿಷ್‌ ಆಳ್ವಿಕೆ ಮತ್ತು ಅದನ್ನು ಕಿತ್ತೂಗೆಯಲು ಹುಟ್ಟಿ ಬೆಳೆದ ರಾಷ್ಟ್ರೀಯ ಅಂದೋಲನದಲ್ಲಿ ಎಡಪಂಥದ ಕೊಡುಗೆಯ ಅಧ್ಯಯನವಿದ್ದು, ಸಾಂಪ್ರದಾಯಿಕ ಇತಿಹಾಸ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊರತೆಗಳನ್ನು ತುಂಬುವ ಒಂದು ಪ್ರಯತ್ನ ಇದಾಗಿದೆ. ಅಬ್ದುಲ್‌ ರೆಹಮಾನ್‌ ಪಾಷಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿ¨ªಾರೆ.

Udayavani

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...