* ಯಜ್ಜವಲ್ಕ್ಯ
ಎಂಜಿನಿಯರಿಂಗ್,
ಮೆಡಿಕಲ್, ಡೆಂಟಲ್ ಕೋರ್ಸ್‌ಗಳಿಗೇ ಗಂಟುಬೀಳುವ ತಂದೆತಾಯಿಗಳ ಒತ್ತಡದ ಕೂಸುಗಳಿಗೆ ಇದೀಗ
ಸುಮಾರು 300 ವಿವಿಧ ವಿಷಯಗಳ, ವಿವಿಧ ಅವಧಿಗಳ ಕೋರ್ಸ್‌ಗಳು ಲಭ್ಯ! ದ್ವಿತೀಯ
ಪಿ.ಯು.ಸಿ. (10+2) ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ವಿದ್ಯಾರ್ಥಿಗಳ ಆಸಕ್ತಿಗಳ ಆಧಾರದ
ಮೇಲೆ ಮುಂದಿನ ಕೋರ್ಸ್‌ಗಳ ಆಯ್ಕೆ ಮಾಡುವುದು ಒಳ್ಳೆಯದು.
ತಾಂತ್ರಿಕ
ಶಿಕ್ಷಣಕ್ಕೆ ಒತ್ತು ದೊರೆಯುತ್ತಿರುವುದರಿಂದ ಎಂಜಿನಿಯರಿಂಗ್‌ನಲ್ಲಿ ಮೆರೀನ್
ಜಿಯಾಲಜಿಯಿಂದ ಆಸ್ಟ್ರೋಫಿಸಿಕ್ಸ್‌ವರೆಗೆ ಹಲವು ಕೋರ್ಸ್‌ಗಳಿವೆ. ಪ್ರತಿಷ್ಠಿತ
ಕಾಲೇಜುಗಳಿಗೆ ಸಿ.ಇ.ಟಿ., ಕಾಮೆಡ್-ಕೆ, ಐಐಟಿ, ಜೆಇಇ, ಎಐಇಇಇ, ಬಿಟ್‌ಸ್ಯಾಟ್, ನಾಟಾ,
ಜೆಸ್ಟ್, ಸಿಪೆಟ್, ಸೀಡ್, ಸಿಫ್‌ನೆಟ್ ಮೊದಲಾದ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ
ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಕಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ
ಶಾಸ್ತ್ರ ವಿಷಯಗಳೂ ಕೂಡ ಈಗ ತಾಂತ್ರಿಕ ತರಬೇತಿಗೆ ಸೇರಿರುವುದರಿಂದ ಅಲ್ಲಿಯೂ
ಪ್ರವೇಶಕ್ಕೆ ನೂಕುನುಗ್ಗಲು. ವಿವರಗಳಿಗೆ ನೋಡಿ:
* http://cet.kar.nic.in * http://dte.kar.nic.in * www.admissions.org.in * www.admissionnews.com
ಸಾಮಾನ್ಯ
ವಿಜ್ಞಾನದ ಆಯ್ಕೆಯಲ್ಲಿಯೂ ಸುಮಾರು 90 ವಿವಿಧ ವಿಷಯಗಳಿದ್ದು 3 ವರ್ಷದ (6 ಸೆಮಿಸ್ಟರ್)
ಪದವಿ ಇಲ್ಲವೇ 5 ವರ್ಷಗಳ ಇಂಟಿಗ್ರೇಟೆಡ್ ಪಿ.ಜಿ. ಕೋರ್ಸ್ ಸೇರಲು ಅವಕಾಶಗಳಿವೆ.
ಹಾಗೆಯೇ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಬಿ.ಕಾಂ., ಬಿ.ಬಿ.ಎಂ., ಎಂಬಿ.ಎ.,
ಸಿ.ಎ., ಸಿ.ಎಫ್.ಎ., ಸಿ.ಡಬ್ಲ್ಯು.ಎ., ಸಿ.ಎಸ್., ಮೊದಲಾದವುಗಳಿಗೆ ಬೇಡಿಕೆ
ಹೆಚ್ಚಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಕಾಲೇಜುಗಳಿಲ್ಲವೆಂಬ ದೂರುಗಳಿವೆ. ಕಲೆಯ
ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಡೆದುಕೊಂಡು ಬಂದಿರುವ ಭಾಷೆ ಮತ್ತು ಇತರೆ ಐಚ್ಛಿಕ
ವಿಷಯಗಳ ಕಲಾ ಪದವಿ, ಸ್ನಾತಕೋತ್ತರ ಪದವಿಗಳಿಗೆ ಈಗ ಹೊಸ ವಿಷಯಗಳೂ ಸೇರಿವೆ.
ಪತ್ರಿಕೋದ್ಯಮ,
ಫೋಟೋ-ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್, ಕ್ರಿಮಿನಾಲಜಿ ಮತ್ತು ನ್ಯಾಯಿಕ
ವೈದ್ಯಶಾಸ್ತ್ರ, ಮಾಧ್ಯಮ ಅಧ್ಯಯನ, ದೂರಶಿಕ್ಷಣ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಹರಳು
ಮತ್ತು ಆಭರಣಗಳ ವಿನ್ಯಾಸ ಇತ್ಯಾದಿ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸಿವೆ.
ಕಂಪ್ಯೂಟರ್
ಎಂಬ ಮಾಯಾಲೋಕ ತಂತ್ರಾಂಶ ಮತ್ತು ಯಂತ್ರಾಂಶಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ
ಉಂಟುಮಾಡಿದ್ದು ಖಾಸಗಿಯಾಗಿಯೂ ನೂರಾರು ಕೋರ್ಸ್‌ಗಳನ್ನು ಕಲಿತು, ಕಲಿಸಿ ಉದ್ಯೋಗ
ಗಿಟ್ಟಿಸಿಕೊಳ್ಳಲು ಅವಕಾಶಗಳನ್ನು ತೆರೆದಿಟ್ಟಿದೆ. ಅನಿಮೇಶನ್ ಮತ್ತು ಗ್ರಾಫಿಕ್
ಡಿಸೈನಿಂಗ್ ಕಲಿತವರು ಕೈತುಂಬಾ ಗಳಿಸಿಕೊಳ್ಳುತ್ತಿರುವುದು ಆ ಕ್ಷೇತ್ರದ ಕಡೆಗೆ ಜನ
ಆಸಕ್ತಿ ತೋರಿಸಲು ಕಾರಣವಾಗಿದೆ.
ರಾಜ್ಯದ
ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ
ಕಲೆ-ವಾಣಿಜ್ಯ-ವಿಜ್ಞಾನ-ಲಲಿತಕಲೆ-ದಶ್ಯಕಲೆ-ಮುದ್ರಣ-ಮಾಹಿತಿ ತಂತ್ರಜ್ಞಾನ-ಅನ್ವಯಿಕ
ವಿಷಯಗಳ ಕುರಿತು ಡಿಪ್ಲೊಮಾ-ಪದವಿ-ಸ್ನಾತಕೋತ್ತರ ಪದವಿ-ಸ್ನಾತಕೋತ್ತರ ಡಿಪ್ಲೊಮಾ
-ಸಂಶೋಧನೆ-ಡಾಕ್ಟರೇಟ್ ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶ
ಕಲ್ಪಿಸಿಕೊಟ್ಟಿದ್ದು ವಿವರಗಳಿಗೆ ಆಯಾ ವಿಶ್ವವಿದ್ಯಾಲಯಗಳ ಅಂತರಜಾಲ ತಾಣಗಳನ್ನು
ಸಂಪರ್ಕಿಸಬಹುದು.
ಎಲ್ಲಾ
ರಾಷ್ಟ್ರೀಕತ ಬ್ಯಾಂಕುಗಳು ಮತ್ತು ಬಹುತೇಕ ಖಾಸಗಿ ಬ್ಯಾಂಕುಗಳು ಉನ್ನತ
ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು
ಹಮ್ಮಿಕೊಂಡಿದ್ದು ಇದರಲ್ಲಿ ಕಾಲೇಜಿಗೆ ಪಾವತಿಸಬೇಕಾಗಿರುವ ಶುಲ್ಕ, ಪಠ್ಯ ಪುಸ್ತಕ,
ಕಂಪ್ಯೂಟರ್/ಲ್ಯಾಪ್‌ಟಾಪ್ ವೆಚ್ಚ, ಹಾಸ್ಟೆಲ್ ವೆಚ್ಚ, ಹೆಚ್ಚಿನ ತರಬೇತಿಗೆ ನೀಡುವ
ವೆಚ್ಚ ಎಲ್ಲವೂ ಸೇರಿರುತ್ತದೆ.
ಪಠ್ಯ ಪೂರಕ ಕಲಿಕೆ ಕಾಲೇಜು
ಶಿಕ್ಷಣಕ್ಕೆ ಕಾಲಿಟ್ಟ ಘಳಿಗೆಯಿಂದಲೇ ಬೆಳಗ್ಗೆ/ಸಂಜೆ ಆಸಕ್ತಿಯಿಂದ ಇತರೆ ಪಠ್ಯಪೂರಕ
ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಕಂಪ್ಯೂಟರ್ ಎಂಬ ಮಾಯಾಲೋಕ ತಂತ್ರಾಂಶ ಮತ್ತು
ಯಂತ್ರಾಂಶಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದು ಖಾಸಗಿಯಾಗಿಯೂ ನೂರಾರು
ಕೋರ್ಸ್‌ಗಳನ್ನು ಕಲಿತು, ಕಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶಗಳನ್ನು
ತೆರೆದಿಟ್ಟಿದೆ. ಅನಿಮೇಶನ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿತವರು ಕೈತುಂಬಾ
ಗಳಿಸಿಕೊಳ್ಳುತ್ತಿರುವುದು ಆ ಕ್ಷೇತ್ರದ ಕಡೆಗೆ ಜನ ಆಸಕ್ತಿ ತೋರಿಸಲು ಕಾರಣವಾಗಿದೆ.
ರಾಜ್ಯದ
ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ
ಕಲೆ-ವಾಣಿಜ್ಯ-ವಿಜ್ಞಾನ-ಲಲಿತಕಲೆ-ದಶ್ಯಕಲೆ-ಮುದ್ರಣ-ಮಾಹಿತಿ ತಂತ್ರಜ್ಞಾನ-ಅನ್ವಯಿಕ
ವಿಷಯಗಳ ಕುರಿತು ಡಿಪ್ಲೊಮಾ-ಪದವಿ-ಸ್ನಾತಕೋತ್ತರ ಪದವಿ-ಸ್ನಾತಕೋತ್ತರ ಡಿಪ್ಲೊಮಾ
-ಸಂಶೋಧನೆ-ಡಾಕ್ಟರೇಟ್ ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶ
ಕಲ್ಪಿಸಿಕೊಟ್ಟಿದ್ದು ವಿವರಗಳಿಗೆ ಆಯಾಯ ವಿಶ್ವವಿದ್ಯಾಲಯಗಳ, ತಾಂತ್ರಿಕ ಸಂಸ್ಥೆಗಳ
ಅಂತರಜಾಲ ತಾಣಗಳನ್ನು ಸಂಪರ್ಕಿಸಬಹುದು.
ಇತ್ತೀಚೆಗೆ
ಓದುವುದರ ಜೊತೆಗೆ ಹೆಚ್ಚುವರಿಯಾಗಿ ಯಾವುದಾದರೂ ಕ್ರಾಷ್ ಕೋರ್ಸ್‌ಸೇರಿ ತರಬೇತಿ
ಪಡೆಯುವುದು, ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಂ ನೌಕರಿ ಮಾಡುತ್ತಾ, ಡಾಟ ಎಂಟ್ರಿಯೋ,
ಅಕೌಂಟ್ಸ್ ನೋಡಿಕೊಳ್ಳುವುದೋ, ಡಿ.ಟಿ.ಪಿ., ಫೋಟೋ ಎಡಿಟಿಂಗ್ ಮಾಡುತ್ತ ತಮ್ಮ ಪಾಕೆಟ್
ಮನಿ ತಾವೇ ಗಳಿಸಿಕೊಳ್ಳುವ ಪ್ರವತ್ತಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದೆ. ಕೆಲವರು
ಸ್ವಯಂ ಉದ್ಯೋಗ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಪದವಿ
ಗಳಿಸಿಕೊಳ್ಳುತ್ತಿದ್ದಾರೆ. ಆಸಕ್ತಿಗೂ, ಪ್ರವತ್ತಿಗೂ, ವಿದ್ಯೆಗೂ ಪರಸ್ಪರ ಸಂಬಂಧ ಇದ್ದೇ
ಇದೆ. ಅವಕಾಶವೂ ಇದೆ.
ಶೈಕ್ಷಣಿಕ ಮತ್ತು ವತ್ತಿ ಮಾರ್ಗದರ್ಶನ ಕೈಪಿಡಿಗಳು
* ದಿ ಟೈಂಸ್ - ಕರ್ನಾಟಕ ಎಜುಕೇಷನ್ ಡೈರೆಕ್ಟರಿ
* ಮಲಯಾಳ ಮನೋರಮಾ - ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್
* ಜಯಂತಿ ಘೋಷ್ - ಹಾರ್ಪರ್ ಕೋಲಿನ್ಸ್ - ಎನ್‌ಸೈಕ್ಲೊಪಿಡಿಯಾ ಆಫ್ ಕೆರೀರ್
* ಜ್ಞಾನಪೀಠ ಪ್ರಕಾಶನ - ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್
* ನವಕರ್ನಾಟಕ ಪ್ರಕಾಶನ- ಗೆದ್ದೇ ಗೆಲ್ಲುವೆವು (2ನೇ ಆವತ್ತಿ)
* ಯಶಸ್ವೀ ಆಯ್ಕೆಯ ಸೂತ್ರ - ಸ್ವಾಟ್ ಮತ್ತು ಸ್ಮಾರ್ಟ್ ಅನಾಲಿಸಿಸ್