Monday 13 September, 2010

Bedre Web Corner Article 3 - Yojana and India 2010 Year Book


ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ, ಚಿತ್ರದುರ್ಗ


ಅಧಿಕೃತ ಮಾಹಿತಿ ನೀಡುವ ಸಕರ್ಾರಿ ಮಾಸಿಕ -
ಯೋಜನಾ ಮತ್ತು
ವಾರ್ಿಕ ಪುಸ್ತಕ ಇಂಡಿಯ 2010


ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ನಿಖರವಾದ ಮಾಹಿತಿ ಮತ್ತು ಸಕರ್ಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಆಧರಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಕರ್ಾರವೇ ಒದಗಿಸುವ ಅಧಿಕೃತ ದತ್ತಾಂಶಗಳನ್ನು ಆಧರಿಸಬೇಕಾಗುತ್ತದೆ. ಅದಕ್ಕಾಗಿಯೇ ಭಾರತ ಸಕರ್ಾರದ ಪ್ರಸಾರ ಖಾತೆಯಡಿ ಪ್ರಕಟಣಾ ವಿಭಾಗವೊಂದಿದ್ದು ಸಕರ್ಾರಿ ಮಾಹಿತಿ ಭಂಡಾರ, ವಿವಿಧ ಇಲಾಖೆಗಳ ಸಚಿವಾಲಯಗಳಿಂದ ಲಭ್ಯವಾಗುವ ಅಂಕಿ-ಆಂಶಗಳನ್ನು ಸಂಗ್ರಹಿಸಿ, ಯೋಜನಾ ಮಾಸಿಕ ಮತ್ತು ಇಂಡಿಯ ವಾಷರ್ಿಕ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತದೆ. ಯೋಜನಾ ಮಾಸಿಕವು ಇಂಗ್ಲಿಷ್, ಹಿಂದಿ, ಕನ್ನಡವೂ ಸೇರಿದಂತೆ ಒಟ್ಟು 13 ಭಾಷೆಗಳಲ್ಲ್ಲಿ ಸುಲಭ ಬೆಲೆಗೆ ಲಭ್ಯವಿದೆ. ಕಳೆದ 50 ವರ್ಷಗಳಲ್ಲಿ ಪ್ರಕಟವಾಗಿರುವ ಯೋಜನಾದ ಎಲ್ಲ ಸಂಚಿಕೆಗಳೂ ಅಂತರಜಾಲದಲ್ಲಿ ಉಚಿತವಾಗಿ ಸಿಗುತ್ತಿವೆ.
ಸಮಗ್ರ ಭಾರತದ ಅಭಿವೃದ್ಧಿಯ ದಾಖಲೀಕರಣ ಎಂಬಂತಿರುವ ಇಂಡಿಯ - 2010 ವಾಷರ್ಿಕ ಪುಸ್ತಕದಲ್ಲಿರುವ ಅಂಕಿ ಅಂಶಗಳನ್ನು ಆಧರಿಸಿಯೇ ಲೋಕಸೇವಾ ಆಯೋಗಗಳ ಪರೀಕ್ಷೆಗಳಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಜನಸಂಖ್ಯೆ, ರಾಜ್ಯಗಳಿಗೆ ಸಂಬಂಧಿಸಿದ ಅಂಕಿ-ಆಂಶಗಳು, ವಿಶೇಷ ವಿಷಯಗಳು, ಯೋಜನೆಗೆ ಸಂಬಂಧಿಸಿದ ಮಾಹಿತಿ, ಶಿಕ್ಷಣ, ಸಂಶೋಧನೆ, ಆಥರ್ಿಕತೆ, ರಕ್ಷಣೆ, ಸಾಮಾಜಿಕ ಸಮಾನತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವಾಲಯಗಳಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಸಮಗ್ರ ವಿವರಗಳು, ಪ್ರಗತಿ ಎಲ್ಲವೂ ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಹಿಡಿದಿಡಲಾಗಿದೆ. ಪ್ರತಿವರ್ಷವೂ ಹೊಸ ಹೊಸ ಅಂಶಗಳನ್ನು ಹೊತ್ತು ತರುವ ವಾಷರ್ಿಕ ಪುಸ್ತಕದ ಬೆಲೆ ರೂ. 350/- ಅಂತರಜಾಲದಲ್ಲಿ ಇದರ ವಿದ್ಯುನ್ಮಾನ ಪ್ರತಿ ಉಚಿತವಾಗಿ ಲಭ್ಯವಿದ್ದು ಆಸಕ್ತರು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :

www.yojana.gov.in

www.yojana.gov.in/regional/kannada.htm

www.publicationsdivision.nic.in

www.publicationsdivision.nic.in/others/India_2010.pdf

Bedre Web Corner Article 3
Yojana and India 2010 Year Book

Bedre Web Corner Article 2 - Public Service Commissions



ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ, ಚಿತ್ರದುರ್ಗ

ಲೋಕಸೇವಾ ಆಯೋಗಗಳೆಂಬ ಉದ್ಯೋಗ ದಾತೃಗಳು


ಉದ್ಯೋಗಕ್ಕಾಗಿ ಕಾತರಿಸುತ್ತಿರುವ ಯುವಜನತೆಗೆ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಆಪದ್ಬಂಧುಗಳೆನಿಸಿವೆ. ಪ್ರತಿವರ್ಷ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ.) ನಡೆಸುವ ಐ.ಎ.ಎಸ್. / ಐ.ಪಿ.ಎಸ್./ ಐ.ಎಫ್.ಎಸ್. ಮೊದಲಾದ ಕೇಂದ್ರ ಸಕರ್ಾರದ ಉನ್ನತ ಹುದ್ದೆಗಳ ನೇಮಕಾತಿ ಪರೀಕ್ಷೆಗೆ, ಕನರ್ಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ.) ನಡೆಸುವ ಕೆ.ಎ.ಎಸ್./ಕೆ.ಇ.ಎಸ್. ಮೊದಲಾದ ರಾಜ್ಯ ಸಕರ್ಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ನೇಮಕಾತಿ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಪ್ರತಿ ವರ್ಷ ಅಜರ್ಿ ಸಲ್ಲಿಸುತ್ತಿರುವ ಅಭ್ಯಥರ್ಿಗಳ ಸಂಖ್ಯೆ ಏರುತ್ತಲೇ ಇದೆ. ಇದುವರೆಗೆ ಇನ್ನೂರು ಮುನ್ನೂರಷ್ಟು ಸಂಖ್ಯೆಯಲ್ಲಿಯೇ ಇರುತ್ತಿದ್ದ ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸುತ್ತಿದ್ದ ಕೇಂದ್ರ ಸೇವೆಯ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಸಂಖ್ಯೆ ಇಷ್ಟು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಎಂಬಂತೆ ಈ ವರ್ಷ 960 ಕ್ಕೆ ಏರಿದೆ! ಅರ್ಹ ಅಭ್ಯಥರ್ಿಗಳಿಗೆ ಅವಕಾಶದ ಹೆಬ್ಬಾಗಿಲನ್ನು ತೆರೆದಿಟ್ಟಿದೆ. ಸ್ವಲ್ಪ ಪೂರ್ವ ಸಿದ್ಧತೆ, ಪರಿಶ್ರಮ, ಆಯ್ದ ವಿಷಯಗಳ ಸಮಗ್ರ ಪರಿಚಯ ಇರುವ ಅಭ್ಯಥರ್ಿಗಳು ಖಂಡಿತಾ ಯಶಸ್ಸು ಗಳಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ.
ಬಹುತೇಕ ಅಭ್ಯಥರ್ಿಗಳಿಗೆ ಈ ಕೇಂದ್ರ ಮತ್ತು ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳಿಗೆ ಅಜರ್ಿ ಸಲ್ಲಿಸುವ ವಿಧಾನವೇ ಅರ್ಥವಾಗಿರುವುದಿಲ್ಲ. ಅದಕ್ಕೆಂದೇ ಲೋಕಸೇವಾ ಆಯೋಗಗಳು ತಮ್ಮ ವೆಬ್ಸೈಟ್ಗಳಲ್ಲಿ ಪ್ರತಿಯೊಂದು ವಿವರವನ್ನೂ ಕೂಲಂಕಷವಾಗಿ ದಾಖಲಿಸಿವೆ. ಅನುಮಾನ ಪರಿಹಾರಕ್ಕೆಂದು ಎಫ್.ಎ.ಕ್ಯೂ. (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗವನ್ನು ತೆರೆದಿದ್ದು ಅದರಲ್ಲಿ ಸಮಾಧಾನಕರ ಉತ್ತರಗಳನ್ನು ನೀಡಲಾಗಿದೆ. ಆಯೋಗಗಳು ಎಲ್ಲಾ ಪರೀಕ್ಷೆಗಳ ವಿವರಗಳು, ಸಿಲಬಸ್, ಆಕರ ಗ್ರಂಥಗಳು, ಅಜರ್ಿ ಸಲ್ಲಿಸುವ ವಿಧಾನ, ಆನ್ಲೈನ್ ಮೂಲಕವೇ ಸಲ್ಲಿಸುವಂತಿದ್ದರೆ ಅದಕ್ಕೆ ಸಂಬಂಧಿಸಿದ ಸಂಪರ್ಕ ಕೊಂಡಿಗಳು ಮತ್ತು ಪ್ರಿಂಟ್ಔಟ್ ತೆಗೆದುಕೊಳ್ಳಲು ನೆರವಾಗುವ ಕೊಂಡಿಗಳನ್ನು ನೀಡಲಾಗಿರುತ್ತದೆ. ಫಲಿತಾಂಶ, ಕಟ್-ಆಫ್-ಪರ್ಸಂಟೇಜ್, ತಾತ್ಕಾಲಿಕ ಆಯ್ಕೆಪಟ್ಟಿ, ತಕರಾರು ಸಲ್ಲಿಕೆಯ ಅವಕಾಶ, ಅಂತಿಮ ಆಯ್ಕೆಪಟ್ಟಿ ಮತ್ತು ಶಿಫಾರಸ್ಸು ಎಲ್ಲವನ್ನೂ ಈ ಆಯೋಗಗಳ ಜಾಲತಾಣಗಳಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :

www.upsc.gov.in

www.kpsc.kar.nic.in

ಕನರ್ಾಟಕಲೋಕಸೇವಾ ಆಯೋಗದ ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ : 080-30574957
ಪ್ರಾಂತೀಯ ಕಛೇರಿ, ಮೈಸೂರು : 0821-2545956
ಪ್ರಾಂತೀಯ ಕಛೇರಿ, ಬೆಳಗಾವಿ : 0831-2475345
ಪ್ರಾಂತೀಯ ಕಛೇರಿ, ಗುಲ್ಬಗರ್ಾ : 08472-2227944
ಪ್ರಾಂತೀಯ ಕಛೇರಿ, ಶಿವಮೊಗ್ಗ : 08182-228099
ಸಹಾಯವಾಣಿ : 9740977411
Bedre Web Corner Article 2 - Public Service Commissions

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...