Monday, 17 June 2013

Income Tax Returns eFiling is easy - Article in Udayavani Isiri 17 June 2013


Income Tax Returns eFiling is easy - Article in Udayavani Isiri 17 June 2013
http://www.udayavani.com/news/314030L15-%E0%B2%90%E0%B2%9F--%E0%B2%88%E0%B2%97-E%E0%B2%9D-.html

Udayavani
  • ಐಟಿ ಈಗ Eಝೀ

  • ಇ-ಫೈಲಿಂಗ್‌ ಮಾಡೋದು ಹೀಗೆ? ಇನ್‌ಕಮ್‌ಟ್ಯಾಕ್ಸ್‌ ರಿಟರ್ನ್ ನೀವೇ ಫೈಲ್‌ ಮಾಡಬಹುದು

    • Udayavani | Jun 16, 2013
      ಇ-ಫೈಲಿಂಗ್‌ ಮಾಡೋದು ಹೀಗೆ? ಇನ್‌ಕಮ್‌ಟ್ಯಾಕ್ಸ್‌ ರಿಟರ್ನ್ ನೀವೇ ಫೈಲ್‌ ಮಾಡಬಹುದು 


      ಜೂನ್‌ ಬಂದಾಗಿದೆ. ತೆರಿಗೆ ಪಾವತಿ ಮಾಡಲು ಕೊನೇವಾರ, ಕೊನೇ ದಿನದ ತನಕ ಕಾಯಬೇಡಿ. ಸರತಿಯಲ್ಲಿ ನಿಂತು ಪಾವತಿ ಮಾಡುವ ಬದಲು, ಮನೆಯಲ್ಲೇ ಕೂತು ಇ-ಫೈಲಿಂಗ್‌ ಮಾಡಿ. ಸಮಯ, ಹಣ ಎಲ್ಲವೂ ಉಳಿಯುತ್ತೆ. 



      ಜೂನ್‌ ಬಂತಲ್ಲ. ಇನ್ನು ಆದಾಯ ತೆರಿಗೆ ಕಟ್ಟಲು ಎಲ್ಲರೂ ಸಿದ್ಧರಾಗಬೇಕು. ಪ್ರತಿ ವರ್ಷ ಜೂನ್‌ ಮೊದಲ ವಾರದಿಂದಲೇ ಆದಾಯ ತೆರಿಗೆ ಪಾವತಿಯ (ಐ.ಟಿ.ರಿಟರ್ನ್ಸ್) ಫಾರಂಗಳನ್ನು ಸಲ್ಲಿಸುವ ಅವಕಾಶ ಇದೆ. ಆದರೆ ನಮ್ಮ ಪಾವತಿದಾರರು ಕೊನೆಯ ದಿನ ಜುಲೈ 31 ರ ತನಕ ಕಾಯುತ್ತಾರೆ. ಮೈಲುದ್ದ ಸರತಿ ಸಾಲಿನಲ್ಲಿ ನಿಂತು, ಆ ಐ.ಟಿ. ಕಚೇರಿಯ ಕ್ಲರ್ಕ್‌ ಬಳಿ ತಮ್ಮ ಎಲ್ಲಾ ದಾಖಲೆಗಳನ್ನು ತೋರಿಸಿ, ಸ್ವೀಕೃತಿ ಪತ್ರ ಪಡೆಯುವ ಪರಿಪಾಠ ಬೆಳೆಸಿಕೊಂಡಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಇದನ್ನು ಸರಳಗೊಳಿಸಲು ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್‌ ಎಂಬ ಅಂತರಜಾಲದ ಮೂಲಕವೇ ಪಾವತಿ ದಾಖಲೆಗಳನ್ನು ಸಲ್ಲಿಸುವ ವಿಧಾನ ಜಾರಿಗೆ ತಂದಿದೆ. 
      ಇದು ಬಹಳ ಸುಲಭ. ಒಂದರ್ಥದಲ್ಲಿ ನೀವು ಗ್ಯಾಸ್‌ ಬುಕ್‌ ಮಾಡುವಷ್ಟೇ ಸುಲಭ. ಒಂದೆರಡು ವರ್ಷ ಮಾಡಿದರೆ ನೀರು ಕುಡಿದಷ್ಟೇ ಸರಾಗ. 
      ನಿಮಗೆ ಅಗತ್ಯವಿರುವ ದಾಖಲೆ ಇಷ್ಟಿದ್ದರೆ ಸಾಕು. ನಿಮ್ಮ ಹೆಸರು, ವಿಳಾಸ, ಪ್ಯಾನ್‌ ಸಂಖ್ಯೆ, ವಾರ್ಷಿಕ ಆದಾಯ, ತೆರಿಗೆಗೆ ಒಳಪಡುವ ಆದಾಯ, ತೆರಿಗೆ ಪಾವತಿ ವಿವರ ಇಷ್ಟೇ ವಿವರಗಳು ಬೇಕಿರುವುದು. ಐದೇ ನಿಮಿಷದಲ್ಲಿ ನಿಮ್ಮ ಕೆಲಸ ಫಿನಿಷ್‌! 2013-14ನೇ ಘೋಷಿತ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ಪಾವತಿಯ (ಐ.ಟಿ.ರಿಟರ್ನ್ಸ್) ಫಾರಂಗಳನ್ನು ಸಲ್ಲಿಸುವ ಸಹಜ್‌ (ಐಟಿಆರ್‌-1) ಸುಗಮ್‌ (ಐಟಿಆರ್‌-2,3,4) ಫಾರಂಗಳು ಇದೀಗ ಆದಾಯ ತೆರಿಗೆ ಇಲಾಖೆಯ ಅಂತರಜಾಲ ತಾಣದಲ್ಲಿ ಲಭ್ಯ. ಇದನ್ನು ಸರಿಯಾಗಿ ಬಳಸಿ ಕೊಂಡರೆ ಸರತಿ ಸಾಲಿನಲ್ಲಿ ನಿಂತು ಸಮಯ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ. 

      ಫಾರಂ - 16 ಆಧರಿಸಿ ಭರ್ತಿಮಾಡಿ 
      2012-13 ನೇ ಸಾಲಿನಲ್ಲಿ ಸರ್ಕಾರಿ ನೌಕರರು ಪಡೆದಿರುವ ಸಂಬಳ, ಭತ್ಯೆ, ಬೋನಸ್‌ ಇತ್ಯಾದಿ ಒಟ್ಟು ಮೊತ್ತದಲ್ಲಿ ಪಾವತಿಸಿದ ವಿವಿಧ ರೀತಿಯ ತೆರಿಗೆಗಳು, ಉಳಿತಾಯ, ಮನೆ ಸಾಲದ ಮೇಲಿನ ಬಡ್ಡಿ, ಅಸಲು, ಇತ್ಯಾದಿ ಖರ್ಚು ಕಳೆದು, ತೆರಿಗೆ ಪಾವತಿ ಕಟ್ಟಿರುವ ವಿವರಗಳನ್ನು ದಾಖಲಿಸಿದ ಫಾರಂ - 16 ಈಗಾಗಲೇ ಎಲ್ಲರ ಬಳಿ ಇರುತ್ತದೆ. ಅಲ್ಲಿ ನಮೂದಾಗಿರುವ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಗತ ಆದಾಯ ತೆರಿಗೆ ಪಾವತಿಸಲು ITR-1 (SAHAJ) ಎಂಬ ಅರ್ಜಿ ನಮೂನೆಯಲ್ಲಿ ನೀಡಿರುವ ವಿವಿಧ ಕಾಲಂಗಳಲ್ಲಿ ವಿವರಗಳನ್ನು ಭರ್ತಿಮಾಡಿ ಕಚೇರಿಗೆ ಸಲ್ಲಿಸಬಹುದು. ಇದರ ಬದಲಿಗೆ ಅಂತರಜಾಲದ ಮೂಲಕ ಮನೆಯಿಂದಲೇ ಪಾವತಿ ಸಲ್ಲಿಸಬಹುದು. ಇತರೆ ಆದಾಯ ಮೂಲಗಳನ್ನು ಹೊಂದಿರುವವರು ತಮ್ಮ ಅಗತ್ಯಕ್ಕೆ ತಕ್ಕ ITR-3 ITR-4, ITR4S (SUGAM), ITR-5 and ITR-6  ಗಳನ್ನು ತುಂಬಿ ಸಲ್ಲಿಸಬೇಕು. 

      ITR1_2013.zip  ಫೈಲ್‌ ಡೌನ್‌ಲೋಡ್‌ ಮಾಡಿ 

      ಆದಾಯ ತೆರಿಗೆ ಇಲಾಖೆಯ ww.incometaxindia.gov.in ಅಂತರಜಾಲ ತಾಣಕ್ಕೆ ಭೇಟಿನೀಡಿ. ಅದರ ಎಡಬದಿಯಲ್ಲಿ ನೀಡಲಾಗಿರುವ ಇ-ಫೈಲಿಂಗ್‌ ಕೊಂಡಿಯನ್ನು ಕ್ಲಿಕ್‌ ಮಾಡಿ. ಅಲ್ಲಿ ಮೂಡುವ ತೆರೆಯ ಬಲಬದಿಯಲ್ಲಿ ನೋಂದಣಿಯ ಕೊಂಡಿ ಇದೆ. ಅಲ್ಲಿ ಕ್ಲಿಕ್‌ ಮಾಡಿ ನಿಮ್ಮ ಪಾನ್‌ ನಂಬರ್‌ ನಮೂದಿಸಿ, ಗುಪ್ತ ಸಂಕೇತವೊಂದನ್ನು ನೀಡಿ ನೋಂದಾಯಿಸಬೇಕು. ನಂತರ ಬಲಬದಿಯಲ್ಲಿರುವ ಡೌನ್‌ಲೋಡ್‌ ವಿಭಾಗದಲ್ಲಿನ 2012-13 ನೇ ಸಾಲಿನ ತೆರಿಗೆ ಪಾವತಿ ಸಲ್ಲಿಕೆಯ ಕೊಂಡಿಯನ್ನು ಒತ್ತಿದರೆITR1_2013.zip ಫೈಲ್‌ ಡೌನ್‌ಲೋಡ್‌ ಆಗುತ್ತದೆ. ಅದನ್ನು ತೆರೆದಾಗ ಆದಾಯ ತೆರಿಗೆ ಪಾವತಿಯ ITR-1   ಅರ್ಜಿ ಎಕ್ಸೆಲ್‌ ತಂತ್ರಾಂಶದಲ್ಲಿ ಮೂಡಿಬರುತ್ತದೆ. ಅದರಲ್ಲಿನ ಹಸಿರು ಬಣ್ಣದ ಮನೆಗಳಲ್ಲಿ ನಿಮ್ಮ ಬಳಿ ಇರುವ ಫಾರಂ - 16 ಆಧರಿಸಿ ವಿವರಗಳನ್ನು ಭರ್ತಿಮಾಡಬೇಕು. ಇಲ್ಲಿ ಪಾನ್‌ ನಂಬರ್‌ ಕಡ್ಡಾಯ. 
      ಕೆಂಪು ಗುರುತು ಇರುವ ಮನೆಗಳನ್ನು ಕಡ್ಡಾಯವಾಗಿ ತುಂಬಬೇಕು. ಕೊನೆಯಲ್ಲಿ ನೀಡಿರುವ Validateಸಂಪರ್ಕ ಕೊಂಡಿ ಒತ್ತಿ. ನಂತರ ತುಂಬಿಸಿರುವ ಎಲ್ಲ ವಿವರಗಳನ್ನು ಒಮ್ಮೆ ಪರೀಕ್ಷಿಸಿ ನೋಡಬೇಕು. ಎಲ್ಲವೂ ಸರಿಯಾಗಿದೆ ಎಂದು ಅದು ವರದಿ ನೀಡಿದ ಮೇಲೆ ಅದರ ಪಕ್ಕದಲ್ಲಿರುವ Generate ಎಂಬ ಕೊಂಡಿಯನ್ನು ಕ್ಲಿಕ್ಕಿಸಿದರೆ ಅಂತಿಮ ವರದಿ ಇರುವ ಎಕ್ಸೆಲ್‌ ತಂತ್ರಾಂಶದ XML file  ಸಿದ್ಧವಾಗುತ್ತದೆ. 
      ತೆರಿಗೆ ಪಾವತಿ ಮಾಡಿ ಸ್ವೀಕೃತಿ ಪತ್ರ ಪಡೆಯಿರಿ 
      ಅಂತರಜಾಲ ತಾಣದ ಬಲಬದಿಯಲ್ಲಿರುವ Submit Return ಎಂಬ ಗುಂಡಿ ಒತ್ತಿದಾಗ ಮೂಡಿಬರುವ ಕಿಟಕಿಯಲ್ಲಿ ನಿಮ್ಮ ನೋಂದಾವಣೆ (ಪಾನ್‌) ಸಂಖ್ಯೆ ಮತ್ತು ಗುಪ್ತ ಸಂಕೇತ ಬಳಸಿ ಪ್ರವೇಶ ಮಾಡಿದರೆ ಪಾವತಿ ಸಲ್ಲಿಕೆಯ ಕಿಟಕಿ ತೆರೆಯುತ್ತದೆ. ಅಲ್ಲಿ ನಿಮ್ಮ XML file ಅನ್ನು ಸೇರ್ಪಡೆಗೊಳಿಸಿ ಅಪ್‌ಲೋಡ್‌ ಗುಂಡಿ ಒತ್ತಿದರೆ ಒಂದೆರಡು ನಿಮಿಷಗಳ ಒಳಗಾಗಿ ನಿಮ್ಮ ಪಾವತಿ ಸಲ್ಲಿಸಲ್ಪಟ್ಟು ನಿಮ್ಮ ಇ-ಮೇಲ್‌ ವಿಳಾಸಕ್ಕೆ ಒಂದು ಪತ್ರ ಬರುತ್ತದೆ. ಅದರಲ್ಲಿ ಸ್ವೀಕೃತಿಯ ITR-V Form  ಫಾರಂ ಇದ್ದು ಅದನ್ನು ಅಡೋಬ್‌ ಆಕ್ರೋಬಾಟ್‌ ರೀಡರ್‌ನಲ್ಲಿ ತೆಗೆದು ಓದಲು ನಿಮ್ಮ ಪಾನ್‌ ನಂಬರ್‌ ಮತ್ತು ಜನ್ಮದಿನಾಂಕವನ್ನು ಸಂಕೇತವಾಗಿ ಸಣ್ಣ ಅಕ್ಷರಗಳಲ್ಲಿ ನಮೂದಿಸಬೇಕು. ನಂತರ ಅದರ ಮುದ್ರಿತ ಪ್ರತಿ ತೆಗೆದು ನಿಮ್ಮ ತೆರಿಗೆ ಪಾವತಿಯ ಕಡತಕ್ಕೆ ಸೇರಿಸಿಕೊಳ್ಳಬಹುದು. 
      ಹೀಗೆ ತೆಗೆದ ಮುದ್ರಿತ ITR-V Form ಫಾರಂನ ಒಂದು ಪ್ರತಿಯನ್ನು ಇ-ಫೈಲಿಂಗ್‌ ಮಾಡಿದ ಒಂದು ತಿಂಗಳೊಳಗಾಗಿ Income Tax Department – CPC, Post Bag No - 1, Electronic City Post Office, Bangalore - 560 100  ಈ ವಿಳಾಸಕ್ಕೆ ಸಾಧಾರಣ ಅಂಚೆಯ ಮೂಲಕ ಕಳಿಸಿಕೊಡಬೇಕು. ಇಲ್ಲಿಗೆ ನಿಮ್ಮ ಇ-ಫೈಲಿಂಗ್‌ ಯಶಸ್ವಿಯಾಗುತ್ತದೆ. 
      ಹೆಚ್ಚಿನ ಮಾಹಿತಿಗಾಗಿ ಈ ತಾಣಗಳಿಗೆ ಭೇಟಿ ನೀಡಿ : 
      www.incometaxindia.gov.in/home.asp
      https://incometaxindiaefiling.gov.in/portal/indexp
      https://incometaxindiaefiling.gov.in/portal/individual_huf.do

      ಎಷ್ಟೊಂದು ಸರಳ, ಸುಲಭ ವಿಧಾನ! ನಾನಂತೂ ಫೈಲ್‌ಮಾಡಿದ್ದೇನೆ. ಆನ್‌ಲೈನ್‌ ಸ್ವೀಕೃತಿ ಪತ್ರವೂ ಬಂದಿದೆ. ನೀವೂ ಪ್ರಯತ್ನಿಸಿ. ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ. 

      ಬೇದ್ರೆ ಮಂಜುನಾಥ

Monday, 10 June 2013

English from 1st Standard Ready Steady Go - Article in Prajavani Shikshana 10 June 2013


 
English from 1st Standard Ready Steady Go - Article in Prajavani Shikshana 10 June 2013
http://www.prajavani.net/article/%E0%B2%87%E0%B2%82%E0%B2%97%E0%B3%8D%E0%B2%B2%E0%B2%BF%E0%B2%B7%E0%B3%8D-%E0%B2%95%E0%B2%B2%E0%B2%BF%E0%B2%95%E0%B3%86-%E0%B2%B0%E0%B3%86%E0%B2%A1%E0%B2%BF-%E0%B2%B8%E0%B3%8D%E0%B2%9F%E0%B2%A1%E0%B2%BF-%E0%B2%97%E0%B3%8B
ಪ್ರಜಾವಾಣಿ

ಇಂಗ್ಲಿಷ್ ಕಲಿಕೆ: ರೆಡಿ ಸ್ಟಡಿ ಗೋ...!

ಒಂದನೇ ತರಗತಿಯಿಂದಲೇ ಮಕ್ಕಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಿಕೊಡುವ ವ್ಯವಸ್ಥೆಯಾಗಬೇಕು ಎಂಬುದು ರಾಜ್ಯದ ನೂತನ ಮುಖ್ಯಮಂತ್ರಿ ಅವರ ಆಶಯ. ಇಂಗ್ಲಿಷ್ ಹೇಳಿಕೊಡಲು ಪ್ರಾಥಮಿಕ ಶಿಕ್ಷಕರಿಗೆ ದೂರಸಂಪರ್ಕದ ಮೂಲಕ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಡಯಟ್‌ಗಳ ಮೂಲಕ ನೇರ ಸಂವಾದ ತರಗತಿಗಳಲ್ಲಿ ಭಾಷಾ ಬೋಧನಾ ತರಬೇತಿ ನೀಡಿ, ಹೊಸ ಸವಾಲನ್ನು ಎದುರಿಸಲು ಶಿಕ್ಷಣ ಇಲಾಖೆ ಅವರನ್ನು ಸಿದ್ಧಗೊಳಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಈ ಪ್ರಕ್ರಿಯೆ ನಡೆಯುತ್ತಲೇ ಇದೆ. ಪರಿಣಾಮಕಾರಿ ಕಲಿಕೆಯತ್ತ ಹೆಜ್ಜೆ ಇಟ್ಟಾಗಿದೆ.
ಮೌಖಿಕ ಪದ್ಧತಿ ಬಳಸಿ ಕಥೆಗಳು, ಶಿಶುಗೀತೆಗಳು, ಭಾಷಾ ಆಟಗಳು, ಸಂಭಾಷಣಾ ಪಾಠ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಇಂಗ್ಲಿಷ್ ಕಲಿಸಿಕೊಡಲು ಚಿತ್ರಮಯ ಪಠ್ಯಪುಸ್ತಕ  “ ಆಟಟ” ಕೊಡಲಾಗಿದೆ. ಇವೆಲ್ಲವೂ ಪ್ರಥಮ ಭಾಷೆ ಇಂಗ್ಲಿಷ್ ಕಲಿಸುವವರಿಗೆ ನೆರವಾಗುವಂತಿದ್ದು, ನಾವು ಕಲಿಸುತ್ತಿರುವುದು ದ್ವಿತೀಯ ಭಾಷೆ ಇಂಗ್ಲಿಷ್ ಎಂಬುದನ್ನೇ ಮರೆತಂತಿದೆ! ಇಂಗ್ಲಿಷ್ ಭಾಷೆಯೂ ನಮ್ಮ ಮಾತೃಭಾಷೆಯಷ್ಟೇ ಸುಲಭವಾದ, ಸರಳವಾದ ಮತ್ತು ಬೇಗನೇ ಹಿಡಿತಕ್ಕೆ ಸಿಗುವ ಭಾಷೆ ಎಂದುಕೊಂಡಾಗ ಅದು ಅಂಗೈ ನೆಲ್ಲಿಯಾಗುತ್ತದೆ.
ಅಮೆರಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿಯು, ಯಾವ ಮಗು ತನ್ನ ಮಾತೃಭಾಷೆಯ ಮೂಲಕ ಇಂಗ್ಲಿಷ್ ಕಲಿಯುತ್ತದೋ ಅದು  ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಗಳಿಸಿಕೊಳ್ಳಲು ಸಫಲವಾಗುತ್ತದೆ ಎಂದು ತಿಳಿಸಿದೆ. ಹೊರದೇಶಗಳಿಂದ ಹೋಗಿ ನೆಲೆಸಿರುವ ಅಲ್ಲಿನ ತಂದೆ ತಾಯಂದಿರು ಮತ್ತು ಗುರುಗಳು ಆ ಮಗುವಿನ ಮಾತೃಭಾಷೆಯ (ಹಿಂದಿ, ಗುಜರಾತಿ, ತಮಿಳು ಇಲ್ಲವೇ ಆಫ್ರಿಕನ್, ಸ್ಪ್ಯಾನಿಷ್, ಫ್ರೆಂಚ್ ಇತ್ಯಾದಿ) ಮೂಲಕವೇ ಇಂಗ್ಲಿಷ್ ಭಾಷೆಯನ್ನು ಕಲಿಸುವ ಹೊಸ ಪದ್ಧತಿ ಅಳವಡಿಸಿ ಕೊಂಡಿದ್ದಾರಂತೆ. ಹೀಗಿರುವಾಗ, ಕನ್ನಡದ ಮೂಲಕ ಇಂಗ್ಲಿಷ್ ಕಲಿಯಲು ಮತ್ತು ಕಲಿಸಲು ನಮ್ಮಲ್ಲಿ ಹಲವರು ಯಾಕೆ ಮುಜುಗರ ಪಟ್ಟುಕೊಳ್ಳುವರೋ ತಿಳಿಯದು!
ಗರ್ಭಾವಸ್ಥೆಯಿಂದಲೇ ಇಂಗ್ಲಿಷ್!
ಮಗುವೊಂದು ಧರೆಗಿಳಿಯುವ ಮುನ್ನವೇ ಇಂಗ್ಲಿಷ್ ಅದರ ಕಿವಿಯ ಮೇಲೆ ಬಿದ್ದಿರುತ್ತದಂತೆ. ಪ್ರೆಗ್ನೆನ್ಸಿ ಟೆಸ್ಟ್, ಪಾಸಿಟಿವ್, ಕನ್‌ಸೀವ್ಡ್ ಎಂಬಲ್ಲಿಂದ ಆರಂಭ ಆಗುವ ಪದಗಳು ಮುಂದೆ ಮೆಡಿಕಲ್ ಚೆಕ್‌ಅಪ್, ಸ್ಕ್ಯಾನಿಂಗ್, ಟಿ.ಟಿ. ಇಂಜೆಕ್ಷನ್, ಐರನ್ ಟ್ಯಾಬ್‌ಲೆಟ್ಸ್, ಟಾನಿಕ್, ಹೆಲ್ತಿ ಫುಡ್, ಪೀರಿಯಾಡಿಕಲ್ ಚೆಕ್‌ಅಪ್ ಇತ್ಯಾದಿ ರೂಪದಲ್ಲಿ ಭ್ರೂಣಕ್ಕೆ ಕೇಳಿಸುತ್ತಾ ಹೋಗುತ್ತವೆ!
 
ಅಜ್ಜಿ ಇಂಗ್ಲಿಷ್!
ನಮ್ಮ ಹಳ್ಳಿಯಲ್ಲಿರುವ ಅಜ್ಜಿಗೆ ಕೂಡ ಇಂಗ್ಲಿಷ್ ಎಂದರೆ ಪಂಚಪ್ರಾಣ. `ಬಸ್ ಬಂತಾ ನೋಡ್ಲಾ ಮಗಾ. ಲೇಟ್ ಆಯ್ತದೆ ಇಸ್ಕೂಲ್‌ಗೆ.  ಬಸ್ ಮಿಸ್ ಮಾಡ್ಕೋಬ್ಯಾಡಪ್ಪಾ.
ಬೈಕ್ ಮ್ಯೋಗೆ ನಿನ್ನ ಕರ‌್ಕೊಂಡ್ ಹೋಗಾಕೆ ನಿಮ್ಮಪ್ಪ ಸಿಟ್ ಮಾಡ್ಕತಾನೆ. ಲೇಟಾಗಿ ಓದ್ರೆ ಫೈನ್ ಬೇರೆ ಆಕ್ತಾರಂತೆ, ಹೌದಾ? ಹೋಂವರ್ಕ್ ಎಲ್ಲ ಮಾಡಿದ್ಯಾ ಕಂದಾ. ಗುಡ್ ಗುಡ್. ಫಸ್ಟ್ ಬರ‌್ಬೇಕು ಇಸ್ಕೂಲ್‌ಗೆ.
ಗೋ, ಗೋ...,  ಅಂತ ಮೊಮ್ಮಗ ಕಲಿಸಿದ ಹರಕುಮುರುಕು ಇಂಗ್ಲಿಷ್‌ನಲ್ಲಿ ಹೇಳುತ್ತೆ ಗೊತ್ತಾ?
ಅಗತ್ಯ ಮತ್ತು ಅವಶ್ಯಕತೆಗೆ ತಕ್ಕಂತೆ ಇಂಗ್ಲಿಷ್ ಬೆಳೆಯುತ್ತಲೇ ಇದೆ. ವ್ಯವಹಾರಕ್ಕೆ ಬ್ಯುಸಿನೆಸ್ ಇಂಗ್ಲಿಷ್, ಎಂಜಿನಿಯರ್‌ಗಳಿಗೆ ಟೆಕ್ನಿಕಲ್ ಇಂಗ್ಲಿಷ್, ಟೀಚರ್‌ಗಳಿಗೆ ಇಂಗ್ಲಿಷ್ ಲ್ಯಾಂಗ್ವೇಜ್ ಟೀಚಿಂಗ್ (ಇ.ಎಲ್.ಟಿ.), ವೈದ್ಯರಿಗೆ ಮೆಡಿಕಲ್ ಇಂಗ್ಲಿಷ್,  ಸ್ವಾಮೀಜಿಗಳಿಗೆ ಸ್ಪಿರಿಚುಯಲ್ ಇಂಗ್ಲಿಷ್... ಹೀಗೆ ಹೊಸ ಬಗೆಯ ಇಂಗ್ಲಿಷ್ ಬಳಕೆಗೆ ಬಂದಿದೆ.
ಗಮನಿಸಿ
ಇಂಗ್ಲಿಷ್ ಕಲಿಯಲು ಮಾಹಿತಿಗಾಗಿ ಕೆಳಗಿನ ಕೆಲವು ವೆಬ್ ವಿಳಾಸಗಳನ್ನು ನೋಡಬಹುದು:
ಮಗು ಹುಟ್ಟುವ ಸಂದರ್ಭದಲ್ಲಿ ಆಪರೇಷನ್ ಥಿಯೇಟರ್, ಬೇಬಿ, ಕ್ಲೀನಿಂಗ್, ಬ್ರೆಸ್ಟ್ ಫೀಡಿಂಗ್, ರ‌್ಯಾಪಿಂಗ್, ಇನ್‌ಕ್ಯುಬೇಟರ್, ವೆಯ್ಟ, ಹೈಟ್ ಎಂಬ ಪದಗಳೂ ಅದರ ಕಿವಿಗೆ ಬಿದ್ದಿರಬಹುದು. ಹೀಗೆ ತೊಟ್ಟಿಲಿನಿಂದ ಆರಂಭವಾಗಿ ಸಮಾಧಿಯವರೆಗೆ (ಫ್ರಂ ಕ್ರೆಡಲ್ ಟು ಗ್ರೇವ್) ನಮ್ಮಂದಿಗೆ ಇಂಗ್ಲಿಷ್ ಪ್ರಯಾಣ ಮಾಡುತ್ತಲೇ ಇರುತ್ತದೆ.
ಮಕ್ಕಳನ್ನೇ ತೆಗೆದುಕೊಳ್ಳಿ. ಅವರನ್ನು ಬೇಬಿ ಅಂತಲೇ ಕರೆಯುವುದು ರೂಢಿ. ಅವರು ಶಾಲೆಗೆ ಸಿದ್ಧರಾಗಬೇಕು ಎಂದರೆ ಯೂನಿಫಾರಂ, ಸಾಕ್ಸ್, ಷೂಸ್, ಟೈ, ಬೆಲ್ಟ್, ಶರ್ಟ್, ಹಾಫ್ ಪ್ಯಾಂಟ್, ಕರ್ಚೀಫ್, ಲಂಚ್ ಬ್ಯಾಗ್, ಸ್ಕೂಲ್ ಬ್ಯಾಗ್, ಜಾಮಿಟ್ರಿ ಬಾಕ್ಸ್, ಲಂಚ್ ಬಾಕ್ಸ್, ಪೆನ್ಸಿಲ್, ರಬ್ಬರ್, ಪೆನ್, ಪೇಪರ್, ಬುಕ್, ನೋಟ್‌ಬುಕ್, ಬೆಂಚ್, ಡೆಸ್ಕ್, ಬೋರ್ಡ್, ಡಸ್ಟರ್... ಛೇ ಬಿಡಿ ಅದೊಂದು ವಿಸ್ಮಯ ಲೋಕ!
ಭಾಷಾ ಕೌಶಲ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು.   ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಅಥವಾ ಇನ್ನಾವುದೇ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಮಾತೃಭಾಷೆಯ ವಿಷಯದಲ್ಲಿ ನಮಗೇ ಗೊತ್ತಿಲ್ಲದಂತೆ ನಮ್ಮ ತೊಟ್ಟಿಲಿನಿಂದಲೇ ಆರಂಭವಾಗಿರುತ್ತದೆ. ಆದರೆ ಮತ್ತೊಂದು ಭಾಷೆಯನ್ನು ಪ್ರಯತ್ನಪೂರ್ವಕವಾಗಿ ಕಲಿಯುವಾಗ ಇವೆಲ್ಲವೂ ಹೊಸದೆನಿಸುತ್ತವೆ.  ಬಹುಮಾಧ್ಯಮ ವೈಜ್ಞಾನಿಕ ವಿಧಾನದಿಂದ ಭಾಷಾ ಕಲಿಕೆ ಅತ್ಯಂತ ಸುಲಭ ಹಾಗೂ ಮನೋರಂಜಕ ಆಗಿರುತ್ತದೆ.
ಪದಸಂಪತ್ತು- ದೇಹ ಭಾಷೆ- ಉಚ್ಚಾರ
ನಾವು ಬಳಸುವ ಭಾಷೆಯಲ್ಲಿ ಕೇವಲ ಶೇ 7ರಷ್ಟು ಭಾಗ ಮಾತ್ರ ಪದಗಳಿರುತ್ತವೆ. ಉಳಿದ ಶೇ 55ರಷ್ಟು ಭಾಗ ನಮ್ಮ ದೇಹ ಭಾಷೆ (ಹಾವಭಾವ- ಭಂಗಿ- ಮುಗುಳ್ನಗು- ಕೈ- ಬಾಯಿ- ಮುಖದ ಚಲನೆ- ಉಡುಪು- ಕೂದಲಿನ ಒಪ್ಪ- ಅಚ್ಚುಕಟ್ಟುತನ ಇತ್ಯಾದಿ) ಮತ್ತು ಶೇ 38ರಷ್ಟು ಭಾಗ ಧ್ವನಿಯ ಏರಿಳಿತ, ಮೃದುತ್ವ, ನಯ-ವಿನಯ, ಗಾಂಭೀರ್ಯ, ಉಚ್ಚಾರಣಾ ಶೈಲಿ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ.  ಹಾಗೆಯೇ ನಮ್ಮ ಸಮಗ್ರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತೆ ಭಾಷೆ ಕೆಲಸ ಮಾಡುತ್ತದೆ. ದೇಹ ಭಾಷೆಯ ಬಗ್ಗೆ ನಾವು ನಿಗಾ ವಹಿಸುವುದು ತೀರಾ ಕಡಿಮೆ. ಹಾಗಾಗಿ ಇಂಗ್ಲಿಷ್ ಕಲಿಯುವ ಮತ್ತು ಕಲಿಸುವ ಸಂದರ್ಭದಲ್ಲಿ ಇದಕ್ಕೂ ಒತ್ತು ನೀಡಬೇಕಾಗಿದೆ.
ದೃಶ್ಯ- ಶ್ರವಣ
ಭಾಷಾ ಕಲಿಕೆಯ ಮೂಲ ಕೌಶಲ ಆಲಿಸುವುದು. ರೇಡಿಯೊ ಮತ್ತು ಟಿ.ವಿ.ಗಳಲ್ಲಿ ಬಿತ್ತರವಾಗುವ ನೂರಾರು ಕಾರ್ಯಕ್ರಮಗಳು ನಮಗೆ ನಿರಂತರ ಆಲಿಸುವ ಮತ್ತು ನೋಡಿ ತಿಳಿಯುವ ಅವಕಾಶ ಕಲ್ಪಿಸಿಕೊಡುತ್ತಲೇ ಇರುತ್ತವೆ. ಕೇಬಲ್ ಟಿ.ವಿ. ಇಲ್ಲವೇ ಡಿ.ಟಿ.ಎಚ್. ಮೂಲಕವೂ ನಮಗೆ ಬೇಕಾದ ಕಾರ್ಯಕ್ರಮಗಳನ್ನು ಆಯ್ದು ಕೇಳುವ, ಕೇಳುತ್ತಲೇ ಅಲ್ಲಿ ಬಳಸಲಾಗುವ ಆಂಗಿಕ ಭಾಷೆ (ಬಾಡಿ ಲ್ಯಾಂಗ್ವೇಜ್) ನೋಡುವ ಅವಕಾಶ ಇದೆ. ಮಾತನಾಡುವುದರ ಜೊತೆಗೆ ನಾವು ಬಳಸುವ ಬಾಡಿ ಲಾಂಗ್ವೇಜ್ ಕೂಡ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ. ಹೀಗಾಗಿ ದೃಶ್ಯ ಮಾಧ್ಯಮ ನಮಗೆ ಈ ವಿಷಯದಲ್ಲಿ ತರಬೇತಿ ನೀಡುವ ಆಪ್ತಮಿತ್ರ. ಇಂಗ್ಲಿಷ್ ಕಲಿಕೆಗಂತೂ ಇದು ಅತ್ಯುತ್ತಮ ಸಂಪನ್ಮೂಲ. 
ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಯನ್ನು ಸೆರೆಹಿಡಿದು, ಮಾದರಿ ಸಂಭಾಷಣೆಯ ತುಣುಕುಗಳನ್ನು ಧ್ವನಿಮುದ್ರಿಸಿ ಕೇಳಿ ಕಲಿಯಲು, ಮಾದರಿಗಳನ್ನು ಅನುಸರಿಸಿ ಉಚ್ಚಾರ ಮಾಡಿ, ಸತತ ಅಭ್ಯಾಸದಿಂದ ಯಶಸ್ಸು ಗಳಿಸಲು ಸಾಧ್ಯ. ಬೆಂಗಳೂರು, ಹೈದರಾಬಾದ್, ಮೈಸೂರು, ಮುಂಬೈಗಳಲ್ಲಿನ ಭಾಷಾ ಪ್ರಯೋಗ ಶಾಲೆಗಳಲ್ಲಿ, ಜೊತೆಗೆ ಬಿ.ಬಿ.ಸಿ.ಯಂತಹ ಖಾಸಗಿ ಪ್ರಕಾಶಕರಲ್ಲಿ ಭಾಷಾ ಕಲಿಕೆಗಾಗಿಯೇ ಹತ್ತಾರು ಕ್ಯಾಸೆಟ್‌ಗಳು, ಸಿ.ಡಿ.ಗಳು ಸಿಗುತ್ತವೆ. ನಿತ್ಯ ಬಳಕೆಯ ಮೊಬೈಲ್ ಮತ್ತು ಟ್ಯಾಬ್‌ಲೆಟ್‌ಗಳಲ್ಲಿ ಇರುವ ರೆಕಾರ್ಡಿಂಗ್ ಸೌಲಭ್ಯ, `ಟಾಕಿಂಗ್ ಟಾಮ್'ನಂತಹ ಅಪ್ಲಿಕೇಶನ್‌ಗಳ ಸಹಾಯದಿಂದ ಮಾತನಾಡಿಸಿ, ಪುನರಾವರ್ತಿಸಿ ಕೇಳುವ ಸೌಲಭ್ಯ ಬಳಸಿಕೊಳ್ಳಬಹುದು.
ಕಂಪ್ಯೂಟರ್ ಮತ್ತು ಇಂಟರ್‌ನೆಟ್: ಶಿಕ್ಷಣ ಕ್ಷೇತ್ರದ ಭವಿಷ್ಯ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಎಂಬ ಮಾಯಾಲೋಕದ ಜಾಲದಲ್ಲಿ ಸಿಲುಕಿದೆ. ಒಮ್ಮೆ ನಾವು ಇದರ ಇ- ಪ್ರಪಂಚದ ಒಳಹೊಕ್ಕರೆ ಕಲಿಕೆಗೆ ಅಸಾಧ್ಯ ಎಂಬ ಮಾತೇ ಹೊರಡದು. ಮನೆ ಮನೆಯಲ್ಲೂ, ಶಾಲೆ ಶಾಲೆಯಲ್ಲೂ ಬಹುಮಾಧ್ಯಮ ಕಂಪ್ಯೂಟರ್ ಸಾಮ್ರೋಜ್ಯ ವಿಸ್ತರಿಸುತ್ತಿದೆ. ಅದನ್ನು ನಮ್ಮ ಭಾಷಾ ಕಲಿಕೆಗೆ, ಹಾಗೆಯೇ ಕಷ್ಟ ಎಂದು ಭಾವಿಸಲಾಗುವ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ ಕಲಿಕೆಗೆ ಕೂಡ ಬಳಸಿಕೊಳ್ಳಬಹುದು.
ಆಲಿಸುವಿಕೆ ಮತ್ತು ಮಾತನಾಡುವಿಕೆಗೆ ಸಂಬಂಧಿಸಿದಂತೆ ಹತ್ತಾರು ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು ಲಭ್ಯವಿದ್ದು ಅವುಗಳ ಸಹಾಯದಿಂದ  ಮಾಹಿತಿ, ಶಿಕ್ಷಣ, ಮನರಂಜನೆಯನ್ನು ಕುಳಿತಲ್ಲೇ ಸೃಷ್ಟಿಸಬಹುದು, ಅನುಭವಿಸಬಹುದು.AUDACITY, WAVELAB, WAVELABLITE, COOLEDIT,  SOUNDFORGE ಮೊದಲಾದ ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು ಲಭ್ಯವಿದ್ದು, ಕೆಲವು ಉಚಿತವಾಗಿಯೂ ಸಿಗುತ್ತವೆ. ವಿಂಡೋಸ್‌ನ ಇತ್ತೀಚಿನ ಅವತರಣಿಕೆಯ ಜೊತೆಯಲ್ಲಿ ಧ್ವನಿಮುದ್ರಣದ ಸೌಲಭ್ಯವೂ ಇದೆ. ಇತರ ಭಾಷೆಯ ಪದಗಳ ಉಚ್ಚಾರಕ್ಕೆ ಸಂಬಂಧಿಸಿದಂತೆ ಸಿ.ಡಿ. ಪದಕೋಶಗಳಲ್ಲೇ ಉಚ್ಚಾರಣೆಯನ್ನೂ ನೀಡಲಾಗಿದೆ. ನಮಗೆ ಸೂಕ್ತ ಕಂಡ ಉಚ್ಚಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ.
ಇತ್ತೀಚೆಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಕನ್ನಡ- ಇಂಗ್ಲಿಷ್- ಹಿಂದಿ ಮೂರೂ ಭಾಷೆಗಳ ಮೂಲಕ ಒಂದೇ ಕಡೆ ಕಲಿಯುವಂತೆ ಹಲವಾರು ಸಿ.ಡಿ.ಗಳನ್ನು ರೂಪಿಸಿ ಕರ್ನಾಟಕದಾದ್ಯಂತ ನೂರಾರು ಶಾಲೆಗಳಿಗೆ ಹಂಚಿವೆ. ಅಂತರ್ಜಾಲದಲ್ಲಿ ಸಿಗುವ ಸಾಫ್ಟ್‌ವೇರ್ ಮತ್ತು ಮಾಹಿತಿಯ ಮಹಾಪೂರವನ್ನೇ ಭಾಷಾ ಕಲಿಕೆಗೂ ಬಳಸಿಕೊಳ್ಳಲು ಸಾಧ್ಯವಿದೆ. ಇಂಗ್ಲಿಷ್ ಕಲಿಕೆಗಂತೂ ಲಕ್ಷಗಟ್ಟಲೆ ವೆಬ್‌ಸೈಟ್‌ಗಳು ಸಿಗುತ್ತವೆ.
ಪಾಠ ಬೋಧನೆಯ ವಿಧಾನ, ಮಾದರಿ ಪಾಠಗಳು, ಧ್ವನಿಮುದ್ರಿತ ರೂಪದ ಪಾಠಗಳು, ವಿಡಿಯೊ ಪಾಠಗಳು, ಸಂವಾದದ ಪಾಠಗಳು ಹೀಗೆ ಏನೆಲ್ಲಾ ಇಲ್ಲಿ ಲಭ್ಯ. ಭಾಷೆಯ ಕಲಿಕೆ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ವಿಕಸಿತ ವ್ಯಕ್ತಿತ್ವದ ದ್ಯೋತಕ ಪರಿಶುದ್ಧ ಭಾಷಾ ಬಳಕೆ. ಇಂತಹ ಭಾಷೆಯೆಂಬ ಆಯುಧವನ್ನು ನಮ್ಮ ಬತ್ತಳಿಕೆಯಲ್ಲಿ ಇರಿಸಿಕೊಳ್ಳೋಣ. 
ಇಂಗ್ಲಿಷ್ ಭಾಷೆಯನ್ನು ಕಲಿಸಲು ಇರುವ ಹದಿನೈದಕ್ಕೂ ಹೆಚ್ಚು ವಿಧಾನಗಳಲ್ಲಿ ಆಧುನಿಕ ಬಹುಮಾಧ್ಯಮ ಬೋಧನೋಪಕರಣಗಳನ್ನು ಬಳಸಿಕೊಂಡು ಇಂಗ್ಲಿಷ್ ಕಲಿಸುವ ಹೊಸ ವಿಧಾನವೇ Multi-Media Approach - The New Way.
(ವಿವರಗಳಿಗೆ ನೋಡಿ  Multimedia Language Laboratory to learn Spoken and Written English -  Published by Navakarnataka Publications. Rs.20/- Ph. 08022203580).

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...