Sunday, 30 March 2014
Wednesday, 26 March 2014
Monday, 17 March 2014
Students guide to opportunities after SSLC and PUC compiled by Bedre Manjunath - Shikshana Varthe Monthly - March 2014
http://issuu.com/educationhassan
Career Guidance - What after SSLC and PUC - Shikshana Varthe Monthly - March 2014 eBook Sample, Students guide to opportunities after SSLC and PUC compiled by Bedre Manjunath, Bedre Foundation, Hassan.
Friday, 14 March 2014
UPSC Civils Mains 2013 Results Declared - Vijaya Next VK Career 20 March 2014
IAS Mains 2013 Results Declared - Vijaya Next VK Career 20 March 2014
UPSC Civils Mains 2013 Results Declared
http://vijayanextepaper.com/epaperimages/1432014/1432014-md-hr-22/192822751.JPG
Monday, 24 February 2014
Friday, 21 February 2014
Monday, 10 February 2014
Income Tax TDS Information - Article in Udayavani Isiri 10 Feb 2014
Income Tax TDS Information - Article in Udayavani Isiri 10 Feb 2014
http://epaper.udayavani.com/Display.aspx?Pg=H&Edn=BN&DispDate=2/10/2014
ಟಿಡಿಎಸ್ ಫ್ಯಾಕ್ಟ್ಸ್
- ಕರ ತೆರುವ ದಿನ ಸಮೀಪಿಸುವಾಗ ತಿಳಿದುಕೊಳ್ಳಬೇಕಾದ ವಿಷಯಗಳೇನು?
- Udayavani | Feb 08, 2014ಕರ ತೆರುವ ದಿನ ಸಮೀಪಿಸುವಾಗ ತಿಳಿದುಕೊಳ್ಳಬೇಕಾದ ವಿಷಯಗಳೇನು?
ಮತ್ತೆ ಫ್ರೆಬ್ರವರಿ ತಿಂಗಳು ಬರುತ್ತಿದೆ. ಟ್ಯಾಕ್ಸು ನೆನಪಾಗುತ್ತಿದೆ. ಟಿಡಿಎಸ್ ಕಟ್ ಆಗುತ್ತಿದೆ. ಮುಂದೇನು ಅನ್ನೋ ಚಿಂತೆ ಕಾಡುತ್ತಿದೆ. ಹಾಗಾದರೆ ಏನು ಮಾಡಬೇಕು. ಇಲ್ಲಿದೆ ಮಾಹಿತಿ.
ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಆದಾಯ ತೆರಿಗೆಯ ಅಂತಿಮ ಲೆಕ್ಕಾಚಾರದಲ್ಲಿ ತಲೆಬಿಸಿ ಮಾಡಿಕೊಳ್ಳುವವರೇ ಬಹಳಷ್ಟು ಜನ. ಟಿ.ಡಿ.ಎಸ್. ಅಥವಾ ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್ ಸೌಲಭ್ಯದಿಂದಾಗಿ ಪ್ರತಿ ತಿಂಗಳೂ ಸಂಬಳಪಟ್ಟಿಯಲ್ಲಿ ಅಷ್ಟಿಷ್ಟು ಕಟೌತಿ ಮಾಡಿಸುತ್ತಾ ಬಂದಿದ್ದರೂ ಫೆಬ್ರವರಿ ವೇಳೆಗೆ ಅದು ಅಂತಿಮ ಸುತ್ತು ತಲುಪಿ, ಅಳಿದುಳಿದ ಲೆಕ್ಕಾಚಾರವನ್ನು ಸರಿದೂಗಿಸಬೇಕು. ಆರ್ಥಿಕ ವರ್ಷದ ಮೊದಲಿಂದಲೇ ತೆರಿಗೆ ಪಾವತಿಯ ಕುರಿತು ಆಲೋಚಿಸಿ, ಪ್ಲಾನಿಂಗ್ ಮಾಡಿದಲ್ಲಿ ಕೊನೆಯ ತಿಂಗಳ ಸಂಬಳ ನಿಯಮಿತವಾಗಿ ತೆಗೆದುಕೊಳ್ಳಲು ಸಾಧ್ಯ. ಮೊದಲು ಪ್ಲಾನ್ ಮಾಡದೇ ವರ್ಷದ ಕೊನೆಯಲ್ಲಿ ಪಾವತಿ ಮಾಡುವವರು ಕೊನೆಯ ಹಂತದಲ್ಲಿ ಸಂಬಳ ಕೈಗೆ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಇದನ್ನು ತಪ್ಪಿಸಿ, ಆದಾಯ ತೆರಿಗೆಯನ್ನು ನಿಯಮಿತವಾಗಿ ಪಾವತಿ ಮಾಡುವವರಿಗೆಂದೇ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರ ಮಾಹಿತಿ ಮಾಲೆ ಎಂಬ ಹೆಸರಿನಲ್ಲಿ ಹಲವು ಪುಸ್ತಕಗಳನ್ನು ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ನೌಕರರು ಯಾವ ರೀತಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು, ಯಾವ ಬಾಬ್ತುಗಳಿಗೆ ತೆರಿಗೆ ಕಟ್ಟಬೇಕಾಗಬಹುದು, ಪ್ಯಾನ್ ಕಾರ್ಡ್‌ನ ಅಗತ್ಯ ಏನು, ಆದಾಯದ ಮೂಲದಲ್ಲಿಯೇ ಎಷ್ಟು ಮೊತ್ತವನ್ನು ತೆರಿಗೆ ಮುಂಪಾವತಿ ರೂಪದಲ್ಲಿ ಹಿಡಿದುಕೊಳ್ಳಬೇಕು, ವೇತನ ಹೊರತು ಪಡಿಸಿದಂತೆ ಮತ್ತೆ ಯಾವ ಆದಾಯದ ಮೇಲೆ ತೆರಿಗೆ ನೀಡಬೇಕಾಗಬಹುದು... ಇವೇ ಮೊದಲಾದ ವಿಷಯಗಳನ್ನು ವಿವರಿಸುವ ಈ ಪುಸ್ತಿಕೆಗಳು ಮತ್ತು ಕರಪತ್ರಗಳು ಆದಾಯ ತೆರಿಗೆಯ ಪಾವತಿಯನ್ನು ಸರಳಗೊಳಿಸುವುದರ ಜೊತೆಗೆ ಉಳಿತಾಯ ಪ್ರವೃತ್ತಿಯನ್ನು ಬೆಳೆಸುತ್ತವೆ.
5 ಲಕ್ಷದವರೆಗಿನ ಆದಾಯ ಇರುವವರಿಗೆ ಸಿಹಿ ಸುದ್ದಿ!
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸರ್ಕಾರಿ ನೌಕರರು ಪಡೆದಿರುವ ಸಂಬಳ, ಭತ್ಯೆ, ಬೋನಸ್ ಇತ್ಯಾದಿ ಒಟ್ಟು ಮೊತ್ತದಲ್ಲಿ ತಾವು ಪಾವತಿಸಿದ ವಿವಿಧ ರೀತಿಯ ತೆರಿಗೆಗಳು, ಉಳಿತಾಯ, ಮನೆ ಸಾಲದ ಮೇಲಿನ ಬಡ್ಡಿ, ಅಸಲು, ಇತ್ಯಾದಿ ಖರ್ಚು ಕಳೆದು, ತೆರಿಗೆ ಪಾವತಿ ಕಟ್ಟಿರುವ ವಿವರಗಳನ್ನು ದಾಖಲಿಸಿದ ಫಾರಂ - 16 ಸಿದ್ಧಗೊಳಿಸುವಾಗ ಎಷ್ಟು ಮೊತ್ತಕ್ಕೆ ತೆರಿಗೆ ರಿಯಾಯಿತಿ ಇದೆ ಮತ್ತು ಎಷ್ಟು ಆದಾಯ ತೆರಿಗೆ ಪಾವತಿ ಮಾಡಬೇಕು ಎಂಬುದು ತಿಳಿಯುತ್ತದೆ. ಐದು ಲಕ್ಷದ ಒಳಗೆ ಆದಾಯ ಇರುವ ನೌಕರರು ತೆರಿಗೆಗೆ ಒಳಪಡುವ ಮೊತ್ತದ ಶೇ. 10 + ಸೆಸ್ ಪಾವತಿಸಬೇಕು. ಆದಾಯ ತೆರಿಗೆ ಅಧಿನಿಯಮದ ಕಲಂ 87 ಎ (ಖಛಿc. 87 ಅ) ಪ್ರಕಾರ ಈ ವರ್ಷ ಅಂದರೆ ಅಸೆಸ್‌ಮೆಂಟ್ ಇಯರ್ 2014-15 ರಿಂದ ಈ ನೌಕರರಿಗೆ 2000ರೂ.ಗಳ ರಿಯಾಯಿತಿ ದೊರೆಯುತ್ತದೆ. ಅಂದರೆ ಎರಡು ಸಾವಿರಕ್ಕಿಂತ ಕಡಿಮೆ ತೆರಿಗೆ ಪಾವತಿ ಮಾಡಬೇಕಿರುವವರು ಸಂಪೂರ್ಣ ತೆರಿಗೆ ವಿನಾಯಿತಿ ಪಡೆದರೆ ಎರಡು ಸಾವಿರದಿಂದ ಮೇಲ್ಪಟ್ಟು ಕಟ್ಟಬೇಕಿರುವ ಮೊತ್ತದ ಪಾವತಿದಾರರು ಅದರಲ್ಲಿ 2000ರೂ.ಗಳನ್ನು ಕಲಂ 87 ಎ (ಖಛಿc. 87 ಅ) ಅನ್ವಯ ವಿನಾಯಿತಿ ಪಡೆದು ಉಳಿದ ಮೊತ್ತವನ್ನು ಪಾವತಿಸಬೇಕು.
ತಾಂತ್ರಿಕ ಮತ್ತು ವೃತ್ತಿಪರ ಸಲಹೆಗಾರರಿಗೆ ಬರೆ!
ಆದಾಯ ತೆರಿಗೆ ಅಧಿನಿಯಮದ ಕಲಂ 194 ಜೆ ಅನ್ವಯ ತಾಂತ್ರಿಕ ಮತ್ತು ವೃತ್ತಿಪರ ಸಲಹೆಗಾರರಿಗೆ ನೀಡುವ ಸಲಹಾಶುಲ್ಕ ಹಾಗೂ ಬರಹಗಾರರಿಗೆ ನೀಡುವ ಗೌರವಧನದ (ರಾಯಲ್ಟಿ) ಮೊತ್ತವು ವಾರ್ಷಿಕ 30,000ರೂ.ಗೂ ಮೀರಿದಂತಹ ಸಂದರ್ಭದಲ್ಲಿ ನೀಡಲಾಗುವ ಒಟ್ಟು ಹಣದಲ್ಲಿ ಶೇ. 10 ರಷ್ಟನ್ನು ಆದಾಯ ತೆರಿಗೆಯ ರೂಪದಲ್ಲಿ ಮುಂದಾಗಿಯೇ ಹಿಡಿದು (ಟಿ.ಡಿ.ಎಸ್.) ಉಳಿದ ಮೊತ್ತವನ್ನು ಪಾವತಿ ಮಾಡಬೇಕು. ಈ ವೃತ್ತಿಪರರ ಪಟ್ಟಿಯಲ್ಲಿ ಕಾನೂನು ಸಲಹೆಗಾರರು, ತಜ್ಞ ವೈದ್ಯರು, ಕಟ್ಟಡ ವಿನ್ಯಾಸಗಾರರು, ಎಂಜಿನಿಯರಿಂಗ್ ಕನ್ಸಲ್ಟಂಟ್‌ಗಳು, ಲೆಕ್ಕಪರಿಶೋಧಕರು, ತಾಂತ್ರಿಕ ಸಲಹೆಗಾರರು, ಒಳಾಂಗಣ ವಿನ್ಯಾಸಕಾರರು, ಜಾಹೀರಾತು ವಿನ್ಯಾಸಕರು ಹೀಗೆ ವಿವಿಧ ವೃತ್ತಿಯವರನ್ನು ಸೇರಿಸಲಾಗಿದೆ.
ಇದೇ ಕಲಂ 194 ಜೆ ಅನ್ವಯಗೊಳಿಸಿ ಆಕಾಶವಾಣಿ ಮತ್ತು ದೂರದರ್ಶನಗಳಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ತಾತ್ಕಾಲಿಕ / ಅರೆಕಾಲೀನ / ದಿನಗೂಲಿಯ ಉದ್ಘೋಷಕರು ಮತ್ತು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿರುವ ಅಲ್ಪಮೊತ್ತದಲ್ಲಿಯೂ ವರ್ಷವೊಂದರಲ್ಲಿ 30,000ರೂ. ದಾಟುತ್ತಿದೆ ಎಂದು ಲೆಕ್ಕತೋರಿಸಿ ಶೇಕಡಾ 10ರಷ್ಟನ್ನು ಟಿ.ಡಿ.ಎಸ್.ನಲ್ಲಿ ಕತ್ತರಿಸಿ ಅದಕ್ಕೆಂದೇ ನಿಗದಿಗೊಳಿಸಿದ ಫಾರಂ 16 ಎ ನೀಡಲಾಗುತ್ತಿದೆ. ನಿರುದ್ಯೋಗಿ ಯುವಕ ಯುವತಿಯರು ಬೇರೆ ಕಡೆಗೆ ಕೆಲಸ ಸಿಗುವವರೆಗೆ ಈ ರೀತಿ ಅರೆಕಾಲೀನ ದಿನಗೂಲಿಗಾಗಿ ದುಡಿಯುತ್ತಿದ್ದು ಇಂತಹ ಬಡಪಾಯಿಗಳ ಹೊಟ್ಟೆಯಮೇಲೆ ತಣ್ಣಿರು ಬಟ್ಟೆ ಹಾಕುವ ಕೆಲಸ ಏಕೆ ನಡೆಯುತ್ತಿದೆಯೋ ಅರ್ಥವಾಗುತ್ತಿಲ್ಲ. ಆದಾಯ ತೆರಿಗೆ ನಿಗದಿಗೊಳಿಸಿರುವ ತಾಂತ್ರಿಕ ಮತ್ತು ವೃತ್ತಿಪರರ ವ್ಯಾಪ್ತಿಗೆ ಈ ಜನ ಬರಲು ಸಾಧ್ಯವೇ ಇಲ್ಲ. ಈ ಕೆಲಸಗಾರರು ತಮಗೆ ಅಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದೆ, ಈ ಕಾನೂನನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಅಗತ್ಯ ಈಗ ಹೆಚ್ಚಾಗಿದೆ.
ಯಾಘ್ನವಾಲ್ಕé
Subscribe to:
Posts (Atom)
Doodle - Google Uncle Jothe Maathu-Kathe - Informative Literature for Children - A Faction
New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...

-
Technology Information in Kannada - Article in Prajavani - Education Supplement 28.08.2019
-
http://issuu.com/bedremanjunath/docs/01_blog_blog_pocket_book_sample_ebook_nkp Open publication - Free publishing - More pocket book
-
Communication Skills Kannada Lesson for BBM (II Semister) Students of Kuvempu University Bedre Manjunath