Tuesday, 25 November 2008

The Sunday Indian of 30-11-2008 - Letters to Editor

ಯುವಕರು ಬಂದರು...

ಯುವಕರು ಬಂದರು ದಾರಿಬಿಡಿ
ಯುವಕರ ಕೈಗೆ ರಾಜ್ಯಕೊಡಿ...
ಎಂದೇ ನಾವು ಬಾರಕ್ ಒಬಾಮನಂತಹ ನಾಯಕರನ್ನು ಹೊಗಳಬಹುದು. ದೂರಗಾಮಿ ಪರಿಣಾಮದ ಬಗ್ಗೆ ಯೋಚಿಸಿದಾಗ ಭಾರತ ಮತ್ತು ಸುತ್ತ ಮುತ್ತಲಿನ ಎಲ್ಲಾ ದೇಶಗಳಲ್ಲಿಯೂ ಯುವ ನಾಯಕರ ಪಡೆಯೇ ಅಧಿಕಾರ ವಹಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಏಷ್ಯನ್ ಯೂನಿಯನ್ ಆದಾಗ ಅಮೆರಿಕವನ್ನು ಎದುರಿಸಲು ನಾವು ಸಜ್ಜಾಗಬಹುದು. ಆ ಧೀಶಕ್ತಿ ಇರುವುದು ಯುವಪೀಳಿಗೆಯಲ್ಲಿ ಮಾತ್ರ. ಅಂಕಲ್ ಟಾಮ್ಸ್ ಕ್ಯಾಬಿನ್ ಬಗ್ಗೆ ಅರಿಂದಮ್ ಚೌಧರಿಯವರ ಮಾತುಗಳು ಸಕಾಲಿಕ. ಹ್ಯಾರಿಯೆಟ್ ಬೀಚರ್ ಸ್ಟೋವ್ ಅವರಂತೆಯೇ ಕರಿಯರ ಬದುಕನ್ನು ಹಸಿಹಸಿಯಾಗಿ ಕಟ್ಟಿಕೊಟ್ಟ ಜಾಕ್ ಲಂಡನ್, ಅಮೆರಿಕದ ಶೋಷಣೆಯ ಬದುಕಿನಲ್ಲಿಯೂ ಅರಳಿನಿಂತ ಧೀಮಂತ ನಾಯಕ ಜಾರ್ಜ್ ವಾಷಿಂಗ್ಟನ್ ಕಾರ್ವರ್ (ಕೃಷಿ ವಿಜ್ಞಾನಿ ಮತ್ತು ಅಮೆರಿಕದಲ್ಲಿ ಕರಿಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟವ, ಕಡಲೆಕಾಯಿ ಬೆಳೆಸಿ ಕ್ರಾಂತಿ ಮಾಡಿದವರು), ಬೂಕರ್ ಟಿ. ವಾಷಿಂಗ್ಟನ್ ಅವರುಗಳನ್ನು ಇಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಬಹುಶಃ ಯಾವುದೇ ಪ್ರಚಾರಕ್ಕೂ ಆಸೆಪಡದ ಅವರಿಗೆ ಒಬಾಮನಂತಹವರ ಗೆಲುವು ಮೌನ ಸಮ್ಮಾನ, ಹೆಮ್ಮೆ ಉಂಟುಮಾಡಿರಲಿಕ್ಕೂ ಸಾಕು. ಅದ್ಭುತಗಳನ್ನು ಸಾಧಿಸುವ ಯುವಶಕ್ತಿಯ ಕನಸು ನನಸಾಗಲಿ.
ಬೇದ್ರೆ ಮಂಜುನಾಥ
ಚಿತ್ರದುರ್ಗ

No comments:

Open Book Evaluation - A Boon or Bane - Article in Shikshana Varthe Monthly of July 2024.

      Open Book Evaluation - A Boon or Bane - Article in Shikshana Varthe Monthly of July 2024.