Monday 13 September, 2010

Bedre Web Corner Article 3 - Yojana and India 2010 Year Book


ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ, ಚಿತ್ರದುರ್ಗ


ಅಧಿಕೃತ ಮಾಹಿತಿ ನೀಡುವ ಸಕರ್ಾರಿ ಮಾಸಿಕ -
ಯೋಜನಾ ಮತ್ತು
ವಾರ್ಿಕ ಪುಸ್ತಕ ಇಂಡಿಯ 2010


ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ನಿಖರವಾದ ಮಾಹಿತಿ ಮತ್ತು ಸಕರ್ಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಆಧರಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಕರ್ಾರವೇ ಒದಗಿಸುವ ಅಧಿಕೃತ ದತ್ತಾಂಶಗಳನ್ನು ಆಧರಿಸಬೇಕಾಗುತ್ತದೆ. ಅದಕ್ಕಾಗಿಯೇ ಭಾರತ ಸಕರ್ಾರದ ಪ್ರಸಾರ ಖಾತೆಯಡಿ ಪ್ರಕಟಣಾ ವಿಭಾಗವೊಂದಿದ್ದು ಸಕರ್ಾರಿ ಮಾಹಿತಿ ಭಂಡಾರ, ವಿವಿಧ ಇಲಾಖೆಗಳ ಸಚಿವಾಲಯಗಳಿಂದ ಲಭ್ಯವಾಗುವ ಅಂಕಿ-ಆಂಶಗಳನ್ನು ಸಂಗ್ರಹಿಸಿ, ಯೋಜನಾ ಮಾಸಿಕ ಮತ್ತು ಇಂಡಿಯ ವಾಷರ್ಿಕ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತದೆ. ಯೋಜನಾ ಮಾಸಿಕವು ಇಂಗ್ಲಿಷ್, ಹಿಂದಿ, ಕನ್ನಡವೂ ಸೇರಿದಂತೆ ಒಟ್ಟು 13 ಭಾಷೆಗಳಲ್ಲ್ಲಿ ಸುಲಭ ಬೆಲೆಗೆ ಲಭ್ಯವಿದೆ. ಕಳೆದ 50 ವರ್ಷಗಳಲ್ಲಿ ಪ್ರಕಟವಾಗಿರುವ ಯೋಜನಾದ ಎಲ್ಲ ಸಂಚಿಕೆಗಳೂ ಅಂತರಜಾಲದಲ್ಲಿ ಉಚಿತವಾಗಿ ಸಿಗುತ್ತಿವೆ.
ಸಮಗ್ರ ಭಾರತದ ಅಭಿವೃದ್ಧಿಯ ದಾಖಲೀಕರಣ ಎಂಬಂತಿರುವ ಇಂಡಿಯ - 2010 ವಾಷರ್ಿಕ ಪುಸ್ತಕದಲ್ಲಿರುವ ಅಂಕಿ ಅಂಶಗಳನ್ನು ಆಧರಿಸಿಯೇ ಲೋಕಸೇವಾ ಆಯೋಗಗಳ ಪರೀಕ್ಷೆಗಳಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಜನಸಂಖ್ಯೆ, ರಾಜ್ಯಗಳಿಗೆ ಸಂಬಂಧಿಸಿದ ಅಂಕಿ-ಆಂಶಗಳು, ವಿಶೇಷ ವಿಷಯಗಳು, ಯೋಜನೆಗೆ ಸಂಬಂಧಿಸಿದ ಮಾಹಿತಿ, ಶಿಕ್ಷಣ, ಸಂಶೋಧನೆ, ಆಥರ್ಿಕತೆ, ರಕ್ಷಣೆ, ಸಾಮಾಜಿಕ ಸಮಾನತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವಾಲಯಗಳಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಸಮಗ್ರ ವಿವರಗಳು, ಪ್ರಗತಿ ಎಲ್ಲವೂ ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಹಿಡಿದಿಡಲಾಗಿದೆ. ಪ್ರತಿವರ್ಷವೂ ಹೊಸ ಹೊಸ ಅಂಶಗಳನ್ನು ಹೊತ್ತು ತರುವ ವಾಷರ್ಿಕ ಪುಸ್ತಕದ ಬೆಲೆ ರೂ. 350/- ಅಂತರಜಾಲದಲ್ಲಿ ಇದರ ವಿದ್ಯುನ್ಮಾನ ಪ್ರತಿ ಉಚಿತವಾಗಿ ಲಭ್ಯವಿದ್ದು ಆಸಕ್ತರು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :

www.yojana.gov.in

www.yojana.gov.in/regional/kannada.htm

www.publicationsdivision.nic.in

www.publicationsdivision.nic.in/others/India_2010.pdf

Bedre Web Corner Article 3
Yojana and India 2010 Year Book

No comments:

JEE Main Exam 2024-25 - Bedre Manjunath - Part 02 - Kannada Prabha 18.04.2024

  JEE Main Exam 2024-25 - Bedre Manjunath - Part 02 - Kannada Prabha 18.04.2024