Makkala Mane - LKG UKG Classes in Hassan Districti - Article in Prajavani 26 Nov 2012
ನೋಡ ಬನ್ನಿ `ಮಕ್ಕಳ ಮನೆ'
ಹತ್ತು
ಮಕ್ಕಳಿಗಿಂತ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಒಂದೆಡೆ
ಸದ್ದಿಲ್ಲದೇ ಜಾರಿಯಾಗುತ್ತಿದ್ದರೆ, ಹಾಸನ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ದಾಖಲೆ
ಪ್ರಮಾಣದಲ್ಲಿ ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆ.
ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಸರ್ಕಾರದ ಎಲ್.ಕೆ.ಜಿ, ಯು.ಕೆ.ಜಿ, ಪ್ರಿ- ಸ್ಕೂಲ್ ಎಂದೇ ಬಿಂಬಿತವಾಗಿರುವ `ಮಕ್ಕಳ ಮನೆ`ಗಳು ಹಳ್ಳಿಹಳ್ಳಿಗಳಲ್ಲಿ ಜಯಭೇರಿ ಬಾರಿಸುತ್ತಿವೆ. ಕೆಲವು `ಮಕ್ಕಳ ಮನೆ`ಗಳಲ್ಲಂತೂ 90ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ! ಕನ್ನಡ /ಇಂಗ್ಲಿಷ್ ಕಲಿಸುವ 55 `ಮಕ್ಕಳ ಮನೆ`ಗಳ ಜೊತೆಗೆ 3 ಉರ್ದು `ಮಕ್ಕಳ ಮನೆ`ಗಳೂ ಆರಂಭಗೊಂಡಿರುವುದು ಇಲ್ಲಿನ ದಾಖಲೆ!
ಏನಿದು ಮಕ್ಕಳ ಮನೆ?ಶಾಲಾ ಬಲವರ್ಧನೆ ಯೋಜನೆಯ ಅಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ, ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್.ಕೆ.ಜಿ/ ಯು.ಕೆ.ಜಿ ತರಗತಿಗಳನ್ನು ನಡೆಸುವ ಯೋಜನೆಯೊಂದು ರೂಪುಗೊಂಡಿತ್ತು. ಅದರ ಅನ್ವಯ, ಸರ್ಕಾರಿ ಕಾನ್ವೆಂಟ್ `ಮಕ್ಕಳ ಮನೆ` ಯೋಜನೆ 2011- 12ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರಾರಂಭವಾಯಿತು.
ಮರು ವರ್ಷ ಹಾಸನ ಜಿಲ್ಲೆಯಲ್ಲಿ ಅತ್ಯಂತ ಬಿರುಸಿನಿಂದ ಹೋಬಳಿಗೊಂದರಂತೆ ಎಂದುಕೊಂಡು ಆರಂಭವಾಗಿದ್ದು, ಇದೀಗ 58 ದಾಟಿ 98 ಕೇಂದ್ರಗಳಾಗುವತ್ತ ಮುನ್ನಡೆಯುತ್ತಿದೆ! ಸಾರ್ವಜನಿಕರ ಪ್ರೋತ್ಸಾಹ, ಉತ್ಸಾಹ ಹಳ್ಳಿ ಹಳ್ಳಿಗಳಲ್ಲಿ `ಮಕ್ಕಳ ಮನೆ`ಗಳನ್ನು ತೆರೆಯುವತ್ತ ಸಾಗಿದೆ!
`ಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ `ಮಕ್ಕಳ ಮನೆ` ಮಾದರಿಯ ಪೂರ್ವ ಪ್ರಾಥಮಿಕ ಕಲಿಕಾ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆದಿದೆ. ಹಾಸನ ಜಿಲ್ಲೆಯ `ಮಕ್ಕಳ ಮನೆ`ಗಳ ಯಶಸ್ಸನ್ನು ಗಮನಿಸಿದಾಗ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಖಾತ್ರಿಪಡಿಸಿಕೊಳ್ಳಲು, ಗುಣಾತ್ಮಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮಕ್ಕಳೆಲ್ಲರನ್ನೂ ಶಾಲಾ ವಾತಾವರಣಕ್ಕೆ ಕರೆತರಲು ಇದೊಂದು ಸಾಧನವಾಗಲಿದೆ` ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಸನದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
`ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳು ದಾಖಲಾಗುವಂತೆ ಪ್ರೇರೇಪಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಎ.ಟಿ.ಚಾಮರಾಜ್ (ಈಗ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ), ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಉಪಯೋಜನಾ ಸಮನ್ವಯಾ ಧಿಕಾರಿ ಎಂ.ಎಸ್.ಫಣೀಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಾಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಆಸಕ್ತಿಯಿಂದ ಈ ದಾಖಲೆ ಸಾಧ್ಯವಾಗಿದೆ` ಎಂದು ಸಚಿವರು ಶ್ಲಾಘಿಸಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು?
ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಮತ್ತು ಹಾಸನಗಳಲ್ಲಿರುವ 58 ಮಕ್ಕಳ ಮನೆಗಳಲ್ಲಿ ಒಟ್ಟು 2650 ಮಕ್ಕಳು ದಾಖಲಾಗಿದ್ದಾರೆ. ಪ್ರತಿ `ಮನೆ`ಯಲ್ಲೂ ಕನಿಷ್ಠ 30 ರಿಂದ ಗರಿಷ್ಠ 80ರವರೆಗೆ ಮಕ್ಕಳಿದ್ದರೆ, ಅರಸೀಕೆರೆ ತಾಲ್ಲೂಕು ಬಾಣಾವರದ ಮಕ್ಕಳ ಮನೆಯಲ್ಲಿ 178, ದೊಡ್ಡಮೇಟಿ ಕುರ್ಕೆಯಲ್ಲಿ 96, ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿಯಲ್ಲಿ 92 ಮಕ್ಕಳಿರುವುದು ದಾಖಲೆಯಾಗಿದೆ.
`ಮಕ್ಕಳ ಮನೆ` ಆರಂಭಿಸಲು ಉಳಿದ ಹಳ್ಳಿಗಳಿಂದಲೂ ಬೇಡಿಕೆ ಬರುತ್ತಲೇ ಇದೆ! ಮಕ್ಕಳಿಗೆ ಬೇಕಾದ ಕಲಿಕಾ ವಾತಾವರಣ ನಿರ್ಮಿಸುವ ಸಲುವಾಗಿ ಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಮೇಶ್ ಮತ್ತು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಸ್ಥಳೀಯ ಸಲಹಾ ಸಮಿತಿ ರಚನೆಯಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲೂ ಒಂದೊಂದು ಮಕ್ಕಳ ಮನೆ ಇರಬೇಕು ಎನಿಸುವಂತೆ ಮಾಡುವಲ್ಲಿ ಸಮಿತಿ ಯಶಸ್ವಿಯಾಗಿದೆ.
`ಮಕ್ಕಳ ಮನೆ`ಯ ಮಕ್ಕಳಿಗೆ ಸಮವಸ್ತ್ರ, ಟೈ, ಶೂ, ಸಾಕ್ಸ್, ನೋಟ್ ಪುಸ್ತಕಗಳು, ಪೆನ್ಸಿಲ್, ಕ್ರಯಾನ್ಸ್, ಪೇಂಟ್, ಡೆಸ್ಕ್, ಕುರ್ಚಿ, ಮೇಜು, ಚಾಪೆ, ಜಮಖಾನ, ಆಟದ ಸಾಮಗ್ರಿ ಸೇರಿದಂತೆ ಅಗತ್ಯವಾದ ವಸ್ತುಗಳನ್ನು ಒದಗಿಸಲು ಮತ್ತು ಶಿಕ್ಷಕರ ಗೌರವ ಧನಕ್ಕಾಗಿ ಮಾಡಲಾದ ಒಟ್ಟು ಖರ್ಚು 21.63 ಲಕ್ಷ ರೂಪಾಯಿಯಾಗಿದ್ದು, ಈ ಮೊತ್ತವನ್ನು ಸಾರ್ವಜನಿಕರ ದೇಣಿಗೆಯಿಂದಲೇ ಭರಿಸಲಾಗಿದೆ.
ಈ ಯಶಸ್ಸಿಗೆ ಗರಿ ಮೂಡಿಸುವಂತೆ ಹಾಸನ ಜಿಲ್ಲಾ ಪಂಚಾಯಿತಿ 11 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿ, ಇತರ ಹಳ್ಳಿಗಳಲ್ಲೂ `ಮಕ್ಕಳ ಮನೆ` ಆರಂಭಿಸಲು ಹುರಿದುಂಬಿಸುತ್ತಿದೆ! ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಜಿಲ್ಲಾ ಕಚೇರಿಯಿಂದ 7.5 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, 31 `ಮಕ್ಕಳ ಮನೆ`ಗಳ ಕಾರ್ಯಕ್ರಮಗಳಿಗೆ ಈ ಅನುದಾನ ಬಳಕೆಯಾಗುತ್ತಿದೆ. ಉಳಿದವು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುತ್ತಿವೆ.
ಹೀಗಿರಬೇಕು `ಮಕ್ಕಳ ಮನೆ`
ಹೆಚ್ಚುವರಿ ಕೊಠಡಿಗಳು ಲಭ್ಯವಿರುವಲ್ಲಿ ಬೋಧನಾ ಕೊಠಡಿ (ಆಡುತ್ತಾ, ನಲಿಯುತ್ತಾ ಮಕ್ಕಳು ಕಲಿಯುವಂತೆ ಪ್ರೇರೇಪಿಸುವ ತಾಣ), ವಿಶ್ರಾಂತಿ ಕೊಠಡಿ (ಮೆತ್ತನೆ ಹಾಸಿಗೆ / ಜಮಖಾನ ಸಹಿತ), ಧ್ಯಾನ, ಯೋಗ, ಮಂತ್ರ ಪಠಣ, ಭಜನೆ ಕೊಠಡಿ (ಒಂದು ಫೋಟೊ ಮತ್ತು ದೀಪ), ಒಳಾಂಗಣ ಕ್ರೀಡಾ ಕೊಠಡಿ (ಚಿಕ್ಕ ಮಕ್ಕಳು ಆಟ ಆಡುವಂತಹ ಕ್ರೀಡಾ ಉಪಕರಣಗಳು/ ದೇಶೀಯ ಕ್ರೀಡೆಗೆ ಸಂಬಂಧಿಸಿದಂತಹ ಕ್ರೀಡಾ ಉಪಕರಣಗಳು,
ಕಲಿಕಾ ಉಪಕರಣಗಳು ಹಾಗೂ ಅದಕ್ಕೆ ಅನುಗುಣವಾದ ಪೀಠೋಪಕರಣಗಳು), ವಾರದಲ್ಲಿ ಎರಡು ದಿನ ನೃತ್ಯ, ಚಿತ್ರಕಲೆ ಕಲಿಸಲು ನೃತ್ಯ- ಚಿತ್ರ ಕೊಠಡಿ, ತೆರೆದ ಗ್ರಂಥಾಲಯ (ಮಕ್ಕಳ ಕಥೆ ಪುಸ್ತಕಗಳನ್ನು ಇರಿಸಿದ ಅಜ್ಜಿ ಮನೆ), ಧೃಕ್- ಶ್ರವಣ ಕೊಠಡಿ (ಟಿ.ವಿ, ಕಂಪ್ಯೂಟರ್, ಡಿ.ವಿ.ಡಿ ಪ್ಲೇಯರ್, ಸಿ.ಡಿ ಇತ್ಯಾದಿ) ಎಂದು ಪ್ರತ್ಯೇಕ ವಿಭಾಗಗಳನ್ನು ತೆರೆಯಲು ಅವಕಾಶವಿದೆ. ಕೊಠಡಿಗಳು ಲಭ್ಯವಿಲ್ಲದ ಕಡೆ, ಇರುವ ಕೊಠಡಿಗಳನ್ನೇ ಹೊಂದಿಸಿಕೊಂಡು ವೇಳಾಪಟ್ಟಿಯನ್ನು ತಯಾರಿಸಿ ಇಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಬ್ಯಾನರ್, ಕರಪತ್ರ, ಗೋಡೆಬರಹ, ಪೋಷಕರ ಭೇಟಿ ಇತ್ಯಾದಿಗಳ ಮೂಲಕ ಕಳೆದ ಮಾರ್ಚಿಯಿಂದಲೇ `ಮಕ್ಕಳ ಮನೆ`ಯ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು.
ಖರ್ಚು-ವೆಚ್ಚದ ನಿರ್ವಹಣೆ ಹೇಗೆ?
ಮಕ್ಕಳ ಮನೆಯ ಖರ್ಚು-ವೆಚ್ಚಗಳಿಗಾಗಿ ಪ್ರತ್ಯೇಕ ಸರ್ಕಾರಿ ಅನುದಾನವೇನೂ ಇಲ್ಲ. ಸರ್ವ ಶಿಕ್ಷಣ ಅಭಿಯಾನ ಯೋಜನೆ, ಶಾಲಾ ಬಲವರ್ಧನೆ ಯೋಜನೆಯ ಅಡಿ ಅಲ್ಪ ಹಣಕಾಸಿನ ನೆರವು, ಅದೂ ಪಾಠೋಪಕರಣ- ಪೀಠೋಪಕರಣ- ಕ್ರೀಡೋಪಕರಣಗಳಿಗೆ ಅಷ್ಟೇ. ಉಳಿದಂತೆ `ಮಕ್ಕಳ ಮನೆ`ಗೆ ಬರುವ ಮಕ್ಕಳ ಪೋಷಕರು, ಸಾರ್ವಜನಿಕರ ದೇಣಿಗೆ, ಜನಪ್ರತಿನಿಧಿಗಳ ಪ್ರೋತ್ಸಾಹ ಧನ, ಸಂಘ ಸಂಸ್ಥೆಗಳ ಸಹಭಾಗಿತ್ವ,
ಗ್ರಾಮ ಪಂಚಾಯಿತಿ, ಎ.ಪಿ.ಎಂ.ಸಿ, ಮುಖ್ಯೋಪಾಧ್ಯಾಯರ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಅಭಿವೃದ್ಧಿ ಸಮಿತಿ ರಚಿಸಿಕೊಳ್ಳಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತುದಾರರನ್ನಾಗಿ ನೇಮಿಸಿಕೊಂಡು, ಗೌರವಧನವನ್ನೂ ಸ್ಥಳೀಯ ಸಮಿತಿಯಿಂದಲೇ ದೊರಕಿಸಿಕೊಡುವ ಪ್ರಯತ್ನ ಸಾಗಿದೆ.
ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಡೊನೇಷನ್, ಫೀಸು, ಪುಸ್ತಕ ಎಂದೆಲ್ಲಾ ಸಾವಿರಗಟ್ಟಲೆ ಹಣ ಸುರಿಯುವ ಬದಲು ಪೋಷಕರೇ 50 ರಿಂದ 100 ರೂಪಾಯಿಯಷ್ಟು ಶುಲ್ಕ ನೀಡಲು ಮುಂದೆ ಬಂದಿದ್ದಾರೆ. ಹೀಗೆ ಸಂಗ್ರಹಿಸಲಾದ ಮೊತ್ತಕ್ಕೆ ಇತರ ಮೂಲಗಳಿಂದ ಇನ್ನಷ್ಟು ಹಣ ಒಟ್ಟುಗೂಡಿಸಿ ಖರ್ಚು- ವೆಚ್ಚ ನಿಭಾಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಒಂದು ನಿರ್ದಿಷ್ಟ ರೂಪ ದೊರೆತರೆ, ರಾಜ್ಯದಾದ್ಯಂತ ಚಿಣ್ಣರೆಲ್ಲಾ `ಮಕ್ಕಳ ಮನೆ` ಎಂಬ ಈ ಸರ್ಕಾರಿ ಕಾನ್ವೆಂಟ್‌ಗಳಲ್ಲಿ ನಲಿಯುತ್ತಾ ಕಲಿಯುವ ದಿನ ದೂರವಿಲ್ಲ!
ಹೀಗಿದೆ ವೇಳಾಪಟ್ಟಿ
ಪ್ರತಿ ದಿನ ಬೆಳಿಗ್ಗೆ 9.15 ರಿಂದ ಸಂಜೆ 4ರವರೆಗೆ ಸಾಮಾನ್ಯ ಶಾಲೆಯಂತೆಯೇ 40 ನಿಮಿಷಗಳ ತರಗತಿ ನಡೆಯುವ ಮಕ್ಕಳ ಮನೆಯಲ್ಲಿ ಧ್ಯಾನ- ಯೋಗ, ಕನ್ನಡ ಭಾಷಾ ಚಟುವಟಿಕೆ, ಕಥೆ ಹೇಳುವ ಅಜ್ಜಿ ಮನೆ, ಗಣಿತ ಚಟುವಟಿಕೆ, ಒಳಾಂಗಣ ಆಟಗಳು, ಆಂಗ್ಲ ಭಾಷಾ ಚಟುವಟಿಕೆ, ಹಾಡು, ಹೊರಾಂಗಣ ಆಟಗಳು, ನೃತ್ಯ, ಚಿತ್ರಕಲೆ, ಕಂಪ್ಯೂಟರ್ ತರಬೇತಿ ಇತ್ಯಾದಿ ಚಟುವಟಿಕೆಗಳು ನಿಯಮಿತವಾಗಿ ನಡೆಯುತ್ತವೆ. ನಡುವೆ ಎರಡು ಬಾರಿ ಹತ್ತು ನಿಮಿಷಗಳ ವಿರಾಮ ಮತ್ತು ಮಧ್ಯಾಹ್ನದ ಊಟದ ವಿರಾಮ ಇರುತ್ತದೆ.

No comments:
Post a Comment