Tuesday, 11 December 2012

Brain Drain and Brain Gain - Article in Udayavani Josh 11 Dec 2012


Brain Drain and Brain Gain - Article in Udayavani Josh 11 Dec 2012


 Udayavani

  • ಬೀರೂರಿಗೆ ಬಂದ ನಾಸಾ ವಿಜ್ಞಾನಿ ಯಾರು?

  • ಹೊರನಾಡಿನ ಆಕರ್ಷಣೆ ಎಷ್ಟೇ ಇದ್ದರೂ ಮರಳಿ ಮನೆಗೆ ಬರುವ ಮನಸ್ಸುಗಳಿಗೇನೂ ಕೊರತೆ ಇಲ್ಲ. ರಾಮ-ರಾವಣರ ಯುದ್ಧದ ನಂತರ ವಿಭೀಷ

    • Udayavani | Dec 10, 2012
      ಎ ಜೊ ದೇಸ್‌ ಹೈ ತೇರಾ 
      ಸ್ವದೇಸ್‌ ಹೈ ತೇರಾ 
      ತುಜ‚ೇ ಹೈ ಪುಕಾರಾ 
      ಯೇ ವೋ ಬಂಧನ್‌ ಹೈ ಜೊ ಕಭಿ 
      ಟೂಟ್‌ ನಹೀ ಸಕ್ತಾ........ 
      ಸ್ವದೇಸ್‌ ಚಿತ್ರದ ಈ ಹಾಡು ಅದೆಷ್ಟು ಯುವಮನಸ್ಸುಗಳನ್ನು ಮರಳಿ ಭಾರತಕ್ಕೆ ಕರೆತಂದಿದೆಯೋ! 
      ಅಪಿ ಸ್ವರ್ಣಮಯೀ ಲಂಕಾ ನ ಮೆ ಲಕ್ಷಣ ರೋಚತೇ 
      ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ 

      ಹೊರನಾಡಿನ ಆಕರ್ಷಣೆ ಎಷ್ಟೇ ಇದ್ದರೂ ಮರಳಿ ಮನೆಗೆ ಬರುವ ಮನಸ್ಸುಗಳಿಗೇನೂ ಕೊರತೆ ಇಲ್ಲ. ರಾಮ-ರಾವಣರ ಯುದ್ಧದ ನಂತರ ವಿಭೀಷಣನಿಗೆ ಪಟ್ಟಕಟ್ಟಿದ ತರುವಾಯ ಲಂಕೆಯಲ್ಲಿಯೇ ಉಳಿದರೆ ಹೇಗೆ ಎಂಬ ಮಾತು ಬಂದಾಗ ಶ್ರೀರಾಮ ಹೇಳುವ ಈ ಮಾತುಗಳು ಇದನ್ನೇ ಧ್ವನಿಸುತ್ತವೆ. 

      ಚಿಗುರಿದ ಕನಸು ಮತ್ತು ಸ್ವದೇಸ್‌ 
      ಕಡಲತೀರದ ಭಾರ್ಗವ ಶಿವರಾಮ ಕಾರಂತರ ಕಾದಂಬರಿ ಆಧರಿಸಿ ಟಿ.ಎಸ್‌. ನಾಗಾಭರಣರ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿಗುರಿದ ಕನಸು ಚಲನಚಿತ್ರ ಮಣ್ಣಿನ ಆಕರ್ಷಣೆಯನ್ನು, ದಿಲ್ಲಿಯ ಸುಪ್ಪತ್ತಿಗೆಯನ್ನು ಬಿಟ್ಟು ತನ್ನ ಹಳ್ಳಿಗಾಗಿ ಏನನ್ನಾದರೂ ಮಾಡಬೇಕು ಎಂಬ ನಾಯಕ ಶಂಕರನ(ಶಿವರಾಜ್‌ಕುಮಾರ್‌) ತುಡಿತವನ್ನು ಎತ್ತಿ ತೋರಿಸಿತ್ತು. ಇದರ ಜಾಡಿನಲ್ಲಿಯೇ ಸಾಗಿದ ಅಶುತೋಷ್‌ ಗೋವಾರಿಕರ್‌ನ ಸ್ವದೇಸ್‌ ದಿಲ್ಲಿಯ ಬದಲಿಗೆ ಅಮೆರಿಕೆಯ ನಾಸಾದ ವಿಜ್ಞಾನಿ ಮೋಹನ್‌ ಭಾರ್ಗವ ಭಾರತದಲ್ಲಿನ ಹಳ್ಳಿಯೊಂದರಲ್ಲಿರುವ ತನ್ನ ಆತ್ಮೀಯರಿಗಾಗಿ ಮರಳುವ, ಹಳ್ಳಿಯ ಉದ್ಧಾರಕ್ಕಾಗಿ ಶ್ರಮಿಸುವ ಕಥೆ ಪ್ರತಿಭಾ ಪುನರಾಗಮನಕ್ಕೆ ಉದಾಹರಣೆಯಾಗಿತ್ತು.

      ಚಿಗುರಿದ ಕನಸು ಚಿತ್ರದಿಂದ ಪ್ರೇರಣೆಯನ್ನೇನೂ ಪಡೆದಿಲ್ಲ ಎಂಬ ಬಡಾಯಿ ಮಾತುಗಳನ್ನಾಡಿದರೂ ಗೋವಾರಿಕರ್‌ನ ಸ್ವದೇಸ್‌ ಚಿತ್ರದಲ್ಲಿ ನಟಿಸಿದ ಹಿರಿಯ ನಟಿ ಕಿಶೋರಿ ಬಳ್‌ ಚಿಗುರಿದ ಕನಸಿನಲ್ಲೂ ನಟಿಸಿದ್ದರು ಮತ್ತು ಕಥೆಗಳ ಮೂಲದಲ್ಲಿ ಎರಡಕ್ಕೂ ಸಾಮ್ಯತೆ ಇದ್ದದ್ದು ವಿಶೇಷವಾಗಿತ್ತು. ಫ್ಲೋರಿಡಾದ ಕೆನಡಿ ಸ್ಪೇಸ್‌ಸೆಂಟರ್‌ನಲ್ಲಿರುವ ನಾಸಾದ ಸಂಶೋಧನಾಲಯ ಮತ್ತು ಲಾಂಚ್‌ಪ್ಯಾಡ್‌ 39-ಎ ಪ್ರಯೋಗಾಲಯದಲ್ಲಿ ಚಿತ್ರೀಕರಿಸಲಾದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಸ್ವದೇಸ್‌ ಬರುವ 2013ರಲ್ಲಿ ಬಾಹ್ಯಾಕಾಶ ಸೇರಲಿರುವ ಗ್ಲೋಬಲ್‌ ಪ್ರಿಸಿಪಿಟೇಷನ್‌ ಮೆಶರ್‌ವೆುಂಟ್‌ ಎಂಬ ಮಳೆಯ ಪ್ರಮಾಣ ಅಳೆಯುವ ಉಪಗ್ರಹದ ಸಿದ್ಧತಾ ಕಾರ್ಯಾಚರಣೆಯ ನೈಜ ಘಟನಾವಳಿಯ ಚಿತ್ರಣವೇ ಆಗಿತ್ತು. ಇಲ್ಲಿಯೇ ಯೇ ದೇಸ್‌ ಹೈ ಮೆರಾ....... ಹಾಡು ಆರಂಭವಾಗುತ್ತದೆ. 

      ಬನ್ನಿ ಬನ್ನಿ ಕನಸುಗಳೇ ಮರಳಿ ಮನೆಗೆ ಬನ್ನಿ! 
      ಇದೇ ಡಿಸೆಂಬರ್‌ 1ರಂದು ಮೊಹಾಲಿಯ ಇಂಡಿಯನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ನಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ವಿತ್ತಸಚಿವ ಪಿ. ಚಿದಂಬರಂ ಅವರು ಯುವಜನರನ್ನುದ್ದೇಶಿಸಿ ಮಾತನಾಡುತ್ತಾ, ಉತ್ತಮ ಅವಕಾಶಗಳನ್ನು ಅರಸುತ್ತಾ ಅಮೆರಿಕ ಮೊದಲಾದ ದೇಶಗಳತ್ತ ವಲಸೆ ಹೋಗುವ ನಿಮ್ಮ ಬಯಕೆ ಸಹಜವಾದದ್ದೇ. ಆದರೆ ನೆನಪಿಡಿ, ಭಾರತ ದೇಶ ನೀಡುವ ಅವಕಾಶಗಳನ್ನು, ಭದ್ರತೆಯನ್ನು, ಸವಾಲುಗಳನ್ನು ಮತ್ತು ಆತ್ಮೀಯತೆಯನ್ನು ಜಗತ್ತಿನ ಬೇರೆ ಯಾವ ರಾಷ್ಟ್ರವೂ ಒದಗಿಸಲಾರದು. ಒಂದಷ್ಟು ವರ್ಷ ವಿದೇಶಗಳಲ್ಲಿ ಸೇವೆಸಲ್ಲಿಸಿದರೂ ಪರವಾಗಿಲ್ಲ, ಕೊನೆಯದಾಗಿ ನಿಮ್ಮ ಮನೆಗೆ ಬರುವುದನ್ನು ಮರೆಯಬೇಡಿ. 700 ಮಿಲಿಯನ್‌ ಜನರಿಗೆ ಆರೋಗ್ಯ, ನೈರ್ಮಲ್ಯ, ವಿದ್ಯುತ್‌, ಅಗತ್ಯ ಸೇವೆಗಳು ಹೀಗೆ ಏನೆÇÉಾ ಒದಗಿಸಲು ಇರುವ ಅವಕಾಶಗಳು ವಿಶ್ವದ ಬೇರೆ ಯಾವುದೇ ರಾಷ್ಟ್ರಕ್ಕಿಂತ ಭಾರತದಲ್ಲಿಯೇ ಇದೆ ಎನ್ನುವುದನ್ನು ಮರೆಯಬಾರದು, ಎಂದರು. 

      ಅಮೇರಿಕಾದಂತಹ ಮುಂದುವರೆದ ದೇಶದ‌ಲ್ಲಿಯೇ ಆರ್ಥಿಕ ವ್ಯವಸ್ಥೆ ಕುಸಿತ ಕಂಡಿರುವ ಸಂದರ್ಭದಲ್ಲಿ ಉದ್ಯೋಗಾವಕಾಶ ಮತ್ತು ಇತರೆ ಅವಕಾಶಗಳನ್ನು ಅರಸಿ ವಿಶ್ವದ ಪ್ರಮುಖ ದೇಶಗಳಿಗೆ ವಲಸೆ ಹೋಗಿದ್ದ ಯುವಪ್ರತಿಭಾವಂತರು ಭಾರತದ ಸದೃಢ ಆರ್ಥಿಕ ವ್ಯವಸ್ಥೆ ಮತ್ತು ಕೌಟುಂಬಿಕ ವಾತಾವರಣದ ಆಪ್ತತೆಯನ್ನು ತಡವಾಗಿಯಾದರೂ ಮನಗಂಡು ಮರಳಿ ಮನೆಗೆ ಬರುತ್ತಿ¨ªಾರೆ. ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಅವರೂ ಈ ಕುರಿತು ಹೇಳಿಕೆ ನೀಡಿ ಭಾರತೀಯ ಪ್ರತಿಭಾವಂತರ ಪುನರಾಗಮನಕ್ಕಾಗಿ ಭಾರತ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಅವರಿಗಾಗಿ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದರು. 

      ಪ್ರತಿಭಾ ಪಲಾಯನ- ಲಾಭವೋ ನಷ್ಟವೋ? 
      ವಿವಿಧ ಉದ್ದೇಶಗಳಿಗಾಗಿ, ಅವಕಾಶಗಳನ್ನು ಅರಸುತ್ತಾ, ಭಾರತೀಯ ಪ್ರತಿಭೆಗಳು ವಿದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಭಾರತಕ್ಕೆ ಪ್ರತಿವರ್ಷ ಹತ್ತು ಬಿಲಿಯನ್‌ ಡಾಲರ್‌ಗಳಷ್ಟು ನಷ್ಟವಾಗುತ್ತಿದೆ. ಕಂಪ್ಯೂಟರ್‌ ಕ್ಷೇತ್ರದಲ್ಲಿನ ಅವಕಾಶಗಳನ್ನು ಬೆನ್ನುಹತ್ತಿ ಹೋಗುತ್ತಿರುವವರಿಂದಲೇ ಎರಡು ಬಿಲಿಯನ್‌ ಡಾಲರ್‌ಗಳಷ್ಟು ವಾರ್ಷಿಕ ನಷ್ಟ ಉಂಟಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಆರಂಭದಿಂದ ಪದವಿ, ಸ್ನಾತಕೋತ್ತರ ಪದವಿಯ ಹಂತದವರೆಗೆ ಭಾರತ ಸರ್ಕಾರದ ಖರ್ಚಿನಲ್ಲಿ ಓದಿ ಉತ್ತಮೋತ್ತಮ ಅಂಕಗಳಿಸಿದ ಪ್ರತಿಭಾವಂತರ ಸೇವೆ ನಮ್ಮ ನಾಡಿಗೆ ಲಭ್ಯವಾಗದೇ ಹೊರನಾಡಿಗೆ ಯಾವುದೇ ಖರ್ಚಿಲ್ಲದೇ ಲಭ್ಯವಾಗುತ್ತಿದೆ, ಲಾಭವಾಗುತ್ತಿದೆ. 

      ತೀರಾ ಇತ್ತೀಚೆಗೆ ಈ ಪ್ರತಿಭಾ ಪಲಾಯನ ಪುನರಾಗಮನವಾಗುತ್ತಿದೆ. ವಿದೇಶಗಳಲ್ಲಿ ಕುಸಿಯುತ್ತಿರುವ ಬೇಡಿಕೆ, ಆರ್ಥಿಕ ಕುಸಿತ, ಕಡಿಮೆ ವೇತನಕ್ಕೆ ದುಪ್ಪಟ್ಟು ದುಡಿಮೆ, ಅಲ್ಲಿನ ಯುವಜನರಿಗೇ ನಿರುದ್ಯೋಗ ಸಮಸ್ಯೆ ಕಾಡುತ್ತಿರುವ ಸಂದರ್ಭದಲ್ಲಿ ಇಲ್ಲಿಂದ ಹೋಗಿ ಒ¨ªಾಡುವುದನ್ನು ತಪ್ಪಿ$ಸುವುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಅವಕಾಶಗಳನ್ನು ಅರಸುವುದು ಜಾಸ್ತಿಯಾಗುತ್ತಿದೆ. ಒಂದು ಹಂತದಲ್ಲಿ ವಿದೇಶಿ ಪ್ರಜೆಗಳೂ ಕೂಡ ಭಾರತ ಮತ್ತು ಚೀನಾಗಳಿಗೆ ಉದ್ಯೋಗವನ್ನು ಅರಸಿಕೊಂಡು ಬರುತ್ತಿರುವುದು ಕಂಡುಬರುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇರುವ ಅವಕಾಶಗಳು, ವೈದ್ಯಕೀಯ, ವಿದ್ಯುತ್‌, ರಸ್ತೆ, ಕಟ್ಟಡಗಳ ನಿರ್ಮಾಣ, ದೂರಸಂಪರ್ಕ ಸೇವೆ, ಸಾರಿಗೆ, ವ್ಯಾಪಾರ-ವಹಿವಾಟು ಎಲ್ಲವೂ ಅಗಾಧ ಪ್ರಮಾಣದಲ್ಲಿ ವಿಸ್ತರಿಸುತ್ತಾ ಹೋಗುತ್ತಿರುವುದರಿಂದ ವಿದೇಶಿ ಕಂಪನಿಗಳೂ ನೇರ ಬಂಡವಾಳ ಹೂಡಲು ಯೋಚಿಸುತ್ತಿವೆ ಮತ್ತು ಅಲ್ಲಿನ ಪ್ರತಿಭಾವಂತರನ್ನು ಇಲ್ಲಿಗೆ ಕರೆತರುವ ಪರಿಪಾಠ ಬೆಳೆಸಿಕೊಂಡಿವೆ. ಇದರಿಂದ ಒಂದುರೀತಿಯಲ್ಲಿ ವಸಾಹತುಶಾಹಿ ಪ್ರವೃತ್ತಿಯ ಪುನಃಪ್ರವೇಶವಾದಂತಿದೆ. ಸಂಸತ್ತಿನಲ್ಲಿ ಕಳೆದವಾರ ಒಪ್ಪಿಗೆ ಪಡೆದಿರುವ ಚಿಲ್ಲರೆ ವ್ಯಾಪಾರ ಮಸೂದೆ ಮುಂಬರುವ ದಿನಗಳಲ್ಲಿ ಹೊಸ ವಸಾಹತುಗಳನ್ನು ಬೆಳೆಸುವ ಬೀಜವೆನಿಸಿದೆ. ಇದರ ಲಾಭ-ನಷ್ಟಗಳನ್ನು, ಉದ್ಯೋಗ ಸೃಷ್ಟಿಯ ಕಥೆಗಳನ್ನು ನಂಬುವುದಕ್ಕಿಂತ ಪರಾಮರ್ಶಿಸುವುದು ಒಳಿತು. 

      ಬೀರೂರಿನಲ್ಲಿ ನಾಸಾದ ವಿಜ್ಞಾನಿ! 
      2012ರ ನವೆಂಬರ್‌ 5ರಂದು ಚಿಕ್ಕಮಗಳೂರು ಜಿÇÉೆಯ ಬೀರೂರಿನ ಬಳಿಯ ಚಟ್ನಹಳ್ಳಿಯ ವಿಕಸನ ಕಟ್ಟಡದಲ್ಲಿ ವಿಜ್ಞಾನ ಶಿಕ್ಷಣ ಕಾರ್ಯಾಗಾರ 2012 ಏರ್ಪಾಡಾಗಿತ್ತು. ಬೀರೂರು ಮತ್ತು ತರೀಕೆರೆಯ ಶೈಕ್ಷಣಿಕ ಬ್ಲಾಕ್‌ಗಳ ಆಯ್ದ ವಿಜ್ಞಾನ ಶಿಕ್ಷಕರಿಗಾಗಿ ವೈಜ್ಞಾನಿಕ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ವಿಧಾನಗಳನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿತ್ತು. ನಾಸಾದಲ್ಲಿ ಜೆಟ್‌ ಪ್ರಪಲÒನ್‌ ಲ್ಯಾಬೊರೇಟರಿಯಲ್ಲಿ ವಿಜ್ಞಾನಿಯಾಗಿರುವ ಡಾ. ಗಜಾನನ ಬೀರೂರು ಅವರು ಮಂಗಳನ ಅಂಗಳದಲ್ಲಿ ಇಳಿದಿರುವ ಕ್ಯೂರಿಯಾಸಿಟಿ ನೌಕೆಯ ಬಗ್ಗೆ ಮತ್ತು ಮಂಗಳ ಗ್ರಹದ ಕುರಿತ ಇತ್ತೀಚಿನ ಶೋಧನೆಗಳ ಬಗ್ಗೆ ಉಪನ್ಯಾಸ ನೀಡಿದರು. 5, 6, 7ನೇ ತರಗತಿಯ ಮಕ್ಕಳಿಗೆ ವಿಜ್ಞಾನವನ್ನು ಕಲಿಸಿಕೊಡುವ ಆಸಕ್ತಿದಾಯಕ ಆಟದ ವಿಧಾನಗಳನ್ನು ಕುರಿತು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ನ ಹಿರಿಯ ವಿದ್ಯಾರ್ಥಿ ಹಾಗೂ ಮಕ್ಕಳಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಕಲಿಸಿಕೊಡುವ ಡಾ. ಅರವಿಂದ ಗುಪ್ತಾ ಅವರ ಶಿಷ್ಯ ಪಿ. ಶ್ರೀಧರ್‌ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅರವಿಂದ ಗುಪ್ತಾ ಅವರ ಮಾಡಿ ಕಲಿ, ಆಹಾ! ಎಷ್ಟೊಂದು ಚಟುವಟಿಕೆಗಳು, ಉದಯ ಪಾಟೀಲರ ಖಗೋಳ ವಿಜ್ಞಾನದ ಕಥೆ ಮತ್ತು ಡಾ.ಬಿ.ಎಸ್‌. ಶೈಲಜಾ ಅವರ ಆಗಸದ ಅಲೆಮಾರಿಗಳು ಕೃತಿಗಳನ್ನು ಆಧರಿಸಿ ಚಟುವಟಿಕೆಗಳನ್ನು ರೂಪಿಸಲಾಗಿತ್ತು. 

      ಬೀರೂರು ಎಜುಕೇಷನ್‌ ಫೌಂಡೇಶನ್‌ ಫಾರ್‌ ಚಿಲ್ಡ$›ನ್‌ 
      ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ 1971ರಲ್ಲಿ ವೈಮಾಂತರೀಕ್ಷ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಅಮೆರಿಕೆಯ ನಾಸಾದಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ವಿಜ್ಞಾನಿಯಾಗಿ ದುಡಿಯುತ್ತಿರುವ ಡಾ. ಗಜಾನನ ಬೀರೂರು ನಾಸಾದ ಮಂಗಳಗ್ರಹದ ವಿವಿಧ ಪ್ರಾಜೆಕ್ಟ್ಗಳಲ್ಲಿ ಭಾಗಿಯಾಗಿ¨ªಾರೆ. ಸಧ್ಯ ಕ್ಯುರಿಯಾಸಿಟಿ ಪ್ರಾಜೆಕ್ಟ್‌ನಲ್ಲಿಯೂ ತೊಡಗಿ¨ªಾರೆ. ಅವರು ತಮ್ಮ ಊರಿನÇÉೊಂದು ವಿಜ್ಞಾನ ಚಟುವಟಿಕೆಗಳ ಕೇಂದ್ರವನ್ನು 2004ರ ಏಪ್ರಿಲ್‌ ಆರಂಭಿಸಿ ಬೀರೂರು ಎಜುಕೇಷನ್‌ ಫೌಂಡೇಶನ್‌ ಫಾರ್‌ ಚಿಲ್ಡ$›ನ್‌ ಎಂದು ನಾಮಕರಣ ಮಾಡಿ¨ªಾರೆ. ಮಕ್ಕಳಲ್ಲಿ ವಿಜ್ಞಾನ ಅಧ್ಯಯನದ ಆಸಕ್ತಿ ಕೆರಳಿಸಿ ಏನನ್ನಾದರೂ ಸಾಧಿಸುವಂತೆ ಮಾಡುವ ಕನಸು ಹೊತ್ತಿ¨ªಾರೆ. ಬಾಹ್ಯಾಕಾಶದತ್ತ ಅರಳುವ ಕಣ್ಣುಗಳಿಂದ ನೋಡುವ ಸಮಯದಲ್ಲಿಯೇ ಭೂಮಿಯನ್ನೂ ಅಭ್ಯಾಸ ಮಾಡಬೇಕು, ಪ್ರಕೃತಿಯನ್ನು ಅರಿಯಬೇಕು ಎನ್ನುವುದು ಗಜಾನನ ಅವರ ಕಳಕಳಿ. ಇವರ ಹಿರಿಯ ಸಹೋದರ ಇವರ ಕನಸುಗಳಿಗೆ ಆಸರೆಯಾಗಿ ನಿಂತು ಬೀರೂರಿನ ಫೌಂಡೇಶನ್‌ ಕೆಲಸಗಳಿಗೆ ಕೈಜೋಡಿಸಿ¨ªಾರೆ.

No comments:

Open Book Evaluation - A Boon or Bane - Article in Shikshana Varthe Monthly of July 2024.

      Open Book Evaluation - A Boon or Bane - Article in Shikshana Varthe Monthly of July 2024.