Wednesday, 8 May 2013

SSLC and PUC - What Next? - Article in Vijaykarnataka 08 May 2013





http://vijaykarnataka.indiatimes.com/articleshow/19935354.cms

http://vijaykarnataka.indiatimes.com/articleshow/19935195.cms




ಹತ್ತರ ನಂತರ ಉನ್ನತ ಮಟ್ಟ ಹತ್ತಲು ನೂರತ್ತು ದಾರಿ

0
ಹತ್ತರ ನಂತರ ಉನ್ನತ ಮಟ್ಟ ಹತ್ತಲು ನೂರತ್ತು ದಾರಿ
ಇದೇ ತಾನೇ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ 84 ಪುಟಗಳ 2011-12ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ದಾಖಲಾತಿ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ಹತ್ತನೇ ತರಗತಿಯ ತೇರ್ಗಡೆಯಾದವರಿಗಾಗಿಯೇ ಪದವಿ ಪೂರ್ವ ಶಿಕ್ಷಣದ ಅವಕಾಶಗಳನ್ನು ಪ್ರಕಟಿಸಿದೆ. (ಇದರ ಉಚಿತ ಪ್ರತಿ ಅಂತರಜಾಲದಲ್ಲಿ ಲಭ್ಯವಿದ್ದು ಹೆಚ್ಚಿನ ವಿವರಗಳಿಗೆ ನೋಡಿ : www.pue.kar.nic.in) 

12 ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪೈಕಿ ಕಲಾ (ಆರ್ಟ್ಸ್) ವಿಷಯಗಳಲ್ಲಿ 36, ವಾಣಿಜ್ಯ ವಿಷಯಗಳಲ್ಲಿ 08 ಮತ್ತು ವಿಜ್ಞಾನ ವಿಷಯಗಳಲ್ಲಿ 7 (P C M B / P C M C / P C M E / P C M S / P C B HSc / P C M G / C B Ps HSc ) ವಿವಿಧ ಕಾಂಬಿನೇಷನ್‌ಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದಂಡಶುಲ್ಕವಿಲ್ಲದೇ ಬರುವ ಜೂನ್ 15 ದಾಖಲಾತಿಗೆ ಕೊನೆಯ ದಿನ. ಜೂನ್ 16 ರಿಂದ 30 ರವರೆಗೆ ರೂ.420 ರಿಂದ ರೂ.1820 ರವರೆಗೆ ದಂಡಶುಲ್ಕ ಸಹಿತ ದಾಖಲಾಗಲು ಅವಕಾಶವಿದೆ. ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾಗಲು ಕೊನೆಯ ದಿನ ಬರುವ ಜುಲೈ 25 ಆಗಿರುತ್ತದೆ. ಈ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳು ಕಡ್ಡಾಯವಾಗಿ ಅನುಸರಿಸುತ್ತವೆ.

ಎಸ್.ಎಸ್.ಎಲ್.ಸಿ. ನಂತರದ ಸಾಮಾನ್ಯ ಪದವಿ ಪೂರ್ವ ಶಿಕ್ಷಣದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಜೊತೆ ತಾಂತ್ರಿಕ ಶಿಕ್ಷಣದಲ್ಲಿರುವ ಮೂರು ವರ್ಷಗಳ ಡಿಪ್ಲೊಮಾ (26 ವಿವಿಧ ವಿಷಯಗಳು), ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್ (6 ವಿಷಯಗಳು), ಒಂದು ವರ್ಷದ ಎ.ಎನ್.ಎಂ. ಸರ್ಟಿಫಿಕೇಟ್ ಕೋರ್ಸ್, ಅರೋಗ್ಯ ನಿರೀಕ್ಷಕರ ಕೋರ್ಸ್, ನರ್ಸಿಂಗ್ ಜನರಲ್ ಮತ್ತು ನರ್ಸಿಂಗ್ ಡಿಪ್ಲೊಮಾ, ಎರಡು ವರ್ಷಗಳ ಐ.ಟಿ.ಐ. (34 ವಿಷಯಗಳು) ತರಬೇತಿ ಅಲ್ಲದೇ ಅಲ್ಪಾವಧಿ ಮತ್ತು ದೀರ್ಘಾವಧಿಯ ಕ್ರಾಷ್ ಕೋರ್ಸ್‌ಗಳು ಲಭ್ಯವಿದೆ. ಹಾಗೆಯೇ ಪಿ.ಯು.ಸಿ. ನಂತರದ ಹತ್ತಾರು ಪ್ರಮುಖ ಕೋರ್ಸ್‌ಗಳು ಮತ್ತು ಉದ್ಯೋಗಾವಕಾಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ದಾರಿದೀಪ - ಶೈಕ್ಷಣಿಕ ವತ್ತಿ ಮಾರ್ಗದರ್ಶನ ಕೈಪಿಡಿಯಲ್ಲಿ ಸುದೀರ್ಘವಾಗಿ ಪಟ್ಟಿಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ನೋಡಿ : 
* www.dsert.kar.nic.in
* www.schooleducation.kar.nic.in * http://karnatakaeducation.gov.in 
* www.karnatakaeducation.net 

ಆಯ್ಕೆ ಏತಕ್ಕಾಗಿ - ಬದಲಾವಣೆ ಯಾರಿಗಾಗಿ? ಈ ಹಿಂದೆ ಎಸ್.ಎಸ್.ಎಲ್.ಸಿ ನಂತರ ಪಿ.ಯು.ಸಿ, ಪದವಿ, ಡಿ.ಇಡಿ. ಅಥವಾ ಬಿ.ಇ.ಡಿ., ಎಂ.ಎ. ಎಂಬ ಒಂದು ಸರಣಿ, ಕಾನೂನು, ತಾಂತ್ರಿಕ ಪದವಿ, ವೈದ್ಯಕೀಯ ಕೋರ್ಸುಗಳ ಇನ್ನೊಂದು ಸರಣಿಯ ಪ್ರಮುಖ ಆಯ್ಕೆಗಳು ಇದ್ದಕ್ಕಿದ್ದಂತೆ ಬದಲಾಗಿ ಯಾವುದಕ್ಕೆ ಸೇರಿದರೆ ಸ್ಕೋಪ್ ಜಾಸ್ತಿ, ಯಾವುದರಿಂದ ತಕ್ಷಣ ಲಾಭ ಆಗುತ್ತೆ ಎನ್ನುವ ಮಾನದಂಡವೇ ಪ್ರಮುಖವಾಗಿ ಬಾಲವೇ ನಾಯಿಯನ್ನು ಆಡಿಸುವ ಪರಿಸ್ಥಿತಿ ಉದ್ಭವಿಸಿದೆ. 

ವಿದ್ಯಾರ್ಥಿಗಳ ಆಸಕ್ತಿ, ಪರಿಶ್ರಮ, ದೀರ್ಘಾವಧಿಯಲ್ಲಿ ಅವರ ದೈಹಿಕ-ಮಾನಸಿಕ-ಸಾಮಾಜಿಕ ಸಂಬಂಧಗಳ ಮೇಲೆ ಆಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಕಬ್ಬಿನ ಸಿಪ್ಪೆಯಂತೆ ಹಿಂಡಿ ಹಿಪ್ಪೆಮಾಡುವ ಒತ್ತಡದ ದುಡಿಮೆಗೆ, ತಕ್ಷಣದ ಲಾಭಕ್ಕೆ ಅನುವಾಗುವ ಕೋರ್ಸುಗಳ ಆಯ್ಕೆಯಿಂದ, ಕುರಿಮಂದೆಯಂತೆ ನುಗ್ಗುತ್ತಿರುವ ಯುವಪಡೆ ಅತ್ಯುತ್ತಮವಾದದ್ದೇನನ್ನೂ ಸಾಧಿಸಲು ವಿಫಲವಾಗಿ ಚಿಕ್ಕ ವಯಸ್ಸಿಗೇ ರಿಟೈರ್ಡ್‌ ಆಗುವಷ್ಟು ಸುಸ್ತಾಗುತ್ತಿದ್ದಾರೆ. ಜೀವನದ ಜಂಜಾಟವೇ ಬೇಡ, ವೈವಾಹಿಕ ಬಂಧಗಳೂ ಬೇಡ, ಜವಾಬ್ದಾರಿಯಂತೂ ಬೇಡವೇ ಬೇಡ. ಉದ್ದಿಮೆಗಳ ಪೈಪೋಟಿಯಲ್ಲಿ ನುಜ್ಜು ಗುಜ್ಜಾಗುತ್ತಿರುವ ಉದ್ಯೋಗಿಗಳು, ನಿಗದಿತ ಸಮಯದ ಒಳಗಾಗಿ ಮಾಡಿ ಮುಗಿಸಲೇಬೇಕಾದ ಪ್ರಾಜೆಕ್ಟ್‌ಗಳ ಒತ್ತಡ, ಸಮವಯಸ್ಕರ ನಡುವಿನ ಸ್ಪರ್ಧೆಯಲ್ಲಿ ಇತ್ತೀಚಿಗೆ ಕಂಡುಬರುತ್ತಿರುವ ಯಶಸ್ಸು ಮತ್ತು ಹಿಂದುಳಿಯುವಿಕೆಯ ಭಯ ಇತ್ಯಾದಿಗಳ ಕಾರಣದಿಂದ ಸಾಂಪ್ರದಾಯಿಕ ಆಯ್ಕೆ ಯಾವ ಉಪಯೋಗಕ್ಕೂ ಬಾರದು ಅನ್ನಿಸಿ ಸ್ಕೋಪ್ ಜಾಸ್ತಿ ಇರುವ ವಿಷಯಗಳನ್ನೇ ಆಯ್ದುಕೊಳ್ಳುವಂತಾಗಿದೆ. ಯಾವುದೋ ಒಂದಕ್ಕೆ ಸ್ಕೋಪ್ ಇದೆ ಅಂದ ಮಾತ್ರಕ್ಕೆ ಅದನ್ನೇ ಅನುಸರಿಸಿದರೆ ಉಳಿದವು ಹಿಂದೆ ಬೀಳುವ ಮತ್ತು ಸ್ವಲ್ಪ ಕಾಲದ ನಂತರ ಹಿಂದೆ ಬಿದ್ದ ವಿಷಯಗಳಲ್ಲಿ ಅಗತ್ಯ ಪೈಪೋಟಿ ನೀಡುವ ಜನರೇ ಇಲ್ಲದಂತಾದಾಗ ಮತ್ತೆ ಅದಕ್ಕೆ ಸ್ಕೋಪ್ ಸಿಗುವ ಏರಿಳಿತದ ಆಟ ನಡೆದೇ ಇದೆ. ಇದಕ್ಕೆ ಕೊನೆಯ ಇಲ್ಲ. ಆದರೂ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದರೆ ನಮ್ಮ ಆಯ್ಕೆಯನ್ನು ಸಮರ್ಪಕ ಎನ್ನುವ ರೀತಿಯಲ್ಲಿ ನಿಭಾಯಿಸಬಹುದು. ಹಣಪ್ರಪಂಚದಲ್ಲಿ ಇವೆಲ್ಲಾ ಸಾಮಾನ್ಯ. ನೆಂಟರಿಷ್ಟರಲ್ಲಿ, ಅಕ್ಕಪಕ್ಕದವರಲ್ಲಿ ತಾವೂ ಕಡಿಮೆ ಇಲ್ಲ ಎನ್ನುವ ಒಣ ಪ್ರತಿಷ್ಠೆ ಈ ಮನೋಭಾವದ ಬದಲಾವಣೆಗೆ ಬಹುಮುಖ್ಯ ಕಾರಣ. ಗೆದ್ದೆತ್ತಿನ ಬಾಲ ಹಿಡಿಯುವವರನ್ನು, ಗೆದ್ದ ಕೋರ್ಸಿನ ಹಿಂದೆ ಬೀಳುವವರನ್ನು, ಒಂದು ಕುರಿ ಹಳ್ಳಕ್ಕೆ ಬಿದ್ದರೆ ಹಿಂದೆ ಮುಂದೆ ಯೋಚಿಸದೆಯೇ ತಾವೂ ಹಳ್ಳಕ್ಕೆ ಬೀಳಲು ಸಿದ್ಧವಿರುವ ಕುರಿಯಂಥವರನ್ನು ತಡೆಯುವವರು ಯಾರು?
 

ಪಿ.ಯು.ಸಿ. ಆಯ್ತು, ಮುಂದೇನು?

0
ಪಿ.ಯು.ಸಿ. ಆಯ್ತು, ಮುಂದೇನು?
* ಯಜ್ಜವಲ್ಕ್ಯ

ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್‌ಗಳಿಗೇ ಗಂಟುಬೀಳುವ ತಂದೆತಾಯಿಗಳ ಒತ್ತಡದ ಕೂಸುಗಳಿಗೆ ಇದೀಗ ಸುಮಾರು 300 ವಿವಿಧ ವಿಷಯಗಳ, ವಿವಿಧ ಅವಧಿಗಳ ಕೋರ್ಸ್‌ಗಳು ಲಭ್ಯ! ದ್ವಿತೀಯ ಪಿ.ಯು.ಸಿ. (10+2) ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ವಿದ್ಯಾರ್ಥಿಗಳ ಆಸಕ್ತಿಗಳ ಆಧಾರದ ಮೇಲೆ ಮುಂದಿನ ಕೋರ್ಸ್‌ಗಳ ಆಯ್ಕೆ ಮಾಡುವುದು ಒಳ್ಳೆಯದು. 


ತಾಂತ್ರಿಕ ಶಿಕ್ಷಣಕ್ಕೆ ಒತ್ತು ದೊರೆಯುತ್ತಿರುವುದರಿಂದ ಎಂಜಿನಿಯರಿಂಗ್‌ನಲ್ಲಿ ಮೆರೀನ್ ಜಿಯಾಲಜಿಯಿಂದ ಆಸ್ಟ್ರೋಫಿಸಿಕ್ಸ್‌ವರೆಗೆ ಹಲವು ಕೋರ್ಸ್‌ಗಳಿವೆ. ಪ್ರತಿಷ್ಠಿತ ಕಾಲೇಜುಗಳಿಗೆ ಸಿ.ಇ.ಟಿ., ಕಾಮೆಡ್-ಕೆ, ಐಐಟಿ, ಜೆಇಇ, ಎಐಇಇಇ, ಬಿಟ್‌ಸ್ಯಾಟ್, ನಾಟಾ, ಜೆಸ್ಟ್, ಸಿಪೆಟ್, ಸೀಡ್, ಸಿಫ್‌ನೆಟ್ ಮೊದಲಾದ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಕಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯ ಶಾಸ್ತ್ರ ವಿಷಯಗಳೂ ಕೂಡ ಈಗ ತಾಂತ್ರಿಕ ತರಬೇತಿಗೆ ಸೇರಿರುವುದರಿಂದ ಅಲ್ಲಿಯೂ ಪ್ರವೇಶಕ್ಕೆ ನೂಕುನುಗ್ಗಲು. ವಿವರಗಳಿಗೆ ನೋಡಿ: 

* http://cet.kar.nic.in * http://dte.kar.nic.in * www.admissions.org.in * www.admissionnews.com 

ಸಾಮಾನ್ಯ ವಿಜ್ಞಾನದ ಆಯ್ಕೆಯಲ್ಲಿಯೂ ಸುಮಾರು 90 ವಿವಿಧ ವಿಷಯಗಳಿದ್ದು 3 ವರ್ಷದ (6 ಸೆಮಿಸ್ಟರ್) ಪದವಿ ಇಲ್ಲವೇ 5 ವರ್ಷಗಳ ಇಂಟಿಗ್ರೇಟೆಡ್ ಪಿ.ಜಿ. ಕೋರ್ಸ್ ಸೇರಲು ಅವಕಾಶಗಳಿವೆ. ಹಾಗೆಯೇ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಬಿ.ಕಾಂ., ಬಿ.ಬಿ.ಎಂ., ಎಂಬಿ.ಎ., ಸಿ.ಎ., ಸಿ.ಎಫ್.ಎ., ಸಿ.ಡಬ್ಲ್ಯು.ಎ., ಸಿ.ಎಸ್., ಮೊದಲಾದವುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಕಾಲೇಜುಗಳಿಲ್ಲವೆಂಬ ದೂರುಗಳಿವೆ. ಕಲೆಯ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಡೆದುಕೊಂಡು ಬಂದಿರುವ ಭಾಷೆ ಮತ್ತು ಇತರೆ ಐಚ್ಛಿಕ ವಿಷಯಗಳ ಕಲಾ ಪದವಿ, ಸ್ನಾತಕೋತ್ತರ ಪದವಿಗಳಿಗೆ ಈಗ ಹೊಸ ವಿಷಯಗಳೂ ಸೇರಿವೆ. 

ಪತ್ರಿಕೋದ್ಯಮ, ಫೋಟೋ-ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್, ಕ್ರಿಮಿನಾಲಜಿ ಮತ್ತು ನ್ಯಾಯಿಕ ವೈದ್ಯಶಾಸ್ತ್ರ, ಮಾಧ್ಯಮ ಅಧ್ಯಯನ, ದೂರಶಿಕ್ಷಣ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಹರಳು ಮತ್ತು ಆಭರಣಗಳ ವಿನ್ಯಾಸ ಇತ್ಯಾದಿ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸಿವೆ. 

ಕಂಪ್ಯೂಟರ್ ಎಂಬ ಮಾಯಾಲೋಕ ತಂತ್ರಾಂಶ ಮತ್ತು ಯಂತ್ರಾಂಶಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದು ಖಾಸಗಿಯಾಗಿಯೂ ನೂರಾರು ಕೋರ್ಸ್‌ಗಳನ್ನು ಕಲಿತು, ಕಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶಗಳನ್ನು ತೆರೆದಿಟ್ಟಿದೆ. ಅನಿಮೇಶನ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿತವರು ಕೈತುಂಬಾ ಗಳಿಸಿಕೊಳ್ಳುತ್ತಿರುವುದು ಆ ಕ್ಷೇತ್ರದ ಕಡೆಗೆ ಜನ ಆಸಕ್ತಿ ತೋರಿಸಲು ಕಾರಣವಾಗಿದೆ. 

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲೆ-ವಾಣಿಜ್ಯ-ವಿಜ್ಞಾನ-ಲಲಿತಕಲೆ-ದಶ್ಯಕಲೆ-ಮುದ್ರಣ-ಮಾಹಿತಿ ತಂತ್ರಜ್ಞಾನ-ಅನ್ವಯಿಕ ವಿಷಯಗಳ ಕುರಿತು ಡಿಪ್ಲೊಮಾ-ಪದವಿ-ಸ್ನಾತಕೋತ್ತರ ಪದವಿ-ಸ್ನಾತಕೋತ್ತರ ಡಿಪ್ಲೊಮಾ -ಸಂಶೋಧನೆ-ಡಾಕ್ಟರೇಟ್ ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ವಿವರಗಳಿಗೆ ಆಯಾ ವಿಶ್ವವಿದ್ಯಾಲಯಗಳ ಅಂತರಜಾಲ ತಾಣಗಳನ್ನು ಸಂಪರ್ಕಿಸಬಹುದು. 

ಎಲ್ಲಾ ರಾಷ್ಟ್ರೀಕತ ಬ್ಯಾಂಕುಗಳು ಮತ್ತು ಬಹುತೇಕ ಖಾಸಗಿ ಬ್ಯಾಂಕುಗಳು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಕಾಲೇಜಿಗೆ ಪಾವತಿಸಬೇಕಾಗಿರುವ ಶುಲ್ಕ, ಪಠ್ಯ ಪುಸ್ತಕ, ಕಂಪ್ಯೂಟರ್/ಲ್ಯಾಪ್‌ಟಾಪ್ ವೆಚ್ಚ, ಹಾಸ್ಟೆಲ್ ವೆಚ್ಚ, ಹೆಚ್ಚಿನ ತರಬೇತಿಗೆ ನೀಡುವ ವೆಚ್ಚ ಎಲ್ಲವೂ ಸೇರಿರುತ್ತದೆ. 

ಪಠ್ಯ ಪೂರಕ ಕಲಿಕೆ ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟ ಘಳಿಗೆಯಿಂದಲೇ ಬೆಳಗ್ಗೆ/ಸಂಜೆ ಆಸಕ್ತಿಯಿಂದ ಇತರೆ ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಕಂಪ್ಯೂಟರ್ ಎಂಬ ಮಾಯಾಲೋಕ ತಂತ್ರಾಂಶ ಮತ್ತು ಯಂತ್ರಾಂಶಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದು ಖಾಸಗಿಯಾಗಿಯೂ ನೂರಾರು ಕೋರ್ಸ್‌ಗಳನ್ನು ಕಲಿತು, ಕಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶಗಳನ್ನು ತೆರೆದಿಟ್ಟಿದೆ. ಅನಿಮೇಶನ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿತವರು ಕೈತುಂಬಾ ಗಳಿಸಿಕೊಳ್ಳುತ್ತಿರುವುದು ಆ ಕ್ಷೇತ್ರದ ಕಡೆಗೆ ಜನ ಆಸಕ್ತಿ ತೋರಿಸಲು ಕಾರಣವಾಗಿದೆ. 

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲೆ-ವಾಣಿಜ್ಯ-ವಿಜ್ಞಾನ-ಲಲಿತಕಲೆ-ದಶ್ಯಕಲೆ-ಮುದ್ರಣ-ಮಾಹಿತಿ ತಂತ್ರಜ್ಞಾನ-ಅನ್ವಯಿಕ ವಿಷಯಗಳ ಕುರಿತು ಡಿಪ್ಲೊಮಾ-ಪದವಿ-ಸ್ನಾತಕೋತ್ತರ ಪದವಿ-ಸ್ನಾತಕೋತ್ತರ ಡಿಪ್ಲೊಮಾ -ಸಂಶೋಧನೆ-ಡಾಕ್ಟರೇಟ್ ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ವಿವರಗಳಿಗೆ ಆಯಾಯ ವಿಶ್ವವಿದ್ಯಾಲಯಗಳ, ತಾಂತ್ರಿಕ ಸಂಸ್ಥೆಗಳ ಅಂತರಜಾಲ ತಾಣಗಳನ್ನು ಸಂಪರ್ಕಿಸಬಹುದು. 

ಇತ್ತೀಚೆಗೆ ಓದುವುದರ ಜೊತೆಗೆ ಹೆಚ್ಚುವರಿಯಾಗಿ ಯಾವುದಾದರೂ ಕ್ರಾಷ್ ಕೋರ್ಸ್‌ಸೇರಿ ತರಬೇತಿ ಪಡೆಯುವುದು, ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಂ ನೌಕರಿ ಮಾಡುತ್ತಾ, ಡಾಟ ಎಂಟ್ರಿಯೋ, ಅಕೌಂಟ್ಸ್ ನೋಡಿಕೊಳ್ಳುವುದೋ, ಡಿ.ಟಿ.ಪಿ., ಫೋಟೋ ಎಡಿಟಿಂಗ್ ಮಾಡುತ್ತ ತಮ್ಮ ಪಾಕೆಟ್ ಮನಿ ತಾವೇ ಗಳಿಸಿಕೊಳ್ಳುವ ಪ್ರವತ್ತಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದೆ. ಕೆಲವರು ಸ್ವಯಂ ಉದ್ಯೋಗ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಪದವಿ ಗಳಿಸಿಕೊಳ್ಳುತ್ತಿದ್ದಾರೆ. ಆಸಕ್ತಿಗೂ, ಪ್ರವತ್ತಿಗೂ, ವಿದ್ಯೆಗೂ ಪರಸ್ಪರ ಸಂಬಂಧ ಇದ್ದೇ ಇದೆ. ಅವಕಾಶವೂ ಇದೆ. 

ಶೈಕ್ಷಣಿಕ ಮತ್ತು ವತ್ತಿ ಮಾರ್ಗದರ್ಶನ ಕೈಪಿಡಿಗಳು
* ದಿ ಟೈಂಸ್ - ಕರ್ನಾಟಕ ಎಜುಕೇಷನ್ ಡೈರೆಕ್ಟರಿ 

* ಮಲಯಾಳ ಮನೋರಮಾ - ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್ 

* ಜಯಂತಿ ಘೋಷ್ - ಹಾರ್ಪರ್ ಕೋಲಿನ್ಸ್ - ಎನ್‌ಸೈಕ್ಲೊಪಿಡಿಯಾ ಆಫ್ ಕೆರೀರ್ 

* ಜ್ಞಾನಪೀಠ ಪ್ರಕಾಶನ - ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್ 

* ನವಕರ್ನಾಟಕ ಪ್ರಕಾಶನ- ಗೆದ್ದೇ ಗೆಲ್ಲುವೆವು (2ನೇ ಆವತ್ತಿ) 

* ಯಶಸ್ವೀ ಆಯ್ಕೆಯ ಸೂತ್ರ - ಸ್ವಾಟ್ ಮತ್ತು ಸ್ಮಾರ್ಟ್ ಅನಾಲಿಸಿಸ್
 

No comments:

Open Book Evaluation - A Boon or Bane - Article in Shikshana Varthe Monthly of July 2024.

      Open Book Evaluation - A Boon or Bane - Article in Shikshana Varthe Monthly of July 2024.